Breaking News

ರಾಷ್ಟ್ರೀಯ

ಚೋರ್ಲಾ ಘಾಟ್‌ಗೆ ಕೇಂದ್ರ ‘ಪ್ರವಾಹ’ ತಂಡದ ಸದಸ್ಯರ ಭೇಟಿ

ಬೆಳಗಾವಿ: ಕರ್ನಾಟಕ- ಗೋವಾ ಗಡಿಯ ಚೋರ್ಲಾ ಘಾಟ್‌ಗೆ ಭಾನುವಾರ ಭೇಟಿ‌ ನೀಡಿದ ಕೇಂದ್ರದ ‘ಪ್ರವಾಹ’ ತಂಡದ ಸದಸ್ಯರು, ಮಳೆ‌ ನಡುವೆಯೇ ಮಹದಾಯಿ ಜಲಾನಯನ ಪ್ರದೇಶ ವೀಕ್ಷಿಸಿದರು. ಚೋರ್ಲಾ ಘಾಟ್ ಮತ್ತು ಹರತಾಳ ನಾಲೆ ವೀಕ್ಷಿಸಿದ ಅಧಿಕಾರಿಗಳಿಗೆ ನೀರಾವರಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ‘ಅನುಮತಿ ‌ಇಲ್ಲದೆ ಕರ್ನಾಟಕ ‌ಮಹದಾಯಿ ಯೋಜನೆ ಕಾಮಗಾರಿ ಆರಂಭಿಸಿದೆ’ ಎನ್ನುವ ಗೋವಾ ಸರ್ಕಾರದ ‌ಆರೋಪದ ಹಿನ್ನೆಲೆಯಲ್ಲಿ ಈ‌ ಸದಸ್ಯರು ಪರಿಶೀಲನೆ ನಡೆಸಿದರು‌. ಆದರೆ, ಇಲ್ಲಿ ಯಾವುದೇ …

Read More »

ಬೆಳ್ಳಂಬೆಳಗ್ಗೆ ಮೂವರ ಮೇಲೆ ಚಿರತೆ ದಾಳಿ

ದೇವದುರ್ಗ(ರಾಯಚೂರು): ತಾಲೂಕಿನ ಡಿ.ಕರಡಿಗುಡ್ಡ ಗ್ರಾಮದಲ್ಲಿ ರವಿವಾರ ಮೂವರ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ಜರುಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಮೂವರು ಚಿರತೆ ಬಾಯಿಂದ ತಪ್ಪಿಸಿಕೊಂಡಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ಬೆಳಗ್ಗೆ ರಂಗನಾಥ್ ಬಹಿರ್ದೆಸೆಗೆ ಹೋದಾಗ ಚಿರತೆ ಕಂಡಿದೆ. ಹೆದರಿಕೊಂಡು ಓಡಿ ಬಂದು ರಮೇಶ್, ಮಲ್ಲಣ್ಣರಿಗೆ ಎನ್ನುವವರಿಗೆ ಮಾಹಿತಿ ನೀಡಿದ್ದಾರೆ. ಅವರು ಚಿರತೆ ಹೆದರಿಸಲು ಆಯುಧ ಹಿಡಿದು ಹೋದಾಗ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ …

Read More »

ಪಡಿತರ ಚೀಟಿದಾರ’ರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ: ಮತ್ತೆ ‘ಆಧಾರ್ ಸಂಖ್ಯೆ’ ಜೋಡಣೆಗೆ ದಿನಾಂಕ ವಿಸ್ತರಣೆ |

ಬೆಂಗಳೂರು: ರೇಷನ್ ಕಾರ್ಡ್ ಗೆ ಆಧಾರ್ ಸಂಖ್ಯೆ ಲಿಂಕ್ ಮಾಡುವುದನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದೆ. ಆದ್ರೇ ಇನ್ನೂ ಕೆಲವರು ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡಿಲ್ಲ. ಈ ಹಿನ್ನಲೆಯಲ್ಲಿ ಪಡಿತರ ಚೀಟಿದಾರರಿಗೆ ಸಿಹಿಸುದ್ದಿ ಎನ್ನುವಂತೆ ರಾಜ್ಯ ಸರ್ಕಾರವು ಮತ್ತೆ ಡೆಡ್ ಲೈನ್ ವಿಸ್ತರಣೆ ಮಾಡಿರುವುದಾಗಿ ತಿಳಿದು ಬಂದಿದೆ.   ಈ ಬಗ್ಗೆ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉನ್ನತ ಮೂಲಗಳಿಂದ ಮಾಹಿತಿ ತಿಳಿದು ಬಂದಿದ್ದು, …

Read More »

ಒಂದುವರೆ ತಿಂಗಳುಗಳ‌ ಕಾಲ ಶಿಗ್ಗಾವಿಯಲ್ಲಿ ಧನ್ಯವಾದ ಯಾತ್ರೆ

ಹಾವೇರಿ : ನಾನು ರಾಜಕೀಯವಾಗಿ ಬೆಳೆಯಲು ಶಿಗ್ಗಾವಿ ಜನರ ಆಶೀರ್ವಾದ ಕಾರಣ, ಜುಲೈ 12 ರಿಂದ ಒಂದುವರೆ ತಿಂಗಳುಗಳ‌ ಕಾಲ ಕ್ಷೇತ್ರದಲ್ಲಿ ಧನ್ಯವಾದ ಯಾತ್ರೆ ಯಾತ್ರೆ ಆರಂಭ ಮಾಡುತ್ತೇನೆ ಎಂದು ಸಂಸದ, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಶನಿವಾರ ಹೇಳಿಕೆ ನೀಡಿದ್ದಾರೆ. ಶಿಗ್ಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸದ ಬಸವರಾಜ್ ಬೊಮ್ಮಾಯಿ’ ಶಿಗ್ಗಾವಿ ಉಪಚುನಾವಣೆ ವಿಚಾರ ಅಶೋಕ‌ ಅವರ ನೇತೃತ್ವದಲ್ಲಿ ಸಮಿತಿ ಮಾಡಿದ್ದೇವೆ. ಪಕ್ಷದಿಂದ ಸರ್ವೆ ಮಾಡಿಸುತ್ತಿದ್ದೇವೆ. ಶಿಗ್ಗಾವಿಯಲ್ಲಿ ಪೋಸ್ಟರ್ ಭರಾಟೆ …

Read More »

ಶ್ರೀರಾಮಸೇನೆ’ಯಿಂದ ‘ಲವ್ ಜಿಹಾದ್’ ತಡೆಗೆ ‘ಸಹಾಯವಾಣಿ’ ಆರಂಭ

ಧಾರವಾಡ: ರಾಜ್ಯದಲ್ಲಿ ಶ್ರೀರಾಮಸೇನೆಯಿಂದ ಲವ್ ಜಿಹಾದ್ ತಡೆಗೆ ಅಭಿಯಾನ ಆರಂಭಿಸಲಾಗಿದೆ. ಇದರ ಸಲುವಾಗಿ ಶ್ರೀರಾಮಸೇನೆಯಿಂದ ಸಹಾಯವಾಣಿ ಕೂಡ ಆರಂಭಿಸಲಾಗಿದ್ದು, ಅದಕ್ಕೆ ಹೆಚ್ಚು ಬೆದರಿಕೆ ಕರೆಗಳೇ ಬರುತ್ತಿರೋದಾಗಿ ತಿಳಿದು ಬಂದಿದೆ. ಧಾರವಾಡ ಶ್ರೀರಾಮಸೇನಾ ಕರ್ನಾಟಕ ಕೇಂದ್ರದಿಂದ ಲವ್ ಜಿಹಾದ್ ಗೆ ತಡೆ ನೀಡುವ ಸಲುವಾಗಿ ಸಹಾಯವಾಣಿ ಆರಂಭಿಸಲಾಗಿದೆ. ಲವ್ಜಿಹಾದ್ ಸಂಬಂಧ 9090443444ಗೆ ಕರೆ ಮಾಡಿ ತಿಳಿಸುವಂತೆ ಮನವಿ ಮಾಡಿದೆ. ಈ ಸಹಾಯವಾಣಿ ಸಂಖ್ಯೆ ಆರಂಭಿಸಿದ ನಂತ್ರ ಮೊದಲ ದಿನವೇ ಅಭೂತಪೂರ್ವ ಸ್ಪಂದನೆ …

Read More »

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..!

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..! ಮೂಡಲಗಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ಮೂಡಲಗಿ ತಾಲ್ಲೂಕಿನ ಹಳ್ಳೂರ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಸೌಭಾಗ್ಯ ಲಕ್ಷ್ಮೀ ಶುಗರ್ಸ್ …

Read More »

ದರ್ಶನ್‌ ಬಂಧನ: ಸಾಕ್ಷಿಗಳ ಹಿಂದೆ ಬಿದ್ದ ಪೊಲೀಸರು: ಮಹತ್ವದ ಸಾಕ್ಷಿಗಳು ವಶಕ್ಕೆ

ದರ್ಶನ್‌ ಬಂಧನ: ಸಾಕ್ಷಿಗಳ ಹಿಂದೆ ಬಿದ್ದ ಪೊಲೀಸರು: ಮಹತ್ವದ ಸಾಕ್ಷಿಗಳು ವಶಕ್ಕೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಜಾಡು ಹಿಡಿದು ಜಾಲಾಡುತ್ತಿರುವ ಪೊಲೀಸರಿಗೆ ದಿನವೂ ಹೊಸ ಹೊಸ ಸಾಕ್ಷಿಗಳು ಕೈಗೆ ಸಿಗುತ್ತಿವೆ. ಈ ಸಾಕ್ಷಿಗಳನ್ನು ಈಗಾಗಲೇ ನ್ಯಾಯಾಧಿಶರ ಮುಂದೆ ಪ್ರಸ್ತುತ ಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ ಈ ಸಾಕ್ಷ್ಯಗಳ ಹೇಳಿಕೆಗಳನ್ನು ನ್ಯಾಯಾಧೀಶರ ಎದುರು ತಮ್ಮ ಹೇಳಿಕೆಗಳನ್ನು ನೀಡಿದ್ದಾರೆ. ದರ್ಶನ್‌ ಕನ್ನಡ ಚಿತ್ರ ರಂಗ ಸ್ಟಾರ್ ನಟ. ದೊಡ್ಡ ಸೆಲಿಬ್ರಿಟಿ. ಪ್ರಭಾವ …

Read More »

ಕೊಯ್ನಾ ಜಲಾಶಯಕ್ಕೆ ಹರಿದು ಬಂದ 2 ಟಿಎಂಸಿ ಅಡಿ ನೀರು

ಚಿಕ್ಕೋಡಿ: ನೆರೆಯ ಮಹಾರಾಷ್ಟ್ರ ರಾಜ್ಯದ ಕೃಷ್ಣಾ ಹಾಗೂ ಉಪನದಿಗಳ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಬೀಳುತ್ತಿದ್ದರಿಂದ ಮಹಾರಾಷ್ಟ್ರ ರಾಜ್ಯದ ಸಾತಾರಾ ಜಿಲ್ಲೆಯ ಕೊಯ್ನಾ ಡ್ಯಾಂ ಗೆ 24 ಗಂಟೆಗಳ ಅವಧಿಯಲ್ಲಿ 2 ಟಿಎಂಸಿ ಅಡಿಗಳಷ್ಟು ನೀರು ಹರಿದು ಬಂದಿದ್ದು, 105 ಟಿಎಂಸಿ ಅಡಿ ಸಾಮರ್ಥ್ಯದ ಈ ಡ್ಯಾಂನಲ್ಲಿ ಬುಧವಾರ 23 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಕಳೆದ 24 ಗಂಟೆಗಳಲ್ಲಿ ಕೊಯ್ನಾ ಆಣೆಕಟ್ಟು ಪ್ರದೇಶದಲ್ಲಿ 13.3 ಸೆ.ಮೀ, ಕೃಷ್ಣಾ ನದಿ ಉಗಮ …

Read More »

ವಿಪತ್ತು ನಿರ್ವಹಣೆಗೆ ಸೂಕ್ತ ಮುಂಜಾಗ್ರತಾ ಕ್ರಮ ಅಗತ್ಯ: ಈರಣ್ಣ

ವಿಪತ್ತು ನಿರ್ವಹಣೆಗೆ ಸೂಕ್ತ ಮುಂಜಾಗ್ರತಾ ಕ್ರಮ ಅಗತ್ಯ: ಈರಣ್ಣ ಮಹಾಲಿಂಗಪುರ: ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಿಲ್ಲೆಯಲ್ಲಿ ಮಳೆಯಾಗಿ ಮತ್ತು ಅಂತರಾಜ್ಯದಲ್ಲಿ ಮಳೆಯಾಗಿ ಕೃಷ್ಣಾ ಮತ್ತು ಘಟಪ್ರಭಾ ನದಿಗಳಿಗೆ ಪ್ರವಾಹ ಬಂದು ಮಹಾಲಿಂಗಪುರ ಸುತ್ತಮುತ್ತಲಿನ ಗ್ರಾಮಗಳು ಪ್ರವಾಹ ಎದುರಿಸುವದರಿಂದ ವಿಪತ್ತು ನಿರ್ವಹಣೆಗೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಹೇಳಿದರು. ಪುರಸಭೆಯಲ್ಲಿ ಜರುಗಿದ ಸ್ಥಳೀಯ ಮಟ್ಟದ ಅ ಧಿಕಾರಿಗಳ ವಿಪತ್ತು ನಿರ್ವವಣಾ ಮುಂಜಾಗ್ರತೆಯ ಕ್ರಮಗಳ ಸಭೆಯ ಅಧ್ಯಕ್ಷತೆ …

Read More »

ಐವರು ಜಿಲ್ಲಾಧಿಕಾರಿಗಳು ಸೇರಿ 23 ಐಎಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ಕಳೆದೆರಡು ದಿನಗಳಲ್ಲಿ ಸುಮಾರು 29 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದ ರಾಜ್ಯ ಸರ್ಕಾರವು ಇದೀಗ ಆಡಳಿತಾತ್ಮಕ ವಿಭಾಗದಲ್ಲಿ ಮೇಜರ್ ಸರ್ಜರಿ ಮಾಡಿದೆ. 23 ಐಎಎಸ್ ಅಧಿಕಾರಿಗಳನ್ನು ಶುಕ್ರವಾರ ವರ್ಗಾವಣೆ ಮಾಡಲಾಗಿದೆ. ಐವರು ಜಿಲ್ಲಾಧಿಕಾರಿಗಳು ಸೇರಿ ಒಟ್ಟು 23 ಜಿಲ್ಲಾಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಹಾವೇರಿ, ಗದಗ, ದಾವಣಗೆರೆ, ಮೈಸೂರು, ರಾಯಚೂರು, ಬೆಳಗಾವಿ ಮತ್ತು ಬೀದರ್ ಜಿಲ್ಲೆಗಳಿಗೆ ಹೊಸ ಡಿಸಿ ನೇಮಿಸಲಾಗಿದೆ. ಇಲ್ಲಿದೆ ಐಎಎಸ್ ವರ್ಗಾವಣೆ ವಿವರ ಹೆಸರು-ಎಲ್ಲಿಂದ- ಎಲ್ಲಿಗೆ ಡಾ. …

Read More »