ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅವ್ಯವಹಾರ ಹಗರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಈ ಹಗರಣದಲ್ಲಿ ಸಿಎಂ ಸಿದ್ಧರಾಮಯ್ಯ ಸಂಪುಟದ ಮೊದಲ ವಿಕೆಟ್ ಪತನವಾಗಿತ್ತು. ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ನೀಡಿದ್ದರು. ಈ ಬೆನ್ನಲ್ಲೇ ಮೂವರು ಸಚಿವರು ಶಾಮೀಲಾಗಿದ್ದಾರೆ ಎನ್ನಲಾಗುತ್ತಿದೆ. ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ಹಣ ಅವ್ಯವಹಾರ ಪ್ರಕರಣದಲ್ಲಿ ರಾಜ್ಯ ಸಚಿವ ಸಂಪುಟದ ಹಲವರ ತಲೆದಂಡದ ಮುನ್ಸೂಚನೆ ದೊರೆತಿದೆ. ಈ ಹಗರಣವು ಸರ್ಕಾರದ ಬುಡವನ್ನೇ …
Read More »ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಹಾಲಹಂಡೆ ಜಲಪಾತ
ಗುಳೇದಗುಡ್ಡ : ಕಾನನ ಮಧ್ಯದೊಳಗೊಂದು ನೀರಿನ ಆರ್ಭಟ. ಎತ್ತ ನೋಡಿದರು ಹಚ್ಚಹಸಿರಿನ ಸಿರಿ, ನಿಶಬ್ದ ವಾತಾವಾರಣ. ಇದು ಕಂಡು ಬರುವುದು ತಾಲೂಕಿನ ಹಾನಾಪುರ ಎಸ್‌ಪಿ ಗ್ರಾಮದ ಗುಡ್ಡದ ಹಾಲಹಂಡೆ ಜಲಪಾತದಲ್ಲಿ. ಹಾನಾಪುರ ಎಸ್.ಪಿ. ಗ್ರಾಮದಿಂದ 1ಕಿಮೀ ದೂರದಲ್ಲಿರುವ ಈ ಹಾಲಹಂಡೆ ಜಲಪಾತ ನಿಜಕ್ಕೂ ಅಧ್ಭುತವಾಗಿದ್ದು, ಈ ಜಾಗಕ್ಕೆ ಭೇಟಿಕೊಟ್ಟರೇ ಸಾಕು ರಮಣೀಯ ದೃಶ್ಯವನ್ನು ಕಾಣಸಿಗಬಹುದು. ಇಲ್ಲಿ ಸುಮಾರು 80 ಅಡಿ ಎತ್ತರದಿಂದ ಧುಮ್ಮಿಕ್ಕುವ ಹಾಲಹಂಡೆ ಜಲಪಾತ ಈಗ ಪ್ರವಾಸಿಗರ ಗಮನ ಸೆಳೆದಿದೆ. …
Read More »ನೀತಿ ಸಂಹಿತಿ ನಿಮಿತ್ತ ತಡೆ ಹಿಡಿ ದಿದ್ದ ಅನ್ನ ಸಂತರ್ಪಣೆಶ್ರೇಷ್ಠ ಫೌಂಡೇಶನ್ ವತಿಯಿಂದ ಮತ್ತೆ ಈ ಶನಿ ವಾರದಿಂದ ಪ್ರಾರಂಭ..
ನೀತಿ ಸಂಹಿತಿ ನಿಮಿತ್ತ ತಡೆ ಹಿಡಿ ದಿದ್ದ ಅನ್ನ ಸಂತರ್ಪಣೆ ಮತ್ತೆ ಈ ಶನಿ ವಾರ ದಿಂದ ಪ್ರಾರಂಭ.. ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..! ಗೋಕಾಕ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ …
Read More »ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಯೋದು ಫಿಕ್ಸ್?
ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಕಾಂಗ್ರೆಸ್ ಭರ್ಜರಿ ಮುನ್ನಡೆ ಕಾಣುತ್ತಿದೆ. ಹೀಗೆ ‘ಕನಕಪುರ ಬಂಡೆ’ ಎಂಬ ಹವಾ ಇಟ್ಟಿರುವ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರಲ್ಲೇ ಅಸಮಾಧಾನ ಮೂಡಿದೆ ಎಂಬ ಆರೋಪ ಕೇಳಿಬರುತ್ತಿದೆ. ಇದೇ ಕಾರಣಕ್ಕೆ ಇದೀಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನ ಕೆಳಗೆ ಇಳಿಸಲು ಎಲ್ಲಾ ಸಿದ್ಧತೆ ಸಾಗಿದೆ ಎಂಬ ಆರೋಪ ಕೇಳಿಬಂದಿದೆ. ಕಾಂಗ್ರೆಸ್ ಪಕ್ಷ ಲೋಕಸಭೆ ಚುನಾವಣೆ 2024ರಲ್ಲಿ ಅಂದುಕೊಂಡ ರೀತಿ ಗೆಲುವು …
Read More »ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರಿಂದಲೇ ಗೋ ಬ್ಯಾಕ್ ಅಭಿಯಾನ; ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ಉಡುಪಿ: ಲೋಕಸಭಾ ಚುನಾವಣೆಯಲ್ಲಿ ಉಡುಪಿಯಲ್ಲಿ ಕಾಂಗ್ರೆಸ್ ಸೋಲನಭುವಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರೇ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಗೋ ಬ್ಯಾಕ್ ಅಭಿಯಾನ ಆರಂಭಿಸಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಗೋ ಬ್ಯಾಕ್ ಅಭಿಯಾನ ವಿಚಾರವಾಗಿ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಉಡುಪಿ ಮಾತ್ರವಲ್ಲ ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಗೆ ಹಿನ್ನಡೆಯಾಗಿದೆ. ಕರಾವಳಿಯ ಮೂರು ಜಿಲ್ಲೆಗಳಲ್ಲಿ ಹೆಚ್ಚಿನ ತಯಾರಿ ಮಾಡಬೇಕು ಎಂದರು. ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಲಕ್ಷ್ಮೀ ಹೆಬ್ಬಾಳ್ಕರ್ ನೇಮಕ …
Read More »NDA ಸಂಚಾಲಕ ಹುದ್ದೆಗೆ TDP ಬೇಡಿಕೆ?: ಬಿಜೆಪಿಯಲ್ಲಿ ಟೆನ್ಶನ್, ಇಕ್ಕಟ್ಟಿನ ಪರಿಸ್ಥಿತಿ!
ನವದೆಹಲಿ: ಎನ್ ಡಿಎ ಮೈತ್ರಿಕೂಟ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಏರಲು ಸಜ್ಜಾಗುತ್ತಿದ್ದಂತೆ ಬಿಜೆಪಿ ನಂತರ ಅತಿ ಹೆಚ್ಚು ಸ್ಥಾನಗಳನ್ನು ಹೊಂದಿರುವ ಟಿಡಿಪಿ ಎನ್ ಡಿಎ ಸಂಚಾಲಕ ಹುದ್ದೆಗೆ ಬೇಡಿಕೆ ಮುಂದಿಡುತ್ತಿದೆ ಎಂಬ ಮಾತುಗಳು ದೆಹಲಿಯ ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ಇದು ಬಿಜೆಪಿಗೆ ತಲೆನೋವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಎನ್‌ಡಿಎ ಸಂಚಾಲಕ ಸ್ಥಾನಕ್ಕಾಗಿ ಟಿಡಿಪಿ ಬಿಜೆಪಿ ಮುಂದೆ ಬೇಡಿಕೆಯಿಟ್ಟಿದೆ ಎಂಬುದು ಮೂಲಗಳನ್ನು ಆಧರಿಸಿದ ಮಾಧ್ಯಮ ವರದಿ. ಟಿಡಿಪಿ ಲೋಕಸಭೆ ಸ್ಪೀಕರ್ ಅಥವಾ ಎನ್‌ಡಿಎ …
Read More »ಬೆಂಗಳೂರಲ್ಲಿ ವೈದ್ಯರ ಎಡವಟ್ಟಿಗೆ 7 ವರ್ಷದ ಬಾಲಕ ಸಾವು
ಬೆಂಗಳೂರು: ಸಂಪಂಗಿ ರಾಮನಗರದಲ್ಲಿ ವೈದ್ಯರೊಬ್ಬರು ಮಾಡಿದಂತ ಎಡವಟ್ಟಿಗೆ 7 ವರ್ಷದ ಬಾಲಕನೊಬ್ಬ ಧಾರುಣವಾಗಿ ಸಾವನ್ನಪ್ಪಿದ್ದಂತ ಘಟನೆ ನಡೆದಿದೆ. ಬೆಂಗಳೂರಿನ ಸಂಪಂಗಿ ರಾಮನಗರದ 7 ವರ್ಷದ ಬಾಲಕ ಆಡನ್ ಮೈಕಲ್ ಎಂಬಾತನಿಗೆ ಊಟ ಮಾಡುವಂತ ಸಂದರ್ಭದಲ್ಲಿ ಗಂಟಲು ನೋವು ಕಾಣಿಸಿಕೊಂಡಿತ್ತು. ಈ ಹಿನ್ನಲೆಯಲ್ಲಿ ಸಿಂಧ್ಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆಡನ್ ಮೈಕಲ್ ಪರೀಕ್ಷೆ ಮಾಡಿದಂತ ವೈದ್ಯರು, ಆಪರೇಷನ್ ಮಾಡಬೇಕು ಅಂತ ಹೇಳಿದ್ದಾರೆ. ಅದಕ್ಕೆ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದಾರೆ. ಸಿಂಧ್ಯಾ ಆಸ್ಪತ್ರೆಯ ಡಾ.ಶ್ವೇತಾ …
Read More »ಹೊಸದಾಗಿ ಆಯ್ಕೆಯಾದ 251 ಸಂಸದರಿಗೆ ಕ್ರಿಮಿನಲ್ ನಂಟು: ಎಡಿಆರ್ ವರದಿ
ನವದೆಹಲಿ: ಹೊಸದಾಗಿ ಆಯ್ಕೆಯಾದ 543 ಲೋಕಸಭಾ ಸದಸ್ಯರಲ್ಲಿ 251 (ಶೇ 46) ಮಂದಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ. ಅವರಲ್ಲಿ 27 ಮಂದಿ ಶಿಕ್ಷೆಗೆ ಒಳಗಾದವರು ಸೇರಿದ್ದಾರೆ ಎಂದು ಸ್ವಯಂ ಸೇವಾ ಸಂಸ್ಥೆ ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ (ಎಡಿಆರ್) ವರದಿ ಮಾಡಿದೆ. 2019ರಲ್ಲಿ 233 (ಶೇ 43), 2014ರಲ್ಲಿ 185 (ಶೇ 34 ), 2009ರಲ್ಲಿ 162 (ಶೇ 30) ಮತ್ತು 2004ರಲ್ಲಿ 125 (ಶೇ 23 ) ಸಂಸದರ ವಿರುದ್ಧ …
Read More »BREAKING: ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸ್ವೀಕಾರ ಜೂನ್.12ಕ್ಕೆ
ನವದೆಹಲಿ: ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಎನ್ ಚಂದ್ರಬಾಬು ನಾಯ್ಡು ಅವರ ಪ್ರಮಾಣವಚನವನ್ನು ಜೂನ್ 12 ಕ್ಕೆ ಮುಂದೂಡಲಾಗಿದೆ ಎಂದು ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಮೂಲಗಳು ತಿಳಿಸಿವೆ. ಜೂನ್ 8 ರಂದು ನಿಗದಿಯಾಗಿರುವ ಪ್ರಧಾನಿ ಮೋದಿ ಮತ್ತು ಎನ್ಡಿಎ ಕ್ಯಾಬಿನೆಟ್ ಪ್ರಮಾಣವಚನ ಸಮಾರಂಭದಿಂದಾಗಿ ನಾಯ್ಡು ಅವರ ಸಮಾರಂಭವನ್ನು ಮುಂದೂಡಲಾಗಿದೆ ಎಂದು ವರದಿಗಳು ತಿಳಿಸಿವೆ. ಪ್ರಧಾನಿ ಮತ್ತು ಇತರ ಹಿರಿಯ ಎನ್ಡಿಎ ನಾಯಕರು ಮೆಗಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಜೂನ್ 6 ರ ಗುರುವಾರ, …
Read More »ಯಾರಾಗಲಿದ್ದಾರೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರು..?
ಬೆಂಗಳೂರು, ಜೂ.6-ಪ್ರಸಕ್ತ ಲೋಕಸಭಾ ಚುನಾವಣಾ ಫಲಿತಾಂಶದ ನಂತರ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರು ಯಾರಾಗಲಿದ್ದಾರೆ ಎಂಬ ಚರ್ಚೆ ಪ್ರಾರಂಭವಾಗಿದೆ. ಶಾಸಕಾಂಗ ಪಕ್ಷದ ನಾಯಕರಾಗಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಂಸದರಾಗಿರುವ ಹಿನ್ನೆಲೆಯಲ್ಲಿ ಆ ಸ್ಥಾನ ತೆರವಾಗಲಿದೆ. ಜೆಡಿಎಸ್‌ನಲ್ಲಿ ಮಾಜಿ ಸಚಿವರಾದ ಹೆಚ್.ಡಿ.ರೇವಣ್ಣ, ಜಿ.ಟಿ.ದೇವೇಗೌಡ ಹಾಗೂ ಶ್ರೀನಿವಾಸಪುರ ಕ್ಷೇತ್ರದ ವೆಂಕಟಶಿವಾರೆಡ್ಡಿ ಅವರು ಹಿರಿಯ ಶಾಸಕರಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಕುಮಾರಸ್ವಾಮಿ ಸಂಸದರಾಗಿದ್ದ ಸಂದರ್ಭದಲ್ಲೂ ರೇವಣ್ಣ ಅವರು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿದ್ದರು. …
Read More »
Laxmi News 24×7