ಬೆಂಗಳೂರು : ಬೇಲಿಯೇ ಎದ್ದು ಹೊಲ ಮೇಯ್ದಂತೆ ಖದೀಮರನ್ನ ಸದೆ ಬಡಿಯಬೇಕಾದ ರೈಲ್ವೇ ಹೆಡ್ಕಾನ್ಸ್ಟೇಬಲ್ ಬಬ್ಬರನ್ನು ಕಳ್ಳನೊಂದಿಗೆ ಶಾಮೀಲಾಗಿ ರೈಲುಗಳಲ್ಲಿ ಕಳ್ಳತನವೆಸಗುತ್ತಿದ್ದ ಜಾಲವನ್ನ ಬೆಂಗಳೂರು ದಂಡು ರೈಲ್ವೇ ಪೊಲೀಸರು ಪತ್ತೆ ಹಚ್ಚಿದ್ದಾರೆ. ಚಿಕ್ಕಬಳ್ಳಾಪುರ ರೈಲ್ವೆ ಹೊರ ಪೊಲೀಸ್ ಠಾಣೆಯಲ್ಲಿ ಹೆಡ್ಕಾನ್ಸ್ಟೇಬಲ್ ಆಗಿರುವ ಸಿದ್ದರಾಮರೆಡ್ಡಿ ಹಾಗೂ ಖದೀಮ ಸಾಬಣ್ಣ ಎಂಬುವರನ್ನ ಬಂಧಿಸಿ, ಪೊಲೀಸ್ ಕಸ್ಟಡಿ ಪಡೆದು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ. 2011ರ ಬ್ಯಾಚ್ ಸಿಬ್ಬಂದಿಯಾಗಿದ್ದ ಸಿದ್ದರಾಮರೆಡ್ಡಿ, ರೈಲ್ವೇ ಹೆಡ್ಕಾನ್ಸ್ಟೇಬಲ್ ಆಗಿ ರಾಯಚೂರಿನಲ್ಲಿ ಸೇವೆಗೆ …
Read More »ರೈಲ್ವೆ ನಿಲ್ದಾಣದ ಬಳಿ ಸಿಕ್ಕ ಅನುಮಾನಾಸ್ಪದ ಬಾಕ್ಸ್ನಲ್ಲಿ ಉಪ್ಪು ಪತ್ತೆ: ಶಿವಮೊಗ್ಗ ಎಸ್ಪಿ
ಶಿವಮೊಗ್ಗ : ನಗರದ ರೈಲು ನಿಲ್ದಾಣದ ಬಳಿ ಭಾನುವಾರ ಪತ್ತೆಯಾದ ಬಾಕ್ಸ್ನಲ್ಲಿ ಯಾವುದೇ ಸ್ಫೋಟಕ ವಸ್ತುಗಳಿರಲಿಲ್ಲ. ಬಾಕ್ಸ್ನಲ್ಲಿ ಪತ್ತೆಯಾಗಿರುವುದು ಉಪ್ಪು ಎಂದು ಮೇಲ್ನೋಟಕ್ಕೆ ಅನಿಸಿದೆ ಎಂದು ಎಸ್ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆ ಶಿವಮೊಗ್ಗದ ರೈಲು ನಿಲ್ದಾಣದ ಪಾರ್ಕಿಂಗ್ ಜಾಗದ ಬಳಿ ಪತ್ತೆಯಾದ ಬಾಕ್ಸ್ನಲ್ಲಿ ಅನುಮಾನಾಸ್ಪದ ವಸ್ತುಗಳಿವೆ ಎಂದು ತಿಳಿದು ಬಂದ ಕಾರಣ ಪರಿಶೀಲನೆ ಮಾಡಿದ್ದೆವು. ನಂತರ ಅದು ಇನ್ನಷ್ಟು ಹೆಚ್ಚಿನ ಪರಿಶೀಲನೆ ಅವಶ್ಯಕತೆ ಇದೆ …
Read More »ಟೈಗರ್ 3′ ಮುಂಗಡ ಬುಕ್ಕಿಂಗ್ನಲ್ಲಿ ದಾಖಲೆ; ಸಿನಿಮಾ ಟಿಕೆಟ್ ಶರವೇಗದಲ್ಲಿ ಮಾರಾಟ
ಮನೀಶ್ ಶರ್ಮಾ ನಿರ್ದೇಶನದ, ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ನಟನೆಯ ‘ಟೈಗರ್ 3’ ಸಿನಿಮಾದ ಅಡ್ವಾನ್ಸ್ ಬುಕ್ಕಿಂಗ್ಗೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಭಾರತೀಯ ಚಿತ್ರರಂಗದ ಬಹುನಿರೀಕ್ಷೆಯ ಸಿನಿಮಾ ‘ಟೈಗರ್ 3’. ಸಲ್ಮಾನ್ ಖಾನ್, ಕತ್ರಿನಾ ಕೈಫ್ ಮತ್ತು ಇಮ್ರಾನ್ ಹಶ್ಮಿ ಮುಖ್ಯಭೂಮಿಕೆಯ ಈ ಚಿತ್ರದ ಮೇಲೆ ಭಾರೀ ನಿರೀಕ್ಷೆ ಇದೆ. ಮನೀಶ್ ಶರ್ಮಾ ನಿರ್ದೇಶನದ ಸಿನಿಮಾದ ಅಡ್ವಾನ್ಸ್ ಬುಕ್ಕಿಂಗ್ಗೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಬಿಡುಗಡೆಗೂ ಮುನ್ನ ಟಿಕೆಟ್ಗಳು ಶರವೇಗದಲ್ಲಿ …
Read More »ರಾಜ್ಯ ಸರ್ಕಾರದ ಕಾರ್ಯವೈಖರಿ ವಿರೋಧಿಸಿ ಸಂಸದ ಸಂಗಣ್ಣ ಕರಡಿ ಉಪವಾಸ ಸತ್ಯಾಗ್ರಹ
ಕೊಪ್ಪಳ : ರೈತರ ಕೃಷಿ ಪಂಪ್ಸೆಟ್ಗಳಿಗೆ ಪರಿವರ್ತಕ ಸಹಿತ ಉಚಿತ ಮೂಲಸೌಕರ್ಯ ಒದಗಿಸುವ ಯೋಜನೆ ರದ್ದುಪಡಿಸುವ ಆದೇಶ ಹಿಂಪಡೆಯಬೇಕು. ರೈತರ ಪಂಪ್ಸೆಟ್ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಸೇರಿದಂತೆ ವಿವಿಧ ಬೇಡಿಕೆ ಮುಂದಿಟ್ಟುಕೊಂಡು ಕೊಪ್ಪಳ ಜಿಲ್ಲಾಡಳಿತ ಭವನದ ಮುಂದೆ ಸಂಸದ ಸಂಗಣ್ಣ ಕರಡಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ರೈತರು ಬದುಕೋದೆ ಕಷ್ಟವಾಗಿದೆ. ಅಂತಹದರಲ್ಲಿ ಸೆಪ್ಟೆಂಬರ್ 22ರಿಂದ ಬಂದ ರೈತರ ಅರ್ಜಿಗಳಿಗೆ ಪಂಪ್ಸೆಟ್ ಸಲಕರಣೆ ಉಚಿತ ಕೊಡೋದಿಲ್ಲ ಅಂತ ರಾಜ್ಯ ಸರ್ಕಾರ ಆದೇಶ ಮಾಡಿದೆ. …
Read More »10 ಕೆಜಿ ಅಕ್ಕಿ ವಿತರಣೆ ಮಾಡೋ ಗುರಿ ಇದೆ.. ಕೇಂದ್ರ ಹೆಚ್ಚುವರಿ ಅಕ್ಕಿ ನೀಡುತ್ತಿಲ್ಲ:ಮುನಿಯಪ್ಪ
ಮೈಸೂರು: “ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಅಪ್ರಸ್ತುತವಾಗಿದ್ದು, ಈಗ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಇದ್ದಾರೆ. ಸರ್ಕಾರ ಸುಭದ್ರವಾಗಿದೆ. ಸರ್ಕಾರಕ್ಕೆ ಯಾವುದೇ ಅಪಾಯ ಇಲ್ಲ” ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ ಹೆಚ್ ಮುನಿಯಪ್ಪ ಹೇಳಿದರು. ಮೈಸೂರಿನ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಸಭಾಂಗಣದಲ್ಲಿ ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆಯ ಕಾರ್ಯಕ್ರಮ ಉದ್ಘಾಟನೆ ಮಾಡಿ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. “ರಾಜ್ಯದ ಅಯಾ ಭಾಗದ ಜನರ ಆಹಾರ ಪದ್ಧತಿಗೆ …
Read More »ಮರಳು ಸಮಸ್ಯೆ ಪರಿಹರಿಸಲು ಸರ್ಕಾರದಿಂದ ಪ್ರಾಮಾಣಿಕ ಪ್ರಯತ್ನ: ಗುಂಡೂರಾವ್
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮರಳಿನ ಸಮಸ್ಯೆಯನ್ನು ಪರಿಹರಿಸಲು ನಮ್ಮ ಕಾಂಗ್ರೆಸ್ ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ಮಂಗಳೂರು ನಗರ ದಕ್ಷಿಣ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಮರಳು ಸಮಸ್ಯೆ ಬಗ್ಗೆ ಮಾಡಿರುವ ಆರೋಪಕ್ಕೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸಚಿವರು, ಶಾಸಕರಾದ ವೇದವ್ಯಾಸ್ ಕಾಮತ್ ಅವರೇ, ದಕ್ಷಿಣ ಕನ್ನಡ ಜಿಲ್ಲೆಯ ಮರಳಿನ ಸಮಸ್ಯೆ ಕಾಂಗ್ರೆಸ್ ಸರ್ಕಾರ …
Read More »ರಾಯಚೂರು ಜಿಲ್ಲೆಯಲ್ಲಿ ಮೋಡ ಬಿತ್ತನೆಗೆ ಚಾಲನೆ
ಬಳ್ಳಾರಿ: ಅಗತ್ಯ ಪ್ರಮಾಣದಷ್ಟು ಮಳೆಯಾಗದೆಪರಿಣಾಮಕಲ್ಯಾಣ ಕರ್ನಾಟಕದ ಜಿಲ್ಲೆಗಳು ಬರಗಾಲದಿಂದ ತತ್ತರಿಸಿವೆ. ಹೀಗಾಗಿ ಸಚಿವ ಎನ್ ಎಸ್ ಬೋಸರಾಜ್ ಅವರ ಫೌಂಡೇಷನ್ ಮತ್ತು ಶಾಸಕ ಪ್ರಕಾಶ್ ಕೋಳಿವಾಡ ಅವರ ಪಿಕೆಕೆ ಸಂಸ್ಥೆ ವತಿಯಿಂದ ರಾಯಚೂರಿನಲ್ಲಿ ಮೋಡ ಬಿತ್ತನೆ ಕಾರ್ಯ ಮಾಡಲಾಗುತ್ತಿದೆ. ಇದಕ್ಕಾಗಿ ಬಳ್ಳಾರಿಯ ಜಿಂದಾಲ್ ವಿಮಾನ ನಿಲ್ದಾಣದಿಂದ ಹೊರಟ ವಿಮಾನ ಮೂರು ದಿನಗಳ ಕಾಲ ಮೋಡ ಬಿತ್ತನೆ ಮಾಡಲಿದೆ. ಸಚಿವ ಎನ್ ಎಸ್ ಬೋಸರಾಜ್ ಅವರ ಪುತ್ರ ರವಿ ಬೋಸರಾಜ್ ಮಾತನಾಡಿ, “ಕರ್ನಾಟಕ …
Read More »ಕೋಲ್ಕತ್ತಾದಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾ ವಿರುದ್ಧ 243 ರನ್ಗಳ ಬೃಹತ್ ಗೆಲುವು
ಕೋಲ್ಕತ್ತಾದಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾ ವಿರುದ್ಧ 243 ರನ್ಗಳ ಬೃಹತ್ ಗೆಲುವು ದಾಖಲಿಸಿದೆ. ಕೋಲ್ಕತ್ತಾ (ಪಶ್ಚಿಮ ಬಂಗಾಳ): ವಿಶ್ವಕಪ್ನಲ್ಲಿ ಭಾರತದ ಬೌಲಿಂಗ್ ಮಿಂಚುತ್ತಿದ್ದು, ಶ್ರೀಲಂಕಾ ನಂತರ ದಕ್ಷಿಣ ಆಫ್ರಿಕಾವನ್ನು 100ರ ಒಳಗೆ ಭಾರತ ಕಟ್ಟಿಹಾಕಿ ಬೃಹತ್ ಜಯ ದಾಖಲಿಸಿದೆ. 327 ರನ್ಗಳ ಗುರಿಯನ್ನು ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ 27.1 ಓವರ್ಗೆ 83 ರನ್ ಗಳಿಸಿ ಆಲ್ಔಟ್ ಆಯಿತು. ಇದರಿಂದ ಭಾರತ 243 ರನ್ಗಳ ಬೃಹತ್ ಜಯ …
Read More »ಕುಲಗೋಡ, ಯಾದವಾಡ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಪ್ರಸ್ತಾವಣೆ : ಶಾಸಕ ಬಾಲಚಂದ್ರ ಜಾರಕಿಹೊಳಿ
*̊ಕುಲಗೋಡ, ಯಾದವಾಡ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಪ್ರಸ್ತಾವಣೆ : ಶಾಸಕ ಬಾಲಚಂದ್ರ ಜಾರಕಿಹೊಳಿ* ಮೂಡಲಗಿ: ತಾಲೂಕಿನ ಕುಲಗೋಡ ಮತ್ತು ಯಾದವಾಡ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸಲಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಕಳೆದ ಗುರುವಾರದಂದು ತಾಲೂಕಿನ ಕುಲಗೋಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಸಾರ್ವಜನಿಕರ ಹಿತದೃಷ್ಟಿಯಿಂದ ಕುಲಗೋಡ ಮತ್ತು ಯಾದವಾಡ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು …
Read More »ರಾಜ್ಯ ಸರ್ಕಾರದ ಬಗ್ಗೆ ಮಾತನಾಡುವುದನ್ನು ಬಿಟ್ಟು ಕೇಂದ್ರ ಸರ್ಕಾರದಿಂದ ಬರ ಪರಿಹಾರ ಹಣ ತರುವ ಪ್ರಯತ್ನ ಮಾಡಿ ಎಂದು ಅಬಕಾರಿ ಸಚಿವ
ಬಾಗಲಕೋಟೆ : ರಾಜ್ಯ ಸರ್ಕಾರದ ಬಗ್ಗೆ ಮಾತನಾಡುವುದನ್ನು ಬಿಟ್ಟು ಕೇಂದ್ರ ಸರ್ಕಾರದಿಂದ ಬರ ಪರಿಹಾರ ಹಣ ತರುವ ಪ್ರಯತ್ನ ಮಾಡಿ ಎಂದು ಅಬಕಾರಿ ಸಚಿವ ಆರ್. ಬಿ ತಿಮ್ಮಾಪೂರ ಅವರು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರಿಗೆ ಟಾಂಗ್ ನೀಡಿದ್ದಾರೆ. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಟೀಲ್ ಸಾಹೇಬರೆ ಬರೀ ಮಾತನಾಡುವುದು, ಗಲ್ಲಿ ಗಲ್ಲಿ ಸಂಚಾರ ಮಾಡುವುದನ್ನು ಬಿಟ್ಟು ದೆಹಲಿಗೆ ಹೋಗಿ ಹಣ ತೆಗೆದುಕೊಂಡು ಬನ್ನಿ ಎಂದು ತಿರುಗೇಟು ನೀಡಿದರು. …
Read More »