ಬೆಳಗಾವಿ: ಸರಕಾರ ಪ್ರವಾಹ ಸಂತ್ರಸ್ತರ ಜೊತೆಗಿದೆ. ಅವರಿಗೆ ಎಲ್ಲ ರೀತಿಯಲ್ಲೂ ನೆರವು ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭರವಸೆ ನೀಡಿದರು. ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಸುಳಗಾ (ಯು), ಅತವಾಡ, ಬಸುರ್ತೆ, ಬೆಕ್ಕಿನಕೇರಿ, ಬೆಳಗುಂದಿ, ಸೋನೋಲಿ, ಕೊನೆವಾಡಿ, ರಾಕಸಕೊಪ್ಪ, ಯಳೆಬೈಲ್, ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಮಳೆಯಿಂದ ಹಾನಿಗೊಳಗಾದ ಮನೆಗಳ ವೀಕ್ಷಣೆ ಮಾಡಿದರು. ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಸಾಕಷ್ಟು …
Read More »2 ವರ್ಷ ಕಳೆದರೂ ಪ್ರಾರಂಭಗೊಳದ ರಸ್ತೆ ಕಾಮಗಾರಿ
ರಾಯಬಾಗ: ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲ್ಲಿಲ್ಲ ಎಂಬಂತೆ ಜಿ.ಎಲ್.ಬಿ.ಸಿ. ಅನುದಾನದಲ್ಲಿ 1.60 ಕೋಟಿ ರೂ. ವೆಚ್ಚದಲ್ಲಿ 33 ಚಿಕ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಆಗಿದ್ದು, ಗುತ್ತಿದಾರ ಸಹ ಕೆಲಸ ಪ್ರಾರಂಭಿಸಿದ್ದಾರೆ. ಆದರೆ ಕೆಲ ರೈತರು ಇದಕ್ಕೆ ತಕರಾರು ಮಾಡಿದ್ದರಿಂದ, ಸರ್ವೆ ಮಾಡಿ ನಿಮ್ಮ ರಸ್ತೆ ಎಲ್ಲಿ ಬರುತ್ತದೆ ಅಲ್ಲಿ ತೆಗೆದುಕೊಳ್ಳಿ ಎಂದಿದ್ದಾರೆ. ಅದರಂತೆ ಸರ್ವೆ ಇಲಾಖೆಯ ಅಧಿಕಾರಿಗಳಿಗೆ ಹಾಗೂ ತಾಲೂಕು ದಂಡಾಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿಕೊಂಡರೂ …
Read More »ಕೃಷ್ಣಾ ನದಿಯಲ್ಲಿ ವ್ಯಕ್ತಿ ಶವ ಪತ್ತೆ
ಕೃಷ್ಣಾ ನದಿಯಲ್ಲಿ ವ್ಯಕ್ತಿ ಶವ ಪತ್ತೆ ಬೆಳಗಾವಿ: ತಾಲ್ಲೂಕಿನ ಬಾವನ ಸವದತ್ತಿ ಗ್ರಾಮದ ಬಾಬುರಾವ್ ಸಂಜೀವ ಬಾಪಕರ (40) ಎಂಬ ವ್ಯಕ್ತಿ ಶವ, ಚಿಕ್ಕೋಡಿ ತಾಲ್ಲೂಕಿನ ಅಂಕಲಿ ಗ್ರಾಮದ ಬಳಿ ಕೃಷ್ಣಾ ನದಿಯಲ್ಲಿ ಶನಿವಾರ ಪತ್ತೆಯಾಗಿದೆ. ಬಾಬುರಾವ್ ಅವರು ಕಾಗವಾಡ ಸಕ್ಕರೆ ಕಾರ್ಖಾನೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಗುರುವಾರ ಬೆಳಿಗ್ಗೆ ಮನೆಯಿಂದ ಹೋದವರು ಮತ್ತೆ ಬಂದಿರಲಿಲ್ಲ. ಅಂಕಲಿ ಸೇತುವೆ ಬಳಿ ಅವರ ಶವ ಪತ್ತೆಯಾಗಿದೆ. ಸಾವಿಗೆ ನಿಖರ …
Read More »ತಪ್ಪು ಕಲ್ಪನೆ ಬಿಟ್ಟು ಅಂಗಾಂಗ ದಾನ ಮಾಡಿ: ಸಚಿವ ದಿನೇಶ್ ಗುಂಡೂರಾವ್
ಬೆಳಗಾವಿ: ‘ಯಾವ ಧರ್ಮವೂ ಅಂಗಾಂಗ ದಾನ ನಿಷೇಧಿಸಿಲ್ಲ. ಈ ಪದ್ಧತಿ ಅನುಸರಿಸಿದರೆ ಬದುಕಿನಲ್ಲಿ ಮೋಕ್ಷ ಸಿಗದು, ನಿಧನದ ನಂತರ ಸ್ವರ್ಗಕ್ಕೆ ಹೋಗಲಾಗದು ಎಂಬೆಲ್ಲ ತಪ್ಪು ಕಲ್ಪನೆ ಜನರಲ್ಲಿವೆ. ಇದರಿಂದ ಎಲ್ಲರೂ ಹೊರಬಂದು ಅಂಗಾಂಗ ದಾನಕ್ಕೆ ಮುಂದಾಗಬೇಕು’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಇಲ್ಲಿನ ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ ಆಯಂಡ್ ರಿಸರ್ಚ್‌ನ (ಕಾಹೇರ್) ಡಾ.ಬಿ.ಎಸ್.ಜೀರಗೆ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ …
Read More »ಆದಾಯಕ್ಕಿಂತ ಅಧಿಕ ಆಸ್ತಿ: ಯಾದಗಿರಿ ಡಿಎಚ್‌ಒ ಅಮಾನತು
ಯಾದಗಿರಿ: ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಆರೋಪದಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಪ್ರಭುಲಿಂಗ ಮಾನಕರ್ ಅವರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಡಳಿತಾಧಿಕಾರಿ ಅಮಾನತು ಮಾಡಿ ಆದೇಶಿಸಿದ್ದಾರೆ. ಪ್ರಭುಲಿಂಗ ಅವರು ₹1.40 ಕೋಟಿ ಮೌಲ್ಯದ ಅಕ್ರಮ ಆಸ್ತಿ ಹೊಂದಿರುವುದನ್ನು ಲೋಕಾಯುಕ್ತ ಪೊಲೀಸ್ ಪತ್ತೆ ಹಚ್ಚಿದ್ದರು. ಹೀಗಾಗಿ ನಿಷ್ಪಕ್ಷಪಾತ ತನಿಖೆಗಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ. ಕಲಬುರಗಿ ಜಿಲ್ಲೆಯ ಅಳಂದ ಸಾರ್ವಜನಿಕ ಆಸ್ಪತ್ರೆಗೆ ಲೀನ್ ವರ್ಗಾವಣೆ …
Read More »ವಯನಾಡ್ ಭೂಕುಸಿತ: ಕೊಡಗು ಜಿಲ್ಲೆಯ ಯುವತಿ ಮೃತದೇಹ ಪತ್ತೆ
ಸಿದ್ದಾಪುರ: ವಯನಾಡು ಭೂಕುಸಿತ ದುರಂತದಲ್ಲಿ ನಾಪಯ್ತೆಯಾಗಿದ್ದ ಕೊಡಗಿನ ನೆಲ್ಯಹುದಿಕೇರಿ ಮೂಲದ ಯುವತಿ ಹಾಗೂ ಕುಟುಂಬದ ಮೃತದೇಹ ಶುಕ್ರವಾರ ಪತ್ತೆಯಾಗಿದೆ. ಕುಶಾಲನಗರ ತಾಲ್ಲೂಕಿನ ನೆಲ್ಯಹುದಿಕೇರಿಯ ನಲ್ವತ್ತೇಕರೆ ನಿವಾಸಿ ಪೊನ್ನಮ್ಮ ಎಂಬವರ ಮಗಳು ದಿವ್ಯಾ (35) ಚೂರಲ್ ಮಲ ಗೆ ವಿವಾಹವಾಗಿದ್ದರು. ಭೂಕುಸಿತದಲ್ಲಿ ದಿವ್ಯಾ ಸೇರಿದಂತೆ ಕುಟುಂಬದ 9 ಮಂದಿ ನಾಪತ್ತೆಯಾಗಿದ್ದರು. ಮಗಳು ಹಾಗೂ ಕುಟುಂಬಸ್ಥರನ್ನು ಹುಡುಕಿಕೊಡುವಂತೆ ಪೊನ್ನಮ್ಮ ಮನವಿ ಮಾಡಿದ್ದರು. ಶುಕ್ರವಾರ ಸಂಜೆ ಕುಟುಂಬದ 9 ಮಂದಿಯ ಪೈಕಿ 8 ಮಂದಿಯ …
Read More »ಪಾದಯಾತ್ರೆ ಯಾವ ಪುರುಷಾರ್ಥಕ್ಕೆ?: ಎಚ್ಕೆಪಿ
ಬಾಗಲಕೋಟೆ: ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಪಾದಯಾತ್ರೆ ನಡೆಸುತ್ತಿರುವುದು ಯಾವ ಪುರುಷಾರ್ಥಕ್ಕೆ ಎಂದು ಪ್ರವಾಸೋದ್ಯಮ ಹಾಗೂ ಕಾನೂನು ಸಚಿವ ಎಚ್.ಕೆ. ಪಾಟೀಲ ಪ್ರಶ್ನಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಕುಟುಂಬದ ಮೇಲೆ ಆಪಾದನೆ ಬಂದಾಗ ಇದೇ ಮೊದಲ ಬಾರಿಗೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾ ತಂಡ ರಚಿಸಿದ್ದು ಸಿಎಂ ಸಿದ್ದರಾಮಯ್ಯ. ಹಿಂದೆ ದೇವೇಗೌಡರು, ಯಡಿಯೂರಪ್ಪ, ಜಗದೀಶ್ ಶೆಟ್ಟರ್ ವಿರುದ್ಧ ಆಪಾದನೆ ಬಂದಾಗ ತಮ್ಮ ಕುಟುಂಬದ ವಿರುದ್ಧವೇ ತನಿಖಾ ತಂಡ ರಚಿಸಿರಲಿಲ್ಲ ಎಂದರು.
Read More »ಕ್ಲಾಸ್ ತಪ್ಪಿಸಲು ಇಮೇಲ್ ಮೂಲಕ ಶಾಲೆಗೆ ಬಾಂಬ್ ಬೆದರಿಕೆ: 14 ವರ್ಷದ ಬಾಲಕನ ಬಂಧನ
ನವದೆಹಲಿ: ತರಗತಿಗೆ ಹೋಗುವುದರಿಂದ ತಪ್ಪಿಸಿಕೊಳ್ಳಲು ತನ್ನ ಶಾಲೆಗೆ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ 14 ವರ್ಷದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.ದಕ್ಷಿಣ ದೆಹಲಿಯ ಗ್ರೇಟರ್ ಕೈಲಾಶ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಶುಕ್ರವಾರ ಮಧ್ಯರಾತ್ರಿ 12.30ರ ಸುಮಾರಿಗೆ ಬಾಂಬ್ ಬೆದರಿಕೆ ಇಮೇಲ್ ಬಂದಿದ್ದರಿಂದ ಖಾಸಗಿ ಶಾಲೆಯಲ್ಲಿ ಆತಂಕ ಮನೆ ಮಾಡಿತ್ತು. ಕೂಡಲೇ ಪೊಲೀಸರನ್ನು ಕರೆಸಿ ಬಾಂಬ್ ಮತ್ತು ಶ್ವಾನ ದಳದಿಂದ ತಪಾಸಣೆ ನಡೆಸಲಾಯಿತು. ದಕ್ಷಿಣ ದೆಹಲಿಯ ಇನ್ನೂ ಎರಡು ಖಾಸಗಿ ಶಾಲೆಗಳಲ್ಲಿ ಬಾಂಬ್ …
Read More »ವೃಕ್ಷದಲ್ಲಿ ಸಾಕಷ್ಟು ರಂಬೆ-ಕೊಂಬೆಗಳಿವೆ : ವಚನಾನಂದ ಸ್ವಾಮೀಜಿ
ದಾವಣಗೆರೆ: ವೀರಶೈವ – ಲಿಂಗಾಯತರು ಹಿಂದುಗಳು ಎನ್ನುವುದು ಚರ್ಚೆ ಮಾಡುವ ವಿಚಾರ. ನಾವು ಎಲ್ಲಿ ಇದ್ದೇವೆ? ನಾವು ಯಾವ ರಾಷ್ಟ್ರದಲ್ಲಿ ಇದ್ದೇವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ನಾವು ಈ ರಾಷ್ಟ್ರವನ್ನು ಯಾವ ರೀತಿ ಬೆಳೆಸಬೇಕು ಎಂದು ಯೋಚಿಸಬೇಕು ಎಂದು ಹರಿಹರ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಹಿಂದೂ ಎನ್ನುವುದು ಅತ್ಯಂತ ಶ್ರೇಷ್ಠ ವಾದ ಸತ್ಯ ಸನಾತನವಾದದ್ದು ಹಿಂದುತ್ವದ ವೃಕ್ಷದಲ್ಲಿ ಸಾಕಷ್ಟು ರಂಬೆ-ಕೊಂಬೆಗಳಿವೆ. ಅಲ್ಲಿ ಅಲ್ಲಮಪ್ರಭು ಬಸವಾದಿ ಶರಣರು, ಗೌತಮ …
Read More »ರಸ್ತೆ ನಿರ್ಮಾಣಕ್ಕೆ ಗುಡ್ಡಗಳ 90 ಡಿಗ್ರಿಯಲ್ಲಿ ಸೀಳಿದ್ದರಿಂದ ಭೂ ಕುಸಿತ”
ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿನಲ್ಲಿ ಪದೇ ಪದೇ ಭೂ ಕುಸಿತ ಹಿನ್ನೆಲೆ ಗುಡ್ಡ ಕುಸಿತ ಪ್ರದೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ಶಿರಾಡಿ ಘಾಟಿಯ ಹಲವೆಡೆ ಗುಡ್ಡ ಕುಸಿತ ಪ್ರದೇಶಗಳ ಪರಿಶೀಲಿಸಿದ ಸಿಎಂ ಸಿದ್ದರಾಮಯ್ಯ, ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಪಡೆದು ಬಳಿಕ ದೊಡ್ಡತಪ್ಲುವಿನಲ್ಲಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ 75ರ ಮೇಲ್ಭಾಗದಲ್ಲಿ ಮಣ್ಣು ಸಡಿಲವಾಗಿದೆ. ಹೀಗಾಗಿ ಪದೇ ಪದೇ ಕುಸಿಯುತ್ತಿದೆ. ರಸ್ತೆ ನಿರ್ಮಾಣಕ್ಕಾಗಿ …
Read More »