Breaking News

ರಾಷ್ಟ್ರೀಯ

ನಾಳೆಯಿಂದ ಭಾರತ-ಆಸ್ಟ್ರೇಲಿಯಾ ಟಿ20 ಸರಣಿ

ಏಕದಿನ ವಿಶ್ವಕಪ್ ಕ್ರಿಕೆಟ್ ಬೆನ್ನಲ್ಲೇ ಭಾರತ ಮತ್ತು ಆಸ್ಟ್ರೇಲಿಯಾ 5 ಟಿ20 ಪಂದ್ಯಗಳ ಸರಣಿ ಆಡುತ್ತಿದ್ದು, ಮೊದಲ ಪಂದ್ಯ ನಾಳೆ ವಿಶಾಖಪಟ್ಟಣಂನಲ್ಲಿ ನಡೆಯಲಿದೆ. ವಿಶಾಖಪಟ್ಟಣಂ(ಆಂಧ್ರ ಪ್ರದೇಶ): 2024ರ ಟಿ20 ವಿಶ್ವಕಪ್​ಗೆ ಇನ್ನೂ 8 ತಿಂಗಳಿದ್ದರೂ ಈಗಾಗಲೇ ಎಲ್ಲಾ ರಾಷ್ಟ್ರೀಯ ತಂಡಗಳು ಸಿದ್ಧತೆ ಆರಂಭಿಸಿವೆ. ಪ್ರಸಕ್ತ ಸಾಲಿನ ಏಕದಿನ ವಿಶ್ವಕಪ್​ ಮುಗಿಯುತ್ತಿದ್ದಂತೆ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಐದು ಟಿ20 ಪಂದ್ಯಗಳ ಸರಣಿ ಶುರುವಾಗುತ್ತಿದೆ. ನಾಳೆ ಮೊದಲ ಪಂದ್ಯ ವಿಶಾಖಪಟ್ಟಣಂನ ರಾಜಶೇಖರ ರೆಡ್ಡಿ …

Read More »

ಬೆಂಗಳೂರು ಕಂಬಳ: ನಾಳೆ ಮೆರವಣಿಗೆ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಿಂದ ಕೋಣಗಳ ನಿರ್ಗಮನ

ಮಂಗಳೂರು: ಬೆಂಗಳೂರು ಕಂಬಳಕ್ಕೆ ಈಗಾಗಲೇ ದಿನಗಣನೆ ಆರಂಭವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರಲ್ಲೂ ಕುತೂಹಲ ಆವರಿಸಿದೆ. ಕರಾವಳಿ ಜಿಲ್ಲೆಗಳ ಜಾನಪದೀಯ ಕ್ರೀಡೆ ಕಂಬಳ ಮೊದಲ ಬಾರಿಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿದೆ. ಬೆಂಗಳೂರು ಕಂಬಳಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಕೋಣಗಳು ಮೆರವಣಿಗೆ ಮೂಲಕ ಹೊರಡಲಿದೆ. ಬೆಂಗಳೂರು ಕಂಬಳದಲ್ಲಿ ಭಾಗವಹಿಸಲಿರುವ ಕೋಣಗಳು ನಾಳೆ ದಕ್ಷಿಣ ಕನ್ನಡ ಜಿಲ್ಲೆಯಿಂದ ತೆರಳಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಿಂದ ಕಂಬಳದ ಕೋಣಗಳು ಒಟ್ಟಾಗಿ ತೆರಳಲಿದೆ. ಈಗಾಗಲೇ …

Read More »

ತೆಲಂಗಾಣ ವಿಧಾನಸಭೆ ಚುನಾವಣೆಯ ಪ್ರಚಾರಕ್ಕಾಗಿ ಮಾಜಿ ಮುಖ್ಯಮಂತ್ರಿ:B.S.Y.

ಬೆಂಗಳೂರು: ತೆಲಂಗಾಣ ವಿಧಾನಸಭೆ ಚುನಾವಣೆಯ ಪ್ರಚಾರಕ್ಕಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು (ಬುಧವಾರ) ತೆಲಂಗಾಣಕ್ಕೆ ತೆರಳುವರು. ಬೆಳಿಗ್ಗೆ 7.40ಕ್ಕೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಹೈದರಾಬಾದ್​ಗೆ ಪ್ರಯಾಣಿಸಲಿದ್ದಾರೆ. ಬೆಳಿಗ್ಗೆ 11.20ಕ್ಕೆ ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯ ಜಹೀರಾಬಾದ್​ನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುವ ಅವರು ಮಧ್ಯಾಹ್ನ 2ಕ್ಕೆ ರ‍್ಯಾಲಿಯಲ್ಲಿ ಭಾಗವಹಿಸುವರು. ಬಳಿಕ ಬೀದರ್​ಗೆ ಆಗಮಿಸಿ, ವಿಮಾನದ ಮೂಲಕ ಬೆಂಗಳೂರಿಗೆ ವಾಪಸಾಗಲಿದ್ದಾರೆ. ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ತಮ್ಮ …

Read More »

ಜಾತಿ ಗಣತಿ ಮಾಡಿ ಸಾಮಾಜಿಕ ನ್ಯಾಯ ಒದಗಿಸಬೇಕು ಎಂಬುದು ನಮ್ಮ ಪಕ್ಷದ ನಿಲುವು:ಡಿ .ಕೆ. ಶಿ.

ಬೆಂಗಳೂರು : ಜಾತಿ ಗಣತಿ ಮಾಡಿ ಸಾಮಾಜಿಕ ನ್ಯಾಯ ಒದಗಿಸಬೇಕು ಎಂಬುದು ನಮ್ಮ ಪಕ್ಷದ ನಿಲುವು. ಆ ನಿಲುವಿಗೆ ನಾವು ಬದ್ಧರಾಗಿದ್ದೇವೆ. ಆದರೆ ಜಾತಿ ಗಣತಿ ಸಮೀಕ್ಷೆ ವೈಜ್ಞಾನಿಕವಾಗಿ ಆಗಬೇಕು ಎಂದು ವಿವಿಧ ಸಮುದಾಯಗಳು ಆಗ್ರಹಿಸಿವೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್​ ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದ ಬಳಿ ಇಂದು ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಸಿಗಬೇಕು ಎಂದು ಅನೇಕ ಸಮುದಾಯಗಳು …

Read More »

ತಾಯಿ, ಮಗು ಸಾವು ಪ್ರಕರಣ: ಸಚಿವ ಜಾರ್ಜ್ ರಾಜೀನಾಮೆಗೆ ಆರ್​ ಅಶೋಕ್ ಆಗ್ರಹ

ಬೆಂಗಳೂರು : ನಗರದಲ್ಲಿ ಇತ್ತೀಚೆಗೆ ವಿದ್ಯುತ್​ ಅವಘಡದಲ್ಲಿ ತಾಯಿ, ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಬೂಬುಗಳನ್ನು ಹೇಳುವುದನ್ನು ಬಿಟ್ಟು ನೈತಿಕ ಹೊಣೆ ಹೊತ್ತು ಇಂಧನ ಸಚಿವ ಕೆ ಜೆ ಜಾರ್ಜ್​ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ. ಈ ಕುರಿತು ಇಂದು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ವೈರ್​ಗಳಿಗೆ ಇಲಿ ಕಚ್ಚಿ ಘಟನೆ ಸಂಭವಿಸಿದೆ ಎಂಬ ನೆಪ ಹೇಳಿಕೊಂಡು ತಿಪ್ಪೆ ಸಾರಿಸುವ ಮಟ್ಟಕ್ಕೆ ಸಚಿವರು ಇಳಿದಿರುವುದು …

Read More »

ಹಣಕಾಸಿನ ವಿಚಾರ: ವಿಜಯಪುರದಲ್ಲಿ ವ್ಯಕ್ತಿಯ ಮೇಲೆ ಗುಂಡು ಹಾರಿಸಿದ್ದ 12 ಜನ ಆರೋಪಿಗಳ ಬಂಧನ

ವಿಜಯಪುರ: ಹಣಕಾಸಿನ ವಿಚಾರದ ಹಿನ್ನೆಲೆ ವ್ಯಕ್ತಿಯೊಬ್ಬನ ಮೇಲೆ ಗುಂಡು ಹಾರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಜನ ಆರೋಪಿಗನ್ನು ಗೋಲಗುಂಬಜ್‌ ಪೊಲೀಸರು ಬಂಧಿಸಿದ್ದಾರೆ ಎಂದು ಎಸ್ಪಿ ಋಷಿಕೇಶ್ ಸೋನಾವಣೆ ತಿಳಿಸಿದ್ದಾರೆ.   ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ”ಹಣಕಾಸಿನ ವ್ಯವಹಾರ ಹಿನ್ನೆಲೆ ಫೈರಿಂಗ್ ಮಾಡಿದ್ದ ರೌಡಿಶೀಟರ್ ಹೈದರ್ ಅಲಿ ನದಾಫ್ ಸೇರಿದಂತೆ 12 ಜನ ಆರೋಪಿಗಳನ್ನು ಅರೆಸ್ಟ್​ ಮಾಡಲಾಗಿದೆ. ನವೆಂಬರ್ 10ರಂದು ನಗರದ ಒಡ್ಡರ ಓಣಿಯಲ್ಲಿ ಸೋಹೆಲ್ ಕಕ್ಕಳಮೇಲಿ ಎಂಬವರ …

Read More »

ಬೈಲಹೊಂಗಲ | ಕಬ್ಬಿನ ಜಮೀನಿಗೆ ಬೆಂಕಿ; ₹12 ಲಕ್ಷ ಹಾನಿ

ಬೈಲಹೊಂಗಲ: ಸಮೀಪದ ಹೊಸೂರ ಗ್ರಾಮದಲ್ಲಿ ರೈತರೊಬ್ಬರ ಕಬ್ಬಿನ ಜಮೀನಿಗೆ ವಿದ್ಯುತ್ ತಗುಲಿ ಮಂಗಳವಾರ ಅಪಾರ ಪ್ರಮಾಣದ ಕಬ್ಬು ಸುಟ್ಟು ಕರಕಲಾಗಿದೆ. ಗ್ರಾಮದ ರೈತ ಬಾಳಪ್ಪ ತುಕ್ಕನ್ನವರ ಅವರಿಗೆ ಸೇರಿದ ಸುಮಾರು ಆರು ಎಕರೆ ಜಮೀನಿನಲ್ಲಿ ಕಬ್ಬು ಬೆಳೆಯಲಾಗಿತ್ತು. ಕಬ್ಬು ಕಟಾವಿಗೆ ಬಂದಿತ್ತು. ಕಬ್ಬಿನ ಬೆಳೆಗೆ ತಾಗಿಕೊಂಡು ವಿದ್ಯುತ್ ಪ್ರಸರಣದ ತಂತಿಗಳು ಜೋತು ಬಿದ್ದಿದ್ದವು. ಜೋತು ಬಿದ್ದ ವಿದ್ಯುತ್ ತಂತಿಗಳನ್ನು ತೆರುವುಗೊಳಿಸುವಂತೆ ರೈತರು ಸಂಬಂಧಿಸಿದ ಹೆಸ್ಕಾಂ ಇಲಾಖೆಗೆ ಸಾಕಷ್ಟು ಮನವಿ ಮಾಡಿದ್ದರು. …

Read More »

“ಕೊಲ್ಲಾಪುರಿ ಬ್ರಾಂಡ್​ನ ಚಪ್ಪಲಿ ತಯಾರಾಗುವುದು ಅಥಣಿಯಲ್ಲಿ. ಆದರೆ ಹೆಸರು ಬಂದಿದ್ದು ಮಾತ್ರ ಕೊಲ್ಲಾಪುರ್ ಅಂತ

ಚಿಕ್ಕೋಡಿ(ಬೆಳಗಾವಿ): ದೇಶ, ವಿದೇಶಗಳಲ್ಲಿ ಹೆಸರುವಾಸಿಯಾಗಿರುವ ಕೊಲ್ಲಾಪುರ್ ತೊಗಲಿನ ಚಪ್ಪಲಿ ತಯಾರಕರ ಪರಿಸ್ಥಿತಿ ಸದ್ಯ ದುಸ್ಥಿತಿಯಾಗಿದ್ದು, ಸರ್ಕಾರವು ಬರುವ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚರ್ಮೋದ್ಯೋಗ ನಡೆಸುತ್ತಿರುವ ಕುಟುಂಬಗಳ ಕುರಿತು ಚರ್ಚಿಸಿ ನಮಗೆ ನ್ಯಾಯ ಒದಗಿಸಿ ಕೊಡಬೇಕೆಂದು ಕುಶಲಕರ್ಮಿಗಳು ಒತ್ತಾಯಿಸುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಧುಬಾವಿ ಗ್ರಾಮ ಹಾಗೂ ತಾಲೂಕಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಪ್ಪಲಿಯನ್ನು ತಯಾರಿಸಿ ಮಾರುಕಟ್ಟೆಗಳಿಗೆ ಮಾರಾಟ ಮಾಡುತ್ತಾರೆ. ಆದರೆ ಆಧುನಿಕತೆಯಿಂದ ದಿನದಿನಕ್ಕೆ ಚರ್ಮದಿಂದ ತಯಾರಿಸಿದ ಚಪ್ಪಲಿ ಬೇಡಿಕೆ ಕಡಿಮೆಯಾಗುತ್ತಿದ್ದು ಮತ್ತು …

Read More »

ರಾಜ್ಯಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದ್ದನ್ನ ಪ್ರಶ್ನಿಸಿ ನಾನು ಕೋರ್ಟ್​ಗೆ ಹೋಗುತ್ತೇನೆ: ಸಿಎಂ ಇಬ್ರಾಹಿಂ

ಬೆಂಗಳೂರು: ಜೆಡಿಎಸ್​ ನನ್ನನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದ್ದು ತಪ್ಪು. ಹಾಗೂ ವಜಾಗೊಳಿಸಬೇಕೆಂದಿದ್ದರೆ ಸಭೆ ಕರೆದು 2/3 ಬೆಂಬಲದೊಂದಿಗೆ ಮಾಡಬೇಕು. ಯಾವುದೇ ನಿಯಮ ಪಾಲನೆ ಮಾಡದೇ ನನ್ನನ್ನು ಏಕಾಏಕಿ ಸ್ಥಾನದಿಂದ ತೆಗೆದು ಹಾಕಿದ್ದಾರೆ. ಈ ಬಗ್ಗೆ ನಾನು ಕೋರ್ಟ್​ಗೆ ಹೋಗುತ್ತೇನೆ ಎಂದು ಹಿರಿಯ ರಾಜಕೀಯ ಮುಖಂಡ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಜೆಡಿಎಸ್​ನಿಂದ ಅಮಾನತು ಮಾಡಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿ, ಇನ್ನು ಏನು ಉಚ್ಚಾಟನೆ ರೀ, …

Read More »

ಅಕಾಲಿಕವಾಗಿ ಮೃತಪಟ್ಟ ತಮ್ಮ ಮಗನ ನೆನಪಿಗಾಗಿ ದಂಪತಿ ಗೋಶಾಲೆಯನ್ನು ನಿರ್ಮಿಸುವ ಮೂಲಕ ಇತರರಿಗೆ ಮಾದರಿ

ಹಾವೇರಿ: ಕೆಲ ತಿಂಗಳ ಹಿಂದೆ ಸಂದೇಶ ಸೇಟ್(21) ಯುವಕ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಸಂದೇಶನ​ ಅಕಾಲಿಕ ಸಾವು ತಂದೆ – ತಾಯಿಗೆ ಆಘಾತ ಉಂಟು ಮಾಡಿತ್ತು. ಸಂದೇಶ ಜೀವಂತವಾಗಿದ್ದರೆ ಇಂದಿಗೆ 22ನೇ ವರ್ಷಕ್ಕೆ ಕಾಲಿಡುತ್ತಿದ್ದರು. ಆದರೆ ಜನ್ಮದಿನ ಆಚರಿಸಿಕೊಳ್ಳಬೇಕಾಗಿದ್ದ ಮಗ ಈಗ ನೆನಪು ಮಾತ್ರ. ಹಾಗಾಗಿ ಕುಟುಂಬಸ್ಥರು ಸಂದೇಶನ ಹೆಸರನ್ನು ಚಿರಸ್ಥಾಯಿಯಾಗಿಸಲು ಮುಂದಾಗಿದ್ದಾರೆ. ಸಂದೇಶ ಸೇಟ್ಹೌದು, ಕುಟುಂಬ ಇದೀಗ ಸಂದೇಶ ಹೆಸರಿನಲ್ಲಿ ಹಾವೇರಿ ಸಮೀಪದ ಗಾಂಧಿಪುರ ಗ್ರಾಮದಲ್ಲಿ ಗೋಶಾಲೆಯೊಂದನ್ನು ತೆರೆದಿದೆ. ಸಂದೇಶ …

Read More »