ಮಂಗಳೂರು: ಕಾರಿನಲ್ಲಿ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಬೆಂಗಳೂರಿನಿಂದ ಮಂಗಳೂರಿಗೆ ಬಾಡಿಗೆ ಕಾರಿನಲ್ಲಿ ಮಾದಕ ವಸ್ತುಗಳನ್ನು ಸಾಗಾಟ ಮಾಡುತ್ತಿದ್ದರು. ಎಂಡಿಎಂಎ ಸೇರಿದಂತೆ ಹಲವು ಮಾದಕ ವಸ್ತು ಹಾಗೂ ಕಾರು ಸಮೇತ ಪೊಲಿಸರು ಮೂವರನ್ನು ಬಂಧಿಸಿದ್ದಾರೆ. ಶಾಜಹಾನ್, ಮೊಹಮ್ಮದ್ ನಿಸಾರ್, ಮನ್ಸೂರ್ ಬಂಧಿತ ಆರೋಪಿಗಳು. ಬಂಧಿತರಿಂದ 2.10 ಲಕ್ಷ ಮೌಲ್ಯದ 42 ಗ್ರಾಂ ಎಂಡಿಎಂಎ ಜಪ್ತಿ ಮಾಡಲಾಗಿದೆ. ಬಾಡಿಗೆ ಕಾರಿನಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ …
Read More »ದರ್ಶನ್ ವಿಚಾರಕ್ಕೆ ಪ್ರಭಾವಿ ಸಚಿವರಿಗೆ ಸಿಎಂ ತರಾಟೆ!
ದರ್ಶನ್ ವಿಚಾರಕ್ಕೆ ಪ್ರಭಾವಿ ಸಚಿವರಿಗೆ ಸಿಎಂ ತರಾಟೆ! ಬೆಂಗಳೂರು ಆಗಸ್ಟ್ 30: ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶದ್‌ಗೆ ರಾಜಾತಿಥ್ಯ ನೀಡುವ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರಭಾವಿ ಸಚಿವರೊಬ್ಬರಿಗೆ ತರಾಟೆ ತೆಗೆದುಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಜೈಲಿನಲ್ಲಿ ದರ್ಶನ್‌ಗೆ ಐಶಾರಾಮಿ ವ್ಯವಸ್ಥೆ ನೀಡಿರುವುದರ ಹಿಂದೆ ಸಚಿವರೊಬ್ಬರ ಕೈವಾಡವಿದೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಅದಕ್ಕೆ ಸಿಎಂ ಗರಂ ಆಗಿದ್ದು, ಆ ಸಚಿವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ‘ನೋಡಪ್ಪ ಇಂತಹ ವಿಚಾರಕ್ಕೆ …
Read More »ಕಾರ್ಮಿಕರು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಲಿ’
ಗುಳೇದಗುಡ್ಡ: ಕಾರ್ಮಿಕರು ಸರ್ಕಾರಿ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಮಕ್ಕಳಿಗೆ ಶಿಕ್ಷಣ, ಸಂಸ್ಕಾರ ನೀಡುವ ಮೂಲಕ ಕಟ್ಟಡ ಸೇರಿದಂತೆ ಇತರೆ ಕಾರ್ಮಿಕರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಹನಮಂತ ಮಾವಿನಮರದ ಹೇಳಿದರು. ಪಟ್ಟಣದ ಹೊಸಪೇಟೆ ಸಂಗನಬಸವೇಶ್ವರ ನಗರದಲ್ಲಿ ಗುರುವಾರ ಲಕ್ಷ್ಮಿ ಕಟ್ಟಡ ಕಾರ್ಮಿಕರ ಸಂಘದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾರ್ಮಿಕರಿಗೆ ಸರ್ಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಅವುಗಳು ನೈಜ ಕಟ್ಟಡ ಕಾರ್ಮಿಕರಿಗೆ …
Read More »ಮಳೆಗಾಲದಲ್ಲಿ ನಗರದ ಜನತೆಗೆ ಯಾವ ಕಾರಣಕ್ಕೂ ಮಣ್ಣುಮಿಶ್ರಿತ ನೀರು ಸರಬರಾಜು ಮಾಡಬಾರದು:D.C.
ಬೆಳಗಾವಿ: ‘ಮಳೆಗಾಲದಲ್ಲಿ ನಗರದ ಜನತೆಗೆ ಯಾವ ಕಾರಣಕ್ಕೂ ಮಣ್ಣುಮಿಶ್ರಿತ ನೀರು ಸರಬರಾಜು ಮಾಡಬಾರದು. ಬದಲಿಗೆ, ಶುದ್ಧ ಕುಡಿಯುವ ನೀರು ಪೂರೈಕೆಗೆ ಒತ್ತು ನೀಡಬೇಕು’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚಿಸಿದರು. ಇಲ್ಲಿನ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ(ಕೆಯುಐಡಿಎಫ್‌ಸಿ) ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ‘ಈಗ ಪಾಲಿಕೆ ವ್ಯಾಪ್ತಿಯ 10 ವಾರ್ಡ್‌ಗಳಿಗೆ 24×7 ಮಾದರಿಯಲ್ಲಿ ಕುಡಿಯುವ ನೀರು ಸರಬರಾಜು ಯೋಜನೆ ಜಾರಿಯಲ್ಲಿದೆ. ಉಳಿದ ವಾರ್ಡ್‌ಗಳಿಗೆ …
Read More »ಗ್ರಾಮೀಣಾಭಿವೃದ್ಧಿಯಲ್ಲಿ ರಾಜಕಾರಣ ಇಲ್ಲ: ಸಚಿವೆ ಲಕ್ಷ್ಮಿ ಹೆಬ್ಬಾಳಕರ
ಬೆಳಗಾವಿ: ‘ರಾಜಕೀಯ ಆರಂಭಿಸಿದ ದಿನದಿಂದಲೂ ನಾನು ದ್ವೇಷ ರಾಜಕಾರಣ ಮಾಡಿಲ್ಲ. ಅಭಿವೃದ್ಧಿ ಒಂದೇ ನಮ್ಮ ಮೂಲಮಂತ್ರ. ದ್ವೇಷ ರಾಜಕಾರಣ ನನ್ನ ಶಬ್ದಕೋಶದಲ್ಲೇ ಇಲ್ಲ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು. ತಾಲ್ಲೂಕಿನ ಮೋದಗಾದಲ್ಲಿ ಬುಧವಾರ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟನೆ ಹಾಗೂ ರಾಜೀವ ಗಾಂಧಿ ಸೇವಾ ಕೇಂದ್ರ ಮತ್ತು ಸಂಜೀವಿನಿ ಸೇವಾ ಕೇಂದ್ರ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ‘ಭಾರತ ದೇಶ ಹಳ್ಳಿಗಳ ದೇಶ. ಹಳ್ಳಿಗಳು …
Read More »ಇಂಧನ ಯೋಜನೆಗೆ ‘ಮೊದಲ ಪಾವತಿಯನ್ನು’ ಶ್ರೀಲಂಕಾಕ್ಕೆ ಹಸ್ತಾಂತರಿಸಿದ ಭಾರತ
ನವದೆಹಲಿ:ಡೆಲ್ಫ್ಟ್, ನೈನತೀವು ಮತ್ತು ಅನಾಲೈತೀವು ದ್ವೀಪಗಳಲ್ಲಿನ ಇಂಧನ ಅಗತ್ಯಗಳನ್ನು ಪೂರೈಸುವ ಗುರಿಯನ್ನು ಹೊಂದಿರುವ ಹೈಬ್ರಿಡ್ ವಿದ್ಯುತ್ ಯೋಜನೆಗಳಿಗೆ ಮೊದಲ ಪಾವತಿಯನ್ನು ಶ್ರೀಲಂಕಾದಲ್ಲಿನ ಭಾರತದ ಹೈಕಮಿಷನರ್ ಸಂತೋಷ್ ಝಾ ಗುರುವಾರ ಹಸ್ತಾಂತರಿಸಿದರು ಎಂದು ಶ್ರೀಲಂಕಾದಲ್ಲಿನ ಭಾರತೀಯ ರಾಯಭಾರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ ಝಾ ಅವರು ವಿದ್ಯುತ್ ಮತ್ತು ಇಂಧನ ಸಚಿವಾಲಯದ ಕಾರ್ಯದರ್ಶಿ ಮತ್ತು ಶ್ರೀಲಂಕಾ ಸುಸ್ಥಿರ ಇಂಧನ ಪ್ರಾಧಿಕಾರದ (ಎಸ್‌ಎಲ್‌ಎಸ್‌ಇಎ) ಅಧ್ಯಕ್ಷೆ ಸುಲಕ್ಷಣಾ ಜಯವರ್ಧನೆ ಅವರಿಗೆ ಪಾವತಿಯನ್ನು ಹಸ್ತಾಂತರಿಸಿದರು ಎಂದು ಹೇಳಿಕೆ …
Read More »ಅಕ್ಕ ಸಮ್ಮೇಳನಕ್ಕೆ ಅದ್ಧೂರಿ ಸಿದ್ಧತೆ
ಆ.28- ಅಮೇರಿಕಾದ ವರ್ಜೀನಿಯಾ ರಾಜ್ಯದ ರಿಚಂಡ್ ನಗರದಲ್ಲಿ ಇದೇ ಆ.30, 31 ಮತ್ತು ಸೆ.1 ರಂದು ನಡೆಯಲಿರುವ ಅಮೆರಿಕಾ ಕನ್ನಡ ಕೂಟಗಳ ಆಗರ (ಅಕ್ಕ) 2024ರ ಸಮೇಳನಕ್ಕೆ ಅದ್ಧೂರಿ ಸಿದ್ಧತೆ ನಡೆಸಲಾಗುತ್ತಿದೆ ಎಂದು ಸಮೇಳನದ ಅಧ್ಯಕ್ಷರಾದ ರವಿ ಬೋರೆಗೌಡ ಅವರು ತಿಳಿಸಿದ್ದಾರೆ. ಅಮೇರಿಕಾದ 50ಕ್ಕೂ ಹೆಚ್ಚು ರಾಜ್ಯಗಳ ಕನ್ನಡ ಸಂಘಗಳು ಒಟ್ಟಾಗಿ ಸೇರಿ ಪ್ರತೀ ಎರಡು ವರ್ಷಗಳಿಗೊಮೆ ಈ ಸಮೇಳನವನ್ನು ಆಯೋಜಿಸುತ್ತವೆ. ಕೋವಿಡ್ ಕಾರಣದಿಂದಾಗಿ ಕಳೆದ ನಾಲ್ಕು ವರ್ಷಗಳಿಂದ …
Read More »ದರ್ಶನ್ ಗ್ಯಾಂಗ್‌ನ ಮೂವರು ಮೈಸೂರು ಜೈಲಗೆ ಶಿಫ್ಟ್!
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್ ಮತ್ತು ಸಹಚರರಿಗೆ ಹೊಸ ಸಂಕಷ್ಟ ಶುರುವಾಗಿದೆ. ನಟ ದರ್ಶನ್‌ಗೆ ರಾಜಾತಿಥ್ಯ ಸಿಕ್ಕ ಹಿನ್ನಲೆಯಲ್ಲೇ ದರ್ಶನ್ ಮತ್ತು ಸಹಚರರನ್ನು ರಾಜ್ಯದ ವಿವಿಧ ಜೈಲುಗಳಿಗೆ ಸ್ಥಳಾಂತರ ಮಾಡಲು ನ್ಯಾಯಾಲಯ ಆದೇಶ ನೀಡಿದೆ. ದರ್ಶನ್‌ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಿದ್ದು, ಮೈಸೂರು ಕಾರಾಗೃಹಕ್ಕೂ ಮೂವರು ಆರೋಪಿಗಳನ್ನು ಸ್ಥಳಾಂತರ ಮಾಡಲಾಗುತ್ತದೆ. ಈ ಮೊದಲೇ ಮೂವರು ಆರೋಪಿಗಳನ್ನು ತುಮಕೂರು ಜೈಲಿಗೆ ಶಿಫ್ಟ್ ಮಾಡಲಾಗಿತ್ತು. …
Read More »ಗ್ರಾಮದಲ್ಲಿ ಎರಡು ನ್ಯಾಯ ಬೆಲೆ ಅಂಗಡಿ ತೆರಯಲು ಆಕ್ಷೇಪ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಬೆಂಗಳೂರು: ದೇಶದ ನಾಗರೀಕರಿಗೆ ಅಗತ್ಯ ಸಾಮಗ್ರಿಗಳನ್ನು ಸುಲಭವಾಗಿ ಪೂರೈಕೆ ಮಾಡುವ ಉದ್ದೇಶದಿಂದ ನ್ಯಾಯಬೆಲೆ ಅಂಗಡಿಗಳು ಕಾರ್ಯಾಚರಿಸುತ್ತಿದೆ ಎಂದಿರುವ ಹೈಕೋರ್ಟ್, ಒಂದು ಗ್ರಾಮದಲ್ಲಿ ಮತ್ತೊಂದು ನ್ಯಾಯ ಬೆಲೆ ಅಂಗಡಿ ಆರಂಭಿಸುವ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ. ಅಲ್ಲದೆ, ಪಡಿತರ ಚೀಟಿದಾರರಲ್ಲಿ ಅತಿ ಹೆಚ್ಚು ಜನರು ಸಮಾಜದಲ್ಲಿನ ಬಡ ವರ್ಗಕ್ಕೆ ಹಾಗೂ ಬಡತನ ರೇಖೆಗಿಂತ ಕೆಳಗಿನವರಿದ್ದಾರೆ ಎಂದು ಹೇಳಿದೆ. ಪ್ರಕರಣ ಸಂಬಂಧ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ …
Read More »ಶಿವಾಜಿ ಪ್ರತಿಮೆ ಕುಸಿತ: ರಾಜ್ಯದ ಜನತೆಗೆ ಕ್ಷಮೆಯಾಚಿಸಿದ ಡಿಸಿಎಂ ಅಜಿತ್ ಪವಾರ್
ಲಾತೂರ್(ಮಹಾರಾಷ್ಟ್ರ): ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಕುಸಿದುಬಿದ್ದ ಘಟನೆ ಸಂಬಂಧ ರಾಜ್ಯದ ಜನರಲ್ಲಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಕ್ಷಮೆಯಾಚಿಸಿದ್ದಾರೆ. ಲಾತೂರ್ ಜಿಲ್ಲೆಯಲ್ಲಿ ನಡೆದ ಜನ ಸಮ್ಮಾನ್ ಯಾತ್ರೆ ವೇಳೆ ಸಾರ್ವಜನಿಕ ಸಮಾರಂಭ ಉದ್ದೇಶಿಸಿ ಮಾತನಾಡಿದ ಪವಾರ್, ‘ಅಧಿಕಾರಿಗಳೇ ಆಗಲಿ ಅಥವಾ ಗುತ್ತಿಗೆದಾರರೇ ಆಗಲಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದರು. ‘ಶಿವಾಜಿ ಮಹಾರಾಜನರು ನಮ್ಮ ಆರಾಧ್ಯ ದೈವ. ಅವರ ಪ್ರತಿಮೆ ಕುಸಿದು ಬಿದ್ದಿರುವುದಕ್ಕೆ …
Read More »