Breaking News

ರಾಷ್ಟ್ರೀಯ

150ರಿಂದ 10 ಮೀಟರ್‌ಗೆ ಕುಗ್ಗಿದ ಮಲಪ್ರಭೆ!

ಬಾಗಲಕೋಟೆ: ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ದೊಡ್ಡಹಂಪಿಹೊಳಿ ಬಳಿ ಹರಿಯುವ ಮಲಪ್ರಭಾ ನದಿಯ ಅಗಲ ಜಲಸಂಪನ್ಮೂಲ ಇಲಾಖೆ ಟೋಪೊಶೀಟ್‌ನಲ್ಲಿ 150 ಮೀಟರ್ ಇದೆ. ಆದರೆ ಈಗ ಅದು 10 ಮೀಟರ್‌ಗೆ ಇಳಿಕೆಯಾಗಿದೆ! ಗದಗ ಜಿಲ್ಲೆ ನರಗುಂದ ತಾಲ್ಲೂಕಿನ ಕೊಣ್ಣೂರು ರಸ್ತೆ ಸೇತುವೆ ಬಳಿ 100 ಮೀಟರ್‌ ಅಗಲವಿದ್ದ ನದಿ ಈಗ 11 ಮೀಟರ್‌ಗೆ ಕುಗ್ಗಿದೆ. ಬಾದಾಮಿ ತಾಲ್ಲೂಕಿನ ಗೋವನಕೊಪ್ಪ ಬಳಿ 200 ಮೀಟರ್‌ನಿಂದ 14 ಮೀಟರ್‌ಗೆ ರೂಪಾಂತರಗೊಂಡಿದೆ. ಅತಿಯಾದ ಮಾನವ ಹಸ್ತಕ್ಷೇಪ …

Read More »

37 ಕೋವಿಡ್ ಪ್ರಕರಣಗಳು ಪತ್ತೆ! 56 ಮಂದಿ ಗುಣಮುಖ

ಚಾಮರಾಜನಗರ: ಜಿಲ್ಲೆಯಲ್ಲಿ ಶುಕ್ರವಾರ 37 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. 56 ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಒಟ್ಟಾರೆ 454 ಪ್ರಕರಣಗಳು ಸಕ್ರಿಯವಾಗಿವೆ. ಜಿಲ್ಲೆಯಲ್ಲಿ ಒಟ್ಟು 2224 ಮಂದಿಗೆ ಸೋಂಕು ತಗುಲಿತ್ತು. ಇವರಲ್ಲಿ 1726 ಮಂದಿ ಗುಣಮುಖರಾಗಿದ್ದಾರೆ. 44 ಮಂದಿ ಮೃತಪಟ್ಟಿದ್ದಾರೆ. 20 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 172 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ. ಒಟ್ಟು 136 ಮಂದಿ ಹೋಂ ಐಸೋಲೇಷನ್‌ಗೊಳಗಾಗಿ ಗುಣಮುಖರಾಗಿದ್ದಾರೆ. ಶುಕ್ರವಾರ 491 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಇದರಲ್ಲಿ ಆರ್‌ಟಿಪಿಸಿಆರ್ ವಿಧಾನದಲ್ಲಿ 396 …

Read More »

ಶುಲ್ಕ ಹೆಚ್ಚಿಸದಂತೆ ಸುತ್ತೋಲೆ: ಹೈಕೋರ್ಟ್ ನೋಟಿಸ್

ಬೆಂಗಳೂರು: 2020-21ರ ಶೈಕ್ಷಣಿಕ ವರ್ಷದ ಶುಲ್ಕ ಹೆಚ್ಚಿಸದಂತೆ ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆ ಪ್ರಶ್ನಿಸಿ ಕರ್ನಾಟಕ ಖಾಸಗಿ ಶಾಲೆಗಳ ಸಮಿತಿ ಸಲ್ಲಿಸಿರುವ ಅರ್ಜಿ ಆಧರಿಸಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ನೀಡಿದೆ. ‘ಹಿಂದಿನ ವರ್ಷ ಸಂಗ್ರಹಿಸಿದ ಮೊತ್ತಕ್ಕಿಂತ ಕಡಿಮೆ ಶುಲ್ಕ ಸಂಗ್ರಹಿಸಬಹುದು ಎಂದು ಸರ್ಕಾರ ಹೇಳಿದೆ. ಹಿಂದಿನ ವರ್ಷದ ಬಾಕಿ ಶುಲ್ಕ ಮತ್ತು ಪ್ರಸಕ್ತ ವರ್ಷದ ಶುಲ್ಕದಲ್ಲಿ ಶೇ 50ರಷ್ಟನ್ನು ಸಂಗ್ರಹಿಸಲು ಮಧ್ಯಂತರ ಅನುಮತಿ ನೀಡಬೇಕು’ ಅರ್ಜಿದಾರರು ಕೋರಿದ್ದಾರೆ. ‘‌ಶೇ …

Read More »

ಕಣ್ವ ಹಗರಣ: ನಂಜುಂಡಯ್ಯ 7 ದಿನ ಇ.ಡಿ ವಶಕ್ಕೆ

ಬೆಂಗಳೂರು: ಕಣ್ವ ಸೌಹಾರ್ದ ಕೋ-ಆಪರೇಟಿವ್ ಕ್ರೆಡಿಟ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಂಸ್ಥಾಪಕ ಎನ್‌.ನಂಜುಂಡಯ್ಯ ಅವರನ್ನು ಏಳು ದಿನಗಳ ಕಾಲ ಜಾರಿ ನಿರ್ದೇಶನಾಲಯ(ಇ.ಡಿ) ವಶಕ್ಕೆ ಪಡೆದಿದೆ. ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೂರು ಎಫ್‌ಐಆರ್ ಆಧರಿಸಿ ಇ.ಡಿ ತನಿಖೆ ಆರಂಭಿಸಿ ನಂಜುಂಡಯ್ಯ ಅವರನ್ನು ವಶಕ್ಕೆ ಪಡೆದಿತ್ತು. ‘₹180 ಕೋಟಿ ವಂಚಿಸಿರುವ ಪ್ರಕರಣದಲ್ಲಿ ನಂಜುಂಡಯ್ಯ ಅವರೇ ಪ್ರಮುಖ ಆರೋಪಿ ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಇ.ಡಿ ಹೇಳಿದೆ. *ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ …

Read More »

ರಾಯಣ್ಣ ಪ್ರತಿಮೆ‌ ಸ್ಥಾಪನೆಯ ಹೋರಾಟಗಾರರ ಮೇಲಿನ ಪೊಲೀಸರ ಲಾಠಿ ಪ್ರಹಾರ ಖಂಡನೀಯ – ಸಿದ್ದರಾಮಯ್ಯ

ಬೆಂಗಳೂರು : ಬೆಳಗಾವಿಯ ಪೀರನವಾಡಿಯಲ್ಲಿನ ಸಂಗೊಳ್ಳಿ ರಾಯಣ್ಣ ಪ್ರತಿಮೆ‌ ಸ್ಥಾಪನೆಗಾಗಿ ಹೋರಾಟ ನಡೆಸುತ್ತಿರುವವರ ಮೇಲಿನ ಪೊಲೀಸರ ಲಾಠಿ ಪ್ರಹಾರ ಖಂಡನೀಯ. ನಾನು ಈಗಷ್ಟೆ ಅಲ್ಲಿನ ಜಿಲ್ಲಾಧಿಕಾರಿ‌ ಮತ್ತು ಪೊಲೀಸ್ ಕಮಿಷನರ್ ಜೊತೆ ಮಾತನಾಡಿ ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ನಿಭಾಯಿಸುವಂತೆ ತಿಳಿಸಿದ್ದೇನೆ ಎಂಬುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಬೆಳಗಾವಿ ಪೀರನವಾಡಿಯಲ್ಲಿನ ಘಟನೆ ಸಂಬಂಧ ಟ್ವಿಟ್ ಮಾಡಿರುವ ಅವರು, ಸಂಗೊಳ್ಳಿ‌ ರಾಯಣ್ಣನ ಪ್ರತಿಮೆಸ್ಥಾಪನೆಯನ್ನು ರಾಜ್ಯ ಬಿಜೆಪಿ ಸರ್ಕಾರ ನಿರ್ಲಕ್ಷದಿಂದ ವಿವಾದ ಮಾಡಿಕೊಂಡಿದೆ. ನೆಲ,ಜಲ,ಭಾಷೆ …

Read More »

ಶಾಂತಿ ಕಾಪಾಡಲು ಕ್ರಮಕೈಗೊಳ್ಳಿ: ಬೆಳಗಾವಿ ಡಿಸಿಗೆ ಸಿಎಂ ಬಿಎಸ್‌ವೈ ಆದೇಶ..!

ಬೆಳಗಾವಿ: ಗಡಿನಾಡು ಬೆಳಗಾವಿಯಲ್ಲಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ವಿಚಾರವಾಗಿ ನಡೆಯುತ್ತಿರುವ ಗಲಾಟೆಯಲ್ಲಿ ನಡೆಯುತ್ತಿದ್ದು, ಶಾಂತಿ ಕಾಪಾಡಲು ಏನೇನು ಕ್ರಮ ಬೇಕು ಅದೆನ್ನೆಲ್ಲವನ್ನ ಕೈಗೊಳ್ಳಿ ಎಂದು ಬೆಳಗಾವಿ ಡಿಸಿಗೆ ಸಿಎಂ ಬಿಎಸ್‌ವೈ ದೂರವಾಣಿ ಕರೆ ಮಾಡಿ ಆದೇಶ ನೀಡಿದ್ದಾರೆ. ಇನ್ನು ಪೀರನವಾಡಿಗೆ ಬೆಂಗಳೂರಿನಿಂದ ಬೆಳಗಾವಿಗೆ ಹಿರಿಯ ಪೊಲೀಸ್‌ ಅಧಿಕಾರಿಗಳನ್ನ ಕಳಿಸಲಾಗಿದ್ದು, ಸಮಸ್ಯೆಯನ್ನ ಬಗೆಹರಿಸಲು ಸಿಎಂ ಸೂಚನೆ ನೀಡುದ್ದಾರೆ ಅದಷ್ಟು ಬೇಗ ಸಮಸ್ಯೆ ಬಗೆಹರಿಸುತ್ತೇವೆ. ಎರಡು ಸಮಾಜದ ಜೊತೆ ಹಿರಿಯರು ಮಾತನಾಡುತ್ತೇವೆ ಎಂದು …

Read More »

ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಲಿಷ್ಠ ಸಂಭಾವ್ಯ XI ಹೀಗಿದೆ ನೋಡಿ!

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿ ಆರಂಭಗೊಳ್ಳಲು ಇನ್ನು ಮೂರು ವಾರಗಳು ಬಾಕಿ ಉಳಿದಿವೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ಭಾರತದ ಅದ್ದೂರಿ ಕ್ರಿಕೆಟ್ ಟೂರ್ನಿ ನಡೆಯಲಿದೆ. ಎಲ್ಲಾ ಎಂಟು ಫ್ರಾಂಚೈಸಿಗಳು ಈಗಾಗಲೇ ಯುಎಇ ತಲುಪಿದ್ದು, ಅಲ್ಲಿ 6 ದಿನಗಳ ಕಡ್ಡಾಯ ಕ್ವಾರಂಟೈನ್ ಪಾಲಿಸುತ್ತಿವೆ. ಆರ್‌ಸಿಬಿಯ ಕ್ವಾರಂಟೈನ್ ಅವಧಿ ಪೂರ್ಣಗೊಂಡಿದೆ. ಆಗಸ್ಟ್ 27ರ ಗುರುವಾರದಿಂದ 3 ವಾರಗಳ ತರಬೇತಿಯಲ್ಲಿ ಬೆಂಗಳೂರು ತಂಡ ತೊಡಗಿಕೊಳ್ಳಲಿದೆ. ಐಪಿಎಲ್‌ನ ಆಕರ್ಷಣೀಯ …

Read More »

”ನಾಯಕತ್ವದ ಯಶಸ್ಸಿಗೆ ಧೋನಿಯ ತಾಳ್ಮೆ ಮತ್ತು ಕೊಹ್ಲಿಯ ಆಕ್ರಮಣಶೀಲತೆ ಎರಡೂ ಅಗತ್ಯ”

ಮುಂಬೈ : ಕ್ರಿಕೆಟ್​ ಜಗತ್ತಿನಲ್ಲಿ ಕೆಲವು ವರ್ಷಗಳಿಂದ ಭಾರತ ತಂಡ ಎಲ್ಲಾ ಮಾದರಿಯ ಕ್ರಿಕೆಟ್​​​ನಲ್ಲಿ​ ಅಧಿಪತ್ಯ ಸಾಧಿಸಿದೆ. ಎಲ್ಲಾ ವಿಭಾಗದಲ್ಲಿ ಅಗ್ರಸ್ಥಾನ ಪಡೆಯುವುದಕ್ಕಾಗಿ ಶ್ರಮಿಸುತ್ತಿದೆ. ಇಷ್ಟೆಲ್ಲಾ ಸಾಧನೆಗೆ ಹಲವಾರು ನಾಯಕರು ಶ್ರಮಿಸಿದ್ದಾರೆ. ತಂಡದಿಂದ ಹಲವು ಮೈಲಿಗಲ್ಲು ನಿರ್ಮಾಣವಾಗಲು ಅವರ ಪಾತ್ರ ಮಹತ್ವದ್ದಾಗಿದೆ. ಆದರೆ ನಾಯಕತ್ವದಲ್ಲಿ ಯಶಸ್ವಿಯಾಗಬೇಕಾದರೆ ಕೆಲವು ಗುಣಗಳು ಅಗತ್ಯವಾಗಿ ಬೇಕಾಗಿವೆ ಎಂದಿರುವ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್,​ ತಂಡ ಬಲಿಷ್ಠವಾಗಲು ಧೋನಿಯ ತಾಳ್ಮೆಯ ಮನೋಭಾವ ಹಾಗೂ ಕೊಹ್ಲಿಯಲ್ಲಿದ್ದ ಆಕ್ರಮಣಕಾರಿ ಮನೋಭಾವ ಅಗತ್ಯವಾಗಿ …

Read More »

ಸ್ಮಶಾನಕ್ಕೆ ಜಾಗ ಮಂಜೂರು ಮಾಡದ ಹಿನ್ನೆಲೆ: ಸರಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ

ಬೆಂಗಳೂರು, : ರಾಜ್ಯದಲ್ಲಿ ಸಂಸ್ಕಾರಕ್ಕೆ ಸ್ಮಶಾನ ಸ್ಥಳವಿಲ್ಲದ ಕಡೆ ಅಗತ್ಯ ಜಮೀನು ಮಂಜೂರು ಮಾಡುವ ಕುರಿತ ನ್ಯಾಯಾಲಯದ ಆದೇಶ ಪಾಲಿಸದ ಸರಕಾರದ ವಿರುದ್ಧ ಸಲ್ಲಿಸಲಾಗಿರುವ ನ್ಯಾಯಾಂಗ ನಿಂದನೆ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ಈ ಕುರಿತು ಬೆಂಗಳೂರು ನಿವಾಸಿ ಮುಹಮ್ಮದ್ ಇಕ್ಬಾಲ್ ಎಂಬುವರು ಸಲ್ಲಿಸಿದ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದಕುಮಾರ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಅರ್ಜಿ ಸಂಬಂಧ ರಾಜ್ಯ ಸರಕಾರಕ್ಕೆ …

Read More »

ನೆಲಮಂಗಲ ಬಳಿ ಲಾರಿಗೆ ಕಾರು ಡಿಕ್ಕಿ: ಅಂತ್ಯ ಸಂಸ್ಕಾರಕ್ಕೆ ತೆರಳುತ್ತಿದ್ದ ಮೂವರ ದುರ್ಮರಣ

ನೆಲಮಂಗಲ: ನಿಯಂತ್ರಣ ತಪ್ಪಿದ ಕಾರು ಪಕ್ಕದ ರಸ್ತೆಗೆ ನುಗ್ಗಿ ಗ್ಯಾಸ್ ಲ್ಯಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ದಾರುಣವಾಗಿ ಮೃತಪಟ್ಟಿರುವ ಘಟನೆ ನೆಲಮಂಗಲ-ಕುಣಿಗಲ್ ಹೆದ್ದಾರಿಯಲ್ಲಿ ಸಂಭವಿಸಿದೆ. ಮೃತಪಟ್ಟವರನ್ನು ಬೆಂಗಳೂರು ಪೀಣ್ಯಾ ಪೊಲೀಸ್ ಠಾಣೆ ವ್ಯಾಪ್ತಿಯ ಮಂಜುನಾಥ್ ನಗರದ ಪುರುಷೋತ್ತಮ್ ,ಚಂದು ಮತ್ತು ನವೀನ್ ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡಿರುವ ತುಮಕೂರು ಜಿಲ್ಲೆಯ ತಿಪಟೂರು ನಿವಾಸಿ ಆದಿತ್ಯ ಎಂಬುವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚೇತನ್, ನವೀನ್, ಚಂದು ಮತ್ತು ಆದಿ ಇಟಿಯೋಸ್ ಕಾರಿನಲ್ಲಿ …

Read More »