ಅಶ್ಲೀಲ ದೃಶ್ಯ ಹಂಚಿಕೆ ಆರೋಪ: ಪ್ರೀತಮ್ ಗೌಡ ಬಂಧಿಸದಂತೆ ಹೈಕೋರ್ಟ್ ಆದೇಶ ಅಶ್ಲೀಲ ದೃಶ್ಯ ಹಂಚಿಕೆ ಆರೋಪದಲ್ಲಿ ಮಾಜಿ ಶಾಸಕ ಪ್ರೀತಮ್ ಗೌಡ ಬಂಧಿಸದಂತೆ ಹೈಕೋರ್ಟ್ ಶುಕ್ರವಾರ ಆದೇಶ ಹೊರಡಿಸಿದೆ. ಆ ಮೂಲಕ ಅವರಿಗೆ ಬಂಧನದಿಂದ ಬಿಗ್ ರಿಲೀಫ್ ಸಿಕ್ಕಿದೆ ಬೆಂಗಳೂರು, ಜೂನ್ 28: ಅಶ್ಲೀಲ ದೃಶ್ಯ ಹಂಚಿಕೆ ಆರೋಪದಲ್ಲಿ ಮಾಜಿ ಶಾಸಕ ಪ್ರೀತಮ್ ಗೌಡ ಬಂಧಿಸದಂತೆ ಹೈಕೋರ್ಟ್ ಶುಕ್ರವಾರ ಆದೇಶ ಹೊರಡಿಸಿದೆ. ಆ ಮೂಲಕ ಅವರಿಗೆ ಬಂಧನದಿಂದ ಬಿಗ್ …
Read More »ಪಾರಿವಾಳಗಳ ಹಿಕ್ಕೆಯಿಂದ ಮೈಸೂರು ಅರಮನೆಗೆ ಕಂಟಕ:
ಮೈಸೂರು, ಜೂನ್ 28: ಸಾಂಸ್ಕೃತಿಕ ನಗರಿ ಮೈಸೂರು (Mysore) ಅರಮನೆಗೆ (Mysore Palace) ಹೆಸರುವಾಸಿ. ವಿಶ್ವವಿಖ್ಯಾತ ಮೈಸೂರು ಅರಮನೆಗೆ ಪಾರಿವಾಳಗಳ (Pigeon) ಹಿಕ್ಕೆಯಿಂದ ಕಂಟಕ ಎದುರಾಗಿದೆ. ಪಾರಿವಾಳಗಳು ಹಾಕುವ ಹಿಕ್ಕೆಯಲ್ಲಿ, ಯೂರಿಕ್ ಆ್ಯಸಿಡ್ (Uric Acid) ಇರುತ್ತದೆ. ಯೂರಿಕ್ ಆಸ್ಯಡಿನಿಂದ ಕೂಡಿರುವ ಈ ಹಿಕ್ಕೆಗಳು ಪಾರಂಪರಿಕ ಕಟ್ಟಡಗಳ ಮೇಲೆ ಬೀಳುವುದರಿಂದ, ಕಟ್ಟಡಗಳು ವಿರೂಪಗೊಳ್ಳುತ್ತವೆ ಎಂದು ಇತಿಹಾಸ ತಜ್ಞ ಪ್ರೋ. ರಂಗರಾಜು ಹೇಳಿದ್ದಾರೆ. ಪ್ರೋ. ರಂಗರಾಜು, ಈ ಹಿಕ್ಕೆಗಳನ್ನು ತಾಮ್ರ ಅಥವಾ ಸ್ಟೀಲ್ …
Read More »ಸೋನು ಗೌಡಗೆ ದರ್ಶನ್ ಅಭಿಮಾನಿಗಳಿಂದ ಕಿರುಕುಳ, ಅಳಲು ತೋಡಿಕೊಂಡ ನಟಿ
ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದ ಎಂಬ ಕಾರಣಕ್ಕೆ ಈಗ ಆತನ ಕೊಲೆಯೇ ಆಗಿದೆ. ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು ಅವರ ಸಹಚರರಲು ಆರೋಪಿಗಳಾಗಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆದರೆ ಈಗ ಅದೇ ದರ್ಶನ್ರ ಅಭಿಮಾನಿಗಳು ಕೆಲವು ನಟಿಯರಿಗೆ ಅವಾಚ್ಯವಾಗಿ ಬೈದು ಸಂದೇಶಗಳನ್ನು ಮಾಡುತ್ತಿದ್ದಾರೆ. ಈ ಬಗ್ಗೆ ನಟಿ, ಸೋಷಿಯಲ್ ಮೀಡಿಯಾ ಸೆಲೆಬ್ರಿಟಿ ಸೋನು ಗೌಡ ಮಾತನಾಡಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ವಿಡಿಯೋ ಒಂದರಲ್ಲಿ, ರೇಣುಕಾ ಸ್ವಾಮಿಯದ್ದು ಎನ್ನಲಾಗುತ್ತಿರುವ ಖಾತೆಯಿಂದ ನನಗೂ …
Read More »ಧಾರವಾಡ ಕೃಷಿ ವಿಶ್ವವಿದ್ಯಾಲಯ ಘಟಿಕೋತ್ಸವ: ಶ್ರೀಯಾಗೆ 3 ಚಿನ್ನದ ಪದಕ
ಧಾರವಾಡ ಕೃಷಿ ವಿಶ್ವವಿದ್ಯಾಲಯ ಘಟಿಕೋತ್ಸವ: ಶ್ರೀಯಾಗೆ 3 ಚಿನ್ನದ ಪದಕ ಧಾರವಾಡ: ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ 37ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋತ್ ಅವರು ಪದವೀಧರರಿಗೆ ಪ್ರಮಾಣ ಪತ್ರ ಪದಾನ ಮಾಡಿದರು. ಬಿ.ಎಸ್ಸಿ (ಆನರ್ಸ್) ಕೃಷಿ ಸ್ನಾತಕ ಪದವಿ ಕೋರ್ಸ್‌ನಲ್ಲಿ ಶ್ರೀಯಾ ಎಸ್.ಕರಿ ಅವರು ಮೂರು ಚಿನ್ನದ ಪದಕ ಪಡೆದಿದ್ದಾರೆ. ವಿಶ್ವವಿದ್ಯಾಲಯದಲ್ಲಿ 2023-24ನೇ ಸಾಲಿನಲ್ಲಿ ಒಟ್ಟು 933 ಮಂದಿ ವಿವಿಧ ಪದವಿ ಪೂರೈಸಿದ್ದಾರೆ. ಪಿಎಚ್.ಡಿ 69, ಸ್ನಾತಕೋತ್ತರ …
Read More »ಭಾರತಕ್ಕೆ ಇಂಗ್ಲೆಂಡ್ ಎದುರಾಳಿ; ಅಫ್ಘಾನಿಸ್ಥಾನಕ್ಕೆ ದಕ್ಷಿಣ ಆಫ್ರಿಕಾ
ಟರೂಬ/ಪ್ರೊವಿಡೆನ್ಸ್: ಟಿ20 ವಿಶ್ವಕಪ್ ಪಂದ್ಯಾವಳಿ ಸೆಮಿಫೈನಲ್‌ನತ್ತ ಮುಖ ಮಾಡಿದೆ. ದಾಖಲೆ ಸಂಖ್ಯೆಯ 20 ತಂಡಗಳಲ್ಲಿ 4 ಮಾತ್ರ ರೇಸ್‌ನಲ್ಲಿ ಉಳಿದುಕೊಂಡಿವೆ. ಸೂಪರ್-8 ಮೊದಲ ವಿಭಾಗದಿಂದ ಭಾರತ (6 ಅಂಕ) ಮತ್ತು ಅಫ್ಘಾನಿಸ್ಥಾನ (4 ಅಂಕ); ಎರಡನೇ ವಿಭಾಗದಿಂದ ದಕ್ಷಿಣ ಆಫ್ರಿಕಾ (6 ಅಂಕ) ಮತ್ತು ಇಂಗ್ಲೆಂಡ್ (4 ಅಂಕ) ಸೆಮಿಫೈನಲ್ ಪ್ರವೇಶಿಸಿವೆ. ಟರೂಬದಲ್ಲಿ ನಡೆಯುವ ಮೊದಲ ಸೆಮಿಫೈನಲ್‌ನಲ್ಲಿ ದ. ಆಫ್ರಿಕಾ- ಅಫ್ಘಾನಿ ಸ್ಥಾನ ಮುಖಾಮುಖೀ ಆಗಲಿವೆ. ಗಯಾನಾದ ಪ್ರೊವಿಡೆನ್ಸ್‌ನಲ್ಲಿ ಭಾರತ ತಂಡ …
Read More »ಪುಣೆ ಪೋರ್ಷೆ ಕಾರು ಅಪಘಾತ ಕೇಸ್ನಲ್ಲಿ ಅಪ್ರಾಪ್ತನ ರಿಲೀಸ್; ಅಬ್ಸರ್ವೇಶನ್ ಹೋಮ್‌ನಿಂದ ಬಿಡುಗಡೆ
ಪುಣೆ (ಮಹಾರಾಷ್ಟ್ರ): ರಾಷ್ಟ್ರವ್ಯಾಪಿ ಸುದ್ದಿಯಾಗಿದ್ದ ಪುಣೆ ಪೋರ್ಷೆ ಕಾರು ಅಪಘಾತ ಪ್ರಕರಣದಲ್ಲಿ ಬಾಲಾರೋಪಿಯನ್ನು (17 ವರ್ಷ) ರಿಲೀಸ್ ಮಾಡಲಾಗಿದೆ. ಅಬ್ಸರ್ವೇಶನ್ ಹೋಮ್‌ನಿಂದ ಬಿಡುಗಡೆ ಮಾಡುವಂತೆ ಬಾಂಬೆ ಹೈಕೋರ್ಟ್ ಆದೇಶಿಸಿದೆ. ಮೇ 19 ರಂದು ಮುಂಜಾನೆ ಕಲ್ಯಾಣಿ ನಗರದಲ್ಲಿ ಶ್ರೀಮಂತ ಬಿಲ್ಡರ್‌ನ ಪುತ್ರನಾದ ಅಪ್ರಾಪ್ತ ಚಲಾಯಿಸುತ್ತಿದ್ದ ಪೋರ್ಷೆ ಕಾರು ಬೈಕಿಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಐಟಿ ವೃತ್ತಿಪರರಾದ ಅನೀಶ್ ಅವಧಿಯಾ ಮತ್ತು ಅಶ್ವಿನಿ ಕೋಷ್ಟ ಎಂಬುವರು ಮೃತಪಟ್ಟಿದ್ದರು. ಪೊಲೀಸರ ಪ್ರಕಾರ ಅಪ್ರಾಪ್ತ …
Read More »ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ.100 ರಷ್ಟು ಸಿಗಲಿವೆ ಔಷಧಿಗಳು : ಗುಂಡೂರಾವ್
ಸರ್ಕಾರಿ ಆಸ್ಪತ್ರೆಯಲ್ಲಿಯೇ ಎಲ್ಲಾ ರೀತಿಯ ಆರೋಗ್ಯ ಸೌಲಭ್ಯ ಒದಗಿಸಬೇಕು. ಆ ನಿಟ್ಟಿನಲ್ಲಿ ಔಷಧಿಗಳು ಸೇರಿದಂತೆ ಶೇ.100 ರಷ್ಟು ಔಷಧಿಗಳು ದೊರೆಯುವಂತಾಗಲು ಪ್ರಯತ್ನಿಸಲಾಗಿದೆ. ಇನ್ನು ಮೂರು ನಾಲ್ಕು ತಿಂಗಳಲ್ಲಿ ಶೇ.100 ರಷ್ಟು ಗುರಿ ತಲುಪಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡುರಾವ್ ಅವರು ಹೇಳಿದರು. ರಾಜ್ಯದಲ್ಲಿ 219 ಡಯಾಲಿಸಿಸ್ ಕೇಂದ್ರಗಳನ್ನು ಆರಂಭಿಸಿ ಸುಮಾರು 800 ಯಂತ್ರಗಳನ್ನು ಅಳವಡಿಸಲಾಗಿದೆ. ಹೊಸ ತಾಲ್ಲೂಕು ಕೇಂದ್ರಗಳಲ್ಲಿಯೂ ಸಹ ಆರೋಗ್ಯಕ್ಕೆ …
Read More »ಐವರನ್ನು ಡಿಸಿಎಂ ಮಾಡಿ: ಡಿಕೆ ವ್ಯಂಗ್ಯ
ಬೆಂಗಳೂರು: “ಮೂರು ಡಿಸಿಎಂ ಹುದ್ದೆ ಸೃಷ್ಟಿ ಮಾಡಬೇಕು ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ಪಕ್ಷ ತೀರ್ಮಾನ ಮಾಡಿ, ಇನ್ನೂ ಐದು ಜನರನ್ನು ಮಾಡಿದರೆ ಒಳ್ಳೆಯದು’ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ವ್ಯಂಗ್ಯವಾಡಿದ್ದಾರೆ. ಸದಾಶಿವನಗರದ ತಮ್ಮ ನಿವಾಸದ ಬಳಿ ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ಪ್ರತಿಕ್ರಿಯೆ ನೀಡಿ, ಐದು ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ಪ್ರಸ್ತಾವ ಮಾಡಿದ್ದಾರೆ. ಹೆಚ್ಚುವರಿ ಡಿಸಿಎಂ ಮಾಡಿದರೆ ಡಿ.ಕೆ. ಶಿವಕುಮಾರ್ ಅವರ ಬಲ ಕುಗ್ಗಿದಂತೆ …
Read More »ಅಂಗನವಾಡಿ ಕೇಂದ್ರಗಳಲ್ಲೇ ಎಲ್‌ಕೆಜಿ, ಯುಕೆಜಿ: -ಲಕ್ಷ್ಮೀ ಹೆಬ್ಬಾಳ್ಕರ್,
ಬೆಂಗಳೂರು: ರಾಜ್ಯದ ಎಲ್ಲ ಅಂಗನವಾಡಿ ಕೇಂದ್ರಗಳನ್ನು ಉನ್ನತ ಸ್ತರಕ್ಕೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮತಿ ಸೂಚಿಸಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಸೋಮವಾರ ಮುಖ್ಯ ಮಂತ್ರಿ ಸಿದ್ದರಾಮಯ್ಯ ಜತೆಗೆ ಸಭೆ ನಡೆಸಿದ ಬಳಿಕ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗ ಹೊರತುಪಡಿಸಿ ಹೊಸದಾಗಿ ಅಂಗನವಾಡಿ ಕೇಂದ್ರಗಳಲ್ಲೇ ಪೂರ್ವ ಪ್ರಾಥಮಿಕ (ಎಲ್‌ಕೆಜಿ, ಯುಕೆಜಿ) ಶಿಕ್ಷಣ ನೀಡುವ ಬಗ್ಗೆ ತಜ್ಞರ ಸಮಿತಿ ರಚಿಸಲು ಸಿಎಂ ಸೂಚಿಸಿದ್ದಾರೆ …
Read More »ತಾ.ಪಂ.-ಜಿ.ಪಂ. ಮೀಸಲಾತಿ ನಿಗದಿ ವಿಳಂಬ: ಸರಕಾರಕ್ಕೆ ನ್ಯಾಯಾಂಗ ನಿಂದನೆ ತೂಗುಗತ್ತಿ
ಬೆಂಗಳೂರು: ನ್ಯಾಯಾಲಯಕ್ಕೆ ಕೊಟ್ಟ ಭರವಸೆಯಂತೆ ನಿಗದಿತ ಅವಧಿಯಲ್ಲಿ ಜಿ.ಪಂ. ಹಾಗೂ ತಾ.ಪಂ. ಕ್ಷೇತ್ರಗಳಿಗೆ ಮೀಸಲಾತಿ ಅಂತಿಮಗೊಳಿಸದ ರಾಜ್ಯ ಸರಕಾರದ ವಿರುದ್ಧ ರಾಜ್ಯ ಚುನಾವಣ ಆಯೋಗ ಹೈಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ. ಆಯೋಗ ಸಲ್ಲಿಸಿರುವ ಈ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾ| ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು. ಈ ವೇಳೆ ರಾಜ್ಯ ಚುನಾವಣ …
Read More »