ದೇವಸ್ಥಾನದ ಧರ್ಮದರ್ಶಿ ಹತ್ಯೆ ಪ್ರಕರಣ: 24 ಗಂಟೆಯೊಳಗೆ ಹಂತಕನ ಬಂಧನ ಹುಬ್ಬಳ್ಳಿ: ಇಲ್ಲಿನ ಈಶ್ವರನಗರದ ಶ್ರೀ ವೈಷ್ಣೋದೇವಿ ದೇವಸ್ಥಾನದ ಧರ್ಮದರ್ಶಿ ದೇವೆಂದ್ರಪ್ಪ ಮಹಾದೇವಪ್ಪ ವನಹಳ್ಳಿ (63) ಕೊಲೆ ಮಾಡಿದ ಹಂತಕನನ್ನು ಪೊಲೀಸರು ಘಟನೆ ನಡೆದ 24 ತಾಸಿನೊಳಗೆ ಬಂಧಿಸಿದ್ದಾರೆ. ಇಲ್ಲಿನ ಕಮರಿಪೇಟೆ ಜಿ. ಅಡ್ಡಾ ನಿವಾಸಿ, ಆಟೋ ರಿಕ್ಷಾ ಚಾಲಕ ಸಂತೋಷ ಬೋಜಗಾರ ಬಂಧಿತನಾದವ. ದೇವಪ್ಪಜ್ಜನ ಪೂಜಾ-ವಿಧಾನಗಳಿಂದಲೇ ನಾವು ಆರ್ಥಿಕವಾಗಿ ಹಾಳಾಗಲು, ಮಾನಸಿಕವಾಗಿ ತೊಂದರೆ ಅನುಭವಿಸುತ್ತಿರುವುದಾಗಿ ಹೇಳಿ ಹತ್ಯೆ ಮಾಡಿರುವುದಾಗಿ ತನಿಖೆ …
Read More »ಮಾದಕ ವಸ್ತು ಮಾರುತ್ತಿದ್ದ ರಾಜಸ್ಥಾನ ಮೂಲದ ಐವರ ಬಂಧನ
ಹುಬ್ಬಳ್ಳಿ: ಅಫೀಮು ಮತ್ತು ಅಫೀಮು ಗಿಡದ ಪಾವಡರ್ ಪೊಪೆಸ್ಟ್ರಾ ಹೆಸರಿನ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ರಾಜಸ್ಥಾನ ಮೂಲದ ಐವರನ್ನು ಕಸಬಾಪೇಟೆ ಪೊಲೀಸರು ಬಂಧಿಸಿ, ಅವರಿಂದ 150ಗ್ರಾಂ ಅಫೀಮು ಮತ್ತು 3ಕೆಜಿ ಅಫೀಮು ಗಿಡದ ಪೌಡರ್ ಪೊಪೆಸ್ಟ್ರಾ ವಶಪಡಿಸಿಕೊಂಡಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ರಾಜಸ್ಥಾನ ಮೂಲದವರಾದ ಶಿವಮೊಗ್ಗದ ಜುಗತರಾಮ ಪಟೇಲ್ , ಹೀಮಾ ಬಿಷ್ಣೋಯ್, ದನರಾಮ ಪಟೇಲ್, ಶ್ರವಣಕುಮಾರ ಬಿಷ್ಣೋಯ್, ಓಂಪ್ರಕಾಶ ಬಿಷ್ಣೋಯ್ …
Read More »ಘಟಪ್ರಭಾ ನದಿಗೆ ಹೆಚ್ಚಿದ ನೀರು: ಮೂರು ಸೇತುವೆಗಳು ಜಲಾವೃತ
ಮಹಾಲಿಂಗಪುರ: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆ ಘಟಪ್ರಭಾ ನದಿ ತುಂಬಿ ಹರಿಯುತ್ತಿದೆ. ಕಳೆದ 5-6 ದಿನಗಳಿಂದ ಘಟಪ್ರಭಾ ನದಿಗೆ ನೀರು ಹೆಚ್ಚಾಗಿ ಹರಿದು ಬರುತ್ತಿದೆ. ಜು. 20ರ ಶನಿವಾರದಿಂದ ನಂದಗಾಂವ ಸೇತುವೆ ಸಂಪೂರ್ಣ ಜಲಾವೃತವಾಗಿದೆ. ಇಂದು (ಜು.23ರ ಮಂಗಳವಾರ) ಢವಳೇಶ್ವರ, ಮಿರ್ಜಿ ಸೇತುವೆ ಜಲಾವೃತ: ಘಟಪ್ರಭಾ ನದಿಗೆ ನೀರು ಹೆಚ್ಚಿದ ಕಾರಣ ಜು.23ರ ಮಂಗಳವಾರ ಮುಂಜಾನೆಯಿಂದ ಢವಳೇಶ್ವರ ಮತ್ತು ಮಿರ್ಜಿ ಸೇತುವೆಗಳು ಜಲಾವೃತವಾಗಿವೆ. …
Read More »ಕೇಂದ್ರ ಬಜೆಟ್ ನಲ್ಲಿ ಯಾವ ವಸ್ತು ದುಬಾರಿ, ಯಾವುದು ಅಗ್ಗ?
ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ (ಜುಲೈ 23) ಲೋಕಸಭೆಯಲ್ಲಿ 2024-2025ನೇ ಸಾಲಿನ ಬಜೆಟ್ ಮಂಡಿಸಿದ್ದರು. ಈ ಬಾರಿಯ ಮುಂಗಡ ಪತ್ರದಲ್ಲಿ ಯಾವೆಲ್ಲಾ ವಸ್ತುಗಳು ದುಬಾರಿ, ಯಾವೆಲ್ಲಾ ಅಗ್ಗವಾಗಿದೆ ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ… ಯಾವುದು ಅಗ್ಗ: ಕ್ಯಾನ್ಸರ್ ಔಷಧ ಪೆಟ್ರೋಲ್ ದರ 2 ರೂ. ಇಳಿಕೆ ಮೊಬೈಲ್ ಫೋನ್ ಆಮದು ಚಿನ್ನ, ಆಮದು ಬೆಳ್ಳಿ ಚರ್ಮದ ವಸ್ತು ಸೀ ಫುಡ್ ವಿದ್ಯುತ್ ತಂತಿ ಎಕ್ಸರೇ ಮೆಷಿನ್ ಸೋಲಾರ್ ಪ್ಯಾನಲ್ …
Read More »ಸಾಲದ ಹೊರೆ ತಾಳದೇ ರೈತ ಆತ್ಮಹತ್ಯೆ
ಕಾರಟಗಿ: ಸಾಲದ ಹೊರೆಯಿಂದ ಬಳಲಿದ್ದ ತಾಲ್ಲೂಕಿನ ಹುಳ್ಕಿಹಾಳ ಗ್ರಾಮದ ರೈತ ನರಸಪ್ಪ ಗಂಗಾವತಿ (45) ಹೊಲದಲ್ಲಿ ರಾಸಾಯನಿಕ ಕುಡಿದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ನರಸಪ್ಪ ಹೊಲದ ಮೇಲೆ ₹2.50 ಲಕ್ಷ ಮತ್ತು ಕೈಗಡವಾಗಿ ₹6ರಿಂದ ₹7 ಲಕ್ಷ ಸಾಲ ಮಾಡಿದ್ದು, ಬೆಳೆ ಸರಿಯಾಗಿ ಬಾರದ್ದರಿಂದ ಸಾಲ ಹೇಗೆ ತೀರಿಸಬೇಕು ಎಂದು ಗೋಳಾಡುತ್ತಿದ್ದ. ಈ ಕುರಿತು ನಾನು ಹಾಗೂ ನನ್ನ ಇನ್ನುಳಿದ ಮಕ್ಕಳು ಬುದ್ಧಿವಾದ ಹೇಳಿದ್ದರೂ ಯಾರೊಂದಿಗೂ ಹೆಚ್ಚು ಮಾತನಾಡದೆ ಮಾನಸಿಕವಾಗಿದ್ದ. ಭಾನುವಾರ …
Read More »ಸಿಎಂ ಸಿದ್ದರಾಮಯ್ಯ ಹೆಸರಿಗೆ ಕಳಂಕ ತರಲು ಬಿಜೆಪಿಯಿಂದ ನಿರಂತರ ಪ್ರಯತ್ನ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕಿಡಿ
ಬೆಂಗಳೂರು: ಜಾರಿ ನಿರ್ದೇಶನಾಲಯದ (ಇಡಿ) ಮೂಲಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಕೆಡಿಸಲು ಕೇಂದ್ರ ಸರ್ಕಾರ ಹುನ್ನಾರ ನಡೆಸುತ್ತಿದೆ. ಈ ಮೂಲಕ ದೇಶದಲ್ಲಿ ಬಿಜೆಪಿಯೇತರ ಸರ್ಕಾರಗಳನ್ನು ಅಸ್ಥಿರಗೊಳಿಸುವುದೇ ಕೇಂದ್ರ ಸರ್ಕಾರದ ಗುರಿಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಆರೋಪಿಸಿದ್ದಾರೆ. ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ, ಡಿಸಿಎಂ ಹಾಗೂ ಮಾಜಿ ಸಚಿವ ನಾಗೇಂದ್ರ ಅವರ ಹೆಸರು ಹೇಳುವಂತೆ ನಿಗಮದ ಹಿಂದಿನ ಎಂಡಿ ಕಲ್ಲೇಶಪ್ಪ …
Read More »D.K. Shivakumar 15 ದಿನಗಳಲ್ಲಿ ಮತ್ತೆ ತಿಹಾರ್ ಜೈಲಿಗೆ: ಯತ್ನಾಳ್
ಬೆಳಗಾವಿ: ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ನಾನು ಸಲ್ಲಿಸಿರುವ ಅರ್ಜಿ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಲಿದ್ದು 15 ದಿನಗಳ ಒಳಗೆ ಡಿಕೆಶಿ ಮತ್ತೆ ತಿಹಾರ್ ಜೈಲಿಗೆ ಹೋಗಲಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿ, ಈಗಾಗಲೇ ಡಿಕೆಶಿ ವಿರುದ್ಧದ ಕೇಸ್ ಸುಪ್ರೀಂ ಕೋರ್ಟ್‌ನಲ್ಲಿ ವಜಾ ಮಾಡಲಾಗಿದೆ. ಇನ್ನು 15 ದಿನಗಳಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದರೆ ಡಿಕೆಶಿ ಮತ್ತೆ ಜೈಲಿಗೆ ಹೋಗಬೇಕಾಗುತ್ತದೆ. ಬಿಜೆಪಿಯಲ್ಲಿ ತಪ್ಪು …
Read More »ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕದ ಪ್ರಮುಖ ನಿರೀಕ್ಷೆಗಳೇನು?
2024: ಇಂದು (ಜುಲೈ 23) ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಮೂಲಕ ಅವರು ಸತತ 7ನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸಿದ ದಾಖಲೆಯನ್ನು ಮುಡಿಗೇರಿಸಿಕೊಳ್ಳಲಿದ್ದಾರೆ. ಹಾಗೆಯೇ ಈ ಬಜೆಟ್‌ನಲ್ಲಿ ಹಲವರು ಹಲವು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಹಾಗಾದರೆ ಪ್ರಮುಖವಾಗಿ ಕರ್ನಾಟಕದ ನಿರೀಕ್ಷೆಗಳೇನು ಎಂದು ಇಲ್ಲಿ ತಿಳಿಯಿರಿ. ರಾಜ್ಯದಲ್ಲಿ ವಿವಿಧ ಹಂತಗಳಲ್ಲಿರುವ ನೀರಾವರಿ ಯೋಜನೆಗಳಿಗೆ ಅನುಮತಿ ಮತ್ತು ಅನುದಾನ, ಹೊಸ ಮಾರ್ಗಗಳ ನಿರ್ಮಾಣ ಮತ್ತು ಇರುವ …
Read More »ಉಪಮುಖ್ಯಮಂತ್ರಿ ಕ್ಷೇತ್ರದಲ್ಲಿ ದಲಿತ ಯುವಕನ ಕೈ ಕಡಿದರು
ಉಪಮುಖ್ಯಮಂತ್ರಿ ಕ್ಷೇತ್ರದಲ್ಲಿ ದಲಿತ ಯುವಕನ ಕೈ ಕಡಿದರು ಕನಕಪುರ: ಮಾಳಗಾಳು ಗ್ರಾಮದಲ್ಲಿ ಒಕ್ಕಲಿಗ ಸಮುದಾಯದ ಯುವಕರ ಗುಂಪೊಂದು ಭಾನುವಾರ ರಾತ್ರಿ ಪರಿಶಿಷ್ಟ ಜಾತಿ ಯುವಕನ ಮುಂಗೈ ಕತ್ತರಿಸಿ ಹಾಕಿದೆ. ದಲಿತರ ಕಾಲೊನಿಗೆ ನುಗ್ಗಿದ ಗುಂಪು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ವೈರಮುಡಿ ಅವರ ಪುತ್ರ ಅನೀಶ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ. ಅನೀಶ್ ಎಡಗೈ ತುಂಡಾಗಿದ್ದು ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆಯಲ್ಲಿ ತೀವ್ರವಾಗಿ …
Read More »ಬೈಲಹೊಂಗಲ: ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡಲು ಆಗ್ರಹ
ಬೈಲಹೊಂಗಲ: ನೂತನವಾಗಿ ಘೋಷಣೆ ಮಾಡಿರುವ ನದಾಫ-ಪಿಂಜಾರ ಹಾಗೂ ಇತರೆ 13 ಜಾತಿಗಳ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡುವಂತೆ ಒತ್ತಾಯಿಸಿ ನದಾಫ, ಪಿಂಜಾರ ಸಮಾಜ ತಾಲ್ಲೂಕು ಘಟಕದ ಸದಸ್ಯರು ಶಿರಸ್ಥೇದಾರ ರಾಘವೇಂದ್ರ ಪೂಜಾರ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು. ನದಾಫ-ಪಿಂಜಾರ ತಾಲ್ಲೂಕು ಘಟಕದ ಅಧ್ಯಕ್ಷ ಅಬ್ದುಲಕಲಾಮ ಆಜಾದ ನದಾಫ ಮಾತನಾಡಿ, ರಾಜ್ಯದಲ್ಲಿ 22ಲಕ್ಷಕ್ಕೂ ಅಧಿಕ ಸಂಖ್ಯೆ ಹೊಂದಿರುವ ಪಿಂಜಾರ,ನದಾಫ ಜನಾಂಗವು ಸಾಮಾಜಿಕ,ಔದ್ಯೋಗಿಕ, ಶೈಕ್ಷಣಿಕ,ರಾಜಕೀಯ ಕ್ಷೇತ್ರ ಸೇರಿದಂತೆ ಅತ್ಯಂತ ಶೋಷಣೆ ಯಿಂದ ನಲುಗುತ್ತಿದೆ. ಪ್ರವರ್ಗ-1 …
Read More »