Breaking News

ರಾಜಕೀಯ

ಮನೆ ಮುಂದೆ ಪಟಾಕಿ ಹಚ್ಚಿದ್ದಕ್ಕೆ ಕೊಲೆ!

ರಾಯಚೂರು: ಮನೆ ಮುಂದೆ ಪಟಾಕಿ ಹೊಡೆಯುತ್ತಿರುವ ವಿಚಾರಕ್ಕೆ ಗಲಾಟೆಯಾಗಿದ್ದು, ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಗುರುವಾರ (ಅ.31) ನಗರದ ರಾಗಿಮಾನಗಡ್ಡದಲ್ಲಿ ನಡೆದಿದೆ. ನರಸಿಂಹಲು (32) ಕೊಲೆಯಾದ ವ್ಯಕ್ತಿ. ಮನೆ ಮುಂದೆ ಪಟಾಕಿ ಹಚ್ಚುತ್ತಿರುವ ಕಾರಣಕ್ಕೆ ನರಸಿಂಹಲು ಹಾಗೂ ಬಡಾವಣೆಯ ಇತರರ ನಡುವೆ ಗಲಾಟೆಯಾಗಿದೆ. ಮಾತಿಗೆ ಮಾತು ಬೆಳೆದು ಗಲಾಟೆ ಜೋರಾಗಿದ್ದು,‌ ಕೊಲೆ ಸಂಭವಿಸಿದೆ. ಪಶ್ಷಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read More »

ಮಹಾನ್ ಪುರುಷರ ಜಯಂತಿ ಕಾರ್ಯಕ್ರಮ

ಗೋಕಾಕ- ಮಹಾನ್ ಪುರುಷರ ಜಯಂತಿ ಕಾರ್ಯಕ್ರಮಗಳನ್ನು ಎಲ್ಲ ಜಾತಿಯವರು ಸೇರಿಕೊಂಡು ಆಚರಿಸಿದರೆ ಮಾತ್ರ ಅಂತಹ ಕಾರ್ಯಕ್ರಮಗಳಿಗೆ ಶೋಭೆ ಬರುತ್ತದೆ. ಕೇವಲ ಒಂದು ಸಮುದಾಯಕ್ಕೆ ಸೀಮಿತಗೋಳಿಸದೇ ಒಗ್ಗಟ್ಟಿನಿಂದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಆಚರಿಸುವ ಮೂಲಕ ಸ್ವಾತಂತ್ರö್ಯ ಹೋರಾಟಗಾರರಿಗೆ ಗೌರವ ಸಲ್ಲಿಸುವ ಕಾರ್ಯಕ್ಕೆ ಅರಭಾವಿ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ತಾಲ್ಲೂಕಿನ ಕೌಜಲಗಿ ಗ್ರಾಮದ ಬಸವೇಶ್ವರ ಪೇಟೆಯಲ್ಲಿ ಮಂಗಳವಾರದAದು ಜರುಗಿದ ಕಿತ್ತೂರು ರಾಣಿ ಜಯಂತಿ …

Read More »

ಸಂಘದ ಶೇಅರುದಾರರ ಆರ್ಥಿಕ ಪ್ರಗತಿಗೆ ಯೋಜನೆಗಳನ್ನು ಮುಟ್ಟಿಸಿ; ಶಾಸಕ ಬಾಲಚಂದ್ರ ಜಾರಕಿಹೊಳಿ

ಸಂಘದ ಶೇಅರುದಾರರ ಆರ್ಥಿಕ ಪ್ರಗತಿಗೆ ಯೋಜನೆಗಳನ್ನು ಮುಟ್ಟಿಸಿ; ಶಾಸಕ ಬಾಲಚಂದ್ರ ಜಾರಕಿಹೊಳಿ ಮಸಗುಪ್ಪಿಯಲ್ಲಿ ವಿವಿಧೋದ್ದೇಶ ಪಿಕೆಪಿಎಸ್ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮೂಡಲಗಿ- ಯಾವುದೇ ಒಂದು ಸಂಘ- ಸಂಸ್ಥೆಗಳು ಬೆಳೆಯಬೇಕಾದರೆ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರು ಒಂದಾಗಿ ಕೆಲಸ ಮಾಡಬೇಕು. ಶೇರುದಾರರ ಆರ್ಥಿಕ ಮಟ್ಟವನ್ನು ಸುಧಾರಿಸುವ ಸಂಬಂಧ ಸರ್ಕಾರದಿಂದ ಸಿಗುವ ಯೋಜನೆಗಳನ್ನು ನೇರವಾಗಿ ಶೇರುದಾರರಿಗೆ ತಲುಪಿಸುವ ಕಾರ್ಯ ಮಾಡಬೇಕು ಎಂದು ಶಾಸಕ ಮತ್ತು …

Read More »

ಯಡಿಯೂರಪ್ಪ ಸಿಎಂ ಆಗಿದ್ದಾಗ ಸಾವಿರಾರು ಕೋಟಿ ದುಡ್ಡು ಹೊಡೆದಿದ್ದಾರೆ : ಯತ್ನಾಳ್ ಸ್ಪೋಟಕ ಆರೋಪ!

ವಿಜಯಪುರ : ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ.ಇದೀಗ ಅವರ ವಿರುದ್ಧ ಮತ್ತೊಂದು ಆರೋಪ ಮಾಡಿದ್ದು, ಯಡಿಯೂರಪ್ಪ ಸಿಎಂ ಆಗಿದ್ದಾಗ ಸಾವಿರಾರು ಕೋಟಿ ರೂಪಾಯಿ ದುಡ್ಡು ತಿಂದಿದ್ದಾರೆ ಎಂದು ಸ್ಪೋಟಕ ವಾದಂತಹ ಆರೋಪ ಮಾಡಿದ್ದಾರೆ.   ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಎಸ್‌ವೈ ಸಿಎಂ ಇದ್ದಾಗ ಮಂತ್ರಿಯಾಗು ಎಂದಿದ್ದರು ಆದರೆ ನಾನು ಆಗಿರಲಿಲ್ಲ. ಅವರು ಸಿಎಂ …

Read More »

B.G.S. ಆಸ್ಪತ್ರೆಗೆ ದಾಖಲಾದ ನಟ ದರ್ಶನ್

ಬೆಂಗಳೂರು: ಚಿಕಿತ್ಸೆಗಾಗಿ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿರುವ ಕೊಲೆ ಆರೋಪಿ ನಟ ದರ್ಶನ್ ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ಬಳ್ಳಾರಿ ಜೈಲು ಸೇರಿದ್ದ ಎ2 ಆರೋಪಿ ನಟ ದರ್ಶನ್, ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಹೈಕೋರ್ಟ್ ಅ.30ರಂದು ದರ್ಶನ್ ಗೆ 6 ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಈ ನಿಟ್ಟಿನಲ್ಲಿ ಜೈಲಿನಿಂದ ಬಿಡುಗಡೆಯಾಗಿರುವ ನಟ ದರ್ಶನ್, ಇಂದು …

Read More »

ಳಕಿನ ಹಬ್ಬ ದೀಪಾವಳಿ: ಮಾರುಕಟ್ಟೆಯಲ್ಲಿ ಖರೀದಿ ಭರಾಟೆ

ಬೆಳಗಾವಿ: ಬೆಳಕಿನ ಹಬ್ಬ ‘ದೀಪಾವಳಿ’ ಪ್ರಯುಕ್ತ ಇಲ್ಲಿನ ಮಾರುಕಟ್ಟೆ ಪ್ರದೇಶದಲ್ಲಿ ಗುರುವಾರ ಖರೀದಿ ಭರಾಟೆ ಜೋರಾಗಿತ್ತು. ಗಣಪತ ಗಲ್ಲಿ, ಮಾರುತಿ ಗಲ್ಲಿ, ರವಿವಾರ ಪೇಟೆ, ಖಡೇಬಜಾರ್‌, ಪಾಂಗುಳ ಗಲ್ಲಿ ಮತ್ತಿತರ ಮಾರುಕಟ್ಟೆ ಪ್ರದೇಶಗಳು ಜನರಿಂದ ಕಿಕ್ಕಿರಿದು ತುಂಬಿದ್ದವು. ಬೆಳಗಾವಿ ನಗರವಷ್ಟೇ ಅಲ್ಲದೆ, ಗ್ರಾಮೀಣ ಭಾಗದಿಂದಲೂ ಅಪಾರ ಸಂಖ್ಯೆಯಲ್ಲಿ ಬಂದಿದ್ದ ಜನರು, ಆಲಂಕಾರಿಕ ವಸ್ತುಗಳು, ಹಣತೆಗಳು, ಬಣ್ಣ-ಬಣ್ಣದ ರಂಗೋಲಿ ಪುಡಿ, ಶಿವಾಜಿ ಮೂರ್ತಿಗಳು, ಪೂಜಾ ಸಾಮಗ್ರಿಗಳನ್ನು ಖರೀದಿಸಿದರು. ವೈವಿಧ್ಯಮಯ ವಿನ್ಯಾಸಗಳ ಆಕಾಶಬುಟ್ಟಿಗಳ …

Read More »

ಶಿಕ್ಷಣ ಕ್ಷೇತ್ರಕ್ಕೆ ಒತ್ತು: ಐಹೊಳೆ

ರಾಯಬಾಗ: ‘ಮತಕ್ಷೇತ್ರದಲ್ಲಿ ಶೈಕ್ಷಣಿಕ ಕ್ಷೇತ್ರಕ್ಕ ಒತ್ತು ನೀಡಿ, ಸರ್ಕಾರಿ ಶಾಲೆಯಲ್ಲಿ ಕಲಿಯುವ ಎಲ್ಲ ಮಕ್ಕಳಿಗೆ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಶಾಸಕ ಡಿ.ಎಂ ಐಹೊಳೆ ಹೇಳಿದರು. ತಾಲ್ಲೂಕಿನ ಮೇಖಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಪಂಚಾಯತ್ ರಾಜ್ ಇಲಾಖೆ ವತಿಯಿಂದ ಬುಧವಾರ ₹68 ಲಕ್ಷ ಅನುದಾನದಲ್ಲಿ ಮಂಜೂರಾದ ನಾಲ್ಕು ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಹಾಗೂ ದಿಗ್ಗೇವಾಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ₹18 ಲಕ್ಷ ಅನುದಾನದಲ್ಲಿ ಒಂದು ಹೆಚ್ಚುವರಿ ಕೊಠಡಿ …

Read More »

ಜಮಖಂಡಿ | ಪಿಎಸ್‌ಐ ಹೆಸರಿನಲ್ಲಿ ಇನ್‌ಸ್ಟಾಗ್ರಾಂ ನಕಲಿ ಖಾತೆ ತೆರೆದವನ ಬಂಧನ

ಜಮಖಂಡಿ: ಶಹರ ಠಾಣೆ ಪಿಎಸ್‌ಐ ಅನೀಲ ಕುಂಬಾರ ಹೆಸರಿನಲ್ಲಿ ಐದು ನಕಲಿ ಫೇಸ್‌ಬುಕ್ ಖಾತೆ ಮತ್ತು ಒಂದು ಇನ್‌ಸ್ಟಾಗ್ರಾಂ ಖಾತೆ ತೆರೆದ ಆರೋಪಿಯನ್ನು ಬಂಧಿಸಲಾಗಿದೆ. ಪಿಎಸ್‌ಐ ಸಮವಸ್ತ್ರದ ಮೇಲಿನ ಹಾಗೂ ಇನ್ನಿತರ ಚಿತ್ರಗಳನ್ನು ಬಳಸಿಕೊಂಡು ರಾಜಕೀಯ ಮುಖಂಡರಿಗೆ ಹಾಗೂ ಮಹಿಳೆಯರಿಗೆ ಸಂದೇಶ ಕಳುಹಿಸಿ ವಂಚನೆ ಮಾಡುತ್ತಿದ್ದು ಹಾಗೂ ಹಣ ಬೇಡಿಕೆ ಇಡುತ್ತಿರುವ ಬಗ್ಗೆ ಮಾಹಿತಿ ತಿಳಿದಾಗ ಪಿಎಸ್‌ಐ ಅನೀಲ ಕುಂಬಾರ ಬಾಗಲಕೋಟೆ ಸಿಇಎನ್ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.   …

Read More »

ಸುವರ್ಣ ಮಹೋತ್ಸವ ಪ್ರಶಸ್ತಿ ಮೊತ್ತ 50 ಸಾವಿರದಿಂದ 1 ಲಕ್ಷಕ್ಕೆ ಏರಿಕೆ: ಸಚಿವ ಶಿವರಾಜ ತಂಗಡಗಿ ಘೋಷಣೆ

ಬೆಂಗಳೂರು: ಸುವರ್ಣ ಮಹೋತ್ಸವ ಪ್ರಶಸ್ತಿ ಮೊತ್ತ ಐವತ್ತು ಸಾವಿರದಿಂದ ಒಂದು ಲಕ್ಷಕ್ಕೆ ಏರಿಕೆ ಮಾಡುವುದಾಗಿ ಸಚಿವ ಶಿವರಾಜ ತಂಗಡಗಿ ಘೋಷಣೆ ಮಾಡಿದ್ದಾರೆ. ಕರ್ನಾಟಕ ಸಂಭ್ರಮ 50 ಸುವರ್ಣ ಮಹೋತ್ಸವ ಆಚರಣೆಯ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಐವತ್ತು ಮಹಿಳಾ ಸಾಧಕಿಯರು ಹಾಗೂ 50ಪುರುಷ ಸಾಧಕರಿಗೆ ಸುವರ್ಣ ಮಹೋತ್ಸವ ಪ್ರಶಸ್ತಿಯನ್ನು ಈಗಾಗಲೇ ಘೋಷಣೆ ಮಾಡಿದ್ದು ಪ್ರಶಸ್ತಿ ಮೊತ್ತವನ್ನು 50,000 ಎಂದು ತಿಳಿಸಲಾಗಿತ್ತು ಎಂದಿದ್ದಾರೆ. ಇದೊಂದು ಐತಿಹಾಸಿಕ ಸಂದರ್ಭ ವಾಗಿರುವುದರಿಂದ ಈ …

Read More »

ಪಟಾಕಿ ಸಾಗಿಸುತ್ತಿದ್ದ ವೇಳೆ Onion Bomb ಸ್ಫೋಟಗೊಂಡು ಓರ್ವ ಸಾವು, ಆರು ಮಂದಿಗೆ ಗಾಯ

ಅಮರಾವತಿ: ದೇಶಾದ್ಯಂತ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತಿದ್ದು, ಪಟಾಕಿ ಸಂಬಂಧಿತ ಅವಘಡಗಳು ವರ್ಷ ಕಳೆದಂತೆ ಹೆಚ್ಚಾಗುತ್ತಿವೆ. ಇದೀಗ ಆಂಧ್ರಪ್ರದೇಶ ಏಳೂರಿನಲ್ಲಿ ಈರುಳ್ಳಿ ಬಾಂಬ್​ (Onion Bomb) ಪಟಾಕಿ ಸ್ಪೋಟಗೊಂಡು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.   ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಕಿರಿದಾದ ರಸ್ತೆಯಲ್ಲಿ ಇಬ್ಬರು ವ್ಯಕ್ತಿಗಳು ಸ್ಕೂಟರ್​ನಲ್ಲಿ ಪಟಾಕಿ ತುಂಬಿರುವ ಚೀಲವನ್ನು ಸಾಗಿಸುತ್ತಿರುವುದನ್ನು ನೋಡಬಹುದಾಗಿದೆ. ರಸ್ತೆ …

Read More »