Breaking News

ರಾಷ್ಟ್ರೀಯ

ಕರೋನಾ ಜಾಗೃತಿಗೆ ಜಿಲ್ಲೆಯಾದ್ಯಂತ ಪೊಲೀಸ್ ರೂಟ್ ಮಾರ್ಚ್- ಬೈಕ್ ರ್ಯಾಲಿ

ಕರೋನಾ ಜಾಗೃತಿಗೆ ಜಿಲ್ಲೆಯಾದ್ಯಂತ ಪೊಲೀಸ್ ರೂಟ್ ಮಾರ್ಚ್- ಬೈಕ್ ರ್ಯಾಲಿ ಸಾರ್ವಜನಿಕರಿಗೆ ಆತ್ಮವಿಶ್ವಾಸದ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜಾಗೃತಿ -ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ್ ಹಾವೇರಿ: ಕೋವಿಡ್-19 ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಜಾರಿಗೊಂಡಿರುವ ಲಾಕ್‍ಡೌನ್ ಪಾಲನೆ, ಕರೋನಾ ಸೋಂಕು ನಿಯಂತ್ರಣಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಅಗತ್ಯ ಸಂದರ್ಭದಲ್ಲಿ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಆತ್ಮವಿಶ್ವಾಸ ತುಂಬುವ ಸಂದೇಶವನ್ನು ಸಾರ್ವಜನಿಕರಿಗೆ ಸಾರಲು ಪೊಲೀಸ್ ಇಲಾಖೆ ಇಂದು ನಗರದಲ್ಲಿ ಪೊಲೀಸ್ ರೂಟ್ ಮಾರ್ಚ್ ಹಾಗೂ …

Read More »

ಗೋಶಾಲೆಗಳಿಗೆ ಆರ್ಥಿಕ ಸಹಾಯ ನೀಡಿ – ಸಿಎಂಗೆ ಮನವಿ

ಮಂಗಳೂರು: ಗೋಶಾಲೆಗಳಿಗೆ ಆರ್ಥಿಕ ಸಹಾಯ ನೀಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸ್ಟೇಟ್ ಎನಿಮಲ್ ವೆಲ್ಪೆರ್ ಬೋರ್ಡ್‍ನ ಸದಸ್ಯ ವಿನಯ್ ಶೆಟ್ಟಿ ಪತ್ರ ಬರೆದು ಮನವಿ ಮಾಡಿದ್ದಾರೆ. ಲಾಕ್‍ಡೌನ್‍ನಿಂದ ಗೋಶಾಲೆಗಳಿಗೆ ಬರುತ್ತಿದ್ದ ಸಾರ್ವಜನಿಕ ದೇಣಿಗೆ ಸಂಪೂರ್ಣ ನಿಂತು ಹೋಗಿದೆ. ಸರ್ಕಾರದ ಪರವಾಗಿ ಗೋವುಗಳನ್ನು ಸಾಕುತ್ತಿರುವ ಗೋಶಾಲೆಗಳಿಗೆ ಆರ್ಥಿಕ ಪರಿಹಾರ ನೀಡಬೇಕು ಎಂದು ವಿನಯ್ ಶೆಟ್ಟಿ ಕೇಳಿಕೊಂಡಿದ್ದಾರೆ. ಅಕ್ರಮ ಗೋಸಾಗಾಟದ ಸಂದರ್ಭದಲ್ಲಿ ಪೊಲೀಸರು ವಶಪಡಿಸಿದ ಗೋವುಗಳನ್ನು ನ್ಯಾಯಲಯಗಳು ಸರ್ಕಾರದ ಪರವಾಗಿ ಸಾಕುವಂತೆ ಗೋಶಾಲೆಗಳಿಗೆ …

Read More »

ಆಸ್ಪತ್ರೆಯಿಂದ ಚೇತರಿಸಿಕೊಳ್ಳುತ್ತಿರುವ ಕೋರೋನಾ ಸೋಂಕಿತ ರೋಗಿಗಳು ನೀಡಿದ ಮಾಹಿತಿ .

ಆಸ್ಪತ್ರೆಯಿಂದ ಚೇತರಿಸಿಕೊಳ್ಳುತ್ತಿರುವ ಕೋರೋನಾ ಸೋಂಕಿತ ರೋಗಿಗಳು ನೀಡಿದ ಮಾಹಿತಿ … ನಾವು ಪ್ರತಿದಿನ ನಾವು ಹೀಗೆ ಮಾಡಿದ್ದೇವೆ : 1. ವಿಟ್ ಸಿ -1000 ಮಿಗ್ರಾಂ ತಿನ್ನಿರಿ 2. ವಿಟಮಿನ್ ಇ 3. 10:00 – 11:00 ಸೂರ್ಯನ ಮಾನ್ಯತೆ 30 ನಿಮಿಷಗಳು. 4. ದಿನಕ್ಕೆ ಒಂದು ಮೊಟ್ಟೆ ತಿನ್ನಿರಿ. 5. 8 ಗಂಟೆಗಳ ಕಾಲ ನಿದ್ರೆ ಮಾಡಿ. 6. ಪ್ರತಿದಿನ 7 ಲೀಟರ್ ನೀರು ಕುಡಿಯಿರಿ. 8. ಯಾವುದೇ …

Read More »

ಕೋಲಾರ:ಸ್ವತಃ ಹೆಗಲ ಮೇಲೆ ಪೈಪ್‍ಗಳನ್ನು ಹೊತ್ತು ಸಾಗಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್

ಕೋಲಾರ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಸಾಮಾನ್ಯರಂತೆ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಕೊರೊನಾ ವೈರಸ್‍ನಿಂದಾಗಿ ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದೆ. ಹೀಗಾಗಿ ಅನೇಕ ರಾಜಕಾರಣಿಗಳು ಮನೆಯಲ್ಲೇ ಕಳೆಯುತ್ತಿದ್ದರೆ, ಕೆಲವರು ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡು ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಆದರೆ ರಮೇಶ್ ಕುಮಾರ್ ಅವರು ತಮ್ಮ ತೋಟದಲ್ಲಿ ಕೆಲಸ ಮಾಡುವ ಮೂಲಕ ಲಾಕ್‍ಡೌನ್‍ನಲ್ಲಿ ಕಾಲ ಕಳೆಯುತ್ತಿದ್ದಾರೆ. ಕಾಂಗ್ರೆಸ್‍ನ ಟಾಸ್ಕ್ ಪೋರ್ಸ್ ಕಮಿಟಿ ಅಧ್ಯಕ್ಷ ರಮೇಶ್ ಕುಮಾರ್ ಅವರು ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ …

Read More »

ರಾಜ್ಯದಲ್ಲಿ ಕೊರೊನಾ ಕರಾಳತೆ – ನಿಯಂತ್ರಿತ ವಲಯದಲ್ಲಿ ಒಂದೇ ಪ್ರವೇಶ ದ್ವಾರ, ಒಂದು ಎಕ್ಸಿಟ್

ಲಾಕ್‍ಡೌನ್ ನಿಯಮಾವಳಿ ಕಂಪ್ಲೀಟ್ ಬದಲು.! – ನಿಯಂತ್ರಿತ ವಲಯದಲ್ಲಿ ಸೀಲ್‍ಡೌನ್ ರೂಲ್ಸ್ ನಿಯಂತ್ರಿತ ವಲಯದಲ್ಲಿ ಒಂದೇ ಪ್ರವೇಶ ದ್ವಾರ, ಒಂದು ಎಕ್ಸಿಟ್ ಅಷ್ಟೇ ಬೆಂಗಳೂರು: ರಾಜ್ಯದಲ್ಲಿ ಹೆಮ್ಮಾರಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಮತ್ತಷ್ಟು ಆತಂಕ ಹೆಚ್ಚಿಸಿದೆ. ಈ ಹಿನ್ನೆಯಲ್ಲಿ ಲಾಕ್‍ಡೌನ್ ನಿಯಮಾವಳಿ ಕಂಪ್ಲೀಟ್ ಬದಲು ಮಾಡಿ ರಾಜ್ಯ ಸರ್ಕಾರ ನಿಯಮಗಳ ಆದೇಶ ಹೊರಡಿಸಿದೆ. ಕೊರೊನಾ ಹಾಟ್‍ಸ್ಪಾಟ್‍ನಲ್ಲಿ ಲಾಕ್‍ಡೌನ್ ಟಫ್ ರೂಲ್ಸ್ ಜಾರಿಗೆ ಬರಲಿದೆ. ರಾಜ್ಯ ಸರ್ಕಾರವು …

Read More »

ಬೆಂಗ್ಳೂರಿನಲ್ಲಿ ಕಂಟ್ರೋಲ್‍ಗೆ ಬಾರದ ಡೆಡ್ಲಿ ವೈರಸ್………

ಬೆಂಗಳೂರು: ರೆಡ್‍ ಝೋನ್‍ನಲ್ಲಿರೋ ಬೆಂಗಳೂರಿನಲ್ಲಿ 86 ಜನ ಸೋಂಕಿತರಿದ್ದಾರೆ. ಈ ಪೈಕಿ ಬೆಂಗಳೂರು ದಕ್ಷಿಣ 18, ಪೂರ್ವ 16, ಮಹದೇವಪುರ 10, ಬೊಮ್ಮನಹಳ್ಳಿ 4, ಆರ್ ಆರ್. ನಗರ 3 ಮತ್ತು ಯಲಹಂಕ 2 ಜನರಿಗೆ ಕೊರೊನಾ ಸೋಂಕು ತಗುಲಿದೆ. ಪಶ್ಚಿಮ ವಿಭಾಗದಲ್ಲಿ ಬರೋಬ್ಬರಿ 22 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಪಶ್ಚಿಮ ವಿಭಾಗದ 10 ಕಿಲೋ ಮೀಟರ್ ಸುತ್ತಮುತ್ತಲೇ ಕೊರೊನಾ ಡೇಂಜರ್ ಹಾಟ್‍ಸ್ಪಾಟ್ ಆಗಿದೆ. ಟಿಪ್ಪುನಗರದ ಮೃತ ವೃದ್ಧನಿಂದ …

Read More »

ಮಸ್ತಿ – ತುಂಗಭದ್ರಾ ನದಿಯಲ್ಲಿ ಕೊಚ್ಚಿ ಹೋದ ಮೂವರು

ಬಳ್ಳಾರಿ: ಲಾಕ್‍ಡೌನ್ ಹಿನ್ನೆಲೆ ಸರಣಿ ರಜೆ ಇರೋದರಿಂದ ನದಿಯಲ್ಲಿ ಈಜಲು ತೆರೆಳಿದ್ದ ಮೂವರು ಕಾರ್ಮಿಕರು ನೀರುಪಾಲಾದ ಘಟನೆ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಸೋವೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸೋವೇನಹಳ್ಳಿ ಗ್ರಾಮದ ಹೊರವಲಯದಲ್ಲಿ ಹರಿಯುವ ತುಂಗಭದ್ರಾ ನದಿಯಲ್ಲಿ ಇಂದು ಮಧ್ಯಾಹ್ನ ಈಜಾಡಲು ಹೋಗಿದ್ದ ಮೂವರು ಕಾರ್ಮಿಕರು ಕೊಚ್ಚಿ ಹೋಗಿದ್ದಾರೆ. ನದಿಯಲ್ಲಿ ಈಜಾಡಲು ಐದು ಮಂದಿ ತೆರಳಿದ್ದು, ಈ ಪೈಕಿ ಮೂವರು ನೀರು ಪಾಲಾದರೆ, ಇನ್ನಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೋವೇನಹಳ್ಳಿ ಗ್ರಾಮದ ನಿವಾಸಿ …

Read More »

“ಕೊರೊನಾ ವೈರಸ್ ವಿಚಾರದಲ್ಲಿ ಸುಳ್ಳು ಮಾಹಿತಿ ನೀಡಿದ ಚೀನಾ”..

ಬೀಜಿಂಗ್: ಕೊರೊನಾ ವೈರಸ್ ವಿಚಾರದಲ್ಲಿ ಸುಳ್ಳು ಮಾಹಿತಿ ನೀಡಿದ ಚೀನಾ ವುಹಾನ್ ನಗರದಲ್ಲಿನ ಸಾವಿನ ಸಂಖ್ಯೆಯನ್ನು ಮರೆ ಮಾಡಿತ್ತೆ ಎನ್ನುವ ಪ್ರಶ್ನೆ ಈಗ ಎದ್ದಿದೆ. ಕೊರೊನಾ ವೈರಸಿನ ಹುಟ್ಟೂರು ವುಹಾನ್ ನಗರದಲ್ಲಿನ ಸಾವಿನ ಸಂಖ್ಯೆ ದಿಢೀರ್ ಶೇ.50 ರಷ್ಟು ಹೆಚ್ಚಾಗಿದೆ. ಗುರುವಾರದವರೆಗೆ ವುಹಾನ್ ನಗರದಲ್ಲಿ 2,579 ಜನ ಮೃತಪಟ್ಟಿದ್ದರು. ಆದರೆ ಈಗ ಹೊಸದಾಗಿ 1,290 ಮಂದಿ ಸೇರಿದ್ದು ಒಟ್ಟು ಸಾವನ್ನಪ್ಪಿದ ರೋಗಿಗಳ ಸಂಖ್ಯೆ 3,869ಕ್ಕೆ ಏರಿಕೆಯಾಗಿದೆ. ಅಮೆರಿಕ, ಇಟಲಿಯಲ್ಲಿ ದಿನಕ್ಕೆ …

Read More »

ಗದಗ​ದಲ್ಲಿ ಕೊರೋನಾ ಪ್ರಕರಣ ಇದ್ದರೂ ಟೆಸ್ಟಿಂಗ್ ಕಿಟ್ ಲಭ್ಯವಿಲ್ಲ: ಹೆಚ್.ಕೆ. ಪಾಟೀಲ್​​ ಆಕ್ರೋಶ

ಗದಗ(ಏ. 17): ಗದಗ ಜಿಲ್ಲೆಯಲ್ಲಿ ಈಗಾಗಲೇ ಎರಡು ಕೊರೋನಾ ಪಾಸಿಟಿವ್ ಪ್ರಕರಣ ಬಂದೀವೆ. ಸರ್ಕಾರ ಗದಗ ಜಿಲ್ಲೆಗೆ ಈವರೆಗೂ ಟೆಸ್ಟಿಂಗ್ ಕಿಟ್ ಕೊಡದೇ‌ ಇರುವುದು ದುರ್ದೈವ ಎಂದು ಶಾಸಕ ಹೆಚ್ ಕೆ ಪಾಟೀಲ್ ಹೇಳಿದ್ದಾರೆ. ಜಿಲ್ಲೆಗೊಂದು ಟೆಸ್ಟಿಂಗ್ ಲ್ಯಾಬೊರೇಟರಿ ಆಗಲಿ ಅಂತ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿದ್ದೆ. ಕಳೆದ ಮಾರ್ಚ್ 23 ರಂದೇ ಹೇಳಿದ್ದೆ. ಈ ವಿಚಾರವಾಗಿ ಮುಖ್ಯಮಂತ್ರಿಗಳ ಗಮನಕ್ಕೆ ಹಲವಾರು ಬಾರಿ ತಂದಿದ್ದೆ. ಇವತ್ತಿಗೆ ಕೆಎಂಸಿಯಲ್ಲಿ‌ ಲ್ಯಾಬೊರೇಟರಿ ಬಿಟ್ರೆ ಎಲ್ಲಿಯೂ …

Read More »

ಕೊರೋನಾ ಗ್ರೀನ್ ಝೋನ್ ನಲ್ಲಿ ರಾಯಚೂರು – ಸೋಂಕು ಹರಡದಂತೆ ಕಟ್ಟುನಿಟ್ಟಿನ ಕ್ರಮ

ರಾಯಚೂರು(ಏ.17): ಮಹಾಮಾರಿ ಕೊರೋನಾ ರಾಜ್ಯ ಸೇರಿದಂತೆ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಈ ಮಧ್ಯೆ ರಾಜ್ಯದ ಹಲವು ಜಿಲ್ಲೆಗಳು ಸದ್ಯ ಕೊರೋನಾ ಸೋಂಕಿನಿಂದ ದೂರ ಇವೆ. ರಾಯಚೂರು ಜಿಲ್ಲೆಯೂ ಗ್ರೀನ್ ಝೋನ್​ ನಲ್ಲಿದ್ದು ಸೋಂಕು ಹರಡದಂತೆ ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಈಗಾಗಲೇ ಮೊದಲು ಹಂತದ ಲಾಕ್ ಡೌನ್ ಮುಗಿದು ಎರಡನೆಯ ಹಂತದ ಲಾಕ್ ಡೌನ್ ಆರಂಭವಾಗಿದೆ. ಲಾಕ್ ಡೌನ್ ಮಾಡಿದ್ದರೂ ಜನ ಅನಗತ್ಯವಾಗಿ ಓಡಾಡುತ್ತಿದ್ದಾರೆ, ಬಹುತೇಕ ಜನರು ಆಸ್ಪತ್ರೆ, ಗ್ಯಾಸ್ ಖರೀದಿ, …

Read More »