Breaking News

ರಾಷ್ಟ್ರೀಯ

ಐಫೋನ್ ಹಾಗೂ ದುಬಾರಿ ಬೆಲೆಯ ಫೋನ್​ಗಳನ್ನೇ ಗುರಿಯಾಗಿಸಿಕೊಂಡು ಸುಲಿಗೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ವಿವೇಕನಗರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಬೆಂಗಳೂರು : ಐಫೋನ್ ಹಾಗೂ ದುಬಾರಿ ಬೆಲೆಯ ಫೋನ್​ಗಳನ್ನೇ ಗುರಿಯಾಗಿಸಿಕೊಂಡು ಸುಲಿಗೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ವಿವೇಕನಗರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಂಧಿತ ಆರೋಪಿಗಳು ಗೋರಿಪಾಳ್ಯದ ನಿವಾಸಿಗಳಾಗಿದ್ದು, ಶಾಕೀಬ್, ಸುಹೈಲ್ ಹಾಗೂ ಮೊಹಮ್ಮದ್ ಸಕ್ಲೇನ್ ಎಂದು ಗುರುತಿಸಲಾಗಿದೆ. ಐಷಾರಾಮಿ ಜೀವನಕ್ಕಾಗಿ ಕಳ್ಳತನದ ಅಡ್ಡದಾರಿ ಹಿಡಿದಿದ್ದ ಮೂವರು ಆರೋಪಿಗಳು ನಗರದಲ್ಲಿ ರಾತ್ರಿ ವೇಳೆ ಒಂಟಿಯಾಗಿ ಓಡಾಡುವ ಸಾರ್ವಜನಿಕರನ್ನು ಗುರಿಯಾಗಿಸಿಕೊಳ್ಳತ್ತಿದ್ದರು. ನಂತರ ಬೈಕಿನಲ್ಲಿ‌ ತೆರಳಿ ಐಫೋನ್​ಗಳನ್ನು‌ ಕಸಿದುಕೊಂಡು ಪರಾರಿಯಾಗುತ್ತಿದ್ದರು. ಕದ್ದ ಬಳಿಕ ಹೈದರಾಬಾದ್​ಗೆ ಐಫೋನ್ …

Read More »

ಮಧ್ಯಾಹ್ನ ಊಟ ಸೇವಿಸಿದ ಬಳಿಕ ಅಸ್ವಸ್ಥಗೊಂಡ 35 ಸೈನಿಕರು: ಆಸ್ಪತ್ರೆಗೆ ದಾಖಲು

ಹಾಸನ : ಮಧ್ಯಾಹ್ನದ ಊಟ ಸೇವಿಸಿದ ಬಳಿಕ 35 ಸೈನಿಕರು ಅಸ್ವಸ್ಥಗೊಂಡಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಕೊಡುಗರವಳ್ಳಿ ಗ್ರಾಮದಲ್ಲಿ ಇಂದು ನಡೆದಿದೆ. ಅಸ್ವಸ್ಥಗೊಂಡ 35 ಮಂದಿ ಯೋಧರನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹುಡುಗರ ಕ್ಯಾಂಪ್​​ನಲ್ಲಿರುವ ವಾಹನ ಚಾಲನಾ ತರಬೇತಿಯ ಸೈನಿಕರು ಇಂದು ಮಧ್ಯಾಹ್ನ ಎಂದಿನಂತೆ ಊಟ ಸೇವಿಸಿದ್ದರು. ಕೆಲ ಹೊತ್ತಿನ ಬಳಿಕ ಸುಮಾರು 35 ಮಂದಿ ಯೋಧರ ಆರೋಗ್ಯದಲ್ಲಿ ದಿಢೀರ್​ ಏರುಪೇರಾಗಿದೆ. ತಕ್ಷಣ ಇವರನ್ನು ಸಕಲೇಶಪುರದ …

Read More »

ಕಳ್ಳತನ ಮಾಡೋದನ್ನ ನೋಡಿದ ಬಾಲಕಿ ; ಕೊಲೆ ಮಾಡಿದ ದುಷ್ಕರ್ಮಿ .!

ಕಳ್ಳತನ ಮಾಡುತ್ತಿರುವುದನ್ನು ನೋಡಿದ 9 ವರ್ಷದ ಪುಟ್ಟ ಬಾಲಕಿಯನ್ನು ದುಷ್ಕರ್ಮಿಯೋರ್ವ ಕೊಲೆ ಮಾಡಿದ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ಘಟನೆ ನಡೆದಿದೆ. ಬಾಲಕಿ ನಾಪತ್ತೆಯಾದ ಬಳಿಕ ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಮನೆಯೊಳಗಿನ ಸ್ಟೋರ್‌ ರೂಮ್‌ನಲ್ಲಿ ಬಟ್ಟೆಯಿಂದ ಸುತ್ತಿಟ್ಟ ಸ್ಥಿತಿಯಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಬಾಲಕಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಪ್ರಕರಣ ಬೆನ್ನಟ್ಟಿದ ಪೊಲೀಸರು 19 ವರ್ಷದ ತರುಣನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.ಇನ್ನು ಆಕೆಯ ಮನೆಯಲ್ಲಿ ಹಣ ಕದಿಯುವುದನ್ನು …

Read More »

‘ಗೃಹಲಕ್ಷ್ಮಿ’ ಯೋಜನೆಗೆ ಮಾರ್ಗಸೂಚಿ ಹೊರಡಿಸಿದ ಸರ್ಕಾರ

ಬೆಂಗಳೂರು: ರಾಜ್ಯದ ಕುಟುಂಬದಲ್ಲಿನ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2 ಸಾವಿರ ರೂ.ಗಳನ್ನು ನೀಡುವ ‘ಗೃಹಲಕ್ಷ್ಮಿ’ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿ, ಸರ್ಕಾರ ಮಾರ್ಗಸೂಚಿ ಹೊರಡಿಸಿ ಆದೇಶಿಸಿದೆ.   ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಕುಟುಂಬದ ನಿರ್ವಹಣೆಯಲ್ಲಿ ಕುಟುಂಬ ಯಜಮಾನಿಯ ಪಾತ್ರ ಪ್ರಮುಖವಾಗಿದೆ. ಯಜಮಾನಿಯು ಆರ್ಥಿಕವಾಗಿ ಸಬಲೀಕರಣಗೊಂಡಲ್ಲಿ ಕುಟುಂಬ ನಿರ್ವಹಣೆಯು ಉತ್ತಮ ಗುಣಮಟ್ಟದಲ್ಲಿರುತ್ತದೆ. ಆದ್ದರಿಂದ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2 …

Read More »

ಕಾಂಗ್ರೇಸ್ ಸರ್ಕಾರಅಧಿಕಾರಕ್ಕೆ ಬಂದ ಮೇಲೆ ಬೆಳಗಾವಿ ಜಿಲ್ಲೆ ಇಬ್ಬಾಗವಾಗುತ್ತಾ ?

ಕಾಂಗ್ರೇಸ್ ಸರ್ಕಾರಅಧಿಕಾರಕ್ಕೆ ಬಂದ ಮೇಲೆ ಬೆಳಗಾವಿ ಜಿಲ್ಲೆ ಇಬ್ಬಾಗವಾಗುತ್ತಾ ಎಂಬ ಮಾತು ಈ ಮುನ್ನಲೇಗೆ ಬಂದಿದೆ. ಬೆಳಗಾವಿ ಜಿಲ್ಲೆ ಅಭಿವೃದ್ದಿಯಾಗಬೇಕಾದರೆ ಇಬ್ಬಾಗವಾಗಬೇಕು ಅಭಿವೃದ್ದಿ ದೃಷ್ಟಿಯಿಂದ ಇಬ್ಬಾಗಬೇಕು ಎಂದಿದ್ದ ಸತೀಶ ಜಾರಕಿಹೋಳಿ ಹಾಗೂ ಲಕ್ಷ್ಮೀ ಹೆಬ್ಬಾಳಕರ ಅವರು ಜಿಲ್ಲೆಯ ಅಭಿವೃದ್ದಿ ಕುರಿತು ಬರಬೇಕು ಹಂತ ಹಂತವಾಗಿ ಚರ್ಚಿಸಿ ಅಭಿವೃದ್ದಿಯ ಪರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಲಾಗಿತ್ತುಈ ಹಿನ್ನಲೆಯಲ್ಲಿ ಬೆಳಗಾವಿ ವಿಭಜನೆ ಕೂಗಿಗೆ ಸಚಿವ ಭೈರತಿ ಸುರೇಶ್ ಪ್ರತಿಕ್ರಿಸಿದ್ದುಅಖಂಡ ಕರ್ನಾಟಕವನ್ನು ವಿಭಜನೆ ಮಾಡುವ …

Read More »

ರಾಜ್ಯದ ಅನೇಕ ಕಡೆಗಳಲ್ಲಿ ಸಾರ್ವಜನಿಕರು ಕರೆಂಟ್ ಬಿಲ್ ಕಟ್ಟಲು ಹಿಂದೇಟು

ಧಾರವಾಡ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಅಧಿಕಾರಕ್ಕೆ ಬರುವ ಮುನ್ನ ಜೂ.1 ನೇ ತಾರೀಖಿನಿಂದ ಯಾರೂ ಕರೆಂಟ್ ಬಿಲ್ ಕಟ್ಟೋಹಾಗಿಲ್ಲ ಎಂದು ಹೇಳಿದ್ದೇ ಹೇಳಿದ್ದು, ರಾಜ್ಯದ ಅನೇಕ ಕಡೆಗಳಲ್ಲಿ ಸಾರ್ವಜನಿಕರು ಕರೆಂಟ್ ಬಿಲ್ ಕಟ್ಟಲು ಹಿಂದೇಟು ಹಾಕುತ್ತಿದ್ದಾರೆ ಅಲ್ಲದೇ ಬಿಲ್ ಪಾವತಿಸಿಕೊಳ್ಳಲು ಬರುವ ಕೆಇಬಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಇದೀಗ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಿರಕೋಳ ಗ್ರಾಮದಲ್ಲೂ ಗ್ರಾಮಸ್ಥರು ಲೈನ್‌ಮ್ಯಾನ್ ಒಬ್ಬರನ್ನು ತೀವ್ರ ತರಾಟೆಗೆ …

Read More »

ರಂಗೋಲಿಯ ಮೂಲಕ “ಶಿವರಾಜ್ಯಾಭಿಷೇಕದ ಭವ್ಯವಾದ ಚಿತ್ರ”

ಶಿವರಾಜ್ಯಾಭಿಷೇಕ ಸಮಾರಂಭದ 350 ನೇ ವಾರ್ಷಿಕೋತ್ಸವದಲ್ಲಿ ರಂಗೋಲಿ ಕಲಾವಿದ ಅಜಿತ್ ಔರ್ವಾಡಕರ್ ಅವರು ರಂಗೋಲಿಯ ಮೂಲಕ “ಶಿವರಾಜ್ಯಾಭಿಷೇಕದ ಭವ್ಯವಾದ ಚಿತ್ರ” ವನ್ನು ಬಿಡಿಸಿದ್ದಾರೆ. ಈ ರಂಗೋಲಿಯು ವಡಗಾಂವದಲ್ಲಿ ಕಲಾರತ್ನ ಬಿಲ್ಡಿಂಗ್ ನಜರ್ ಕ್ಯಾಂಪ್ ಏಳೂರು ರಸ್ತೆಜ್ಯೋತಿ ಫೋಟೋ ಸ್ಟುಡಿಯೋ) ಬಳಿ ಇದೆ ಎಲ್ಲಾ ನಾಗರಿಕರು ಮತ್ತು ಶಿವಭಕ್ತರು ಇದನ್ನು ನೋಡಲು 12 ರಂದು ಬೆಳಿಗ್ಗೆ 9 ರಿಂದ ಸಂಜೆ 7 ರವರೆಗೆ ಲಭ್ಯವಿರುತ್ತದೆ

Read More »

ಕಾಂಗ್ರೆಸ್‌ ಪಕ್ಷದ ಆಂತರಿಕ ವಿಚಾರದ ಬಗ್ಗೆ ಬಿಜೆಪಿಯವರು ತೆಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ: ಸತೀಶ್‌ ಜಾರಕಿಹೊಳಿ

ಗೋಕಾಕ: ಕಾಂಗ್ರೆಸ್‌ ಪಕ್ಷದ ಆಂತರಿಕ ವಿಚಾರದ ಬಗ್ಗೆ ಬಿಜೆಪಿಯವರು ಚಿಂತಿಸುವ ಅವಶ್ಯಕತೆ ಇಲ್ಲ, ಸರ್ಕಾರದ ಆಡಳಿತ ಸರಿಯಾಗಿ ನಡೆಸದಿದ್ದರೆ ಅಷ್ಟೇ ಟೀಕಿಸಲಿ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಬಿಜೆಪಿಯವರಿಗೆ ಟಾಂಗ್‌ ನೀಡಿದರು.ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಆಂತರಿಕ ವಿಷಯಗಳ ಬಗ್ಗೆ ನಮ್ಮ ನಾಯಕರು ಸರಿಪಡಿಸುತ್ತಾರೆ, ಕಾಂಗ್ರೆಸ್‌ ಪಕ್ಷದ ಆಂತರಿಕ ವಿಚಾರದ ಬಗ್ಗೆ ಬಿಜೆಪಿಯವರು ತೆಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದರು. ಚಕ್ರವರ್ತಿ ಸೂಲಿಬೆಲೆ ಒಬ್ಬ …

Read More »

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾಗಿ ಹೇಮಂತ ನಿಂಬಾಳ್ಕರ್ ನೇಮಕ

ಹೌದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ವಿವಿಧ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಐಪಿಎಸ್ ಅಧಿಕಾರಿ ಹೇಮಂತ ನಿಂಬಾಳ್ಕರ್ ಅವರಿಗೆ ಕಾಂಗ್ರೆಸ್ ಸರಕಾರದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.

Read More »

ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಬೇಕು ‘ಶಕ್ತಿ ಸ್ಮಾರ್ಟ್​​ಕಾರ್ಡ್

: ರಾಜ್ಯ ಸರ್ಕಾರ ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಡುವ ‘ಶಕ್ತಿ’ ಯೋಜನೆಗೆ ಸಂಬಂಧಿಸಿದ ಅಧಿಕೃತ ಅಧಿಸೂಚನೆಯನ್ನು ಸೋಮವಾರ ಹೊರಡಿಸಿದೆ. ಅದರಂತೆ, ಮಹಿಳೆಯರು ಉಚಿತವಾಗಿ ಪ್ರಯಾಣಿಸಬೇಕಿದ್ದರೆ ‘ಶಕ್ತಿ ಸ್ಮಾರ್ಟ್​​ಕಾರ್ಡ್’ ಹೊಂದುವುದು ಕಡ್ಡಾಯವಾಗಿರಲಿದೆ. ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಗಳನ್ನು ಪಡೆದು, ಶಕ್ತಿ ಸ್ಮಾರ್ಟ್‌ ಕಾರ್ಡ್‌ಗಳನ್ನು ಪಡೆಯಬಹುದು. ಕಾರ್ಡ್​​ಗಳನ್ನು ವಿತರಿಸುವ ಪ್ರಕ್ರಿಯೆಯನ್ನು ಮುಂದಿನ ಮೂರು ತಿಂಗಳೊಳಗಾಗಿ ಪೂರ್ಣಗೊಳಿಸತಕ್ಕದ್ದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ ಕರ್ನಾಟಕ ರಾಜ್ಯ …

Read More »