Breaking News

ರಾಷ್ಟ್ರೀಯ

ವಾಲ್ಮೀಕಿ ಹಗರಣ : ಇಂದು ರಾಯಚೂರು, ಬಳ್ಳಾರಿ, ಕೊಪ್ಪಳದಲ್ಲಿ ಮತ್ತೆ ‘ED’ ರೇಡ್!

ಬಳ್ಳಾರಿ : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಂತಹ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ,ಇದೀಗ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಬಳ್ಳಾರಿ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಮತ್ತೆ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಹೌದು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಾಂತರ ರೂಪಾಯಿ ಆಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಾಜಿ ಸಚಿವ ಬಿ. ನಾಗೇಂದ್ರ ಅವರ ಆಪ್ತರು ಹಾಗೂ ಸಂಬಂಧಿಕರ ಮನೆ ಕಚೇರಿ …

Read More »

ಮಹಿಳೆ ಕಿಡ್ನಾಪ್ ಕೇಸಲ್ಲಿ HD ರೇವಣ್ಣಗೆ ಬಿಗ್ ರಿಲೀಫ್

ಬೆಂಗಳೂರು : ಮೈಸೂರಿನ ಕೆ ಆರ್ ನಗರದ ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ, ಎಸ್‌ಐಟಿ ಅಧಿಕಾರಿಗಳು ಎಚ್ಡಿ ರೇವಣ್ಣ ವಿರುದ್ಧ ಜಾಮೀನು ರದ್ದು ಕೋರಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ಎಸ್ ಐ ಟಿ ಸಲ್ಲಿಸಿದ್ದ ಅರ್ಜಿ ವಜಾ ಗೊಳಿಸಿ ಆದೇಶ ಹೊರಡಿಸಿದೆ. ಹೌದು ಮೈಸೂರು ಜಿಲ್ಲೆಯ ಕೆ ಆರ್ ನಗರ ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಸಿದಂತೆ ಎಚ್ ಡಿ ರೇವಣ್ಣ ಜಾಮೀನು ರದ್ದು ಮಾಡಲು ಹೈಕೋರ್ಟ್ ನಿರಾಕರಿಸಿದೆ. …

Read More »

ಪಾಸ್ ಪೋರ್ಟ್ ಸೇವಾ ಪೋರ್ಟಲ್ ಆ. 29 ರಿಂದ ಸೆಪ್ಟೆಂಬರ್ 2ರವರೆಗೆ ಸ್ಥಗಿತ

ನವದೆಹಲಿ: ಪಾಸ್‌ಪೋರ್ಟ್ ಸೇವಾ ಪೋರ್ಟಲ್ ನಾಳೆ ಆಗಸ್ಟ್ 29 ರಂದು ರಾತ್ರಿ 8 ರಿಂದ ಸೆಪ್ಟೆಂಬರ್ 2 ರಂದು ಬೆಳಗ್ಗೆ 6 ಗಂಟೆಯವರೆಗೆ ತಾಂತ್ರಿಕ ನಿರ್ವಹಣೆಗೆ ಕಾರಣದಿಂದ ನಾಗರಿಕರ ಸೇವೆಗೆ ಲಭ್ಯವಿರುವುದಿಲ್ಲ. ಈ ಅವಧಿಯಲ್ಲಿ ನಾಗರಿಕರಿಗೆ ಹಾಗೂ ಎಲ್ಲಾ ಎಂಇಎ, ಆರ್​ಪಿಒ, ಬಿಒಐ, ಡಿಒಪಿ, ಪೊಲೀಸ್ ಪ್ರಾಧಿಕಾರಗಳಿಗೆ ಸಿಸ್ಟಂ ಲಭ್ಯ ಇರುವುದಿಲ್ಲ. ಆಗಸ್ಟ್ 30ಕ್ಕೆ ಬುಕ್ ಆಗಿರುವ ಅಪಾಯಿಂಟ್​ಗಳನ್ನು ಬೇರೆ ದಿನಕ್ಕೆ ನಿಗದಿ ಮಾಡಿ, ಅರ್ಜಿದಾರರಿಗೆ ಅದರ ಮಾಹಿತಿ ಅಪ್​ಡೇಟ್ ಮಾಡಲಾಗುತ್ತದೆ,’ …

Read More »

ಎರಡು ದಶಕಗಳಿಂದ ಬಿಜೆಪಿ ಆಡಳಿತದಲ್ಲಿದ್ದ ಯಲ್ಲಮ್ಮ ಪುರಸಭೆ ಕಾಂಗ್ರೆಸ್ ತೆಕ್ಕೆಗೆ

ಸವದತ್ತಿ: ಎರಡು ದಶಕಗಳಿಂದ ಬಿಜೆಪಿ ಆಡಳಿತದಲ್ಲಿದ್ದ ಯಲ್ಲಮ್ಮ ಪುರಸಭೆ ಇದೀಗ ಶಾಸಕ ವಿಶ್ವಾಸ್ ವೈದ್ಯ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ತೆಕ್ಕೆಗೆ ಮರಳಿದೆ. ಹಲವು ತಿಂಗಳಿಂದ ತೆರವಾಗಿದ್ದ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಮಂಗಳವಾರ ಆಯ್ಕೆಯಾದರು.   2ನೇ ಅವಧಿ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ‘ಅ’ ವರ್ಗ ಮಹಿಳೆ ಮೀಸಲಾತಿ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಚಿನ್ನವ್ವ ಹುಚ್ಚಣ್ಣವರ, ಉಪಾಧ್ಯಕ್ಷ ಸ್ಥಾನಕ್ಕೆ ದಾವಲಬಿ …

Read More »

ದಲಿತ ಯುವಕನ ಕೊಲೆ: ಸಿಪಿಐ(ಎಂ) ಖಂಡನೆ

ರಾಮದುರ್ಗ: ಕ್ಷೌರ ಮಾಡುವ ವಿಚಾರದಲ್ಲಿ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲ್ಲೂಕಿನ ಸಂಗನಾಳ ಗ್ರಾಮದಲ್ಲಿ ನಡೆದಿರುವ ಪರಿಶಿಷ್ಟ ಜಾತಿ ಯುವಕ ಯಮನೂರಪ್ಪ ಅವರ ಕೊಲೆ ಪ್ರಕರಣವನ್ನು ಖಂಡಿಸಿ ಸಿಪಿಐ(ಎಂ) ಪಕ್ಷದ ಕಾರ್ಯಕರ್ತರು ಪ್ರತಿಭಟಿಸಿ ತಹಶೀಲ್ದಾರ್‌ ಕಚೇರಿಗೆ ಸೋಮವಾರ ಮನವಿ ಸಲ್ಲಿಸಿದರು.   ಈ ಕೊಲೆ ಪ್ರಕರಣವು ಜಾತಿ, ದೌರ್ಜನ್ಯ ಹಾಗೂ ಅಸ್ಪೃಶ್ಯತೆಗೆ ಕರಾಳ ಕಾರ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಘಟನೆಯನ್ನು ಖಂಡಿಸಿದರು. ಕೊಲೆ ಮಾಡಿದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಕೊಲೆಗೀಡಾದವರ ಕುಟುಂಬಕ್ಕೆ …

Read More »

ಅಣೆಕಟ್ಟೆಯಿಂದ ನೀರು ಬಿಡುಗಡೆ, ಹಳೆ ಸೇತುವೆ ಮುಳುಗಡೆ

ಅಣೆಕಟ್ಟೆಯಿಂದ ನೀರು ಬಿಡುಗಡೆ, ಹಳೆ ಸೇತುವೆ ಮುಳುಗಡೆ ರಾಮದುರ್ಗ: ಸವದತ್ತಿಯ ನವೀಲು ತೀರ್ಥ ಅಣೆಕಟ್ಟೆಯಿಂದ 10 ಸಾವಿರಕ್ಕೂ ಹೆಚ್ಚಿನ ನೀರು ಹರಿಸಿದ್ದರಿಂದ ತಾಲ್ಲೂಕಿನ ಹಳೆ ಸೇತುವೆ ಸಂಪೂರ್ಣ ಮುಳುಗಡೆಯಾಗಿ ವಾಹನಗಳ ಸಂಚಾರ ಸ್ಥಗಿತವಾಗಿದೆ. ಹಳೇ ಸೇತುವೆ ಮೇಲೆ ನಾಲ್ಕು ಐದು ಅಡಿಯಷ್ಟು ನೀರು ಹರಿಯುತ್ತಿದ್ದು ಪಕ್ಕದಲ್ಲಿದ್ದ ಜಾನಕಿರಾಮ ದೇವಸ್ಥಾನ ಜಲಾವೃತವಾಗಿದೆ. ನವೀಲು ತೀರ್ಥ ಅಣೆಕಟ್ಟೆ ಒಟ್ಟು 2079.50 ಅಡಿ ಸಾಮರ್ಥ್ಯ ಹೊಂದಿದ್ದು, ಈಗಾಗಲೇ ಅಣೆಕಟ್ಟೆಯಲ್ಲಿ 2078.10 ಅಡಿ ನೀರು ಸಂಗ್ರಹವಾಗಿದೆ. ಒಳ …

Read More »

ಕೈದಿಗಳಿಗೆ ಇನ್ಮುಂದೆ ‘ಹಾಟ್‌ಬಾಕ್ಸ್‌’ನಲ್ಲಿ ಊಟ

ಮೈಸೂರು: ಇಲ್ಲಿನ ಕೇಂದ್ರ ಕಾರಾಗೃಹದ ಕೈದಿಗಳಿಗೆ ನೀಡುವ ಊಟವನ್ನು ಇದೇ ಮೊದಲ ಬಾರಿಗೆ ‘ಹಾಟ್‌ಬಾಕ್ಸ್‌’ನಲ್ಲಿ ಕೊಡುವುದಕ್ಕೆ ತಯಾರಿ ಆರಂಭವಾಗಿದೆ. ‘ಈ ಉಪಕ್ರಮದ ಮೂಲಕ ತಟ್ಟೆಯಲ್ಲಿ ಊಟ ಪಡೆಯುವುದು, ತಣ್ಣಗಾದ ಆಹಾರ ಸೇವಿಸುವ ಪ್ರಮೇಯ ತಪ್ಪಲಿದೆ’ ಎಂಬ ಆಶಯವನ್ನು ಇಲಾಖೆ ಹೊಂದಿದೆ. ಸದ್ಯ 810 ಕೈದಿಗಳಿರುವ ಕಾರಾಗೃಹದಲ್ಲಿ ನಿತ್ಯ ಸಂಜೆ 6.30ರೊಳಗೆ ರಾತ್ರಿ ಊಟ ವಿತರಿಸಲಾಗುತ್ತದೆ. ತಟ್ಟೆಗಳಲ್ಲಿ ಊಟ ಪಡೆಯುವ ಕೈದಿಗಳು ರಾತ್ರಿ ವೇಳೆ ಊಟ ಮಾಡುತ್ತಿದ್ದರು. ಅಷ್ಟರ ವೇಳೆಗೆ ಊಟವು …

Read More »

ನರ್ಸಿಂಗ್ ವಿದ್ಯಾರ್ಥಿನಿ ಮೇಲೆ ಆಟೋ ಚಾಲಕನಿಂದ ಅತ್ಯಾಚಾರ

ಮುಂಬೈ : ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ಆಟೋ ರಿಕ್ಷಾ ಚಾಲಕನೊಬ್ಬ 19 ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಸೋಮವಾರ ಮಹಿಳೆ ತನ್ನ ಮನೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರತ್ನಗಿರಿಯ ಖಾಸಗಿ ಆಸ್ಪತ್ರೆಯಲ್ಲಿ ನರ್ಸಿಂಗ್ ಓದುತ್ತಿರುವ ವಿದ್ಯಾರ್ಥಿನಿಗೆ ಆಟೋ ರಿಕ್ಷಾ ಚಾಲಕ ತನ್ನ ನೀರಿನಲ್ಲಿ ಮತ್ತು ಬೆರೆಸಿ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಿದ್ದಾರೆ. ಪೊಲೀಸರ ಪ್ರಕಾರ, ಆಟೋ ರಿಕ್ಷಾದಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ, ವಿದ್ಯಾರ್ಥಿನಿ ಚಾಲಕನಿಂದ ನೀರು …

Read More »

ಕರ್ನಾಟಕ ಸೇರಿ ದೇಶದಲ್ಲಿ 21 ನಕಲಿ ವಿಶ್ವವಿದ್ಯಾಲಯಗಳನ್ನು ಗುರುತಿಸಿದ `UGC’

ನವದೆಹಲಿ : ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ) ದೇಶದಲ್ಲಿ 21 ನಕಲಿ ವಿಶ್ವವಿದ್ಯಾಲಯಗಳನ್ನು ಗುರುತಿಸಿದೆ. ಇವುಗಳಲ್ಲಿ ದೆಹಲಿಯಲ್ಲಿ 8 ಮತ್ತು ಕರ್ನಾಟಕದಲ್ಲಿ ಒಂದು ನಕಲಿ ವಿಶ್ವವಿದ್ಯಾಲಯಗಳಿವೆ. ಕಳೆದ ವರ್ಷ 20 ನಕಲಿ ವಿಶ್ವವಿದ್ಯಾಲಯಗಳಿದ್ದು, ಈ ವರ್ಷ ಅವುಗಳ ಸಂಖ್ಯೆ 21ಕ್ಕೆ ತಲುಪಿದೆ. ಈ ವಿಶ್ವವಿದ್ಯಾಲಯಗಳು ನೀಡುವ ಪದವಿಗಳು ಮಾನ್ಯವಾಗಿಲ್ಲ ಎಂದು ಹೇಳಿದೆ. ಮೇಲಾಗಿ, ಈ ನಕಲಿ ವಿಶ್ವವಿದ್ಯಾನಿಲಯಗಳು ಪದವಿಗಳನ್ನು ನೀಡಿದ್ದರೂ, ಉದ್ಯೋಗದ ಉದ್ದೇಶಕ್ಕಾಗಿ ಅವುಗಳನ್ನು ಗುರುತಿಸಲಾಗುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದೆ. …

Read More »

KAS’ ಪೂರ್ವಭಾವಿ ಪರೀಕ್ಷೆ : ಬೆಳಗಾವಿಯಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ ಎಂದು ಪರೀಕ್ಷಾರ್ಥಿಗಳ ಪ್ರತಿಭಟನೆ!

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದ ಗೆಜೆಟೆಡ್ ಪ್ರೊಬೇಷನರ್ಸ್ 384 ಹುದ್ದೆಗಳ ನೇಮಕಾತಿ ಪೂರ್ವಭಾವಿ ಪರೀಕ್ಷೆ ಇಂದು ನಡೆಯುತ್ತಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ ಎಂದು ಆರೋಪಿಸಿ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.   ಬೆಳಗಾವಿಯ ಅಂಜುಮನ್ ಕಾಲೇಜಿನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಅಲ್ಲದೇ ಪ್ರಶ್ನೆ ಪತ್ರಿಕೆ ಕೊಡಲು 15 ನಿಮಿಷ ತಡ ಮಾಡಲಾಗಿದೆ. ಒಎಂಆರ್ ಶೀಟ್ ಕೂಡ ಅದಲು ಬದಲಾಗಿದೆ ಎಂದು ಅಭ್ಯರ್ಥಿಗಳು ಪ್ರತಿಭಟನೆ ನಡೆಸಿರುವ …

Read More »