Breaking News

ರಾಷ್ಟ್ರೀಯ

ಕರ್ನಾಟಕದ 8,000 ಕೋಟಿಗೂ ಅಧಿಕ ಹಣ ಬಾಕಿ – ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಆಗ್ರಹ

ನವದೆಹಲಿ: 15ನೇ ಹಣಕಾಸು ಆಯೋಗದ  ಅಡಿಯಲ್ಲಿ ಕರ್ನಾಟಕಕ್ಕೆ ಮೀಸಲಾದ 8,000 ಕೋಟಿಗೂ ಹೆಚ್ಚು ಅನುದಾನವನ್ನ ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿದೆ. ಈ ವಿಚಾರವನ್ನ ರಾಜ್ಯಸಭೆಯಲ್ಲಿ ಸಂಸದ ಸಯ್ಯದ್ ನಾಸೀರ್ ಹುಸೇನ್  ಪ್ರಸ್ತಾಪಿಸಿದರು. ಶೂನ್ಯವೇಳೆಯಲ್ಲಿ ಮಾತನಾಡಿದ ನಾಸೀರ್‌ ಹುಸೇನ್‌, 15ನೇ ಹಣಕಾಸು ಆಯೋಗದ ಅಡಿಯಲ್ಲಿ ನೀಡಬೇಕಿದ್ದ ಹಣ ಬಾಕಿ ಉಳಿಸಿಕೊಂಡ ವಿಚಾರ ಪ್ರಸ್ತಾಪಿಸಿ ಮಾತನಾಡಿದರು. 6,000 ಗ್ರಾಮ ಪಂಚಾಯಿತಿಗಳಿಗೆ ಮೀಸಲಾದ 2,133 ಕೋಟಿ ರೂ., ನರೇಗಾ ಯೋಜನೆ  ಅಡಿಯಲ್ಲಿ 1,066 ಕೋಟಿ …

Read More »

ಸರ್ಕಾರ ಕೃಷಿ, ಡೈರಿಯಂತಹ ಸೂಕ್ಷ್ಮ ವಲಯಗಳ ಹಿತಾಸಕ್ತಿಗಳನ್ನು ಕಾಪಾಡಿದೆ: ಪಿಯೂಷ್‌ ಗೋಯಲ್‌

ನವದೆಹಲಿ: ಅಮೆರಿಕದ ಜೊತೆಗಿನ ವ್ಯಾಪಾರ ಒಪ್ಪಂದದಲ್ಲಿ ಮೋದಿ ಸರ್ಕಾರ ಕೃಷಿ  ಮತ್ತು ಡೈರಿಯಂತಹ  ಸೂಕ್ಷ್ಮ ವಲಯಗಳ ಹಿತಾಸಕ್ತಿಗಳನ್ನು ಕಾಪಾಡಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯುಷ್ ಗೋಯಲ್ ಸ್ಪಷ್ಟನೆ ನೀಡಿದ್ದಾರೆ. ಅಮೆರಿಕದ ಕೃಷಿ ಉತ್ಪನ್ನಗಳು ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ ಎಂದು ಡೊನಾಲ್ಡ್‌ ಟ್ರಂಪ್‌ ಅವರ ಪ್ರಕಟಣೆಯ ಬೆನ್ನಲ್ಲೇ ಇಂದು ಲೋಕಸಭೆಯಲ್ಲಿ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದವು. ಈ ಸಂದರ್ಭದಲ್ಲಿ ಪಿಯುಷ್ ಗೋಯಲ್ ಒಪ್ಪಂದದ ಬಗ್ಗೆ …

Read More »

ಭಾರತ-ಯುಎಸ್ ವಾಣಿಜ್ಯ ಒಪ್ಪಂದ ಫೈನಲ್: ಚಿನ್ನ, ಬೆಳ್ಳಿ ದರದಲ್ಲಿ ಚೇತರಿಕೆ

ನವದೆಹಲಿ: ಭಾರತ-ಯುಎಸ್ ವ್ಯಾಪಾರ ಒಪ್ಪಂದದ  ಬಳಿಕ, ಐದು ದಿನಗಳ ಸತತ ಕುಸಿತಕ್ಕೆ ತೆರೆ ಎಳೆದ ಚಿನ್ನ  ಮತ್ತು ಬೆಳ್ಳಿ  ಬೆಲೆಗಳು ಮಂಗಳವಾರ ಚೇತರಿಕೆ ಕಂಡಿವೆ. ಭಾರತೀಯ ಸರಕುಗಳ ಮೇಲಿನ ಅಮೆರಿಕದ ಪರಸ್ಪರ ಸುಂಕವನ್ನು ಶೇ.25 ರಿಂದ 18 ಕ್ಕೆ ಇಳಿಸುವ ಒಪ್ಪಂದವು ರತ್ನಗಳು ಮತ್ತು ಆಭರಣಗಳಂತಹ ರಫ್ತು-ಆಧಾರಿತ ವಲಯಗಳಲ್ಲಿ ವಿಶ್ವಾಸವನ್ನು ಮೂಡಿಸಿತು. ಸೋಮವಾರಕ್ಕೆ ಹೋಲಿಸಿದರೆ ಭೌತಿಕ ಬುಲಿಯನ್ ಮಾರುಕಟ್ಟೆಯಲ್ಲಿ ಬೆಲೆಗಳು ಹೆಚ್ಚಾಗಿ ಸ್ಥಿರವಾಗಿವೆ. 24 ಕ್ಯಾರೆಟ್ ಚಿನ್ನದ ಬೆಲೆ 10 …

Read More »

ಜೈಲಿನಿಂದ ಬಂದು ಶಾಸಕನಾಗಿ ಪ್ರಮಾಣವಚನ ಸ್ವೀಕರಿಸಿದ ಅನಂತ್ ಸಿಂಗ್

ಪಾಟ್ನಾ: ಕೋರ್ಟ್‌ ಅನುಮತಿಯೊಂದಿಗೆ ಜೈಲಿನಿಂದ ಬಂದು ಜೆಡಿಯು ಮುಖಂಡ ಮೊಕಾಮಾ ಅನಂತ್‌ ಸಿಂಗ್‌  ಶಾಸಕನಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಮಾಣವಚನ ಬಳಿಕ ಸಿಎಂ ನಿತೀಶ್‌ ಕುಮಾರ್‌ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡರು. ದುಲಾರ್‌ಚಂದ್‌ ಯಾದವ್‌ ಹತ್ಯೆ ಪ್ರಕರಣದಲ್ಲಿ ಸಿಂಗ್‌ ಕಳೆದ ಮೂರು ತಿಂಗಳಿನಿಂದ ಜೈಲಿನಲ್ಲಿದ್ದಾರೆ. ಪ್ರಮಾಣ ವಚನ ಸ್ವೀಕಾರಕ್ಕೆ ಮಾತ್ರ ಪಾಟ್ನಾ ಸಿವಿಲ್ ನ್ಯಾಯಾಲಯ ಸಿಂಗ್ ಅವರಿಗೆ ಅನುಮತಿ ನೀಡಿತ್ತು. ಜಾಮೀನು ಇನ್ನೂ ಅನುಮೋದನೆಯಾಗದ ಕಾರಣ, ವಿಧಾನಸಭಾ ಕಲಾಪ ಮುಗಿದ …

Read More »

ಚಿತ್ರದುರ್ಗ ರೈತರಿಗೆ 12.40 ಕೋಟಿ ರೂ. ಬೆಳೆ ವಿಮಾ ಪರಿಹಾರ ಬಿಡುಗಡೆ ಮಾಡಿದ ಕೇಂದ್ರ

ನವದೆಹಲಿ: ಚಿತ್ರದುರ್ಗ  ಜಿಲ್ಲೆಯ ರೈತರು 2025ರ ಖರೀಫ್ ಹಂಗಾಮಿನಲ್ಲಿ ಪ್ರಕೃತಿ ವಿಕೋಪಗಳಿಂದ ಬೆಳೆ ಹಾನಿಗೊಳಗಾಗಿದ್ದರು. ಈ ಸಂಕಷ್ಟದ ಸಮಯದಲ್ಲಿ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ  ಅಡಿಯಲ್ಲಿ ಸುಮಾರು 7,880 ರೈತರಿಗೆ ಒಟ್ಟು 12.40 ಕೋಟಿ ರೂ. ಮೊತ್ತದ ಬೆಳೆ ವಿಮಾ ಪರಿಹಾರವನ್ನು  ಬಿಡುಗಡೆ ಮಾಡಲಾಗಿದೆ. ಸಂಸದ ಗೋವಿಂದ ಕಾರಜೋಳ (ಅವರು ಲೋಕಸಭೆಯಲ್ಲಿ ಕೇಳಿದ ಚುಕ್ಕೆರಹಿತ ಪ್ರಶ್ನೆಗೆ ಉತ್ತರಿಸಿರುವ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವ …

Read More »

ಭಾರತದ ಮೇಲಿನ ಸುಂಕ ಕಡಿತ ಸ್ವಾಗತಿಸಿದ ನಿರ್ಮಲಾ ಸೀತಾರಾಮನ್‌

ನವದೆಹಲಿ, ಫೆ. 3 (ಪಿಟಿಐ) ಭಾರತೀಯ ಸರಕುಗಳ ಮೇಲಿನ ಅಮೆರಿಕದ ಸುಂಕ ಕಡಿತವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸ್ವಾಗತಿಸಿದ್ದಾರೆ, ಈ ಅಭಿವೃದ್ಧಿಯನ್ನು ಭಾರತದಲ್ಲಿ ತಯಾರಿಸಿ ಉಪಕ್ರಮಕ್ಕೆ ಪ್ರಮುಖ ಉತ್ತೇಜನ ಎಂದು ಬಣ್ಣಿಸಿದ್ದಾರೆ. ಭಾರತೀಯ ಉತ್ಪನ್ನಗಳು ಈಗ ಶೇ. 18 ರಷ್ಟು ಕಡಿಮೆ ಪರಸ್ಪರ ಸುಂಕವನ್ನು ಎದುರಿಸಲಿವೆ ಎಂದು ಅವರು ಎಕ್‌್ಸ ಮಾಡಿದ್ದಾರೆ.ಭಾರತದಲ್ಲಿ ತಯಾರಿಸಿ ಉತ್ಪನ್ನಗಳಿಗೆ ಒಳ್ಳೆಯ ಸುದ್ದಿ. ಅವರು ಈಗ ಶೇ. 18 ರಷ್ಟು ಕಡಿಮೆ ಸುಂಕವನ್ನು ಎದುರಿಸಬೇಕಾಗುತ್ತದೆ. …

Read More »

ಜನರು ಸುಂಕಗಳನ್ನು ಟೀಕಿಸಿದರು, ಆದರೆ ನಮ್ಮ ತಾಳ್ಮೆಗೆ ಫಲ ಸಿಕ್ಕಿತು: ಮೋದಿ

ನವದೆಹಲಿ: ಜನರು ಸುಂಕಗಳನ್ನು ಟೀಕಿಸಿದಾಗ ನಾವು ತಾಳ್ಮೆಯಿಂದ ಇದ್ದೆವು. ತಾಳ್ಮೆಯಿಂದ ಇದ್ದ ಪರಿಣಾಮ ಈಗ ಫಲ ಸಿಕ್ಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ( ಹೇಳಿದ್ದಾರೆ. ಭಾರತ ಮತ್ತು ಅಮೆರಿಕದ  ನಡುವಿನ ವ್ಯಾಪಾರ ಒಪ್ಪಂದ  ಅಂತಿಮಗೊಂಡ ಹಿನ್ನೆಲೆಯಲ್ಲಿ ಇಂದು ಸದನ ಆರಂಭಗೊಳ್ಳುವ ಮೊದಲು ಎನ್‌ಡಿಎ ಸಂಸದರನ್ನು ಉದ್ದೇಶಿಸಿ ಮೋದಿ ಮಾತನಾಡಿದರು. ಈ ವೇಳೆ, ಸುಂಕ ಮಾತುಕತೆಗಳ ಕುರಿತಾದ ಹಿಂದಿನ ಟೀಕೆಗಳು ಈಗ ಸಕಾರಾತ್ಮಕ ಫಲಿತಾಂಶಕ್ಕೆ ದಾರಿ ಮಾಡಿಕೊಟ್ಟಿವೆ. ವ್ಯಾಪಾರ ಒಪ್ಪಂದವು …

Read More »

ನಿಯಮ ಪಾಲಿಸದಿದ್ರೆ ದೇಶ ಬಿಟ್ಟು ತೊಲಗಿ – ವಾಟ್ಸಪ್‌ಗೆ ಸುಪ್ರೀಂ ವಾರ್ನಿಂಗ್‌

ನವದೆಹಲಿ: ʻದೇಶದ ನಿಯಮಗಳನ್ನ ಪಾಲಿಸಲು ಸಾಧ್ಯವಾಗದಿದ್ರೆ, ದೇಶ ಬಿಟ್ಟು ತೊಲಗಿ ಎಂದು ವಾಟ್ಸಪ್‌ ಒಡೆತನದ ಮೆಟಾ  ಸಂಸ್ಥೆಗೆ ಸುಪ್ರೀಂ ಕೋರ್ಟ್‌  ಖಡಕ್‌ ಎಚ್ಚರಿಕೆ ನೀಡಿದೆ. ಗೌಪ್ಯತೆ ಉಲ್ಲಂಘನೆ ಆರೋಪ ಕೇಳಿಬಂದ ಹಿನ್ನೆಲೆ ಕೋರ್ಟ್‌ ಈ ಎಚ್ಚರಿಕೆ ನೀಡಿದೆ. ಮೆಟಾ ಒಡೆತದ ವಾಟ್ಸಪ್‌  ಇಂದು ವಿಶ್ವದ ಜನಪ್ರಿಯ ಮೆಸೆಂಜರ್‌ ಅಪ್ಲಿಕೇಶನ್‌ ಆಗಿದೆ. ಇಂಟರ್ನೆಟ್‌ ಇದ್ದರೆ ವಿಶ್ವದ ಯಾವುದೇ ಮೂಲೆಯಲ್ಲಿರುವ ವ್ಯಕ್ತಿಯೊಂದಿಗೆ ಸಂಪರ್ಕ ಸಾಧಿಸಬಹುದಾಗಿದೆ. ಫೋಟೋ, ವಿಡಿಯೋ ಧ್ವನಿ ಸಂದೇಶ, ಲೈವ್‌ ಲೊಕೇಷನ್‌ಗಳನ್ನ …

Read More »

ದಕ್ಷಿಣ ಪಿನಾಕಿನಿ ಜಲವಿವಾದ – ನ್ಯಾಯಮಂಡಳಿ ಸ್ಥಾಪನೆಗೆ ಸುಪ್ರೀಂ ಆದೇಶ

ನವದೆಹಲಿ: ಕರ್ನಾಟಕ  ಹಾಗೂ ತಮಿಳುನಾಡು  ನಡುವಿನ ಪೆನ್ನಾರ್ (ದಕ್ಷಿಣ ಪಿನಾಕಿನಿ) ನದಿ ನೀರು ಹಂಚಿಕೆ ವಿವಾದಗಳನ್ನು ಬಗೆಹರಿಸಲು ನ್ಯಾಯಮಂಡಳಿ  ರಚಿಸುವಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಪ್ರಕಟಿಸಿದೆ. ತಮಿಳುನಾಡು ಸರ್ಕಾರ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್‌ನಾಥ್ ಹಾಗೂ ಎನ್.ವಿ.ಅಂಜಾರಿಯಾ ಪೀಠವು ವಿವಾದ ಇತ್ಯರ್ಥಪಡಿಸಲು ನ್ಯಾಯಮಂಡಳಿ ರಚಿಸುವುದು ಸೂಕ್ತ. ಆದೇಶ ಪ್ರಕಟವಾದ ಒಂದು ತಿಂಗಳೊಳಗೆ ಜಲ ವಿವಾದ ನ್ಯಾಯಮಂಡಳಿಯನ್ನು ರಚಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ನಿರ್ದೇಶನ ನೀಡಿದೆ. ಈ …

Read More »

ವಿಕಸಿತ ಭಾರತಕ್ಕೆ ಕೇಂದ್ರದ ಯುವಶಕ್ತಿ ಬಜೆಟ್ – ಜೀರಾಮ್‌ಜೀ ಯೋಜನೆಗೆ 95,692 ಕೋಟಿ ಮೀಸಲು

 ನವದೆಹಲಿ: ಯಂಗ್ ಇಂಡಿಯಾ, ಉದ್ಯೋಗ ಸೃಷ್ಟಿ, ಆರೋಗ್ಯ, ದೇಶದ ರಕ್ಷಣೆಯೊಂದಿಗೆ ಆತ್ಮನಿರ್ಭರ ಭಾರತ, ವಿಕಸಿತ ಭಾರತ ಗುರಿಯಾಗಿಸಿ ಕೇಂದ್ರ ಸರ್ಕಾರ 2026-27 ರ ಬಜೆಟ್ ಪ್ರಸ್ತುತ ಪಡಿಸಿದೆ. ನಿರ್ಮಲಾ ಸೀತಾರಾಮನ್ ಅವರು ಸತತ 9ನೇ ಬಜೆಟ್ ಮಂಡಿಸಿದ್ದಾರೆ. ದೇಶದ ಇತಿಹಾಸದಲ್ಲಿ 2ನೇ ಬಾರಿಗೆ ಭಾನುವಾರದಂದೇ ಮಂಡನೆಯಾಗಿದ್ದು, ಮೂರು ಕರ್ತವ್ಯಗಳನ್ನು ಉಲ್ಲೇಖಿಸಲಾಗಿದೆ. ಆರ್ಥಿಕ ಬೆಳವಣಿಗೆಗಳ ವೇಗಗೊಳಿಸುವುದರ ಜೊತೆ ಸ್ಥಿರತೆ, ಜನತೆ ಆಕಾಂಕ್ಷೆಗಳನ್ನ ಈಡೇರಿಸುವುದು ಹಾಗೂ ಸಬ್ ಕಾ ಸಾಥ್, ಸಬ್ ಕಾ …

Read More »