Breaking News

ರಾಷ್ಟ್ರೀಯ

ಕಲಬುರಗಿ: ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

ಕಲಬುರಗಿ: ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಮಣಿಕಂಠ ರಾಠೋಡ ಅವರ ಮೇಲೆ ದುಷ್ಕರ್ಮಿಗಳು ಹಲ್ಲೆಗೈದ ಘಟನೆ ಶನಿವಾರ ತಡರಾತ್ರಿ ನಡೆದಿದೆ. ರಾಠೋಡ ಜೊತೆಗಿದ್ದ ಆಪ್ತ ಸಹಾಯಕನಿಗೂ ಗಾಯಗಳಾಗಿದೆ. ಇಬ್ಬರನ್ನೂ ಕಲಬುರಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಚಿತ್ತಾಪುರ ತಾಲೂಕಿನ ಶಂಕರ್‌ವಾಡಿ ಬಳಿ ಘಟನೆ ನಡೆದಿದೆ. ಮಾಲಗತ್ತಿ ಬಳಿಯ ನ್ಯಾಷನಲ್ ಹೈವೆ ಸಮೀಪದ ತಮ್ಮ ಫಾರಂಹೌಸ್​ನಿಂದ ತಡರಾತ್ರಿ ಕಲಬುರಗಿಗೆ ಬರುತ್ತಿದ್ದಾಗ ಮಾರ್ಗಮಧ್ಯೆ ಶಂಜರ್ ವಾಡಿ ಬಳಿ ದುಷ್ಕರ್ಮಿಗಳು ಮದ್ಯದ ಬಾಟಲಿ, …

Read More »

ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಸರ್ಕಾರ ಕೂಡಲೇ ಸ್ಪಂದಿಸಬೇಕು: ಬಸವಜಯ ಮೃತ್ಯುಂಜಯ ಸ್ವಾಮೀಜಿ

ವಿಜಯಪುರ: “ಜಿಲ್ಲೆಯ ನೂತನ ತಾಲೂಕು ತಿಕೋಟಾದ ಕನಮಡಿಯಲ್ಲಿ ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟ ಮಾಡಿ ಸರ್ಕಾರದ ಗಮನ ಸೆಳೆಯಲು ನಿರ್ಧರಿಸಲಾಗಿದೆ” ಎಂದು ಕೂಡಲಸಂಗಮದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು. ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ತಿಕೋಟಾ ತಾಲೂಕಿನಲ್ಲಿ ಅತೀ ಹೆಚ್ಚು ಪಂಚಮಸಾಲಿ ಸಮಾಜದವರು ಇರುವ ಗ್ರಾಮವೆಂದರೆ ಅದು ಕನಮಡಿ ಗ್ರಾಮ, ಇಲ್ಲಿಯೇ ಪಂಚಮಸಾಲಿ ಸಮಾಜದ ಮೀಸಲಾತಿ ಹಕ್ಕೊತ್ತಾಯ ಬೃಹತ್ ಸಮಾವೇಶ ಮಾಡಲಿದ್ದೇವೆ” ಎಂದರು. “ರಾಣಿ ಚೆನ್ನಮ್ಮ ಅವರ ಜಯಂತ್ಯುತ್ಸವ ಮಾಡಬೇಕೆಂದು …

Read More »

ಬರಲಿದೆ ನೇಮಕಾತಿ ಪರೀಕ್ಷೆ ಅಕ್ರಮ ತಡೆಗೆ ಕಠಿಣ ಕಾಯ್ದೆ; ಅಕ್ರಮ ಎಸಗಿದ್ರೆ ಆಸ್ತಿ ಮುಟ್ಟುಗೋಲು

ಬೆಂಗಳೂರು : ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮ ರಾಜ್ಯ ಸರ್ಕಾರದ ನಿದ್ದೆಗೆಡಿಸುತ್ತಿದೆ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಪರೀಕ್ಷೆ ಅಕ್ರಮ ಸಾಕಷ್ಟು ಸದ್ದು ಮಾಡಿತ್ತು. ಸಾಲು ಸಾಲು ನೇಮಕಾತಿ ಪರೀಕ್ಷೆ ಅಕ್ರಮಗಳಿಂದ ಅನೇಕ ಯೋಗ್ಯ ಅಭ್ಯರ್ಥಿಗಳು ಅವಕಾಶ ವಂಚಿತರಾಗುತ್ತಿದ್ದಾರೆ. ನೇಮಕಾತಿ ಪರೀಕ್ಷೆಗಳಲ್ಲಿ ನಡೆಯುವ ಅಕ್ರಮ ತಡೆಯಲು ರಾಜ್ಯ ಸರ್ಕಾರ ಇದೀಗ ಪ್ರತ್ಯೇಕ ಕಾಯ್ದೆ ತರಲು ತೀರ್ಮಾನಿಸಿದೆ. ಅಷ್ಟಕ್ಕೂ ಈ ಉದ್ದೇಶಿತ ಕಾಯ್ದೆಯಲ್ಲಿನ ಕಠಿಣ ನಿಯಮಗಳೇನು? ಎಂಬ ವರದಿ ಇಲ್ಲಿದೆ. ಪಿಎಸ್​ಐ ನೇಮಕಾತಿ …

Read More »

ನನಗೆ ರಾಜಾಧ್ಯಕ್ಷ ಸ್ಥಾನ ನೀಡಿ ಟಿ20 ಮ್ಯಾಚ್ ​ಆಡಲು ಅವಕಾಶ ಮಾಡಿಕೊಟ್ಟಿದ್ದಾರೆ: ಬಿ ವೈ ವಿಜಯೇಂದ್ರ

ಮೈಸೂರು: ನಮ್ಮ ರಾಷ್ಟ್ರೀಯ ಅಧ್ಯಕ್ಷರು ನನಗೆ ರಾಜಾಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನ ನೀಡಿ ಟಿ20 ಮ್ಯಾಚ್ ಆಡಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು. ಮೈಸೂರಿನಲ್ಲಿ ಮಾತನಾಡಿದ ಅವರು, ಕ್ರಿಕೆಟ್​ನಂತೆ ರಾಜಕೀಯದಲ್ಲೂ ಟೀಂ ವರ್ಕ್​ ಇರಬೇಕು ಎಂದು ಹೇಳುತ್ತಾರೆ. ನಾವು ಒಂದು ತಂಡವಾಗಿ ಕೆಲಸ ಮಾಡಿದರೆ ಯಶಸ್ಸನ್ನು ಸಾಧಿಸಲು ಸಾಧ್ಯ ಎಂದರು. ಬರುವ ದಿನಗಳಲ್ಲಿ ನನ್ನ ಟಿ20 ಮ್ಯಾಚ್​ ಅನ್ನು ನೀವೇ ನೋಡಲಿದ್ದೀರಿ. ರಾಜಕೀಯವಾಗಿ ನನ್ನನ್ನು ಗುರುತಿಸಿದ್ದು …

Read More »

ವಿದ್ಯುತ್‌ ತಂತಿ ತುಳಿದು ತಾಯಿ-ಮಗಳು ಸಾವು: ಐವರು ಸಿಬ್ಬಂದಿ ಅಮಾನತು

ಬೆಂಗಳೂರು: ವೈಟ್‌ ಫೀಲ್ಡ್‌ ವಿಭಾಗ ವ್ಯಾಪ್ತಿಯ ಕಾಡುಗೋಡಿಯ 4ನೇ ಪೂರ್ವ ಉಪ ವಿಭಾಗದ ಕಾಡುಗೋಡಿ ಹೋಪ್‌ ಫಾರ್ಮ್‌ ಸಿಗ್ನಲ್‌ ಸಮೀಪ ಪಾದಚಾರಿ ರಸ್ತೆ ಮೇಲೆ ತುಂಡಾಗಿ ಬಿದ್ದಿದ್ದ 11ಕೆವಿ ವಿದ್ಯುತ್‌ ತಂತಿ ತುಳಿದು ತಾಯಿ ಮತ್ತು ಮಗಳು ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಮೇಲ್ನೋಟಕ್ಕೆ ಕರ್ತವ್ಯಲೋಪ ಕಂಡ ಬಂದ ಹಿನ್ನೆಲೆಯಲ್ಲಿ ಬೆಸ್ಕಾಂನ ಐವರು ಸಿಬ್ಬಂದಿಯನ್ನು ಅಮಾನತುಗೊಳಿಸಿ, ಇಬ್ಬರು ಹಿರಿಯ ಅಧಿಕಾರಿಗಳಿಗೆ ಕಾರಣ ಕೇಳಿ ಶೋಕಾಸ್‌ ನೊಟೀಸ್‌ ಜಾರಿಗೊಳಿಸಲಾಗಿದೆ.   ಭಾನುವಾರ ನಸುಕಿನ …

Read More »

ಅನ್ನಭಾಗ್ಯ ಅಕ್ಕಿಯನ್ನು ಸರಿಯಾದ ಪ್ರಮಾಣದಲ್ಲಿ ಕೊಡುತ್ತಿಲ್ಲ: ರಡ್ಡೇರಹಟ್ಟಿ ಗ್ರಾಮದ ಜನರ ಆರೋಪ

ಚಿಕ್ಕೋಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ನೀಡುವ ಪ್ರಮಾಣದಲ್ಲಿ ಕಡಿತ ಮಾಡಿರುವ ಆರೋಪ ಕೇಳಿಬಂದಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದಲ್ಲಿ ಐದು ಕೆಜಿ ಅಕ್ಕಿ ಬದಲು ನಾಲ್ಕೂವರೆ ಕೆಜಿ ಅಕ್ಕಿ ವಿತರಣೆ ಮಾಡಿದ್ದು, ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದಾರೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಪಡಿತರ ಚೀಟಿದಾರರಿಗೆ ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದೆ, ಇಲ್ಲಿ ಪ್ರತಿ ಒಂದು ಕಾರ್ಡಿಗೆ ಅರ್ಧ ಕೆಜಿ …

Read More »

ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ : 71 ‘ಪೊಲೀಸ್ ಇನ್ಸ್ ಪೆಕ್ಟರ್’ ಗಳ ವರ್ಗಾವಣೆ

ಬೆಂಗಳೂರು : ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ನಡೆದಿದ್ದು, 71 ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಬಗ್ಗೆ ಐಪಿಎಸ್ ಅಧಿಕಾರಿ ಸೌಮೇಂದು ಮುಖರ್ಜಿ ಆದೇಶ ಹೊರಡಿಸಿದ್ದು ಪೊಲೀಸ್ ಸಿಬ್ಬಂದಿ ಮಂಡಳಿಯ ಸಭೆಯ ನಿರ್ಣಯದಂತೆ ಈ ಕೆಳಕಂಡ ಪೊಲೀಸ್ ಇನ್ಸ್ಪೆಕ್ಟರ್ (ಸಿವಿಲ್) ರವರುಗಳನ್ನು ಆಡಳಿತಾತ್ಮಕ ಕಾರಣಗಳಿಗಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಅವರುಗಳ ಹೆಸರಿನ ಮುಂದೆ ಸೂಚಿಸಿರುವ ಸ್ಥಳಕ್ಕೆ ವರ್ಗಾವಣೆ ಮಾಡಿ …

Read More »

ಹೋರಿ ಬೆದರಿಸುವ ಸ್ಪರ್ಧೆ ವೇಳೆ ಗಲಾಟೆ ಯುವಕನ ಮೇಲೆ ಹಲ್ಲೆ

ಹಾವೇರಿ: ತಾಲೂಕಿನ ಕೋಳೂರು ಗ್ರಾಮದಲ್ಲಿ ಹೋರಿ ಬೆದರಿಸುವ ಸ್ಪರ್ಧೆ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ದೀಪಾವಳಿ ನಿಮಿತ್ತ ಕೋಳೂರು ಗ್ರಾಮದಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ನವೆಂಬರ್​ 14ರಂದು ನಡೆದ ಸ್ಪರ್ಧೆ ವೇಳೆ ಯುವಕನೊಬ್ಬ ಬಿಟ್ಟ ಹೋರಿಯನ್ನು ಮತ್ತೊಂದು ಗುಂಪಿನ ಯುವಕ ಹಿಡಿದಿರುವುದೇ ಗಲಾಟೆಗೆ ಕಾರಣವಾಗಿದೆ. ಯುವಕ ಕುಮಾರ್​ ಹೋರಿ ಹಿಡಿದಿದ್ದರಿಂದ ಆಕ್ರೋಶಗೊಂಡ ಮತ್ತೋರ್ವ ಯುವಕ, ನ.16 ರಂದು ತನ್ನ ಸ್ನೇಹಿತರನ್ನು ಕರೆದುಕೊಂಡು ಬಂದು ಮನಬಂದಂತೆ ಥಳಿಸಿದ್ದರು. …

Read More »

14 ದಿನಗಳ ಕಾಲ ಭಕ್ತರಿಗೆ ದರ್ಶನ ನೀಡಿದ ಹಾಸನಾಂಬೆ 8 ಕೋಟಿ 72 ಲಕ್ಷ ರೂ ಆದಾಯ

ಹಾಸನ: ಪ್ರತಿವರ್ಷದಂತೆ ಈ ವರ್ಷವೂ ಕೂಡ ಅಧಿದೇವತೆ ಹಾಸನಾಂಬೆ ದೇವಿಯ ಗರ್ಭಗುಡಿ ಬಾಗಿಲು ತೆರೆದಿದ್ದು, 14 ದಿವಸಗಳ ಕಾಲ ದರ್ಶನದ ಭಾಗ್ಯ ಇರುವುದರಿಂದ ಭಕ್ತರಿಂದ ಟಿಕೆಟ್, ಲಾಡು ಮಾರಾಟ, ಕಾಣಿಕೆ ಮತ್ತು ಇ-ಹುಂಡಿಯಿಂದ ಸುಮಾರು 8 ಕೋಟಿ 72 ಲಕ್ಷದ 41 ಸಾವಿರದ 531 ರೂ. ಆದಾಯ ಸಂಗ್ರಹ ಆಗುವ ಮೂಲಕ ಹಾಸನಾಂಬೆ ಮತ್ತು ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವ ಇತಿಹಾಸ ಸೃಷ್ಟಿಸಿದೆ. ಹಾಸನಾಂಬೆ ದೇವಿ ಮತ್ತು ಶ್ರೀ ಸಿದ್ದೇಶ್ವರ ದೇವಾಲಯದ …

Read More »

ಕನಕಪುರದಲ್ಲಿ ಠೇವಣಿ ಕಳೆದುಕೊಂಡು ಹೀನಾಯವಾಗಿ ಸೋತಿರುವ ಬಿಜೆಪಿ ಅಭ್ಯರ್ಥಿ ಈಗ ವಿರೋಧ ಪಕ್ಷದ ನಾಯಕ!

ಬೆಂಗಳೂರು: ಈವರೆಗೆ ವಿರೋಧ ಪಕ್ಷದ ನಾಯಕನ ಆಯ್ಕೆ ವಿಳಂಬ ಮಾಡಿ ಕಾಂಗ್ರೆಸ್​ ಟೀಕೆ ಗುರಿಯಾಗಿದ್ದ ಬಿಜೆಪಿ ಕೊನೆಗೂ ಮಾಜಿ ಉಪಮುಖ್ಯಮಂತ್ರಿ ಆರ್​ ಅಶೋಕ್​ ಅವರಿಗೆ ವಿಪಕ್ಷ ನಾಯಕನಾಗಿ ಪ್ರಮುಖ ಜವಾಬ್ದಾರಿ ನೀಡಿದೆ. ಆದ್ರೆ ಕನಕಪುರದಲ್ಲಿ ಠೇವಣಿ ಕಳೆದುಕೊಂಡು ಹೀನಾಯವಾಗಿ ಸೋತಿರುವ ಬಿಜೆಪಿ ಅಭ್ಯರ್ಥಿ ಈಗ ವಿರೋಧ ಪಕ್ಷದ ನಾಯಕ ಎಂದು ರಾಜ್ಯ ಕಾಂಗ್ರೆಸ್ ವ್ಯಂಗ್ಯವಾಡಿದೆ.     ವಿಪಕ್ಷ ನಾಯಕ ಸಂಬಂಧ ಸರಣಿ ಎಕ್ಸ್ ಪೋಸ್ಟ್ ಮಾಡಿರುವ ರಾಜ್ಯ ಕಾಂಗ್ರೆಸ್, ವಿರೋಧ …

Read More »