Breaking News

ರಾಷ್ಟ್ರೀಯ

ದುಬಾರಿ ಮದ್ಯ ನಾಳೆಯಿಂದ ಅಗ್ಗ: ಯಾವ ಬ್ರ್ಯಾಂಡ್ ದರ ಎಷ್ಟು ಇಳಿಕೆ?

ದುಬಾರಿ ಮದ್ಯ ನಾಳೆಯಿಂದ ಅಗ್ಗ: ಯಾವ ಬ್ರ್ಯಾಂಡ್ ದರ ಎಷ್ಟು ಇಳಿಕೆ?   ಬೆಂಗಳೂರು: ದುಬಾರಿ ದರದ (ಪ್ರೀಮಿಯಂ) ಬ್ರ್ಯಾಂಡ್‌ಗಳ ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಇಳಿಕೆ ಮಾಡಿ ಅಬಕಾರಿ ಇಲಾಖೆ ಆದೇಶ ಹೊರಡಿಸಿದೆ. ಮಂಗಳವಾರದಿಂದಲೇ ಪ್ರೀಮಿಯಂ ಬ್ರ್ಯಾಂಡ್‌ಗಳ ಮದ್ಯದ ದರದಲ್ಲಿ ಶೇಕಡ 15ರಿಂದ ಶೇ 20ರಷ್ಟು ಇಳಿಕೆಯಾಗಲಿದೆ.   ದುಬಾರಿ ಬೆಲೆಯ ಮದ್ಯದ ದರಗಳನ್ನು ನೆರೆಯ ರಾಜ್ಯಗಳಿಗೆ ಸರಿಸಮನಾಗಿ ಪರಿಷ್ಕರಣೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024-25ರ …

Read More »

ಹೆಸರುಕಾಳು ದರ ₹4,000ಕ್ಕೆ ಕುಸಿತ, ಚಿಂತೆಗೀಡಾದ ಜಿಲ್ಲೆಯ ಅನ್ನದಾತ

ಬೆಳಗಾವಿ: ಜಿಲ್ಲೆಯಲ್ಲಿ ಈ ಬಾರಿ 40 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು ಬೆಳೆಯಲಾಗಿದೆ. ಶೇ 80ರಷ್ಟು ರೈತರು ಈಗಾಗಲೇ ರಾಶಿ ಮಾಡಿದ್ದಾರೆ. ಲಕ್ಷಾಂತರ ಕ್ವಿಂಟಲ್‌ ಹೆಸರುಕಾಳು ಸಿದ್ಧಗೊಂಡಿದೆ. ಆದರೆ, ದರ ಕುಸಿತ ರೈತರನ್ನು ಚಿಂತೆಗೀಡು ಮಾಡಿದೆ. ಜಿಲ್ಲಾಡಳಿತ ಯಾವಾಗ ಖರೀದಿ ಕೇಂದ್ರ ತೆರೆಯುವುದೋ ಎಂದು ರೈತರು ಕಾದು ಕುಳಿತಿದ್ದಾರೆ.   ಪೂರ್ವ ಮುಂಗಾರು ಹಾಗೂ ಮುಂಗಾರು ಮಳೆ ತುಂಬ ಹದವಾಗಿ ಬಿದ್ದಿದೆ. ಪರಿಣಾಮ ಪ್ರತಿ ವರ್ಷಕ್ಕಿಂತ ಈಗ ಹೆಸರು ಬೆಳೆ ಅತ್ಯಂತ …

Read More »

ಲೋಕಾ ದಾಳಿಗೊಳಗಾದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗೆ ಭಡ್ತಿ?

ಲೋಕಾ ದಾಳಿಗೊಳಗಾದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗೆ ಭಡ್ತಿ? ಬೆಂಗಳೂರು: ಲೋಕಾಯುಕ್ತ ದಾಳಿ ಹಿನ್ನೆಲೆಯಲ್ಲಿ ಅಮಾನತುಗೊಳ್ಳಬೇಕಾದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗೆ ಹೆಚ್ಚುವರಿ ಭಡ್ತಿ ನೀಡಲು ಸರಕಾರ ಸಿದ್ಧತೆ ನಡೆಸಿದೆ. ವಾಣಿಜ್ಯ ತೆರಿಗೆ ಇಲಾಖೆ ಬೆಂಗಳೂರು ಜಂಟಿ ಆಯುಕ್ತರ ಮೇಲೆ ಕಳೆದ ತಿಂಗಳಷ್ಟೇ ಲೋಕಾಯುಕ್ತ ದಾಳಿ ನಡೆಸಿದ್ದರು. ಅವರ ವಿರುದ್ಧ ಅಕ್ರಮ ಆಸ್ತಿ ಪ್ರಕರಣ ಕೂಡ ದಾಖಲಾಗಿತ್ತು. ಅಕ್ರಮ ಆಸ್ತಿ ಹೊಂದಿದ ಆರೋಪದ ಹಿನ್ನೆಲೆಯಲ್ಲಿ ಸರಕಾರಕ್ಕೆ ಲೋಕಾಯುಕ್ತ ವರದಿ ನೀಡಿದೆ. ಅದರಂತೆ …

Read More »

ನಗರದಲ್ಲಿ ಇಂದು ಮಾಂಸ ಮಾರಾಟ ನಿಷೇಧ

ಬೆಂಗಳೂರು: ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸೋಮವಾರ ಕಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಬಿಬಿಎಂಪಿ ಆದೇಶ ಹೊರಡಿಸಿದೆ. ಸೋಮವಾರ ಯಾವುದೇ ರೀತಿಯ ಮಾಂಸ ಹಾಗೂ ಹಸಿ ಮೀನು ಮಾರಾಟ ಮಾಡಬಾರದು. ಯಾವುದೇ ಮಾಂಸ ಮಾರಾಟದ ಅಂಗಡಿಗಳು, ಕೋಳಿ ಅಂಗಡಿಗಳು, ಮೀನುಮಾರಾಟ ಮಾಡಬಾರದು. ಆದೇಶ ಮೀರಿ ಮಾರಾಟ ಮಾಡಿದರೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಬಿಬಿಎಂಪಿ ಪಶುಪಾಲನೆ …

Read More »

ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ. ನಗರಸಭೆಗೆ ಬಿಗಿ ಪೊಲೀಸ್ ಬಂದೋಬಸ್ತ್

ಮುಧೋಳ : ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಹಿನ್ನೆಲೆ ನಗರಸಭೆ ಕಚೇರಿ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಮಧ್ಯಾಹ್ನ ಎರಡು ಗಂಟೆ ವೇಳೆಗೆ ಆಯ್ಕೆ‌ಪ್ರಕ್ರಿಯೆ ಪೂರ್ಣಗೊಳ್ಳಲಿದೆ.   ಮುಂಜಾಗೃತ ಕ್ರಮವಾಗಿ ನಗರಸಭೆ ಸುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಸೂಕ್ತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಜಿದ್ದಾಜಿದ್ದಿನ‌ ಕಾಳಗಕ್ಕೆ ಸಿದ್ದವಾಗಿರುವ ನಗರಸಭೆ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಕೈ-ಕಮಲ‌ ಪಡೆಗಳ …

Read More »

11 ದಿನಗಳ ಮುಷ್ಕರ ಹಿಂಪಡೆದ ಭಾರತೀಯ ವೈದ್ಯಕೀಯ ಸಂಘ

ನವದೆಹಲಿ: ಅಖಿಲ ಭಾರತ ವೈದ್ಯಕೀಯ ಸಂಘದ ಒಕ್ಕೂಟವು 11 ದಿನಗಳಿಂದ ನಡೆಸುತ್ತಿದ್ದ ಮುಷ್ಕರವನ್ನು ಹಿಂತೆಗೆದುಕೊಂಡಿದೆ. ಕೋಲ್ಕತ್ತಾದಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯನ್ನು ವಿರೋಧಿಸಿ ಕರೆ ನೀಡಲಾಗಿದ್ದ 11 ದಿನಗಳ ಮುಷ್ಕರವನ್ನು ಸುಪ್ರೀಂ ಕೋರ್ಟ್‌ನ ಸಕಾರಾತ್ಮಕ ನಿರ್ದೇಶನಗಳನ್ನು ಅನುಸರಿಸಿ ಕೊನೆಗೊಳಿಸಲು ಫೆಡರೇಶನ್ ಆಫ್ ಆಲ್ ಇಂಡಿಯಾ ಮೆಡಿಕಲ್ ಅಸೋಸಿಯೇಶನ್(ಎಫ್‌ಐಎಂಎ) ಗುರುವಾರ ನಿರ್ಧರಿಸಿದೆ.   ಸುಪ್ರೀಂ ಕೋರ್ಟ್ ಪ್ರತಿಭಟನಾನಿರತ ವೈದ್ಯರಿಗೆ ಕೆಲಸವನ್ನು ಪುನರಾರಂಭಿಸಲು ಕೇಳಿಕೊಂಡಿತು. ಯಾವುದೇ ಪ್ರತಿಕೂಲ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಭರವಸೆ ನೀಡಿತು.

Read More »

ಏಷ್ಯಾದ ಶ್ರೀಮಂತ ಗ್ರಾಮ: ಪ್ರತಿಯೊಬ್ಬರ ಖಾತೆಯಲ್ಲಿದೆ ₹22ಲಕ್ಷ

ಗಾಂಧಿನಗರ: ಗುಜರಾತ್‌ನ ಭುಜ್ ನಗರದ ಹೊರವಲಯದಲ್ಲಿರುವ ಮಾಧಾಪರ್ ಏಷ್ಯಾದಲ್ಲೇ ಅತ್ಯಂತ ಶ್ರೀಮಂತ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ವರದಿಯಾಗಿದೆ. 2011ರಲ್ಲಿ 17 ಸಾವಿರವಿದ್ದ ಈ ಗ್ರಾಮದ ಒಟ್ಟು ಜನಸಂಖ್ಯೆ ಈಗ 32 ಸಾವಿರ ಎಂದು ಅಂದಾಜಿಸಲಾಗಿದೆ. ಬ್ಯಾಂಕ್‌ನಲ್ಲಿರುವ ಗ್ರಾಮಸ್ಥರ ಒಟ್ಟು ಹೂಡಿಕೆಯು ₹7 ಸಾವಿರ ಕೋಟಿಯಷ್ಟಿದೆ. ಇದರಲ್ಲಿ ವಿದೇಶದಲ್ಲಿರುವ ಅನಿವಾಸಿ ಭಾರತೀಯರ ಕೊಡುಗೆಯೇ ದೊಡ್ಡದು. ಪ್ರತಿ ವರ್ಷ ಇವರು ಕೋಟಿಗಟ್ಟಲೆ ಹಣವನ್ನು ಈ ಗ್ರಾಮದಲ್ಲಿರುವ ಬ್ಯಾಂಕ್‌ನಲ್ಲಿ ಇರಿಸುತ್ತಿದ್ದಾರೆ. ಮಾಧಾಪರ್‌ದಲ್ಲಿ …

Read More »

ದೇವರಹಿಪ್ಪರಗಿ | ಮಳೆಗೆ ಶಾಲಾ ಆವರಣ

ದೇವರಹಿಪ್ಪರಗಿ: ತಾಲ್ಲೂಕಿನ ಕಡ್ಲೇವಾಡ ಗ್ರಾಮದ ಪಿಸಿಎಚ್‌ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲಾ ಆವರಣ ಬುಧವಾರ ಸುರಿದ ಮಳೆಯ ನೀರಿನಿಂದ ಆವೃತವಾಗಿದ್ದು, ತರಗತಿ, ಪಠ್ಯ ಚಟುವಟಿಕೆಗಳಿಗೆ ತೊಂದರೆಯಾಯಿತು. ನಾಲ್ಕು ಕೊಠಡಿಗಳ ಚಾವಣಿಯಿಂದ ನೀರು ಸೋರುತ್ತಿದ್ದರಿಂದ ಪಾಠಗಳು ನಡೆಯದಂತಾದವು. ಶಿಕ್ಷಕರು ಮಕ್ಕಳೊಂದಿಗೆ ಸೇರಿ ಆವರಣದ ನೀರು ಖಾಲಿ ಮಾಡಲು ಹರಸಾಹಸಪಟ್ಟರು. ಸಮಸ್ಯೆ ಕುರಿತಂತೆ ಗ್ರಾಮ ಪಂಚಾಯಿತಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಪ್ರತಿವರ್ಷ ಮಳೆಗಾಲದಲ್ಲಿ ಮಕ್ಕಳು ಈ …

Read More »

ಮಳೆಗೆ ಕೊಚ್ಚಿಹೋದ ಬಿ.ಯದ್ಲಾಪುರು ರಸ್ತೆ

ರಾಯಚೂರು: ಜಿಲ್ಲೆಯ ವಿವಿಧೆಡೆ ಬುಧವಾರ ರಾತ್ರಿ ಮಳೆ ಅಬ್ಬರಿಸಿದರೆ, ಗುರುವಾರ ಸಾಧಾರಣ ಮಳೆಯಾಗಿದೆ. ರಾಯಚೂರು ತಾಲ್ಲೂಕಿನ ಬಿಚ್ಚಾಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿ.ಯದ್ಲಾಪುರು ಗ್ರಾಮದಲ್ಲಿ ಮಳೆಯ ಆರ್ಭಟಕ್ಕೆ ಹಳ್ಳ ಉಕ್ಕಿ ಹರಿದು ರಸ್ತೆ ಕೊಚ್ಚಿಹೋಗಿದೆ. ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿದೆ.   ಗ್ರಾಮಸ್ಥರು ನಿತ್ಯ ಇದೇ ರಸ್ತೆಯ ಮೂಲಕ ಗಿಲ್ಲೇಸೂಗುರು, ರಾಯಚೂರು, ಮಂತ್ರಾಲಯ ಕಡೆ ಕೆಲಸ ಕಾರ್ಯಗಳಿಗೆ ಹೋಗುತ್ತಾರೆ. ಗ್ರಾಮದ 50 ವಿದ್ಯಾರ್ಥಿಗಳು ಬೇರೆ ಗ್ರಾಮಗಳಲ್ಲಿರುವ ಶಾಲೆಗಳಿಗೆ …

Read More »

ರಾಜ್ಯಕ್ಕೆ ಅಕ್ಕಿ ಪೂರೈಸಲು ಕೇಂದ್ರದ ಒಪ್ಪಿಗೆ

ಬೆಂಗಳೂರು:ರಾಜ್ಯಕ್ಕೆ ಪ್ರತಿ ತಿಂಗಳು ಕೆಜಿಗೆ 28 ರೂ.ನಂತೆ 2.36 ಲಕ್ಷ ಮೆಟ್ರಿಕ್​ ಟನ್​ ಅಕ್ಕಿಯನ್ನು 2025ರ ಮಾರ್ಚ್​ವರೆಗೆ ಪೂರೈಸಲು ಕೇಂದ್ರ ಸರ್ಕಾರ ಒಪ್ಪಿಗೆ ಕೊಟ್ಟಿದ್ದು, ಬಿಪಿಎಲ್​ ಕಾರ್ಡ್​ನ ಪ್ರತಿ ಸದಸ್ಯನಿಗೆ 10 ಕೆ.ಜಿ. ಅಕ್ಕಿ ವಿತರಿಸುವ ರಾಜ್ಯ ಸರ್ಕಾರದ ಆಸೆ ಈಡೇರುವ ಕಾಲ ಸನ್ನೀಹಿತವಾಗಿದೆ.   ಆಹಾರ ಇಲಾಖೆ ಕಳುಹಿಸಿರುವ ಪ್ರಸ್ತಾವನೆಗೆ ಭಾರತೀಯ ಆಹಾರ ನಿಗಮ ( ಎಫ್​​​ಸಿಐ) ಒಪ್ಪಿಗೆ ಕೊಟ್ಟಿದೆ. ಹೀಗಾಗಿ, ಶ್ರೀದಲ್ಲೇ ಈ ಯೋಜನೆಯಡಿ ಫಲಾನುಭವಿಗಳಿಗೆ ಹಣ …

Read More »