Breaking News

ರಾಷ್ಟ್ರೀಯ

60 ವರ್ಷ ಮೇಲ್ಪಟ್ಟವರು ಹೊರಬರದಂತೆ ರಾಜ್ಯದಲ್ಲಿ ಕಾನೂನು

ಬೆಂಗಳೂರು(ಜು.06): ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಬರುವವರೆಗೂ ಕಿಡ್ನಿ, ಲಿವರ್‌, ಹೃದಯ ಸಂಬಂಧಿ ಸಮಸ್ಯೆ ಸೇರಿದಂತೆ ಪೂರ್ವ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ 60 ವರ್ಷ ಮೇಲ್ಪಟ್ಟವರು ಮನೆಯಿಂದ ಹೊರಬರಬಾರದೆಂಬ ಕಾನೂನು ರೂಪಿಸುವ ಚಿಂತನೆ ನಡೆಸುತ್ತಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ. ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಈವರೆಗೆ ಕೋವಿಡ್‌ನಿಂದ ಮೃತಪಟ್ಟವರ ಪೈಕಿ ಬಹುತೇಕ ಮಂದಿ 60 ವರ್ಷ ಮೇಲ್ಪಟ್ಟವರು ಹಾಗೂ ಈಗಾಗಲೇ ಪೂರ್ವ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದವರಾಗಿದ್ದಾರೆ. …

Read More »

ಕೊಡಗು: ಭೂಕುಸಿತದಿಂದ ಮನೆ ಕಳೆದುಕೊಂಡಿದ್ದ ಕುಟುಂಬದ ಬದುಕು ಕಿತ್ತುಕೊಂಡು ಗಾಯದ ಮೇಲೆ ಬರೆ ಎಳೆದ ಕೊರೋನಾ…

ಕೊಡಗು(ಜು.06): ಮಾರಕ ಕೊರೋನಾ ವೈರಸ್​ ಪ್ರತಿಯೊಬ್ಬರ ಜೀವನನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಭೂಕುಸಿತದಲ್ಲಿ ಮನೆ ಕಳೆದುಕೊಂಡು ಬೀದಿಗೆ ಬಿದ್ದಿದ್ದ ಕುಟುಂಬ ಲಾಕ್ಡೌನ್​​ನಿಂದ ಕೂಲಿಯನ್ನು ಕಳೆದುಕೊಂಡು ಒಂದೊತ್ತಿನ ಗಂಜಿಗೂ ಪರಿಪಾಟಲು ಪಡುತ್ತಿದೆ. ಹಲವು ಕಾಯಿಲೆಗಳಿಂದ ನರಳುವ ತಂದೆ ತಾಯಿಯನ್ನು ಸಾಕೋದು ಪಿಯುಸಿ ಓದುತ್ತಿದ್ದ ಮಗನ ಹೆಗಲಿಗೆ ಬಿದ್ದಿದೆ. ಅಂತಹ ಮನಕಲಕುವ ಕಥೆ ವ್ಯವಸ್ಥೆಯನ್ನು ನೋವು ನೋಡ್ಲೇಬೇಕು. Ρ ಕಣ್ಣು ಕಾಣದೆ ತನ್ನ ಕೆಲಸವನ್ನು ತಾನು ಮಾಡಿಕೊಳ್ಳಲು ಸಾಧ್ಯವಾಗದ ತಂದೆ, ಸಂಧಿವಾತದಿಂದ ಕೈ …

Read More »

ಧಾರವಾಡ: ಕೊಲೆ ಆರೋಪಿಯನ್ನು ಹೆಡೆಮುರಿ ಕಟ್ಟಿದ ಪೊಲೀಸರು

ಧಾರವಾಡ: ಇಲ್ಲಿನ ಮದಿಹಾಳದಲ್ಲಿ ನಿನ್ನೆ ನಡೆದ ಕೊಲೆಗೆ ಸಂಬಂಧಿಸಿದಂತೆ ರೌಡಿಶೀಟರ್ ಶ್ರೀಶೈಲ ಗಾಣಿಗೇರನನ್ನು ಬಂಧಿಸುವಲ್ಲಿ ಶಹರ ಠಾಣೆ ಪೊಲೀಸರ ಯಶಸ್ವಿಯಾಗಿದ್ದಾರೆ. ಶಿವಯೋಗಿ ಭಾವಿಕಟ್ಟಿ ಹಾಗೂ ಆರೋಪಿ ಶ್ರೀಶೈಲ ಗಾಣಿಗೇರ ಮಧ್ಯೆ ಆಸ್ತಿಗೆ ಸಂಬಂಧಿಸಿದ ವ್ಯವಹಾರವಿತ್ತು. ಈ ಸಂಬಂಧ ಮೊನ್ನೆ ತಡರಾತ್ರಿ ಶಿವಯೋಗಿ ಹಾಗೂ ಆತನ ಇನ್ನಿಬ್ಬರು ಸಹಚರರಾದ ಈರಪ್ಪ ಯಂಗಳ್ಳಿ ಹಾಗೂ ಸುನೀಲ ಕೋನಣ್ಣವರ ಅವರು ಶ್ರೀಶೈಲನ ಮನೆಗೆ ಹೋಗಿ ಕ್ಯಾತೆ ತೆಗೆದಿದ್ದರು. ಈ ಜಗಳ ವಿಕೋಪಕ್ಕೆ ಹೋಗಿದ್ದರಿಂದ ಶ್ರೀಶೈಲ …

Read More »

17 ದಿನಗಳ ಮಗುವಿನ ಅಂತ್ಯಕ್ರಿಯೆ ನಡೆಸಿ ಕಣ್ಣೀರು ಹಾಕಿದ್ರು ಆರೋಗ್ಯ ಸಿಬ್ಬಂದಿ…

ಬೆಂಗಳೂರು: ಒಂದು ಮಗುವಿನ ಆಗಮನ ಅಂದ್ರೆ ಆ ಮನೆ ತುಂಬಾ ಸಂತೋಷ ತುಂಬಿರುತ್ತದೆ. ಇನ್ನು ತಾಯಿಗಂತೂ ಅದು ಮರುಜನ್ಮ, ಒಂಬತ್ತು ತಿಂಗಳು ಹೊತ್ತು, ಹೆರಿಗೆ ನೋವು ಸಹಿಸಿಕೊಂಡ ಆಕೆಗೆ, ಬಳಿಕ ಆ ಮಗುವಿನ ಮುಕ ನೋಡಿ, ಒಮ್ಮೆ ಮಗುವನ್ನು ಮುದ್ದಾಡಿದರೇ ಎಲ್ಲ ನೋವು ಶಮನ. ಆದ್ರೆ ದುರಾದೃಷ್ಟವಶಾತ್​ ಈ ತಾಯಿಗೆ ಆ ಸಂತೋಷ ಸಿಗದಂತಾಗಿದೆ. ಈ ಕಥೆ ಓದಿದ್ರೆ ನಿಜಕ್ಕೂ ಕಣ್ಣೀರು ಬರುತ್ತದೆ. ಕೊರೊನಾ ತಂದಿಟ್ಟ ಪರಿಸ್ಥಿತಿ ನೋಡಿದರೆ ನಿಜಕ್ಕೂ …

Read More »

ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ : ಯೆಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು : ಹವಾಮಾನ ಇಲಾಖೆಯು ಬಹುಮುಖ್ಯ ಮಾಹಿತಿಯೊಂದನ್ನು ನೀಡಿದ್ದು, ಇಂದಿನಿಂದ ಜುಲೈ 10 ರವರೆಗೆ ರಾಜ್ಯದ ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ.     ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ, ಇಂದಿನಿಂದ ರಾಜ್ಯದ ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಈಗಾಗಲೇ …

Read More »

ಭೀಕರ ಅಪಘಾತದಲ್ಲಿ ವ್ಯಕ್ತಿ ಸಾವು; ಎದೆ ಝಲ್ಲೆನಿಸೋ ದೃಶ್ಯ ಸಿಸಿಟಿವಿಯಲ್ಲಿ ಸೆರೆ…

ಚಿಕ್ಕಮಗಳೂರು: ಜಿಲ್ಲೆಯಲ್ಲಿ ನಿನ್ನೆ ಭೀಕರ ಅಪಘಾತಕ್ಕೀಡಾಗಿ, ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ದೈಹಿಕ ಶಿಕ್ಷಕ ಮಹಾಂತೇಶ್ ಮೃತ ದುರ್ದೈವಿ. ಕಡೂರು ತಾಲೂಕಿನ ಬೀರೂರು ಸಮೀಪ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಈ ಘಟನೆ ನಡೆದಿದೆ. ಕಡೂರಿನಿಂದ ಬಿರೂರಿಗೆ ಬರುತ್ತಿದ್ದ ಟಾಟಾ ಏಸ್​ ವಾಹನಕ್ಕೆ, ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬೈಕ್​ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಬೈಕ್​ ಹಾರಿ ಹೋಗಿದ್ದು, ಮಹಂತೇಶ್​​ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಎದೆ ಝಲ್ಲೆನಿಸುವಂತಿದೆ. ಘಟನೆ …

Read More »

24 ಗಂಟೆಯಲ್ಲಿ ದಾಖಲೆಯ 613 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಕೂಡ 19,268ಕ್ಕೆ ಏರಿಕೆಯಾಗಿದ್ದು, ಆತಂಕ ಹೆಚ್ಚಾಗುವಂತೆ ಮಾಡಿದೆ.

ಹೊಸದಿಲ್ಲಿ: ದೇಶದಲ್ಲಿ ಕೊರೊನಾ ರಣಕೇಕೆ ಮುಂದುವರೆದಿದ್ದು, ಒಂದೇ ದಿನ ದಾಖಲೆಯ 24,850 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಇದರಿಂದಾಗಿ ಸೋಂಕಿತರ ಸಂಖ್ಯೆ 6,73,165ಕ್ಕೆ ಏರಿಕೆಯಾಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಭಾನುವಾರ ಮಾಹಿತಿ ನೀಡಿದೆ. ಕಳೆದ 24 ಗಂಟೆಯಲ್ಲಿ ದಾಖಲೆಯ 613 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಕೂಡ 19,268ಕ್ಕೆ ಏರಿಕೆಯಾಗಿದ್ದು, ಆತಂಕ ಹೆಚ್ಚಾಗುವಂತೆ ಮಾಡಿದೆ. ಇನ್ನು 6,73,165 ಮಂದಿ ಸೋಂಕಿತರ ಪೈಕಿ 4,09,083 ಮಂದಿ ಗುಣಮುಖರಾಗಿದ್ದು, ಪ್ರಸ್ತುತ …

Read More »

ಕೊರೋನಾ ಭಯ: ಪ್ರವಾ​ಸಿ​ಗರ ವಾಹನ ತಡೆದು ವಾಪಸ್‌ ಕಳು​ಹಿ​ಸಿದ ಗ್ರಾಮ​ಸ್ಥ​ರು

ಮಂಡ್ಯ(ಜು.05): ಕೋವಿಡ್ ಆಸ್ಪತ್ರೆಗೆ ತೆರಳಲು ಜೆಡಿಎಸ್ ಮುಖಂಡ ರಂಪಾಟ ಮಾಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಸೋಂಕು ದೃಢವಾದ್ರೂ ಮಂಡ್ಯದ ಕೋವಿಡ್ ಆಸ್ಪತ್ರೆಗೆ ಬರಲು ಜೆಡಿಎಸ್ ಮುಖಂಡ ಕಿರಿಕ್ ಮಾಡಿದ್ದಾರೆ. ಮಂಡ್ಯ ಜಿಲ್ಲೆ ನಾಗಮಂಗಲದ ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿರುವ ಸೋಂಕಿತ ಮುಖಂಡ ನಾನು ಆಸ್ಪತ್ರೆಗೆ ಬರಲ್ಲ. ಮನೆಯಲ್ಲೇ ಐಸೋಲೇಷನ್ ಆಗುತ್ತೇನೆಂದು ಪಟ್ಟು ಹಿಡಿದಿದ್ದಾರೆ. ಕೊರೋನಾ ತಡೆ​ಗಾಗಿ 15 ದಿನ ಲಾಕ್‌​ಡೌ​ನ್‌ಗೆ ಜೆಡಿ​ಎಸ್‌ ಆಗ್ರ​ಹ ಆರೋಗ್ಯ ಸಚಿವ ಶ್ರೀರಾಮುಲು ಅವರ ಜತೆ …

Read More »

ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಲಂಕಾದ ಕ್ರಿಕೆಟಿಗ ಕುಸಾಲ್ ಮೆಂಡಿಸ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಕೊಲಂಬೊ: ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಲಂಕಾದ ಕ್ರಿಕೆಟಿಗ ಕುಸಾಲ್ ಮೆಂಡಿಸ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇಂದು ಮುಂಜಾನೆ 5.30ರ ಸುಮಾರಿಗೆ ಪನುಡೊರಾದ ಹೊರೆತುದುವಾ ಪ್ರದೇಶದಲ್ಲಿ ಅಪಘಾತ ನಡೆದಿತ್ತು. ಈ ಘಟನೆಯಲ್ಲಿ ಸೈಕಲ್ ಸವಾರ 64 ವರ್ಷದ ವೃದ್ಧರೊಬ್ಬರು ಅಸುನೀಗಿದ್ದರು. ಘಟನೆಗೆ ಸಂಬಂಧಿಸಿದಂತೆ ಉತ್ತರ ಪೊಲೀಸರು ಇಂದು ಕುಸಾಲ್ ಮೆಂಡಿಸ್ ಅವರನ್ನು ಬಂಧಿಸಿದ್ದಾರೆ. ಕ್ರಿಕೆಟಿಗನ ಬಂಧನ ವಿಷಯವನ್ನು ಪೊಲೀಸ್ ವಕ್ತಾರ ಜಲಿಯ ಸೇನರತ್ನೆ ಖಚಿತಪಡಿಸಿದ್ದಾರೆ. 25 ವರ್ಷ ಪ್ರಾಯದ ಕುಸಾಲ್ ಮೆಂಡಿಸ್ …

Read More »

ಮಾರಕ ಕೊರೋನಾ ವೈರಸ್ ಅಟ್ಟಹಾಸ ಮುಂದುವರೆದಿರುವಂತೆಯೇ ಇತ್ತ ರಾಜ್ಯ ಸರ್ಕಾರ ಸ್ವಾತಂತ್ರ್ಯೋತ್ಸವ ನಿಮಿತ್ತ ನಡೆಯಬೇಕಿದ್ದ ಫಲಪುಷ್ಪ ಪ್ರದರ್ಶನವನ್ನು ರದ್ದುಪಡಿಸಲು ಮುಂದಾಗಿದೆ.

ಬೆಂಗಳೂರು: ಮಾರಕ ಕೊರೋನಾ ವೈರಸ್ ಅಟ್ಟಹಾಸ ಮುಂದುವರೆದಿರುವಂತೆಯೇ ಇತ್ತ ರಾಜ್ಯ ಸರ್ಕಾರ ಸ್ವಾತಂತ್ರ್ಯೋತ್ಸವ ನಿಮಿತ್ತ ನಡೆಯಬೇಕಿದ್ದ ಫಲಪುಷ್ಪ ಪ್ರದರ್ಶನವನ್ನು ರದ್ದುಪಡಿಸಲು ಮುಂದಾಗಿದೆ. ಹೌದು.. ದಿನೇ ದಿನೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಇದೇ ಕಾರಣಕ್ಕೆ ತೋಟಗಾರಿಕೆ ಇಲಾಖೆ ಲಾಲ್ ಭಾಗ್ ನಲ್ಲಿ ನಡೆಯಬೇಕಿದ್ದ ಫಲಪುಷ್ಪ ಪ್ರದರ್ಶನವನ್ನು ರದ್ದು ಮಾಡಲು ನಿರ್ಧರಿಸಿದೆ ಎನ್ನಲಾಗಿದೆ. ಲಾಲ್ ಭಾಗ್ ನ ಫಲಪುಷ್ಪ ಪ್ರದರ್ಶನ ವ್ಯಾಪಕ ಖ್ಯಾತಿ ಗಳಿಸಿದ್ದು, …

Read More »