Breaking News

ರಾಷ್ಟ್ರೀಯ

ಬೆಳಗಾವಿ | ಮನೆಗಳು ಜಲಾವೃತ: ಕಾಳಜಿ ಕೇಂದಲ್ಲಿ ಆಶ್ರಯ

ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮಘಟ್ಟ ಹಾಗೂ ಜಿಲ್ಲೆಯ ಜಲಾನಯನ ಪ್ರದೇಶಗಳಲ್ಲಿ ಶನಿವಾರ ಮಳೆ ಅಬ್ಬರ ತುಸು ತಗ್ಗಿದೆ. ಅಣೆಕಟ್ಟೆಗಳಿಂದ ನಿರಂತರ ನೀರು ಹರಿಸುತ್ತಿರುವ ಕಾರಣ, ಜಿಲ್ಲೆಯ 41 ಸೇತುವೆಗಳು ಇನ್ನೂ ನೀರಿನಲ್ಲಿ ಮುಳುಗಿವೆ. ಅಂದಾಜು 700ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ. ಹುಕ್ಕೇರಿ ತಾಲ್ಲೂಕಿನ ಹೆಬ್ಬಾಳ ಬಳಿ ರಾಷ್ಟ್ರೀಯ ಹೆದ್ದಾರಿ-48ರ ಮೇಲೆ ಅಪಾರ ಪ್ರಮಾಣ ನೀರು ಹರಿಯಿತು. ಇದರಿಂದ ಕೆಲ ಸಮಯ ಸಂಚಾರ ಬಂದ್ ಆಯಿತು. ಹೆದ್ದಾರಿ ಮೇಲೆಯೇ ಮಣ್ಣು-ಕಲ್ಲು ಸುರಿದು ಅದರ ಮೇಲೆ …

Read More »

ಕಾಗವಾಡ | ಪ್ರವಾಹ: ಐದು ಪ್ರಮುಖ ರಸ್ತೆಗಳು ಮುಳುಗಡೆ

ಕಾಗವಾಡ: ತಾಲ್ಲೂಕಿನ ಕೃಷ್ಣಾ ನದಿಯ ನೀರಿನ ಮಟ್ಟದಲ್ಲಿ ಹೆಚ್ಚಳವಾಗುತ್ತಿದ್ದು, ಪ್ರಮುಖ ಐದು ರಸ್ತೆಗಳ ಮೇಲೆ ನದಿಯ ನೀರು ಹರಿಯುತ್ತಿದ್ದರಿಂದ ಸಂಚಾರ ಬಂದ್‌ ಮಾಡಲಾಗಿದೆ. ತಾಲ್ಲೂಕಿನ ಅಥಣಿ-ಕಾತ್ರಾಳ, ಉಗಾರ ಬಿ.ಕೆ. ಕುಸುನಾಳ, ಉಗಾರ ಬಿ.ಕೆ- ಶಿರಗುಪ್ಪಿ,ಕಾತ್ರಾಳ-ಬಣಜವಾಡ, ಮೋಳವಾಡ-ಇಂಗಳಿ ರಸ್ತೆಗಳು ಜಲಾವೃತ ಆಗಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಕಾಗವಾಡ ಪಿಎಸ್‌ಐ ಎಂ.ಬಿ. ಬಿರಾದಾರ ಬ್ಯಾರಿಕೇಡ್ ಗಳನ್ನು ಅಳವಡಿಸಿ ಸಿಬ್ಬಂದಿ ನಿಯೋಜಿಸಿ ಸಂಚಾರ ಬಂದ್‌ ಮಾಡಿದ್ದಾರೆ. ತಾಲ್ಲೂಕಿನ ನದಿ ತೀರದ ಗ್ರಾಮಗಳಾದ ಕಾತ್ರಾಳ, ಐನಾಪುರ, …

Read More »

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ₹3,252 ಕೋಟಿ ನಿವ್ವಳ ಲಾಭ

ನವದೆಹಲಿ: 2024-25ನೇ ಆರ್ಥಿಕ ವರ್ಷದ ಜೂನ್‌ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ), ₹3,252 ಕೋಟಿ ನಿವ್ವಳ ಲಾಭ ಗಳಿಸಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಲಾಭದಲ್ಲಿ ಎರಡು ಪಟ್ಟು ಏರಿಕೆಯಾಗಿದೆ. 2023-24ನೇ ಆರ್ಥಿಕ ವರ್ಷದ ಜೂನ್ ತ್ರೈಮಾಸಿಕದಲ್ಲಿ ₹1,255 ಕೋಟಿ ಲಾಭಗಳಿಸಲಾಗಿತ್ತು. ವಸೂಲಾಗದ ಸಾಲದ ‍ಪ್ರಮಾಣದಲ್ಲಿ ಇಳಿಕೆಯಾಗಿದೆ. ಜೊತೆಗೆ, ಬಡ್ಡಿ ವರಮಾನದಲ್ಲಿ ಏರಿಕೆಯಾಗಿದೆ. ಹಾಗಾಗಿ, ಈ ತ್ರೈಮಾಸಿಕದಲ್ಲಿ ಲಾಭ ಹೆಚ್ಚಳವಾಗಿದೆ ಎಂದು ಬ್ಯಾಂಕ್‌, ಶನಿವಾರ ತಿಳಿಸಿದೆ. …

Read More »

ಮಾರುತಿ ಸುಜುಕಿಗೆ 779 ಕೋಟಿ ಐ.ಟಿ ಇಲಾಖೆ ನೋಟಿಸ್‌

ನವದೆಹಲಿ: 2019-20ನೇ ಮೌಲ್ಯಮಾಪನ ವರ್ಷಕ್ಕೆ ಸಂಬಂಧಿಸಿದಂತೆ ₹779 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿರುವ ದೇಶದ ಪ್ರಮುಖ ವಾಹನ ತಯಾರಿಕಾ ಕಂಪನಿ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ಗೆ, ಆದಾಯ ತೆರಿಗೆ ಇಲಾಖೆಯು ಷೋಕಾಸ್‌ ನೋಟಿಸ್‌ ನೀಡಿದೆ. ‘ಈ ಮೊತ್ತದಲ್ಲಿ ಬಡ್ಡಿಯೂ ಸೇರಿದೆ. ತೆರಿಗೆ ಪಾವತಿ ಬಾಕಿ ಸಂಬಂಧ ಕಂಪನಿ ವಿರುದ್ಧ ದಂಡಾರ್ಹ ಪ್ರಕ್ರಿಯೆ ಆರಂಭಿಸುವುದಕ್ಕೆ ಸಂಬಂಧಿಸಿದಂತೆ ಇಲಾಖೆಯಿಂದ ಈ ನೋಟಿಸ್‌ ನೀಡಲಾಗಿದೆ’ ಎಂದು ಕಂಪನಿಯು ಷೇರುಪೇಟೆಗೆ ತಿಳಿಸಿದೆ.  

Read More »

ಅಪಾಯ ಮಟ್ಟದಲ್ಲಿ ಹರಿಯುತ್ತಿರುವ ಕೃಷ್ಣಾ ನದಿ

ರಬಕವಿ-ಬನಹಟ್ಟಿ: ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಅಲ್ಲಿನ ವಿವಿಧ ಜಲಾಶಯಗಳಿಂದ ಭಾರಿ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಸಮೀಪದ ಕೃಷ್ಣಾ ನದಿಯಲ್ಲಿ ದಿನದಿಂದ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದು, ಶನಿವಾರ ಹಿಪ್ಪರಗಿ ಜಲಾಶಯಕ್ಕೆ 2,28,056 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವುರಿಂದ ಅವಳಿ ರಬಕವಿ-ಬನಹಟ್ಟಿ ನಗರಗಳಿಗೆ ನೀರು ಪೂರೈಸುವ ಜಾಕವೆಲ್‌ಗಳಿಗೆ ಹೋಗುವ ಮಾರ್ಗ ಬಂದಾಗಿದೆ. ಸದ್ಯ ಜಾಕವೆಲ್‌ಗಳು ಸಂಪೂರ್ಣವಾಗಿ ನಡುಗಡ್ಡೆಗಳಾಗಿವೆ. ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ …

Read More »

ವಸತಿ ಯೋಜನೆ ಫಲಾನುಭವಿಗಳಿಗೆ 1 ಲಕ್ಷ ರೂ.ನೆರವು ಘೋಷಣೆ

ವಸತಿ ಯೋಜನೆ ಫಲಾನುಭವಿಗಳಿಗೆ 1 ಲಕ್ಷ ರೂ.ನೆರವು ಘೋಷಣೆ   ಬೆಂಗಳೂರು : ವಸತಿ ರಹಿತರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಒಂದು ಲಕ್ಷ ಮನೆ ಯೋಜನೆ ಅಡಿ ಆಯ್ಕೆಯಾದ ಕುಟುಂಬಗಳು ಕಟ್ಟಬೇಕಿದ್ದ 1 ಲಕ್ಷ ವಂತಿಗೆಯನ್ನು ಸರ್ಕಾರವೇ ಭರಿಸಲಿದೆ ಎಂದು ಸಚಿವ ಜಮೀರ್‌ ಅಹ್ಮದ್‌ ಖಾನ್‌ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಸಚಿವರು, ಮುಖ್ಯಮಂತ್ರಿಯವರ ಒಂದು ಲಕ್ಷ ಮನೆ ಯೋಜನೆ ಅಡಿ ಆಯ್ಕೆಯಾದ 12,153 ಕುಟುಂಬಗಳು ಕಟ್ಟಬೇಕಿದ್ದ …

Read More »

ಭಾರತದಲ್ಲಿ ಎಲ್ಲಾ ಮಾದರಿಗಳ ‘ಐಫೋನ್’ ಬೆಲೆ ಇಳಿಕೆ

ನವದೆಹಲಿ : ಐಫೋನ್ ಖರೀದಿದಾರರಿಗೆ ಆಪಲ್ ಸಿಹಿ ಸುದ್ದಿ ನೀಡಿದೆ. ಭಾರತದಲ್ಲಿ ತನ್ನ ಐಫೋನ್ ಶ್ರೇಣಿಯ ಬೆಲೆಗಳನ್ನ ಕಡಿತಗೊಳಿಸಿದೆ. ಭಾರತದ ಇತ್ತೀಚಿನ ಬಜೆಟ್ ಘೋಷಣೆಯ ಹಿನ್ನೆಲೆಯಲ್ಲಿ ಬೆಲೆ ಕಡಿತ ಬಂದಿದೆ. ಆಮದು ಮಾಡಿಕೊಳ್ಳುವ ಮೊಬೈಲ್ ಫೋನ್ಗಳು ಮತ್ತು ಬಿಡಿಭಾಗಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನ (BCD) 20% ರಿಂದ 15%ಕ್ಕೆ ಇಳಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಕೇಂದ್ರ ಬಜೆಟ್ ಭಾಷಣದಲ್ಲಿ ಘೋಷಿಸಿದರು. ಗಮನಾರ್ಹವಾಗಿ, ಆಪಲ್ ಭಾರತೀಯ …

Read More »

ಚಪ್ಪಲಿ ಹೊಲಿಯುವ ಚಮ್ಮಾರನ ಅಂಗಡಿಗೆ ರಾಹುಲ್ ಗಾಂಧಿ ಭೇಟಿ

ಸುಲ್ತಾನಪುರ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಉತ್ತರ ಪ್ರದೇಶದಲ್ಲಿ ಇಂದು ಚಪ್ಪಲಿ ಹೊಲಿಯುವ ಚಮ್ಮಾರನ ಅಂಗಡಿಗೆ ದಿಢೀರ್ ಭೇಟಿ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ತಮ್ಮ ವಿರುದ್ಧ ದಾಖಲಾಗಿರುವ ಮಾನನಷ್ಟ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿರುವ ಸಂಸದರು ಮತ್ತು ಶಾಸಕರ ನ್ಯಾಯಾಲಯಕ್ಕೆ ರಾಹುಲ್ ಗಾಂಧಿ ಇಂದು ಹಾಜರಾದರು. ಅಲ್ಲಿಂದ ಲಖನೌಗೆ ಹಿಂತಿರುಗುವ ವೇಳೆ ವಿಧಾಯಕ ನಗರದಲ್ಲಿ ಚಮ್ಮಾರನ ಅಂಗಡಿಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಕಾಂಗ್ರೆಸ್ …

Read More »

ಉಕ್ಕಿ ಹರಿಯುತ್ತಿದೆ ವೇದಗಂಗಾ ನದಿ

ನಿಪ್ಪಾಣಿ: ವೇದಗಂಗಾ ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ಹುನ್ನರಗಿ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನವೇ ಪ್ರವಾಹದ ಪರಿಸ್ಥಿತಿ ಎದುರಾಗಿದ್ದು, ಗ್ರಾಮಸ್ಥರು ಸುರಕ್ಷಿತ ಸ್ಥಳಕ್ಕೆ ತೆರಳುತ್ತಿದ್ದಾರೆ. ಸಂಜೆಯವರೆಗೆ ಸುಮಾರು 40ಕ್ಕೂ ಅಧಿಕ ಕುಂಟುಂಬಗಳು ಜಾನುವಾರುಗಳ ಸಮೇತ ಸ್ಥಳಾಂತರಣೆ ಮಾಡಿದ್ದು 50ಕ್ಕೂ ಅಧಿಕ ಕುಟುಂಬಗಳಿಗೆ ಸ್ಥಳಾಂತರಗೊಳ್ಳಲು ಸೂಚಿಸಲಾಗಿದೆ. ಹುನ್ನರಗಿ ಗ್ರಾಮದ 41 ಕುಟುಂಬಗಳಲ್ಲಿಯ ಒಟ್ಟು 89 ಜನರಿಗೆ ಸ್ಥಳಾಂತರಿಸಲಾಗಿದೆ. ಇವರಲ್ಲಿ 26 ಕುಟುಂಬಗಳು ಗ್ರಾಮದ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಸ್ಥಾಪಿಸಿದ ಗಂಜಿ ಕೇಂದ್ರದಲ್ಲಿ …

Read More »

ಕಚೇರಿ ಒಳಗಡೆ ಕೊಡೆ ಹಿಡಿದು ಕೆಲಸ ಮಾಡುವ ಸಿಬ್ಬಂದಿ;

ಹಾವೇರಿ: ನಿರಂತರ ಮಳೆಯಿಂದಾಗಿ ಇಲ್ಲಿನ ತಹಸೀಲ್ದಾರ್ ಕಚೇರಿ ಮಾಳಿಗೆ ಸೋರುತ್ತಿದ್ದು, ಇದರಿಂದ ರಕ್ಷಿಸಿಕೊಳ್ಳಲು ಇಲ್ಲಿನ ಸಿಬ್ಬಂದಿ ಶುಕ್ರವಾರ ಛತ್ರಿ ಹಿಡಿದುಕೊಂಡೇ ಕೆಲಸ ಮಾಡಬೇಕಾದ ದುಸ್ಥಿತಿ ಎದುರಾಗಿತ್ತು. ಹೌದು…ಎರಡು ವಾರಗಳಿಂದ ಸುರಿಯುತ್ತಿರುವ ಮಳೆಗೆ ಕಟ್ಟಡದ ನೆಲ ಮಹಡಿವರೆಗೂ ಸೋರಿಕೆ ಉಂಟಾಗಿದೆ. ಇದರಿಂದ ರಕ್ಷಿಸಿಕೊಳ್ಳಲು ಇಲ್ಲಿನ ಸಿಬ್ಬಂದಿ ಛತ್ರಿ ಹಿಡಿದುಕೊಂಡು ಹರಸಾಹಸ ಮಾಡುವಂತಾಗಿದೆ. ಮಹತ್ವದ ದಾಖಲೆಗಳು, ಕಂಪ್ಯೂಟರ್ ರಕ್ಷಿಸಿಕೊಳ್ಳುವುದೇ ಇಲ್ಲಿನ ಸಿಬ್ಬಂದಿಗೆ ದೊಡ್ಡ ಸವಾಲಾಗಿದೆ. ಮಳೆ ನೀರು ಸೋರಿಕೆಯಿಂದ ಆದಾಯ, ಜಾತಿ, ಆಸ್ತಿ ಪತ್ರಗಳು …

Read More »