Breaking News

ರಾಷ್ಟ್ರೀಯ

ಇವಿಎಂ ಬಗ್ಗೆ ನಿಮಗೆ ಸಂಶಯ ಇದ್ದಲ್ಲಿ ಅಸೆಂಬ್ಲಿ ವಿಸರ್ಜಿಸಿ ಚುನಾವಣೆ ಎದುರಿಸಿ: ಮಾಜಿ ಸಚಿವ ಎಸ್. ಸುರೇಶ್

ಬೆಂಗಳೂರು: 2023 ಮೇ ತಿಂಗಳಿನಲ್ಲಿ ಇವಿಎಂ ಮೂಲಕ ಚುನಾಯಿತವಾದ ಕಾಂಗ್ರೆಸ್​​ನ ಈ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಿದೆ. ಇವಿಎಂ ಬಗ್ಗೆ ನಿಮಗೆ ಸಂಶಯ ಇದ್ದಲ್ಲಿ ನೀವು ಅಸೆಂಬ್ಲಿ ವಿಸರ್ಜಿಸಿ ಚುನಾವಣೆಗೆ ಹೋಗಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ಎಸ್. ಸುರೇಶ್ ಕುಮಾರ್ ಅವರು ಸವಾಲು ಹಾಕಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಗೆದ್ದಾಗಲೆಲ್ಲ ಚೆನ್ನಾಗಿದೆ. ಗೆಲ್ಲದೇ ಇದ್ದಾಗ ಇವಿಎಂ ಎಂಬ ಧೋರಣೆಯು ಅತ್ಯಂತ ಹಳೆಯ …

Read More »

ಹುಕ್ಕೇರಿ : ಹುಕ್ಕೇರಿ ಯಲ್ಲಿ ರ್ಯಾಪಿಡ್ ಆಕ್ಷನ್ ಫೋರ್ಸ ಪಥ ಸಂಚಲನ.

ಹುಕ್ಕೇರಿ : ಹುಕ್ಕೇರಿ ಯಲ್ಲಿ ರ್ಯಾಪಿಡ್ ಆಕ್ಷನ್ ಫೋರ್ಸ ಪಥ ಸಂಚಲನ. ಹುಕ್ಕೇರಿ ನಗರದಲ್ಲಿ ಭದ್ರಾವತಿಯ ರಾಷ್ಟ್ರೀಯ RAF ಸೇನಾ ಪಡೆಯಿಂದ ಪಥಸಂಚಲನ ಜರುಗಿತು. ನಗರದಲ್ಲಿ ಕಳೆದ 9 ದಿನಗಳಿಂದ ಗಣೇಶ ಹಬ್ಬ ಆಚರಣೆ ಮತ್ತು ಶುಕ್ರವಾರ ದಿನ ಇದ್ ಮಿಲಾದ್ ಆಚರಣೆ ಹಾಗೂ ಸರಣಿ ಉರುಸು ಕಾರ್ಯಕ್ರಮಗಳು ಜರಗುತ್ತಿರುವದರಿಂದ ಯಾವದೇ ತರಹದ ಅಹಿತಕರ ಘಟನೆ ಜರುಗದಂತೆ ಮುಂಜಾಗ್ರತಾ ಕ್ರಮವಾಗಿ ಗೋಕಾಕ ಡಿ ಎಸ್ಪಿ ರವಿ ನಾಯ್ಕ ನೇತೃತ್ವದಲ್ಲಿ ಹುಕ್ಕೇರಿ …

Read More »

ಮುಸ್ಲಿಮರ ಬಗ್ಗೆ ಹೇಳಿಕೆ ನೀಡಿರುವ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ವಿರುದ್ಧ ತನಿಖೆ ನಡೆಸಲು ಹೈಕೋರ್ಟ್​ ಅವಕಾಶ ನೀಡಿದೆ.

ಬೆಂಗಳೂರು: ಮುಸ್ಲಿಂ ಯುವತಿಯರನ್ನು ವಿವಾಹವಾದರೆ ಹಿಂದೂ ಯುವಕರಿಗೆ 5 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಹೇಳಿಕೆ ನೀಡಿದ ಆರೋಪದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ವಿರುದ್ಧದ ಎಫ್ಐಆರ್​​ಗೆ ತಡೆ ನೀಡಲು ನಿರಾಕರಿಸಿರುವ ಹೈಕೋರ್ಟ್, ತನಿಖೆ ಮುಂದುವರೆಸಬಹುದು. ಆದರೆ, ಬಲವಂತದ ಕ್ರಮಕ್ಕೆ ಮುಂದಾಗಬಾರದು ಎಂದು ತಿಳಿಸಿದೆ. ತಮ್ಮ ಹೇಳಿಕೆಯ ವಿರುದ್ಧ ಮೂರು ಠಾಣೆಗಳಲ್ಲಿ ಪ್ರಕರಣ ದಾಖಲಿಸಿರುವುದನ್ನು ಪ್ರಶ್ನಿಸಿ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಎಂ. ಐ. ಅರುಣ್ ಅವರಿದ್ದ …

Read More »

ನಾಲ್ಕೂವರೆ ತಿಂಗಳು ಬಂದ್ ಆಗಿದ್ದ ಹುಬ್ಬಳ್ಳಿ ಹಳೇ ಬಸ್ ನಿಲ್ದಾಣಆರಂಭ

ಹುಬ್ಬಳ್ಳಿ: ನಗರದ ಚನ್ನಮ್ಮ ವೃತ್ತದ ಫ್ಲೈ ಓವರ್ ಕಾಮಗಾರಿ ಹಿನ್ನೆಲೆಯಲ್ಲಿ ನಾಲ್ಕೂವರೆ ತಿಂಗಳಿನಿಂದ ಸ್ಥಗಿತವಾಗಿದ್ದ ಇಲ್ಲಿನ ಉಪನಗರ ಕೇಂದ್ರ(ಹಳೇ) ಬಸ್ ನಿಲ್ದಾಣ ಇಂದಿನಿಂದ ಪುನಾರಂಭವಾಗಿದೆ. ಬುಧವಾರ (ಸೆ.3) ಬೆಳಗ್ಗೆಯಿಂದಲೇ ಬಸ್ ಸಂಚಾರ ಆರಂಭವಾಗಿದೆ. ಚನ್ನಮ್ಮ ವೃತ್ತದಿಂದ ಬಸವ ವನದವರೆಗೆ ಬಂದ್ ಮಾಡಲಾಗಿದ್ದ ರಸ್ತೆ ಸಹ ಮುಕ್ತವಾಗಿದೆ. ಮೇಲ್ಸೇತುವೆಯ ತ್ವರಿತ ಕಾಮಗಾರಿಗಾಗಿ ಏ.20ರಿಂದ ಬಸ್ ನಿಲ್ದಾಣ ಸೇರಿ ಅದರ ಎದುರಿನ ರಸ್ತೆ ಮತ್ತು ಚನ್ನಮ್ಮ ಸರ್ಕಲ್​ನಿಂದ ಹಳೇ ಕೋರ್ಟ್‌ವರೆಗಿನ ರಸ್ತೆ ಬಂದ್‌ ಮಾಡಲಾಗಿತ್ತು. …

Read More »

ವಿಷ್ಣು ಸ್ಮಾರಕಕ್ಕೆ ಜಾಗ, ʼಕರ್ನಾಟಕ ರತ್ನʼ ಪ್ರಶಸ್ತಿಗೆ ಆಗ್ರಹಿಸಿ ಸಿಎಂ ಭೇಟಿಯಾದ ನಟಿ ಭಾರತಿ, ಅನಿರುದ್ಧ್: ಸರ್ಕಾರದಿಂದ ನಾಳೆ ತೀರ್ಮಾನ?

ಬೆಂಗಳೂರು: ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಸಂಬಂಧ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಮತ್ತು ಅಳಿಯ, ನಟ ಅನಿರುದ್ಧ್ ಅವರು, ಇಂದು ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ 10 ಗುಂಟೆ ಜಾಗವನ್ನು ಮೀಸಲಿಡಬೇಕು. ವಿಷ್ಣು ಹುಟ್ಟುಹಬ್ಬದ ಒಳಗೆ ಸರ್ಕಾರ ಭೂಮಿಗೆ ಅನುಮತಿ ನೀಡಬೇಕು. ವಿಷ್ಣುವರ್ಧನ್ ಅವರಿಗೆ ‘ಕರ್ನಾಟಕ ರತ್ನ’ ಕೊಡಬೇಕು ಎಂದು ಅವರು ಮನವಿ ಮಾಡಿದರು. ಭಾರತಿ ವಿಷ್ಣುವರ್ಧನ್ ಪ್ರತಿಕ್ರಿಯೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು …

Read More »

ಮೃತದೇಹ ಸ್ವೀಕರಿಸಲೊಪ್ಪದ ಸಹೋದರ; ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದ ಸಮಾಜಸೇವಕ

ಉಡುಪಿ : ಜಿಲ್ಲೆಯ ಕಾಪು ಠಾಣಾ ವ್ಯಾಪ್ತಿಯಲ್ಲಿ ಮೃತಪಟ್ಟ ವ್ಯಕ್ತಿಯ ಸಹೋದರ ಅಂತ್ಯಕ್ರಿಯೆಗೆ ಮೃತದೇಹ ಸ್ವೀಕರಿಸಲು ಒಪ್ಪದ ಕಾರಣ ಸಮಾಜ ಸೇವಕ ವಿಶು ಶೆಟ್ಟಿ ಅವರೇ ಮುಂದೆ ನಿಂತು ಮೃತನ ಅಂತ್ಯಸಂಸ್ಕಾರವನ್ನು ಬೀಡಿನಗುಡ್ಡೆಯ ರುದ್ರ ಭೂಮಿಯಲ್ಲಿ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ. ಮೃತ ವ್ಯಕ್ತಿಯ ಬಗ್ಗೆ ಕಾಪು ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ಮೃತನ ಸಹೋದರನನ್ನು ಕರೆಯಿಸಿ ಕಾನೂನು ಪ್ರಕ್ರಿಯೆ ನಡೆಸಿದರು. ಕೊನೆಗೆ ಅಂತ್ಯಸಂಸ್ಕಾರ ನಡೆಸಲು ಮೃತ ದೇಹವನ್ನು ಪಡೆಯಲು ಸಹೋದರ ನಿರಾಕರಿಸಿದರು. …

Read More »

ಶಾಂತೈ ವೃದ್ಧಾಶ್ರಮದ ಸಹಯೋಗದೊಂದಿಗೆ ಕಪ್ಲೇಶ್ವರ ಚೌಕ್ ಗಣೇಶೋತ್ಸವದಲ್ಲಿ ಹಿರಿಯರನ್ನು ಸನ್ಮಾನಿಸಲಾಯಿತು

ಶಾಂತೈ ವೃದ್ಧಾಶ್ರಮದ ಸಹಯೋಗದೊಂದಿಗೆ ಕಪ್ಲೇಶ್ವರ ಚೌಕ್ ಗಣೇಶೋತ್ಸವದಲ್ಲಿ ಹಿರಿಯರನ್ನು ಸನ್ಮಾನಿಸಲಾಯಿತು ಹೃದಯಸ್ಪರ್ಶಿ ಸತ್ಕಾರದಲ್ಲಿ, ಕಪ್ಲೇಶ್ವರ ಚೌಕ್ ಗಣೇಶೋತ್ಸವ ಮಂಡಳಿಯ ಸಹಯೋಗದೊಂದಿಗೆ, ಶಾಂತೈ ವೃದ್ಧಾಶ್ರಮವು ಇಂದು ಸ್ಥಳೀಯ ಸುಮಾರು 50 ಹಿರಿಯರನ್ನು ಸನ್ಮಾನಿಸಿತು. ಈ ಕಾರ್ಯಕ್ರಮವು ಭಕ್ತಿ ಮತ್ತು ಗೌರವದಿಂದ ಗುರುತಿಸಲ್ಪಟ್ಟಿತು, ಪ್ರತಿಯೊಬ್ಬ ಹಿರಿಯರಿಗೂ ಅವರ ದೈನಂದಿನ ಆರೋಗ್ಯ ಅಗತ್ಯಗಳನ್ನು ಪೂರೈಸಲು ಶಾಲು, ಹೂವುಗಳು ಮತ್ತು ವಿಶೇಷ ಔಷಧಿ ಪೆಟ್ಟಿಗೆಯನ್ನು ನೀಡಿ ಸನ್ಮಾನಿಸಲಾಯಿತು. ಕಪಿಲ್ ಭೋಸಲೆ, ಪಪ್ಪು ಲಗಾಡೆ, ದೀಪಕ್ ಜಾಧವ್, …

Read More »

ರಾಷ್ಟ್ರಪತಿಗಳ ಮೈಸೂರು ಪ್ರವಾಸ: ಚಾಮುಂಡೇಶ್ವರಿ ದರ್ಶನ, ಅರಮನೆಗೆ ಭೇಟಿ

ಮೈಸೂರು: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರದಿಂದ (ಸೆ.1) ಎರಡು ದಿನ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಜೊತೆಗೆ ಆಯಿಷ್ ಸಂಸ್ಥೆಯ ವಜ್ರ ಮಹೋತ್ಸವ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ರಾಷ್ಟ್ರಪತಿಗಳ ಸ್ವಾಗತಕ್ಕೆ ನಗರದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (ಆಯಿಷ್)ಯಲ್ಲಿ ಸೆ.1 ರಂದು ನಡೆಯಲಿರುವ 60ನೇ ವರ್ಷದ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗಿಯಾಗಲಿದ್ದಾರೆ. ರಾಷ್ಟ್ರಪತಿ ಆಗಮನ …

Read More »

ಕೆ.ಎನ್.ರಾಜಣ್ಣ ಮನೆಗೆ ವಿವಿಧ ಮಠಾಧೀಶರ ಭೇಟಿ:

ತುಮಕೂರು: ಸಚಿವ ಸಂಪುಟದಿಂದ ವಜಾಗೊಂಡಿರುವ ಕೆ.ಎನ್.ರಾಜಣ್ಣ ಅವರ ನಿವಾಸಕ್ಕೆ ವಿವಿಧ ಮಠಗಳ 15ಕ್ಕೂ ಹೆಚ್ಚು ಸ್ವಾಮೀಜಿಗಳು ಭಾನುವಾರ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಚಿತ್ರದುರ್ಗದ ಜಗದ್ಗುರು ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ, “ಕೆ.ಎನ್.ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ತೆಗೆದು ಹಾಕಿರುವುದು ಇಡೀ ಹಿಂದುಳಿದ ಸಮುದಾಯಕ್ಕೆ ಅನ್ಯಾಯ ಮಾಡಿದಂತಾಗಿದೆ. ಅವರನ್ನು ವಾಪಸ್ ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸುವ ಮೂಲಕ ಹಿಂದುಳಿದ ವರ್ಗಗಳ ಸಮುದಾಯಕ್ಕೆ ನ್ಯಾಯ ಒದಗಿಸಿಕೊಡಬೇಕೆಂಬ ಆಶಯದೊಂದಿಗೆ ಕಾಂಗ್ರೆಸ್ ಹೈಕಮಾಂಡ್ ಅನ್ನು …

Read More »

ಡಿಕೆ ಶಿವಕುಮಾರ್ ಒಂದು ಕಾಲು ಬಿಜೆಪಿಯಲ್ಲಿಟ್ಟಿದ್ದಾರೆ ಎಂದ ಬಸನಗೌಡ ಪಾಟೀಲ್ ಯತ್ನಾಳ್

ಬೆಂಗಳೂರು, ಆಗಸ್ಟ್ 31: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಒಂದು ಕಾಲು ಬಿಜೆಪಿಯಲ್ಲಿ (BJP ಇಟ್ಟಿದ್ದಾರೆ ಎಂದು ಭಾರತೀಯ ಜನತಾ ಪಕ್ಷದ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Bsanagouda Patil Yatnal) ಸ್ಫೋಟಕ ಹೇಳಿಕೆ ನೀಡಿದ್ದಾರೆ. ಡಿಕೆ ಶಿವಕುಮಾರ್ ಈಗಾಗಲೇ ದೆಹಲಿಯಲ್ಲಿ ಒಂದು ಸುತ್ತಿನ ಚರ್ಚೆ ನಡೆಸಿದ್ದಾರೆ. ಆದರೆ ಅವರಿಗೆ ಶಾಸಕರ ಬೆಂಬಲ ಕಡಿಮೆ ಇದೆ ಎಂಬ ಕಾರಣಕ್ಕೆ ಅದು ಮುಂದುವರಿಯಲಿಲ್ಲ ಎಂದು ಯತ್ನಾಳ್ ಹೇಳಿದ್ದಾರೆ. ಆದರೆ ಇದಕ್ಕೆ ತಿರುಗೇಟು ನೀಡಿರುವ ಡಿಕೆ ಶಿವಕುಮಾರ್, ಆ ಸೆಗಣಿ …

Read More »