ದಾವಣಗೆರೆ, : ಸದಾ ಒಂದಿಲ್ಲೊಂದು ವಿಷಯಕ್ಕೆ ಸುದ್ದಿಯಲ್ಲಿರುವ ಹೊನ್ನಾಳಿ ಬಿಜೆಪಿ ಶಾಸಕ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಮತ್ತೆ ಸುದ್ದಿಯಾಗಿದ್ದಾರೆ. ಹೌದು.. ಹೊನ್ನಾಳಿ ಡಿಪೋದ 6 ಬಸ್‌ಗಳನ್ನ ಉದ್ಘಾಟನೆ ಮಾಡಿದರು. ಬಳಿಕ ಸಿಕ್ಕಿದ್ದೇ ಚಾನ್ಸ್ ಅಂತ ಬಸ್ ಚಲಾಯಿಸಿಕೊಂಡು ನಗರ ಪ್ರದಕ್ಷಿಣೆ ಹಾಕಿದರು. ಸರಾಗವಾಗಿ ಪಟ್ಟಣದಲ್ಲಿ ಐದಾರು ಕಿ.ಮೀ. ಬಸ್ ಓಡಿಸಿದ ರೆಣುಕಾಚಾರ್ಯ ಅವರಿಗೆ ಕಾರ್ಯಕರ್ತರು ಜೈಕಾರ ಹಾಕಿದರು. ಲೈಸನ್ಸ್ ಇಲ್ಲದೇ ಸರ್ಕಾರಿ ಬಸ್ ಓಡಿಸಿದ ಶಾಸಕ: …
Read More »ವಿದ್ಯಾರ್ಥಿಗಳಿಗೆ ‘ಜಿತೋ ನೆರವು
ಬೆಳಗಾವಿ: ಜಿತೋ (ಜೈನ ಅಂತರರಾಷ್ಟ್ರೀಯ ವ್ಯಾಪಾರ ಸಂಸ್ಥೆ) ಬೆಳಗಾವಿ ವಿಭಾಗದಿಂದ ಜೈನ ಸಮಾಜದ ಪ್ರತಿಭಾವಂತ ಬಡ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಭಾನುವಾರ ಆರ್ಥಿಕ ನೆರವು ನೀಡಲಾಯಿತು. ‘7 ವರ್ಷಗಳಿಂದಲೂ, ಎಸ್ಸೆಸ್ಸೆಲ್ಸಿ ನಂತರದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ನೆರವು ನೀಡುತ್ತಿದ್ದೇವೆ. ಪ್ರಸಕ್ತ ಸಾಲಿನಲ್ಲಿ 385 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಈ ಪೈಕಿ 60 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ತಲಾ ₹ 5ಸಾವಿರ ವಿತರಿಸಲಾಗಿದೆ’ ಎಂದು ಆಯೋಜಕರು ತಿಳಿಸಿದ್ದಾರೆ. ಮುಖಂಡರಾದ ಶಾಂತಿಲಾಲ ಪೋರವಾಲ, …
Read More »ಜಿಐಟಿ ಎಂಬಿಎ ವಿಭಾಗದ ವಾರ್ಷಿಕೋತ್ಸವ
ಬೆಳಗಾವಿ: ಇಲ್ಲಿನ ಕೆಎಲ್‌ಎಸ್ ಗೋಗಟೆ ತಾಂತ್ರಿಕ ಕಾಲೇಜಿನ ಎಂಬಿಎ ವಿಭಾಗದಿಂದ ಆನ್‌ಲೈನ್ ಮೂಲಕ ವಾರ್ಷಿಕ ದಿನ ಆಚರಿಸಲಾಯಿತು. ಪ್ರಾಂಶುಪಾಲ ಡಾ.ಜಯಂತ್ ಕೆ. ಕಿತ್ತೂರ ಮಾತನಾಡಿ, ‘ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ಸಮಾಜಕ್ಕೆ ನಿಷ್ಠರಾಗಿರಬೇಕು. ವಿದ್ಯಾರ್ಥಿಗಳು ಮತ್ತು ಸಂಸ್ಥೆಯ ನಡುವಿನ ಸಂಬಂಧವು ದೀರ್ಘಕಾಲದ್ದಾಗಿರುತ್ತದೆ. ಯಾವುದೇ ಶಿಕ್ಷಣ ಸಂಸ್ಥೆಗೆ ಅವರೇ ನಿಜವಾದ ಬ್ರಾಂಡ್ ಅಂಬಾಸಿಡರ್‌ಗಳಾಗಿರುತ್ತಾರೆ’ ಎಂದರು. ಪ್ರಾಂಶುಪಾಲ ಡಾ.ಜಯಂತ್ ಕೆ. ಕಿತ್ತೂರ ಅಧ್ಯಕ್ಷತೆ ವಹಿಸಿದ್ದರು. ಎಂಬಿಎ ವಿಭಾಗದ ಡೀನ್ ಡಾ.ಕೃಷ್ಣ ಶೇಖರ್ ಲಾಲ್‌ದಾಸ್ ವಾರ್ಷಿಕ …
Read More »ನಾಳೆ ಸಚಿವರು ರಮೇಶ ಜಾರಕಿಹೊಳಿ ದೆಹಲಿಗೆ: ಸಂಪುಟ ವಿಸ್ತರಣೆ ಚರ್ಚೆಯ ನಡುವೆ ಗರಿಗೆದರಿದ ಕುತೂಹಲ
ರಾಜ್ಯ ಜಲಸಂಪನ್ಮೂಲ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮತ್ತೆ ಹೊಸದೆಹಲಿಗೆ ಹೊರಟಿದ್ದಾರೆ. ಕಳೆದ ಒಂದೂವರೆ ತಿಂಗಳಲ್ಲಿ ಸಚಿವರು ಮೂರನೇ ಬಾರಿ ದೆಹಲಿಗೆ ಪ್ರಯಾಣ ಬೆಳೆಸಿರುವುದು ಕುತೂಹಲ ಕೆರಳಿಸಿದೆ. ಜಲಸಂಪನ್ಮೂಲ ಸಚಿವಾಲಯದ ಮಾಹಿತಿಯಂತೆ ಸಚಿವ ರಮೇಶ ಜಾರಕಿಹೊಳಿ ಬುಧವಾರ ದೆಹಲಿಗೆ ತೆರಳುವರು. ಅಂದು ರಾಜ್ಯದ ನೀರಾವರಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚಿಸುವರು. ದೆಹಲಿಯಲ್ಲಿ ಶುಕ್ರವಾರದವರೆಗೂ ಜಾರಕಿಹೊಳಿ ವಾಸ್ತವ್ಯ ಕಾರ್ಯಕ್ರಮ ನಿಗದಿಯಾಗಿದೆ. ಸಚಿವ ರಮೇಶ ಜಾರಕಿಹೊಳಿ …
Read More »ನಟಿ ಮೇಘನಾ ರಾಜ್ ನಿವಾಸದಲ್ಲಿ ಮನೆಮಾಡಿದ ಸಂಭ್ರಮ..!
ಚಂದನವನದ ಯುವ ಸಾಮ್ರಾಟ ಚಿರಂಜೀವಿ ಸರ್ಜಾ ಅಕಾಲಿಕ ಮರಣ ಅವರ ಇಡೀ ಕುಟುಣಬಕ್ಕೆ ಬರ ಸಿಡಿಲು ಬಡಿದಂತಾಗಿದೆ. ಚಿರು ಕಳೆದುಕೊಂಡು ನೋವಿನಲ್ಲಿರುವ ಕುಟುಂಬಸ್ಥರು ಸ್ವಲ್ಪ ಸ್ಲಲ್ಪವೇ ಚೇತರಿಸಿಕೊಂಡು ಸಹಜ ಜೀವನಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಮುದ್ದಾದ ಮಗುವಿನ ನಿರೀಕ್ಷೆಯಲ್ಲಿದ್ದ ಸ್ಯಾಂಡಲ್ ವುಡ್ ನ ಕ್ಯೂಟ್ ಜೋಡಿ, ಚಿರು ಹಾಗೂ ಮೇಘನಾ ರಾಜ್, ಮುಗುವಿನ ಮುಖನೋಡುವ ಮೊದಲೆ ಚಿರು ಸರ್ಜಾ ತುಂಬು ಗರ್ಭಣಿ ಮೇಘನಳನ್ನು ಒಬ್ಬಂಟಿ ಮಾಡಿ ಚಿರ ನಿದ್ರೆಗೆ ಜಾರಿದರು. ಪ್ರೀತಿಯ …
Read More »ಲಾಕ್‌ಡೌನ್: ವಲಸೆ ಕಾರ್ಮಿಕರ ಸಾವು, ನೌಕರಿ ನಷ್ಟದ ಬಗ್ಗೆ ಸರ್ಕಾರ ಲೆಕ್ಕ ಇಟ್ಟಿಲ್ಲ
ನವದೆಹಲಿ: ಕೊರೊನಾವೈರಸ್ ವ್ಯಾಪಿಸುವುದನ್ನು ತಡೆಯಲು ಕೇಂದ್ರ ಸರ್ಕಾರ ಲಾಕ್‍ಡೌನ್ ಘೋಷಿಸಿದಾಗ ದೇಶದಲ್ಲಿ ಸಂಭವಿಸಿದ ವಲಸೆ ಕಾರ್ಮಿಕರ ಸಾವು ಮತ್ತು ಉದ್ಯೋಗ ನಷ್ಟದ ಬಗ್ಗೆ ಸರ್ಕಾರದ ಬಳಿ ಅಂಕಿ ಅಂಶ ಇಲ್ಲ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಲೋಕಸಭೆಯಲ್ಲಿ ಹೇಳಿದೆ. ತಮ್ಮ ಊರಿಗೆ ಮರಳಲು ಬಯಸುವ ವಲಸೆ ಕಾರ್ಮಿಕರನ್ನು ಬಲವಂತವಾಗಿ ಉಳಿಸಿಕೊಳ್ಳುವ ಯಾವುದೇ ವರದಿಯೂ ಅದರಲ್ಲಿ ಇರಲಿಲ್ಲ ಎಂದು ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ …
Read More »‘ಒಟಿಟಿ ಕರೆ, ಚಾಟ್‌ಗೆ ನಿಯಂತ್ರಣ ಬೇಕಿಲ್ಲ’
ನವದೆಹಲಿ: ‘ವಾಟ್ಸ್‌ಆಯಪ್, ಮೆಸೆಂಜರ್, ವೈಬರ್‌ನಂತಹ ಕಂಪನಿಗಳು ಒಟಿಟಿ ಮೂಲಕ ಒದಗಿಸುವ ಕರೆ ಮತ್ತು ಚಾಟಿಂಗ್ ಸೇವೆಗಳಿಗೆ ನಿಯಮಾವಳಿಗಳ ನಿಯಂತ್ರಣದ ಅವಶ್ಯಕತೆ ಇಲ್ಲ’ ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಹೇಳಿದೆ. ದೂರಸಂಪರ್ಕ ಕಂಪನಿಗಳು ಒದಗಿಸುವ ಸೇವೆಗಳಿಗೂ, ಇಂತಹ ಕಂಪನಿಗಳು ಒಟಿಟಿ ಮೂಲಕ ಒದಗಿಸುವ ಸೇವೆಗಳಿಗೂ ತೀರಾ ವ್ಯತ್ಯಾಸವಿಲ್ಲ. ಹೀಗಾಗಿ ಒಟಿಟಿ ದೂರಸಂಪರ್ಕ ಸೇವಾ ಕಂಪನಿಗಳಿಗೂ ನಿಯಂತ್ರಣ ಹೇರಬೇಕು ಎಂದು ಭಾರತದ ಹಲವು ದೂರಸಂಪರ್ಕ ಕಂಪನಿಗಳು ಟ್ರಾಯ್‌ಗೆ ಮನವಿ ಸಲ್ಲಿಸಿದ್ದವು. ‘ದೂರಸಂಪರ್ಕ …
Read More »ಮೂವಿ ಮಾಫಿಯಾಗೆ ಆದಿತ್ಯ ನಂಟು!: ಉದ್ಧವ್ ಪುತ್ರನ ವಿರುದ್ಧ ಬಾಲಿವುಡ್ ನಟಿ ಕಂಗನಾ ಆರೋಪ
ಮುಂಬಯಿ: ಮಹಾರಾಷ್ಟ್ರ ಸರಕಾರದ ವಿರುದ್ಧ ವಾಗ್ಧಾಳಿ ನಡೆಸುತ್ತಲೇ ಇರುವ ಬಾಲಿವುಡ್ ನಟಿ ಕಂಗನಾ ರಣೌತ್ ಸೋಮವಾರ ಸಿಎಂ ಉದ್ಧವ್ ಠಾಕ್ರೆಯವರ ಪುತ್ರ ಆದಿತ್ಯ ಠಾಕ್ರೆಗೆ ಟಾಂಗ್ ನೀಡಿದ್ದಾರೆ. ಆದಿತ್ಯ ಅವರ ಸ್ನೇಹಿತರ ವಿರುದ್ಧ ಧ್ವನಿಯೆತ್ತಿದ್ದಕ್ಕೆ ನನ್ನನ್ನು ಶಿವಸೇನೆ ಟಾರ್ಗೆಟ್ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಆದಿತ್ಯ ಠಾಕ್ರೆ ಅವರು ಮೂವಿ ಮಾಫಿಯಾ, ಸುಶಾಂತ್‌ರ ಕೊಲೆಗಾರರು ಮತ್ತು ಡ್ರಗ್ ದಂಧೆಕೋರರೊಂದಿಗೆ ಸ್ನೇಹ ಹೊಂದಿದ್ದಾರೆ. ಮೂವಿ ಮಾಫಿಯಾವನ್ನು ನಾನು ಬಯಲಿಗೆಳೆಯಲು ಮುಂದಾಗಿದ್ದೇ ಸಿಎಂ ಉದ್ಧವ್‌ಗೆ …
Read More »ವಿರಾಟ್ ಕೊಹ್ಲಿ ದಾಖಲೆ, ಆಸೀಸ್ ಆಟಗಾರರ ಮೇಲುಗೈ :ಐಪಿಎಲ್ ಆರೆಂಜ್ ಕ್ಯಾಪ್ ಲಿಸ್ಟ್ ಇಲ್ಲಿದೆ
ನವದೆಹಲಿ: ಐಪಿಎಲ್-2020ರ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮುಂದಿನ ವಾರದಲ್ಲಿ ಐಪಿಎಲ್ ಹಂಗಾಮ ಶುರುವಾಗಲಿದೆ. ಈ ಚುಟುಕು ಪಂದ್ಯಗಳಲ್ಲಿ ಆ ಆವೃತ್ತಿಯಲ್ಲಿ ಹೆಚ್ಚು ರನ್ ಗಳಿಸಿದವರಿಗೆ ಆರೆಂಜ್ ಕ್ಯಾಪ್ ಮತ್ತು ಹೆಚ್ಚು ವಿಕೆಟ್ ಗಬಳಿಸಿದ ಬೌಲರ್ ಗೆ ಪರ್ಪಲ್ ಕ್ಯಾಪ್ ನೀಡಲಾಗುತ್ತದೆ. ಹೆಚ್ಚು ಆರೆಂಜ್ ಕ್ಯಾಪ್ ಅನ್ನು ಆಸೀಸ್ ನ ಸ್ಫೋಟಕ ಬ್ಯಾಟ್ಸ್ ಮ್ಯಾನ್ ಡೇವಿಡ್ ವಾರ್ನರ್ ಅವರು ಗೆದ್ದಿದ್ದಾರೆ. ಆರೆಂಜ್ ಕ್ಯಾಪ್ ಸ್ಪರ್ಧೆಯಲ್ಲಿ ಆಸೀಸ್ ಆಟಗಾರರೇ ಮೇಲುಗೈ ಸಾಧಿಸಿದ್ದಾರೆ. …
Read More »ಹಿಂಬದಿಯಿಂದ ಲಾರಿ ಡಿಕ್ಕಿ, ಕಾರ್ ಅಪ್ಪಚ್ಚಿ- ಮೂವರು ದಾರುಣ ಸಾವು
ಚಿಕ್ಕಬಳ್ಳಾಪುರ: ಬೆಳ್ಳಂ ಬೆಳಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ. ಚಿಕ್ಕಬಳ್ಳಾಪುರ ತಾಲೂಕು ದೊಡ್ಡಪ್ಯಾಯಲಗುರ್ಕಿ ಬಳಿ ರಾತ್ರಿ 1 ಗಂಟೆಗೆ ಘಟನೆ ಸಂಭವಿಸಿದ್ದು, ಹಿಂಬದಿಯಿಂದ ಲಾರಿ ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿ ರಭಸಕ್ಕೆ ತಾಯಿ ಹಾಗೂ ಇಬ್ಬರು ಗಂಡು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಂದೆ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಲಾರಿ ಡಿಕ್ಕಿ ಹೊಡೆತಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಗುರುತಿಸಲು …
Read More »