ಚನ್ನಮ್ಮನ ಕಿತ್ತೂರು: ‘ರೈತ ವಿರೋಧಿ ಧೋರಣೆ ತಳೆದಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಹಿಡಿದಿರುವ ಚಳಿಯನ್ನು ಬಿಡಿಸಲಾಗುವುದು. ವಿಧಾನಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು’ ಎಂದು ರೈತ ಮುಖಂಡ ಇಂಗಳಗುಪ್ಪೆ ಕೃಷ್ಣೇಗೌಡ ಘೋಷಿಸಿದರು. ಇಲ್ಲಿಯ ಗುರುವಾರ ಪೇಟೆಯಲ್ಲಿ ಸೋಮವಾರ ರೈತಸಂಘಗಳ ಒಕ್ಕೂಟದ ಕೇಂದ್ರ ಕಚೇರಿಗೆ ಚಾಲನೆ ನೀಡಿ ಮಾತನಾಡಿದ ಅವರು ‘ನೆಲ, ಜಲ, ಭಾಷೆ ವಿಷಯದಲ್ಲಿ ರಾಜಕಾರಣ ಮಾಡುತ್ತಿರುವ ನಾಯಕರಿಗೂ ಪಾಠ ಕಲಿಸಲಾಗುವುದು’ ಎಂದು ಹೇಳಿದರು. ’18 ರೈತಸಂಘಟನೆಗಳ ಸದಸ್ಯರು …
Read More »ಜನಸೇವೆಗೆ ಅರ್ಹರಲ್ಲ: ಡಾ.ಕೆ.ಸುಧಾಕರ್ ವಿರುದ್ಧ ಸಿಡಿದ ತಿಗಳ ಸಮುದಾಯ
ದೇವನಹಳ್ಳಿ: ಸಮುದಾಯ ವಿರೋಧಿ ಮನಸ್ಥಿತಿಯ ಡಾ.ಕೆ.ಸುಧಾಕರ್ ಅಂಥವರು ಅಧಿಕಾರಕ್ಕೆ ಬಂದರೆ ಹಿಂದುಳಿದ ವರ್ಗಗಳ ಅವನತಿಗೆ ಕಾರಣವಾಗುತ್ತದೆ ಎಂದು ಹೊಸಕೋಟೆ ಬಿಜೆಪಿ ತಾಲ್ಲೂಕು ಅಧ್ಯಕ್ಷ ಜಯರಾಜ್ ಸ್ವಪಕ್ಷೀಯ ಅಭ್ಯರ್ಥಿ ವಿರುದ್ಧವೇ ಬಹಿರಂಗವಾಗಿ ಹರಿಹಾಯ್ದರು. ತಿಗಳ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಗದಂತೆ ಸುಧಾಕರ್ ಷ್ಯಡಂತ್ರ ರೂಪಿಸಿದ್ದರು. ಅವರದು ಕಿರುಕುಳ ನೀಡುವ ಮನಸ್ಥಿತಿ. ಅವರ ಧೋರಣೆಯಿಂದ ನಿಷ್ಠಾವಂತ ಕಾರ್ಯಕರ್ತರ ರಾಜಕೀಯ ಜೀವನ ಕೊನೆಗೊಳ್ಳುತ್ತದೆ ಎಂದು ದೂರಿದರು. ಕರ್ನಾಟಕ ರಾಜ್ಯ ತಿಗಳರ ವಹ್ನಿಕುಲ ಕ್ಷತ್ರಿಯ ಸಂಘ …
Read More »ಧಾರವಾಡ ಲೋಕಸಭೆ ಚುನಾವಣೆ: ಐವರಿಂದ 11 ನಾಮಪತ್ರ ಸಲ್ಲಿಕೆ
ಧಾರವಾಡ: ಧಾರವಾಡ ಲೋಕಸಭಾ ಚುನಾವಣೆ ಸೋಮವಾರ ಕೇಂದ್ರ ಸಚಿವ ಬಿಜೆಪಿಯ ಪ್ರಲ್ಹಾದ ಜೋಶಿ ಸಹಿತ ಐವರು 11 ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ. ಬಿಜಪಿಯ ಪ್ರಲ್ಹಾದ ಜೋಶಿ ಮತ್ತು ರಾಷ್ಟ್ರೀಯ ಜನ ಸಂಭಾವನಾ ಸಮಿತಿ ಪಕ್ಷದ ನಾಗರಾಜ ಶ್ರೀಧರ ಶೇಟ್ ಅವರು ತಲಾ ನಾಲ್ಕು ಪ್ರತಿ ನಾಮಪತ್ರ ಸಲ್ಲಿಸಿದ್ಧಾರೆ. ಬಹುಜನ ಸಮಾಜ ಪಕ್ಷದಿಂದ ಶೋಭಾ ಬಳ್ಳಾರಿ, ಉತ್ತಮ ಪ್ರಜಾಕೀಯ ಪಕ್ಷದಿಂದ ಬಸವಲಿಂಗಪ್ಪ ಈ.ಬುಗಡಿ ಹಾಗೂ ಪಕ್ಷೇತರವಾಗಿ …
Read More »ಪ್ರಲ್ಹಾದ ಜೋಶಿಗೆ ಸ್ವಂತ ವಾಹನ ಇಲ್ಲ: ₹ 13.97 ಕೋಟಿ ಮೌಲ್ಯದ ಆಸ್ತಿ ಒಡೆಯ
ಧಾರವಾಡ: ಬಿಜೆಪಿಯಿಂದ ಲೋಕಸಭಾ ಚುನಾವಣೆಗೆ ಐದನೇ ಬಾರಿಗೆ ಸ್ಪರ್ಧಿಸಿರುವ ಸಚಿವ ಪ್ರಲ್ಹಾದ ಜೋಶಿ ಅವರು ₹ 13.97 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಸತತ ನಾಲ್ಕು ಬಾರಿ ಆಯ್ಕೆಯಾಗಿರುವ ಅವರಿಗೆ ಸ್ವಂತ ವಾಹನ ಇಲ್ಲ. ಜೋಶಿ ಅವರ ಬಳಿ 184 ಗ್ರಾಂ ಚಿನ್ನ 5 ಕೆ.ಜಿ ಬೆಳ್ಳಿ, ಅವರ ಪತ್ನಿ ಬಳಿ 500 ಗ್ರಾಂ ಚಿನ್ನ, 2 ಕೆ.ಜಿ ಬೆಳ್ಳಿ ಇದೆ. ಜೋಶಿ ಅವರ ಹೆಸರಿನಲ್ಲಿ ₹ 6.63 ಕೋಟಿ …
Read More »ಶೋಷಿತ ವರ್ಗಕ್ಕೆ ನ್ಯಾಯ ನೀಡಿದ ಅಂಬೇಡ್ಕರ್’
ನೇಸರಗಿ: ಅಸ್ಪೃಶ್ಯತೆ ಮತ್ತು ಅಸಮಾನತೆಯ ಆಂದೋಲನ ಪ್ರಾರಂಭಿಸಿ ಶೋಷಿತ ವರ್ಗಕ್ಕೆ ನ್ಯಾಯ ಒದಗಿಸಿದವರು ಬಿ.ಆರ್. ಅಂಬೇಡ್ಕರ್ ಎಂದು ಜೈ ಭೀಮ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ರಮೇಶ ರಾಯಪ್ಪಗೋಳ ಹೇಳಿದರು. ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ಆಯೋಜಿಸಿದ ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಅಂಬೇಡ್ಕರ್ ಅವರ ಬದುಕು ಎಲ್ಲರಿಗೂ ಸ್ಫೂರ್ತಿ. ಸಮಾನತೆ, ಪ್ರಗತಿಯ ಕನಸು ಕಂಡ ಮೇರು ನಾಯಕರಾಗಿದ್ದರು’ ಎಂದರು. ಈ ಸಂದರ್ಭದಲ್ಲಿ ರುದ್ರಪ್ಪ ರಾಯಪ್ಪಗೋಳ, ಶ್ರೀನಿವಾಸ ಹಮ್ಮನ್ನವರ, ಯಲ್ಲಪ್ಪ ಹಮ್ಮನ್ನವರ, …
Read More »ಬೆಳಗಾವಿ ಲೋಕಸಭಾ: ಮೃಣಾಲ್ ಹೆಬ್ಬಾಳಕರ ನಾಮಪತ್ರ ಸಲ್ಲಿಕೆ
ಬೆಳಗಾವಿ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮೃಣಾಲ್ ಹೆಬ್ಬಾಳಕರ ಸೋಮವಾರ ಚುನಾವಣಾಧಿಕಾರಿ ನಿತೇಶ್ ಪಾಟೀಲ ಅವರಿಗೆ ನಾಮಪತ್ರ ಸಲ್ಲಿಸಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ, ಶಾಸಕರಾದ ಲಕ್ಷ್ಮಣ ಸವದಿ, ಮಹಾಂತೇಶ ಕೌಜಲಗಿ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಬಾಗಣ್ಣ ನರೋಟಿ ಇದ್ದರು.
Read More »ಮಿ.ಕುಮಾರಸ್ವಾಮಿ ನೀನು ಚುನಾವಣೆಯಲ್ಲಿ ಗೆಲ್ಲಲ್ಲ : ಏಕವಚನದಲ್ಲೇ ಡಿಸಿಎಂ ಡಿಕೆಶಿ ವಾಗ್ಧಾಳಿ
ಬೆಂಗಳೂರು : ಮಹಿಳೆಯ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ಚುನಾವಣೆ ಹೊತ್ತಲ್ಲಿ ವಿರೋಧ ಪಕ್ಷಗಳಿಗೆ ಹೊಸ ಅಸ್ತ್ರಂ ಸಿಕ್ಕಂತಾಗಿದೆ. ಮಿ. ಕುಮಾರಸ್ವಾಮಿ ನೀನು ಚುನಾವಣೆಯಲ್ಲಿ ಗೆಲ್ಲಲ್ಲ ಎಂದು ಏಕವಚನದಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ವಾಗ್ಧಾಳಿ ನಡೆಸಿದ್ದಾರೆ. ಇಂದು ಸುದ್ದಿಗಾರರ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಮಿಸ್ಟರ್ ಕುಮಾರಸ್ವಾಮಿ ನೀನು ಚುನಾವಣೆಯಲ್ಲಿ ಗೆಲ್ಲಲ್ಲ, ಹೆದರಿ ಪಕ್ಕದ ಕ್ಷೇತ್ರಕ್ಕೆ ಹೋಗಿದ್ರಿ ಎಂದು ಡಿಕೆಶಿ ವಾಗ್ಧಾಳಿ ನಡೆಸಿದ್ದಾರೆ. ಚರ್ಚೆ ಮಾಡಲು ಸದನಕ್ಕೆ …
Read More »ಮಟನ್ ಚೀಟಿ ಹೆಸರಿನಲ್ಲಿ ಮಕ್ಮಲ್ ಟೋಪಿ ಹಾಕಿದ್ದ ಆರೋಪಿ ಅರೆಸ್ಟ್, ಮನೆ ಜಪ್ತಿ!
ಬೆಂಗಳೂರು:- ಹೊಸ ತೊಡಕಿಗೆ ಮಟನ್ ಚೀಟಿ ಹೆಸರಲ್ಲಿ ಮೋಸ ಮಾಡಿದ ಆರೋಪಿಯ ಮನೆ ಜಪ್ತಿ ಮಾಡಲಾಗಿದೆ. ಪುಟ್ಟಸ್ವಾಮಿಗೌಡ ಬಂಧಿತ ಆರೋಪಿ. ಆರೋಪಿಯು ಯುಗಾದಿ ಹಬ್ಬದ ಹೊಸ ತೊಡಕಿಗೆ ಮಟನ್ ಚೀಟಿ ಹೆಸರಿನಲ್ಲಿ ಹಣ ಪಡೆದು ವಂಚಿಸಿದ್ದ. ಈ ಸಂಬಂಧ ಈತನ ಮೇಲೆ ಹಲವು ಪ್ರಕರಣ ದಾಖಲಾಗಿದವು. ಇದೀಗ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಪುಟ್ಟಸ್ವಾಮಿಗೌಡ ಮನೆಯನ್ನು ಸುಪರ್ದಿಗೆ ಪಡೆದಿದ್ದು, ಈತ ಸಂಗ್ರಹಿಸಿದ ಹಣದಲ್ಲಿ ತನ್ನ ಸಾಲ ತೀರಿಸಿರುವುದು ಪೊಲೀಸ್ ತನಿಖೆಯಲ್ಲಿ ತಿಳಿದು …
Read More »ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್
ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ಸೋಮವಾರ (ಏ.15) ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ ಅವರಿಗೆ ನಾಮಪತ್ರ ಸಲ್ಲಿಸಿದರು. ಮಾಜಿ ಸಚಿವ ರಮೆಶ್ ಜಾರಕಿಹೊಳಿ, ಸಂಸದರಾದ ಮಂಗಲ ಅಂಗಡಿ, ಮಾಜಿ ಶಾಸಕ ಅನಿಲ್ ಬೆನಕೆ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಉಪಸ್ಥಿತರಿದ್ದರು.
Read More »ಡಿ.ಕೆ.ಶಿ ಆಪ್ತ ಕೆಂಪರಾಜು ನಿವಾಸದ ಮೇಲೆ ದಾಳಿ
ಬೆಂಗಳೂರು : ಆದಾಯ ತೆರಿಗೆ ಅಧಿಕಾರಿಗಳು ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಆಪ್ತ ಕೆಂಪರಾಜು ನಿವಾಸದ ಮೇಲೆ ದಾಳಿ (IT Raid) ನಡೆಸಿ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರಿನ ನಗರದ ಕನಕಪುರ ರಸ್ತೆಯ ವಾಜರ ಹಳ್ಳಿಯಲ್ಲಿರುವ ನಿವಾಸದ ಮೇಲೆ ಐಟಿ ದಾಳಿ ನಡೆದಿದೆ. ಈ ಹಿಂದೆ ಯುವ ಕಾಂಗ್ರೆಸ್ ಚುನಾವಣೆ ಕೆಂಪರಾಜು ಸ್ಪರ್ಧಿಸಿದ್ದರು. ಕನಕಪುರ ಮೂಲದ ಕೆಂಪರಾಜು ಗ್ರಾನೈಟ್, ಕ್ರಷರ್ ಸೇರಿದಂತೆ ಹಲವು ಬ್ಯುಸಿನೆಸ್ ಹೊಂದಿದ್ದಾರೆ. ಇವರ ನಿವಾಸದ ಮೇಲೆ …
Read More »