ಧಾರವಾಡ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ (ನಿಪ್ಪಾಣಿ-ಗಂಗಾವತಿ) ಒಯ್ಯುತ್ತಿದ್ದ 776 ಗ್ರಾಂ ( ₹ 38.5 ಲಕ್ಷ) ಚಿನ್ನಾಭರಣಗಳನ್ನು ತೇಗೂರು ಚೆಕ್ ಪೋಸ್ಟ್ ಸಿಬ್ಬಂದಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಚೆಕ್‌ಪೋಸ್ಟ್‌ನಲ್ಲಿ ಗುರುವಾರ ರಾತ್ರಿ 11.30 ವೇಳೆಯಲ್ಲಿ ಸಿಬ್ಬಂದಿ ಬಸ್ ತಪಾಸಣೆ ಮಾಡಿದಾಗ ಚಿನ್ನಾಭರಣ ಸಿಕ್ಕಿವೆ. ಮಹಾರಾಷ್ಟ್ರ ಕೊಲ್ಲಾಪುರದ ಪ್ರಕಾಶಕುಮಾರ ಹುಕುಮಜಿ ಮಾಲಿ ಅವರು ಚಿನ್ನದ ಸರ, ಗುಂಡು, ಲಾಕೆಟ್‌ಗಳನ್ನು ಬಸ್‌ನಲ್ಲಿ ಸಿಂಧನೂರಿಗೆ ಒಯ್ಯುತ್ತಿದ್ದರು. ಅವರು ತೋರಿಸಿದ ಆಭರಣ ಖರೀದಿ ಬಿಲ್‍ಗಳಲ್ಲಿ ನಮೂದಾಗಿರುವ ತೂಕ …
Read More »ಹಂಸಲೇಖಗೆ ‘ವಿಶ್ವ ಚೇತನ’ ಪ್ರಶಸ್ತಿ
ಚಿಕ್ಕೋಡಿ : ತಾಲ್ಲೂಕಿನ ಯಡೂರು ಗ್ರಾಮದ ಕಾಡ ಸಿದ್ಧೇಶ್ವರ ಮಠ ನೀಡುವ ವಿಶ್ವ ಚೇತನ ಪ್ರಶಸ್ತಿಗೆ ಸಂಗೀತ ನಿರ್ದೇಶಕ ಹಂಸಲೇಖ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ₹ 51 ಸಾವಿರ ನಗದು ಮತ್ತು ಸ್ಮರಣಿಕೆ ಹೊಂದಿದೆ. ಮಾರ್ಚ್ 25ರಂದು ನಡೆಯುವ ವೀರಭದ್ರದೇವ ಕಾಡಸಿದ್ದೇಶ್ವರ ಮಠ ಮತ್ತು ಭದ್ರಕಾಳಿ ವೀರಭದ್ರೇಶ್ವರ ಕಲ್ಯಾಣ ಮಹಾಮಹೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
Read More »ಕಾಂಗ್ರೆಸ್‌ನಲ್ಲಿ ಹೊಸ ನೀರಿನ ಹೊಳೆ; ಹಿರಿಯರ ಎದುರು ಹೊಸ ಚಿಗುರು
ಬೆಳಗಾವಿ: ಜಿಲ್ಲೆಯ ಕಾಂಗ್ರೆಸ್ ಪಾಳೆಯದಲ್ಲಿ ಕಳೆದ 15 ದಿನಗಳಿಂದ ತೀವ್ರ ಗುಮಾನಿಗೆ ಕಾರಣವಾಗಿದ್ದ ಟಿಕೆಟ್ ವಿಚಾರ ಈಗ ನಿರಾಳವಾಗಿದೆ. ಇಬ್ಬರೂ ಸಚಿವರ ಮಕ್ಕಳಿಗೇ ಟಿಕೆಟ್ ‘ಗ್ಯಾರಂಟಿ’ ಎಂದು ಕಾಂಗ್ರೆಸ್ ಘೋಷಿಸಿದೆ. ತಂದೆ-ತಾಯಿ ಅಧಿಕಾರದಲ್ಲಿ ಇದ್ದಾಗಲೇ ಎಳೆ ವಯಸ್ಸಿನ ರಾಜಕಾರಣಿಗಳು ಅಖಾಡಕ್ಕೆ ಧುಮುಕಿದ್ದಾರೆ. ಕಾಂಗ್ರೆಸ್‌ನಲ್ಲಿ ‘ಹೊಸ ನೀರಿನ’ ಹೊಳೆ ಹರಿಯಲಾರಂಭಿಸಿದೆ. ಎರಡೂ ಕ್ಷೇತ್ರಗಳಲ್ಲಿ ಹಿರಿಯರ ಎದುರು ಹೊಸ ಚಿಗುರು ಮೂಡಿವೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ …
Read More »ಕಾಂಗ್ರೆಸ್ ಪಕ್ಷವನ್ನು ಆರ್ಥಿಕವಾಗಿ ಕುಂಠಿತಗೊಳಿಸಲು ಪ್ರಧಾನಿಯಿಂದ ವ್ಯವಸ್ಥಿತ ಪ್ರಯತ್ನ: ಸೋನಿಯಾ ಗಾಂಧಿ ವಾಗ್ದಾಳಿ
ಹೊಸದಿಲ್ಲಿ: ಕಾಂಗ್ರೆಸ್ ಪಕ್ಷದ ನಿಧಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇರ ವಾಗ್ದಾಳಿ ನಡೆಸಿದ್ದಾರೆ. ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವನ್ನು ಆರ್ಥಿಕವಾಗಿ ಕುಂಠಿತಗೊಳಿಸಲು ಪ್ರಧಾನಿ ಮೋದಿ ವ್ಯವಸ್ಥಿತ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. “ಸಾರ್ವಜನಿಕರಿಂದ ಸಂಗ್ರಹಿಸಲಾಗಿರುವ ನಿಧಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಹಾಗೂ ನಮ್ಮ ಖಾತೆಗಳಿಂದ ಬಲವಂತವಾಗಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ, ಇಂತಹ ಭಾರಿ ಸವಾಲಿನ ಸನ್ನಿವೇಶದಲ್ಲಿಯೂ, ಚುನಾವಣಾ …
Read More »ಬಿಜೆಪಿ ಅಭ್ಯರ್ಥಿ ಬದಲಾಗದಿದ್ದರೆ ಅಚ್ಚರಿಯ ಬಂಡಾಯ ಅಭ್ಯರ್ಥಿ
ದಾವಣಗೆರೆ: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಬದಲಾವಣೆಗೆ ಪಟ್ಟು ಹಿಡಿದಿರುವ ಅಸಮಾಧಾನಿತರ ಗುಂಪು ಬದಲಾವಣೆ ಮಾಡದಿದ್ದಲ್ಲಿ ಅಚ್ಚರಿ ಅಭ್ಯರ್ಥಿಯೊಬ್ಬರನ್ನ ಕಣಕ್ಕಿಳಿಸಲು ಸಹ ನಿರ್ಧರಿಸಿದ್ದಾರೆ. ಗುರುವಾರ ಸಂಜೆ ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್ ನಿವಾಸದಲ್ಲಿ ನಡೆದ ಸಭೆಯಲ್ಲಿ ಸಾಕಷ್ಟು ಚರ್ಚೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವರಾದ ಎಂ.ಪಿ. ರೇಣುಕಾಚಾರ್ಯ, ಜಿ.ಕರುಣಾಕರೆಡ್ಡಿ, ಎಸ್.ಎ. ರವೀಂದ್ರನಾಥ್, ದಾವಣಗೆರೆ ಲೋಕ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬದಲಾಗ ಲೇಬೇಕು. ಬದಲಾಗದಿದ್ದರೆ ಅಚ್ಚರಿಯ …
Read More »ಹೋಳಿಗೆ ಡಿಜೆ ಕಟ್ಟುನಿಟ್ಟಿನ ನಿಷೇಧ
ಗಂಗಾವತಿ: ಈ ಬಾರಿಯ ಹೋಳಿ ಹಬ್ಬದ ರಂಗ ಪಂಚಮಿ ಸಂದರ್ಭದಲ್ಲಿ ಡಿ ಜೆ ಹಾಕಲು ಪರವಾನಿಗೆ ನಿಷೇಧಿಸಲಾಗಿದೆ ಎಂದು ಡಿ.ವೈ.ಎಸ್. ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್ ಹೇಳಿದರು. ನಗರ ಪೊಲೀಸ್ ಠಾಣಾ ಸಭಾಂಗಣದಲ್ಲಿ ಹೋಳಿ ಹಬ್ಬದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಈ ಬಾರಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಯಾವುದೇ ಡಿಜೆ ಆಚರಣೆ ಸಂಪೂರ್ಣವಾಗಿ ನಿಷೇಧಿಸುವಂತೆ ಸೂಚನೆಯ ಹಿನ್ನೆಲೆಯಲ್ಲಿ ಹೋಳಿ ಹಬ್ಬ ಕಾಮದಾನ ಸಂದರ್ಭದಲ್ಲಿ ಮತ್ತು ರಂಗ ಪಂಚಮಿಯಂದು …
Read More »ತಾಳಿ ಕಿತ್ತುಕೊಂಡ ಪ್ರೇಮಿಯೊಂದಿಗೇ ಮದುವೆ!
ಬೇಲೂರು (ಹಾಸನ ಜಿಲ್ಲೆ): ಇಲ್ಲಿನ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆಯುತ್ತಿದ್ದ ಮದುವೆಗೆ ಬಂದ ವಧುವಿನ ಪ್ರೇಮಿಯು ವರನಿಂದ ತಾಳಿ ಕಿತ್ತುಕೊಂಡ ಘಟನೆ ನಡೆಯಿತು. ನಂತರ, ಆತನೊಂದಿಗೇ ಮದುವೆ ನಿಗದಿಯಾಯಿತು. ಬೇಲೂರಿನ ಯುವತಿ ಹಾಗೂ ಶಿವಮೊಗ್ಗ ನಿವಾಸಿ ಪ್ರಮೋದ್‌ಕುಮಾರ್ ಅವರ ಮದುವೆ ಏರ್ಪಾಡಾಗಿತ್ತು.ವರನು ವಧುವಿಗೆ ತಾಳಿ ಕಟ್ಟುವ ವೇಳೆ ಧಾವಿಸಿದ ಪ್ರೇಮಿ, ಹಾಸನದ ಗವೇನಹಳ್ಳಿಯ ನವೀನ್ ಎಂಬಾತ ತಾಳಿ ಕಿತ್ತಿಟ್ಟುಕೊಂಡ. ‘ನಾನು ಹಾಗೂ ಯುವತಿ ಪ್ರೀತಿಸುತ್ತಿದ್ದು, ನನಗೇ ಮದುವೆ ಮಾಡಿಕೊಡಬೇಕು’ …
Read More »ರಾಜ್ಯದ 5, 8, 9, 11ನೇ ತರಗತಿ ‘ಬೋರ್ಡ್ ಪರೀಕ್ಷೆ’ ವಿವಾದ: ನಾಳೆ ಬೆಳಿಗ್ಗೆ 10.30ಕ್ಕೆ ಹೈಕೋರ್ಟ್ ತೀರ್ಪು ಪ್ರಕಟ
ಬೆಂಗಳೂರು: ರಾಜ್ಯ ಶಾಲಾ ಶಿಕ್ಷಣ ಇಲಾಖೆ ನಿಗದಿ ಪಡಿಸಿದ್ದಂತ 5, 8 ಮತ್ತು 9ನೇ ತರಗತಿ ಬೋರ್ಡ್ ಪರೀಕ್ಷೆಯನ್ನು ಹೈಕೋರ್ಟ್ ಬಳಿಕ, ಸುಪ್ರೀಂ ಕೋರ್ಟ್ ರದ್ದುಪಡಿಸಿತ್ತು. ಆದ್ರೇ ಹೈಕೋರ್ಟ್ ಗೆ ಬೋರ್ಡ್ ಪರೀಕ್ಷೆಗೆ ಅನುಮತಿ ಕೋರಿ ಪೋಷಕರು ಸಲ್ಲಿಸಿದ್ದಂತ ವಿಚಾರಣೆಯನ್ನು ಹೈಕೋರ್ಟ್ ನಡೆಸಿತ್ತು. ಈ ಬಳಿಕ ಹೈಕೋರ್ಟ್ ತೀರ್ಪು ಕಾಯ್ದಿರಿಸಿತ್ತು. ಇಂತಹ ತೀರ್ಪನ್ನು ನಾಳೆ ಬೆಳಿಗ್ಗೆ 10.30ಕ್ಕೆ ಹೈಕೋರ್ಟ್ ವಿಭಾಗಿಯ ನ್ಯಾಯಪೀಠವು ಪ್ರಕಟಿಸಲಿದೆ. ಶಾಲಾ ಶಿಕ್ಷಣ ಇಲಾಖೆ ನಿಗದಿ …
Read More »*ಬಿಜೆಪಿ ಟಿಕೆಟ್ ಯಾರಿಗೆ ನೀಡಿದ್ರೂ ಅವರ ಗೆಲುವಿಗೆ ಶ್ರಮಿಸುತ್ತೇವೆ.
ಬಿಜೆಪಿ ಹೈ ಕಮಾಂಡ್ ನಿರ್ಣಯಕ್ಕೆ ಬದ್ಧರಾಗಿ ಚುನಾವಣೆಯನ್ನು ಎದುರಿಸೋಣ- ಶಾಸಕ ಬಾಲಚಂದ್ರ ಜಾರಕಿಹೊಳಿ *ಮೋದಿ ಮತ್ತೊಮ್ಮೆ ಪ್ರಧಾನಿ*- *ಕಲ್ಲೊಳ್ಳಿಯಲ್ಲಿ ಜರುಗಿದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ* *ಮೂಡಲಗಿ*: ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಆಯ್ಕೆಯು ಇನ್ನೆರಡು ದಿನಗಳಲ್ಲಿ ಅಂತಿಮವಾಗಲಿದ್ದು, ಪಕ್ಷದ ಹೈಕಮಾಂಡ್ ಯಾರಿಗೆ ಟಿಕೇಟ್ ನೀಡಿದರೂ ಎಲ್ಲರೂ ಒಗ್ಗಟ್ಟಾಗಿ ನಮ್ಮ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು. ಗುರುವಾರದಂದು ತಾಲೂಕಿನ ಕಲ್ಲೋಳಿ …
Read More »ಮಗನಿಗೆ ಟಿಕೆಟ್ ಸಿಗುವ ಸಂತಸದಲ್ಲಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗೆಲುವಿಗೆ ಪೂರಕ ವಾತಾವರಣವಿದೆ ಎಂದರು!
ಬೆಂಗಳೂರು: ಇವತ್ತು ನಗರದಲ್ಲಿಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್(Lakshmi Hebbalkar) ಅವರಿಗೆ ಸುದ್ದಿಗಾರರು ಏನ್ ಮೇಡಂ ಮಗನಿಗೆ ಲೋಕಸಭಾ ಚುನಾವಣೆಯಲ್ಲಿ (Lok Sabha polls) ಸ್ಪರ್ಧಿಸಲು ಟಿಕೆಟ್ ಸಿಕ್ಕೇ ಬಿಟ್ಟಿತು ಅಂದಾಗ ಮುಖದಲ್ಲಿ ಮಂದಹಾಸ! ಖುಷಿಯಿಂದ ಬೀಗುತ್ತಲೇ ಅವರು ಇನ್ನೂ ಅಧಿಕೃತ ಘೋಷಣೆ ಆಗಿಲ್ಲ, ತಾವೆಲ್ಲ ಕ್ಷೇತ್ರದಲ್ಲಿ ಕೆಲಸ ಮಾಡುವಾಗ ಮೀಟಿಂಗ್ ಗೆ ಬನ್ನಿ ಅಂತ ಕರೆಬಂದ ಕಾರಣ, ಹಿರಿಯರ ಆಶೀರ್ವಾದ ಪಡೆಯೋಣ ಅಂತ ಮಗನನ್ನು ಕರೆದುಕೊಂಡು ನಗರಕ್ಕೆ ಬಂದಿರುವುದಾಗಿ ಹೇಳಿದರು. ಬೆಳಗಾವಿ ಮತ್ತು …
Read More »