Breaking News

ರಾಷ್ಟ್ರೀಯ

ಬೀದರ್:ಲಾಕ್‍ಡೌನ್ ಉಲ್ಲಂಘನೆ – 4 ಪ್ರಕರಣ ದಾಖಲು, 213 ವಾಹನಗಳು ಸೀಜ್

ಬೀದರ್: ಭಾರತದಲ್ಲಿ ಕೊರೊನಾ ವೈರಸ್ ಸೋಂಕು ತಡೆಯಲು 21 ದಿನಗಳ ಕಾಲ ಲಾಕ್‍ಡೌನ್ ಆಗಿದೆ. ಇದೀಗ ಲಾಕ್‍ಡೌನ್ ನಿಯಮವನ್ನು ಉಲ್ಲಂಘಿಸಿ ಮನೆಯಿಂದ ಹೊರಗೆ ಬಂದು ಓಡಾಡುತ್ತಿದ್ದವರ ಸುಮಾರು 213 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೊರೊನಾ ವೈರಸ್ ಸೋಂಕು ಇತರರಿಗೆ ಹರಡದಂತೆ ತಡೆಯಲು ಹೋಮ್‍ ಕ್ವಾರಂಟೈನ್‍ನಲ್ಲಿ ಇರಬೇಕು ಎಂದು ಆದೇಶ ಹೊರಡಿಸಲಾಗಿದೆ. ಆದರೆ ಕಲಂ 144 ಸಿಆರ್‌ಪಿಸಿ ಆದೇಶವನ್ನು ಉಲ್ಲಂಘಿಸಿದವರ ವಿರುದ್ಧ ಜಿಲ್ಲೆಯಲ್ಲಿ 4 ಪ್ರಕರಣಗಳು ದಾಖಲಾಗಿವೆ. ಕೊರೊನಾ ವೈರಸ್ ಹರಡದಂತೆ …

Read More »

ಬಳ್ಳಾರಿ:ಕುಡುಕರು ಅಬಕಾರಿ ಇಲಾಖೆ ಕಚೇರಿಯಲ್ಲಿ ಇಟ್ಟಿದ್ದ ಮದ್ಯವನ್ನು ಕದ್ದು ಪರಾರಿ

  ಬಳ್ಳಾರಿ: ದೇಶಾದ್ಯಂತ ಸಂಪೂರ್ಣ ಲಾಕ್‍ಡೌನ್ ಆದ ಹಿನ್ನೆಲೆಯಲ್ಲಿ ಎಲ್ಲಿಯೂ ಮದ್ಯ ಸಿಗುತ್ತಿಲ್ಲ. ಹೀಗಾಗಿ ಕೆಲ ಕುಡುಕರು ಅಬಕಾರಿ ಇಲಾಖೆ ಕಚೇರಿಯಲ್ಲಿ ಇಟ್ಟಿದ್ದ ಮದ್ಯವನ್ನು ಕದ್ದು ಪರಾರಿಯಾದ ಘಟನೆ ಜಿಲ್ಲೆಯ ಸಿರಗುಪ್ಪ ನಗರದಲ್ಲಿ ನಡೆದಿದೆ. ಸಿರುಗುಪ್ಪ ನಗರದ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮದ್ಯವನ್ನು ಅಬಕಾರಿ ಇಲಾಖೆ ವಶಕ್ಕೆ ಪಡೆದು ಕಚೇರಿಯಲ್ಲಿ ಇಟ್ಟಿದ್ದರು. ಇತ್ತ ಕಳೆದೊಂದು ವಾರದಿಂದ ರಾಜ್ಯದಲ್ಲಿ ಎಲ್ಲಿಯೂ ಮದ್ಯದ ಸಿಗುತ್ತಿಲ್ಲ. ಹೀಗಾಗಿ ಕಳ್ಳರು ಅಬಕಾರಿ ಕಚೇರಿಯಲ್ಲಿದ್ದ ಮದ್ಯದ …

Read More »

ಮನಕಲುಕುತ್ತೆ ಮಂಗಳೂರಿನ ಹಸುಗೂಸಿನ ಕಥೆ”……10 ತಿಂಗಳ ಮಗುವಿಗೆ ಕೊರೊನಾ ಚಿಕಿತ್ಸೆ

ಮಂಗಳೂರು: 10 ತಿಂಗಳ ಮಗುವಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಂದನಿಗಾಗಿ ಅಮ್ಮನ ತ್ಯಾಗದ ಕಥೆ ಮನಕಲಕುತ್ತದೆ. ಮಗುವಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದ್ದರೂ, ಕಂದಮ್ಮನಿಗೆ ಎದೆ ಹಾಲು ನೀಡುವುದನ್ನ ತಾಯಿ ನಿಲ್ಲಿಸಿಲ್ಲ. ಕೇರಳಕ್ಕೆ ಹೋದಾಗ ಮಗುವಿಗೆ ಕೊರೊನಾ ಸೋಂಕು ತಗುಲಿತ್ತು. ಐಸೋಲೇಷನ್ ವಾರ್ಡ್ ನಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಮ್ಮನ ಎದೆ ಹಾಲು ಕುಡಿದ್ರೆ ಮಾತ್ರ ಮಗುವಿನ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಮಗುವಿಗೆ ಕೊರೊನಾ ಸೋಂಕು ತಗುಲಿದ್ದರೂ ತಾಯಿ …

Read More »

ತಾವು ಬೆಳೆದ ಫಸಲನ್ನು ನಾಶಪಡಿಸಬೇಡಿ : ರೈತರಲ್ಲಿ ಬಿ‌.ಸಿ.ಪಾಟೀಲ್ ಮನವಿ

ಬೆಂಗಳೂರು,ಏ 1-ರೈತರು ತಾವು ಬೆಳೆದ ಫಸಲನ್ನು ರಸ್ತೆಗೆ ಚೆಲ್ಲುವುದಾಗಲೀ, ನಾಶ ಮಾಡುವುದಾಗಲೀ ಮಾಡಬಾರದು. ಕೊರೋನಾ ರೋಗ ಜಗತ್ತಿಗೆ ಎದುರಾದ ಸಮಸ್ಯೆ. ಇದನ್ನು ಯಾರೂ ನಿರೀಕ್ಷಿಸಿರಲಿಲ್ಲ.ಹೀಗಾಗಿ ರೈತರು ಆತುರಕ್ಕೊಳಗಾಗದೇ ತಾಳ್ಮೆಯಿಂದ ಕೃಷಿ ಇಲಾಖೆ ನೀಡುವ ಸಲಹೆಗಳನ್ನು ಅನುಸರಿಸಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ರೈತರಿಗೆ ಮನವಿ ಮಾಡಿದ್ದಾರೆ. ರಾಯಚೂರು ಸೇರಿದಂತೆ ಬೇರೆ ಯಾವುದೇ ಭಾಗದಲ್ಲಿ ರೈತರ ಬೆಳೆ ಸಮೀಕ್ಷೆಯಾಗದೇ ಇದ್ದದ್ದು ಕಂಡುಬಂದಲ್ಲಿ ತಕ್ಷಣವೇ ಸಮೀಕ್ಷೆ ಕೈಗೊಳ್ಳಬೇಕು ಎಂದು ಕೃಷಿ ಅಧಿಕಾರಿಗಳಿಗೆ ಕೃಷಿ …

Read More »

ಲಾಕ್ ಡೌನ್ ನಿಯಮ ಮೀರಿ ರಸ್ತೆಗಿಳಿದ ಜನರ ಮೇಲೆ ವಿನಾಕಾರಣ ಲಾಠಿ ಚಾರ್ಜ್ ಮಾಡಬೇಡಿ: ಸಂತೋಷ ಜಾರಕಿಹೊಳಿ

ಲಾಕ್ ಡೌನ್ ನಿಯಮ ಮೀರಿ ರಸ್ತೆಗಿಳಿದ ಜನರ ಮೇಲೆ ವಿನಾಕಾರಣ ಲಾಠಿ ಚಾರ್ಜ್ ಮಾಡಬೇಡಿ: ಸಂತೋಷ ಜಾರಕಿಹೊಳಿ  ಅಗತ್ಯ ವಸ್ತುಗಳನ್ನು ತರಲು ಹೋದವರ ಮೇಲೆ ಲಾಠಿ ಚಾರ್ಜ್ ಮಾಡಬೇಡಿ/ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿದರೆ ಮಹಾಮಾರಿ ಕೊರೊನಾ ವೈರಸ್ ರೋಗವನ್ನು ನಿಯಂತ್ರಿಸಲು ಸಾಧ್ಯ/ಪೋಲಿಸರಿಗೆ ಹಾಗೂ ಸಾರ್ವಜನಿಕರಿಗೆ ಮನವಿ ಮಾಡಿದ ಸಂತೋಷ ಜಾರಕಿಹೊಳಿ ಸರ್ಕಾರ ದಿಢೀರನೆ ಲಾಕ್ ಡೌನ್ ನಿರ್ಧಾರ ಘೋಷಣೆ ಮಾಡಿರುವುದರಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ.ಮೊದಲ ಬಾರಿ ಇಂಥದೊಂದು ಬಿಕ್ಕಟ್ಟು ಎದುರಿಸುವ ಸಂಧರ್ಭ …

Read More »

ನಮಗೆ ಬಹಳ ತ್ರಾಸ ಆಗುತ್ತಿದೆ. ಒಂದೆರಡು ದಿನ ವೈನ್ ಶಾಪ್ ಚಾಲೂ ಮಾಡಿಸಿ:ಸಚಿವ ಜಗದೀಶ್ ಶೆಟ್ಟರಗೆ ಕರೆ ಮಾಡ್ತಿದಾರಂತೆ ಜನ

ಬೆಳಗಾವಿ: ‘ನಮಗೆ ಬಹಳ ತ್ರಾಸ ಆಗುತ್ತಿದೆ. ಒಂದೆರಡು ದಿನ ವೈನ್ ಶಾಪ್ ಚಾಲೂ ಮಾಡಿಸಿ ಎಂದು ಕೆಲವರು ನನಗೆ ಕರೆ ಮಾಡಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ತಿಳಿಸಿದರು. ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕೊರೊನಾ ವೈರಸ್ ಹತ್ತಿಕ್ಕಲು ದೇಶದಾದ್ಯಂತ ಏ.14ರವರೆಗ ಲಾಕ್ ಡೌನ್ ಘೋಷಿಸಿದೆ. ಈ ದಿನಗಳಲ್ಲಿ ಮಧ್ಯ ಕುಡಿಯದೆ ಇದ್ರೆ ಏನು ಆಗುವುದಿಲ್ಲ. ಆದರೆ ನನಗೆ ಕೆಲವರು ವೈನ್ ಶಾಪ್ ಗಳನ್ನು ಎರಡು ದಿನಗಳ …

Read More »

ಬೆಂಗ್ಳೂರಿನಿಂದ ಬಂದ ವ್ಯಕ್ತಿ ಏಕಾಏಕಿ ಸಾವು- ಭಯಭೀತರಾಗಿರುವ ಗ್ರಾಮಸ್ಥರು

ರಾಯಚೂರು: ಬೆಂಗಳೂರಿನಿಂದ ಬಂದ ವ್ಯಕ್ತಿ ಏಕಾಏಕಿ ಸಾವನ್ನಪ್ಪಿದ ಹಿನ್ನೆಲೆ ಮೃತ ವ್ಯಕ್ತಿಯ ಮನೆ ಹತ್ತಿರ ಸುಳಿಯಲು ಗ್ರಾಮಸ್ಥರು ಹಾಗೂ ಸಂಬಂಧಿಕರು ಹೆದರಿಕೊಂಡಿರುವ ಘಟನೆ ಲಿಂಗಸೂಗೂರು ತಾಲೂಕಿನ ರೋಡಲಬಂಡಾ ಗ್ರಾಮದಲ್ಲಿ ನಡೆದಿದೆ. ಮಲ್ಲಪ್ಪ ತಳವಾರ (54) ಇಂದು ಮಧ್ಯಾಹ್ನ ಬೆಂಗಳೂರಿನಿಂದ ದೇವದುರ್ಗದ ಸೋಮನಮರಡಿ ಗ್ರಾಮದಲ್ಲಿ ತನ್ನ ಮಗಳ ಮನೆಗೆ ಬಂದಿದ್ದರು. ಬಳಿಕ ತನ್ನ ಊರಾದ ಲಿಂಗಸುಗೂರಿನ ರೋಡಲಬಂಡಾಗೆ ಬಂದು ಎರಡು ಗಂಟೆಯಲ್ಲಿ ಸಾವನ್ನಪ್ಪಿದ್ದಾರೆ. ಇದರಿಂದ ವ್ಯಕ್ತಿ ಕೊರೊನಾ ವೈರಸ್‍ನಿಂದ ಸಾವನ್ನಪ್ಪಿದ್ದಾನೆಂದು ಭಾವಿಸಿರುವ …

Read More »

ಯಾವೆಲ್ಲ ಸಾಲಕ್ಕೆ ಬ್ಯಾಂಕ್‍ಗಳಿಂದ ವಿನಾಯಿತಿ? ಇಎಂಐ ಮೇಲೆ ಬಡ್ಡಿ ಇರುತ್ತಾ?

ನವದೆಹಲಿ: ಲಾಕ್‍ಡೌನ್ ಹಿನ್ನೆಲೆಯಲ್ಲಿ ಮೂರು ತಿಂಗಳ ಮಟ್ಟಿಗೆ ಸಾಲದ ಕಂತು ಪಾವತಿಸುವುದಿಂದ ವಿನಾಯಿತಿ ಘೋಷಿಸಿ ದೇಶದ ಸರ್ಕಾರಿ ಸ್ವಾಮ್ಯದ ಬ್ಯಾಂಕ್‍ಗಳು ಅಧಿಕೃತ ಘೋಷಣೆ ಮಾಡಿವೆ. ಎಸ್‍ಬಿಐ, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್, ಯುಕೋ ಬ್ಯಾಂಕ್ ಸೇರಿ 16 ಬ್ಯಾಂಕ್‍ಗಳು ಮೇ 31ರವರೆಗೆ ಸಾಲಗಳ ಮೇಲಿನ ತಿಂಗಳ ಕಂತು ಪಾವತಿಯಿಂದ ವಿನಾಯಿತಿ ಘೋಷಿಸಿವೆ. ಈ ಮೂಲಕ ಶುಕ್ರವಾರವಷ್ಟೇ ಆರ್‌ಬಿಐ ನೀಡಿದ್ದ ಆದೇಶಗಳನ್ನು ಜಾರಿಗೊಳಿಸಿವೆ. …

Read More »

ಮಾಸ್ಕ್ ಯಾರು ಧರಿಸಬೇಕು? ಎಲ್ಲರಿಗೂ ಕಡ್ಡಾಯವಲ್ಲ – ಆರೋಗ್ಯ ಇಲಾಖೆಯಿಂದ ಸ್ಪಷ್ಟನೆ

ಬೆಂಗಳೂರು: ಕೊರೊನಾ ಭೀತಿಯಿಂದಾಗಿ ಈಗ ರಸ್ತೆಗೆ ಇಳಿಯುವ ಮುನ್ನ ಮಾಸ್ಕ್ ಧರಿಸಿರಬೇಕೆಂಬ ಸುದ್ದಿ ಹರಿದಾಡುತ್ತಿದೆ. ಈ ಸುದ್ದಿಗೆ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದ್ದು, ಎಲ್ಲರೂ ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದು ಹೇಳಿದೆ. ಕೆಲವು ಸೂಪರ್ ಮಾರ್ಕೆಟ್‍ಗಳಲ್ಲಿ, ದಿನಸಿ ಅಂಗಡಿಗಳಲ್ಲಿ ಮಾಸ್ಕ್ ಧರಿಸದ ವ್ಯಕ್ತಿಗಳಿಗೆ ಪ್ರವೇಶ ನಿರಾಕರಿಸುತ್ತಿರುವ ಹಿನ್ನೆಲೆಯಲ್ಲಿಯಲ್ಲಿ ಆರೋಗ್ಯ ಇಲಾಖೆ ಆಯುಕ್ತರು ಸುತ್ತೋಲೆ ಬಿಡುಗಡೆ ಮಾಡಿ ಯಾರು ಧರಿಸಬೇಕು? ಯಾರು ಮಾಸ್ಕ್ ಧರಿಸಬಾರದು ವಿಚಾರಕ್ಕೆ ಸ್ಪಷ್ಟನೆ ನೀಡಿದ್ದಾರೆ. ಅಷ್ಟೇ ಅಲ್ಲದೇ …

Read More »

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50 ಲಕ್ಷ ದೇಣಿಗೆ ನೀಡಿದ್ದಾರೆ.

ರಾಜ್ಯದಲ್ಲಿ ಮಾರಣಾಂತಿಕ ಕೊರೊನಾ ವೈರಸ್ ಹೆಚ್ಚುತ್ತಿದ್ದು, ಕೊವಿಡ್-19 ಸೋಂಕಿನ ವಿರುದ್ಧ ಹೋರಾಡಲು ಹಲವರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಈ ನಡುವೆ ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50 ಲಕ್ಷ ದೇಣಿಗೆ ನೀಡಿದ್ದಾರೆ. ಇಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ನಟ ಪುನೀತ್ ರಾಜ್ ಕುಮಾರ್, ಮುಖ್ಯಮಂತ್ರಿಗಳಿಗೆ 50 ಲಕ್ಷ ಚೆಕ್ ಹಸ್ತಾಂತರಿಸಿದ್ದಾರೆ. ಈ ವೇಳೆ ಡಿಸಿಎಂ …

Read More »