ಮೈಸೂರು: ಬಾಗೀನ ಸಮರ್ಪಣೆ ಹಿನ್ನೆಲೆ ಕಬಿನಿ ಜಲಾಶಯ, ಕೆಆರ್ಎಸ್ ಜಲಾಶಯ ವಿವಿಧ ಹೂಗಳಿಂದ ಅಲಂಕಾರಗೊಂಡು ಕಂಗೊಳಿಸುತ್ತಿದ್ವು. ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿಂದು ಸಂಭ್ರಮ ಮನೆ ಮಾಡಿತ್ತು. ಕಪಿಲಾ ನದಿಗೆ ಅಡ್ಡಲಾಗಿ ಕಟ್ಟಿರುವ ಕಬಿನಿ ಜಲಾಶಯ ಪುಷ್ಪಾಲಂಕಾರಗಳಿಂದ ಕಂಗೊಳಿಸುತ್ತಿತ್ತು ಎಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯ ಭರ್ತಿಯಾಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸೋಮವಾರ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. …
Read More »ವಿಕ್ಟೋರಿಯಾ ಆಸ್ಪತ್ರೆ ಡಾಕ್ಟರ್ಗೆ ಲೋಕಾಯುಕ್ತರಿಂದ ‘ಇಂಜೆಕ್ಷನ್’! ರೋಗಿಗಳ ಪಾಡು ನೋಡಿ ನ್ಯಾಯಮೂರ್ತಿಗಳೇ
ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದ ಹಿನ್ನೆಲೆ ವಿಕ್ಟೋರಿಯಾ (Victoria) ಆಸ್ಪತ್ರೆಗೆ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಬಿ.ಎಸ್ ಪಾಟೀಲ್ (B.S Patil), ಉಪಲೋಕಾಯುಕ್ತ ನ್ಯಾಯಮೂರ್ತಿ ಫಣೀಂದ್ರ (Phaneendra) ಹಾಗೂ ಬಿ. ವೀರಪ್ಪ (B. Veerappa) ದಿಢೀರ್ ಭೇಟಿ ನೀಡಿ ಆಸ್ಪತ್ರೆಯ ಚಿಕಿತ್ಸಾ ವಿಧಾನ, ರೋಗಿಗಳಿಗೆ ವೈದ್ಯರು (Doctor) ಹೇಗೆ ಸ್ಪಂದಿಸುತ್ತಿದ್ದಾರೆ, ಮಾತ್ರೆಗಳನ್ನು ಬರೆದುಕೊಡುವ ಬಗೆ ಹೇಗೆ ಎಂಬುದನ್ನು ಪರಿಶೀಲನೆ ನಡಸಿದರು. ಬಳಿಕ ರೋಗಿಗಳ ಜೊತೆ ಚರ್ಚೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದರು. ಸಾರ್ವಜನಿಕರಿಂದ …
Read More »ನಾಡಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ರಾಜ್ಯ ಸಮೃದ್ಧಿಯಿಂದ ಕೂಡಿದೆ : ಸಿಎಂ
ಮೈಸೂರು : ನಾಡಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ರಾಜ್ಯ ಸಮೃದ್ಧಿಯಿಂದ ಕೂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಇಂದು ಅವರು ಮೈಸೂರು ಜಿಲ್ಲೆಯ ಎಚ್ ಡಿ ಕೋಟೆ ತಾಲೂಕಿನ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಿ ಮಾತನಾಡಿದರು. ನಾಡಿನಲ್ಲಿ ಉತ್ತಮ ಮಳೆಯಾಗುತ್ತಿದ್ದು ಕರ್ನಾಟಕ ರಾಜ್ಯವು ಸಮೃದ್ಧಿಯಿಂದ ಕೂಡಿದೆ. ರಾಜ್ಯದಲ್ಲಿ ಎಲ್ಲಾ ಜಲಾಶಯಗಳು ಸಹ ಭರ್ತಿಯಾಗಿವೆ. ಕೆ ಆರ್ ಎಸ್, ಕಬಿನಿ, ಹಾರಂಗಿ, ಹೇಮಾವತಿ ಡ್ಯಾಮಗಳು ಭರ್ತಿಯಾಗಿವೆ. ತಮಿಳುನಾಡು ನಮಗೂ ನೀರಿನ ಸಮಸ್ಯೆ ಬಂದಿತ್ತು. …
Read More »BJP ಕರ್ನಾಟಕ ‘ಭ್ರಷ್ಟ ರಾಜ್ಯ’ ಎಂದು ಬಿಂಬಿಸಲು ಮುಂದಾಗಿದೆ: ನಿರ್ಮಲಾ ವಿರುದ್ಧ ಸಿಎಂ ಕಿಡಿ
ಮೈಸೂರು: ಕೇಂದ್ರ ಬಜೆಟ್ನಲ್ಲಿ ರಾಜ್ಯಕ್ಕೆ ‘ಅನ್ಯಾಯ’ ಎಸಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರದ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ನಮ್ಮ ವಿರುದ್ಧ “ಸುಳ್ಳು” ಆರೋಪಗಳನ್ನು ಮಾಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಸೋಮವಾರ ಕಿಡಿ ಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಅನುದಾನ ಹಂಚಿಕೆ ಕುರಿತು ಸಾಕಷ್ಟು ತಪ್ಪು ಮಾಹಿತಿಗಳನ್ನು ಹರಡಲಾಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿಕೆ ನೀಡಿರುವ ಕುರಿತು ಪ್ರತಿಕ್ರಿಯಿಸಿದರು. ‘ಕಾಂಗ್ರೆಸ್ ಆಡಳಿತವಿರುವ ಕರ್ನಾಟಕವನ್ನು ‘ಭ್ರಷ್ಟ ರಾಜ್ಯ’ ಎಂದು …
Read More »ಮಳೆಹಾನಿ ಸಂತ್ರಸ್ತರಿಗೆ ಗುಡ್ ನ್ಯೂಸ್: ರಾಜ್ಯ ಸರ್ಕಾರದಿಂದ ನೆರೆ ಪರಿಹಾರಕ್ಕೆ 777 ಕೋಟಿ ಬಿಡುಗಡೆ
ಬೆಂಗಳೂರು: ರಾಜ್ಯದಲ್ಲಿ ನೆರೆ ಪರಿಹಾರ ಹಾಗೂ ಇತರೆ ಕಾರ್ಯಕ್ರಮಗಳಿಗೆ ಒಟ್ಟು 777 ಕೋಟಿ ಬಿಡುಗಡೆ ಮಾಡಲಾಗಿದೆ. ಹಾಸನ ಜಿಲ್ಲೆಗೆ 23 ಕೋಟಿ ನೀಡಲಾಗಿದೆ ಅಂತ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಸುರಿದಂತ ಭಾರೀ ಮಳೆಯಿಂದಾಗಿ ಹಲವೆಡೆ ಮನೆಗಳು ಬಿದ್ದು ಹೋಗಿದ್ದಾವೆ. ನೀರು ಬೆಳೆಯ ಮೇಲೆ ನುಗ್ಗಿದ ಪರಿಣಾಮ, ಬೆಳೆಹಾನಿ ಕೂಡ ಆಗಿದೆ. ಈ ರೈತರಿಗೆ ನೆರವಾಗುವ ಸಲುವಾಗಿ ನೆರೆ ಪರಿಹಾರವಾಗಿ ರಾಜ್ಯ ಸರ್ಕಾರದಿಂದ …
Read More »ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಸಿಗಲಿದೆ 20,000 ಸ್ಕಾಲರ್ ಶಿಪ್
ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ ಏನು? ಅರ್ಜಿ ಸಲ್ಲಿಕೆ ಹೇಗೆ? ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು?: * ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿದಂತಹ ವಿದ್ಯಾರ್ಥಿಗಳು ಹಾಗೂ ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದಂತಹ ವಿದ್ಯಾರ್ಥಿಗಳು ಅರ್ಹರು. * ಮೊದಲನೆಯ ಪ್ರಯತ್ನದಲ್ಲಿಯೆ ಪ್ರಥಮ ದರ್ಜೆಯಲ್ಲಿ ಪಾಸ್ ಆಗಿರುವ ಅಭ್ಯರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ …
Read More »ಅಬಕಾರಿ ನೀತಿ ಪ್ರಕರಣ: ಕೇಜ್ರಿವಾಲ್ ಸೇರಿ ಐವರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ CBI
ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದ ತನಿಖೆಯನ್ನು ಪೂರ್ಣಗೊಳಿಸಿರುವ ಸಿಬಿಐ ಅಧಿಕಾರಿಗಳು, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಎಎಪಿ ಶಾಸಕ ದುರ್ಗೇಶ್ ಪಾಠಕ್ ಸೇರಿದಂತೆ ಐವರ ವಿರುದ್ಧ ಅಂತಿಮ ದೋಷಾರೋಪ ಪಟ್ಟಿಯನ್ನು ಸೋಮವಾರ ಸಲ್ಲಿಸಿದ್ದಾರೆ. ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ತೆಲಂಗಾಣದ ವಿಧಾನ ಪರಿಷತ್ ಸದಸ್ಯೆ ಕೆ. ಕವಿತಾ ಹಾಗೂ 15 ಮಂದಿ ಇತರರ ವಿರುದ್ಧ ಸಿಬಿಐ ಅಧಿಕಾರಿಗಳು ಈ ಹಿಂದೆ ಒಂದು ಮುಖ್ಯ ದೋಷಾರೋಪ …
Read More »ನಡುಗಡ್ಡೆಯಾದ ಢವಳೇಶ್ವರ, ಹುಣಶ್ಯಾಳ, ಮಸಗುಪ್ಪಿ
ಮೂಡಲಗಿ: ತಾಲ್ಲೂಕಿನ ಕೊನೆಯ ಗ್ರಾಮಗಳಾಗಿರುವ ಹುಣಶ್ಯಾಳ ಮತ್ತು ಢವಳೇಶ್ವರ ಗ್ರಾಮಗಳು ಘಟಪ್ರಭಾ ನದಿಯ ಪ್ರವಾಹಕ್ಕೆ ಭಾನುವಾರ ಬೆಳಿಗ್ಗೆಯಿಂದ ಅಕ್ಷರಶಃ ನಡುಗಡ್ಡೆಗಳಾಗಿವೆ. ಹುಣಶ್ಯಾಳ ಪಿವೈ ಗ್ರಾಮದ ಹಣಮಂತ ದೇವರ ದೇವಾಲಯವು ಜಲಾವೃತಗೊಂಡಿದೆ. ಶನಿವಾರ ಸಂಜೆಯಿಂದ ನದಿಯ ನೀರಿನ ಪ್ರಮಾಣ ಏರುತ್ತಿರುವುದರಿಂದ ಇಡೀ ಊರಿನ ಜನ, ಜಾನುವಾರು, ಸಾಮಾನು ಸರಂಜುಮಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ಸಾಗುತ್ತಿದ್ದಾರೆ. ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಕಾಳಜಿ ಕೇಂದ್ರ ತೆರೆದಿದ್ದು 200ಕ್ಕೂ ಹೆಚ್ಚು ಸಂತ್ರಸ್ತರು ಆಶ್ರಯ ಪಡೆದಿದ್ದಾರೆ. ಶಾಸಕ …
Read More »ಮನೆಗಳಿಗೆ ನುಗ್ಗಿದ ಮಳೆ ನೀರು
ಯಮಕನಮರಡಿ: ಹುಕ್ಕೇರಿ ತಾಲ್ಲೂಕಿನ ದಡ್ಡಿ ಗ್ರಾಮದ ಹೊರವಲಯದಲ್ಲಿ ಬರುವ ಹೊಸ ರಸ್ತೆಯ ಬಳಿ ಹಲವು ಮನೆಗಳಿಗೆ ಮಳೆ ನೀರು ನುಗ್ಗಿದ್ದು, ನಿವಾಸಿಗಳು ಪರದಾಡುವಂತಾಗಿದೆ. ಕಳೆದ ವರ್ಷ ಲೋಕೋಪಯೋಗಿ ಇಲಾಖೆಯಿಂದ ₹ 20 ಲಕ್ಷ ವೆಚ್ಚದಲ್ಲಿ ಆಗಿರುವ ಸಿಮೆಂಟ್ ರಸ್ತೆ ನಿರ್ಮಾಣ ಕಾಮಗಾರಿ ಅವೈಜ್ಞಾನಿಕವಾಗಿದೆ. ಹೀಗಾಗಿ ಈ ರಸ್ತೆಯ ಮೇಲೆ ಹರಿಯುವ ಮಳೆ ನೀರು ಗಟಾರಕ್ಕೆ ಹೋಗದೆ ಮನೆಗೆ ನುಗ್ಗುತ್ತಿದೆ ಎಂದು ನಿವಾಸಿಗಳು ದೂರಿದ್ದಾರೆ. ‘ಈ ಬಗ್ಗೆ ಇಲ್ಲಿಯ ಮುಸ್ಲಿಂ ಸಮುದಾಯದವರು …
Read More »ಮಹಾದಾಯಿಗೆ ಶೀಘ್ರದಲ್ಲಿ ತಾರ್ಕಿಕ ಅಂತ್ಯ: ಶೆಟ್ಟರ
ಸವದತ್ತಿ: ಮಹಾದಾಯಿ, ಕಳಸಾ-ಬಂಡೂರಿ ಸೇರಿ 13 ಟಿಎಂಸಿ ಅಡಿ ನೀರು ಮಲಪ್ರಭೆಗೆ ಹರಿಸಬೇಕಿದೆ. ಗೋವಾ ಸರ್ಕಾರದ ಉದ್ಧಟತನದಿಂದ ವಿಳಂಬವಾಗುತ್ತಿದೆ. ಅರಣ್ಯ, ನೀರಾವರಿ ಇಲಾಖೆಗಳಿಂದ ಕ್ಲಿಯರನ್ಸ್ ಬಂದಿದ್ದು, ಕೆಲ ದಿನಗಳಲ್ಲಿ ಇದಕ್ಕೊಂದು ತಾರ್ಕಿಕ ಅಂತ್ಯ ನೀಡಲಾಗುವುದು ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು. ಇಲ್ಲಿನ ಕಲ್ಮಠದ ಆರವಣದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘ ತಾಲ್ಲೂಕು ಘಟಕದಿಂದ ಭಾನುವಾರ ಜರುಗಿದ ಪ್ರತಿಭಾ ಪುರಸ್ಕಾರ ಮತ್ತು ಗೌರವ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. …
Read More »
Laxmi News 24×7