Breaking News

ರಾಜಕೀಯ

ಸಂಚಾರಿ‌ ನಿಯಮ ಉಲ್ಲಂಘಿಸಿದವರಿಂದ 1,01,23,100 ರೂಪಾಯಿ ದಂಡ ವಸೂಲಿ

ಹುಬ್ಬಳ್ಳಿ: ಸಂಚಾರಿ ನಿಯಮ ಉಲ್ಲಂಘನೆಗೆ ಕಡಿವಾಣ ಹಾಕಲು ದೊಡ್ಡ ಮಟ್ಟದ ದಂಡ ವಿಧಿಸಲಾಗುತ್ತಿದೆ. ಆದ್ರೂ ಕೂಡಾ ವಾಹನ ಸವಾರರು ಎಚ್ಚೆತ್ತುಕೊಳ್ಳುತ್ತಿಲ್ಲ. ಒಂದಿಲ್ಲೊಂದು ಕಾರಣದಿಂದ ನಿಯಮ ಉಲ್ಲಂಘಿಸುವ ಸವಾರರಿಂದ ಎರಡು ತಿಂಗಳಲ್ಲಿ ಕೋಟಿಗಟ್ಟಲೆ ದಂಡವನ್ನು ಹುಬ್ಬಳ್ಳಿ-ಧಾರವಾಡ ಸಂಚಾರಿ ಪೊಲೀಸರು ವಸೂಲಿ ಮಾಡಿದ್ದಾರೆ. ಕಳೆದ ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ಅವಳಿ ನಗರದ ಪೊಲೀಸರು, ಸಂಚಾರಿ‌ ನಿಯಮ ಉಲ್ಲಂಘನೆಯಿಂದ 1,01,23,100 ರೂಪಾಯಿ ದಂಡ ವಸೂಲಿ ಮಾಡಿದ್ದಾರೆ. ಮದ್ಯ ಸೇವಿಸಿ ವಾಹನ ಚಾಲನೆ, ಏಕಮುಖ ಸಂಚಾರ …

Read More »

ಕೇಂದ್ರ ಸರ್ಕಾರವು ಬದ್ಧತೆ ತೋರಿದರೆ ರಾಜ್ಯದಲ್ಲಿ ವಯೋ ವಂದನ ಯೋಜನೆಯನ್ನು ಜಾರಿಗೊಳಿಸುತ್ತೇವೆ.:ದಿನೇಶ್ ಗುಂಡೂರಾವ್

ಬೆಂಗಳೂರು: ಹಣ ರಾಜ್ಯ ಸರ್ಕಾರದ್ದು, ಹೆಸರು ಕೇಂದ್ರ ಸರ್ಕಾರದ್ದು ಎಂದಾದರೆ ಆರೋಗ್ಯ ಯೋಜನೆಗಳನ್ನು ಅನುಷ್ಠಾನಗೊಳಿಸುವುದಕ್ಕೆ ನಮ್ಮ ಒಪ್ಪಿಗೆ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಧಾನಸಭೆಯಲ್ಲಿ ತಿಳಿಸಿದರು. ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆಯುಷ್ಮಾನ್ ಭಾರತ – ಕರ್ನಾಟಕ ಯೋಜನೆಯ ಕೇಂದ್ರದ ಪಾಲು ಹೆಸರಿಗಷ್ಟೇ ಎಂಬಂತಾಗಿದೆ. ಕರ್ನಾಟಕವು ಶೇ.75ರಷ್ಟು ಪಾಲನ್ನು ಕೊಡುತ್ತಿದ್ದರೆ ಕೇಂದ್ರ ಕೇವಲ ಶೇ.25ರಷ್ಟನ್ನು ಮಾತ್ರ ಭರಿಸುತ್ತಿದೆ. ಕೇಂದ್ರವು ತನ್ನ ಪಾಲಿನ ಶೇ.60ರಷ್ಟು …

Read More »

ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳಕ್ಕೆ ಕಡಿವಾಣ ಹಾಕಲು ಮಸೂದೆ ಮಂಡನೆ

ಬೆಂಗಳೂರು: ಕಿರು ಸಾಲ, ಸಣ್ಣ ಸಾಲ, ಖಾಸಗಿ ಹಣಕಾಸು ಮತ್ತು ಇತರೆ ಅನಿಯಂತ್ರಿತ ಲೇವಾದೇವಿ ಮಾಫಿಯಾಗಳಿಂದ ಸಾಲ ಪಡೆದವರಿಗೆ ಉಂಟಾಗುವ ಕಿರುಕುಳ ತಪ್ಪಿಸಿ ರಕ್ಷಣೆ ನೀಡುವ ಉದ್ದೇಶದಿಂದ ಕರ್ನಾಟಕ ಕಿರು (ಮೈಕ್ರೋ) ಸಾಲ ಮತ್ತು ಸಣ‍್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ವಿಧೇಯಕ 2025 ನ್ನು ವಿಧಾನಸಭೆಯಲ್ಲಿ ಇಂದು ಮಂಡಿಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಈ ವಿಧೇಯಕವರನ್ನು ಮಂಡಿಸಿದರು. ಈ ವಿಧೇಯಕದಲ್ಲಿ ಸಾಲಗಳನ್ನು ಪಡೆಯುವ ಮತ್ತು …

Read More »

ಪ್ರಮೋದ್ ಮುತಾಲಿಕ್ ಅವರಿಗೆ ಶಿವಮೊಗ್ಗಕ್ಕೆ ಪ್ರವೇಶ ದೊರೆತಂತಾಗಿದೆ.

ಶಿವಮೊಗ್ಗ ಪ್ರವೇಶಕ್ಕೆ ಡಿಸಿ ಹಾಗೂ ಎಸ್ಪಿ ಹಾಕಿದ್ದ ನಿರ್ಬಂಧವನ್ನು ನ್ಯಾಯಾಲಯವು ತೆರವುಗೊಳಿಸಿದ್ದು, ಶ್ರೀರಾಮಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರಿಗೆ ಶಿವಮೊಗ್ಗಕ್ಕೆ ಪ್ರವೇಶ ದೊರೆತಂತಾಗಿದೆ. ಇನ್ನು ನಿರ್ಬಂಧ ಹೇರಿದ ಡಿ.ಸಿ. ಮತ್ತು ಎಸ್ಪಿ ಅವರ ನೀತಿಯನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ. ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ನಗರಕ್ಕೆ ಪ್ರವೇಶ ನಿರ್ಬಂಧಿಸಿದ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಛೀಮಾರಿ ಹಾಕಿದರು. ರಾಜ್ಯದಲ್ಲಿ ನಡೆಯುತ್ತಿರುವ ಲವ್ ಜಿಹಾದ್’ಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವ ಪುಸ್ತಕ …

Read More »

ಕಟ್ಟಡ ಕಾರ್ಮಿಕರ ಮಕ್ಕಳ ವಿವಾಹದ ಅನುದಾನಕ್ಕೆ ಸಲ್ಲಿಸಿದ ಅರ್ಜಿ ರದ್ಧಾಗುತ್ತಿರುವುದೇಕೆ; ಶಾಸಕ ಮಹೇಶ್ ಟೆಂಗಿನಕಾಯಿ

ಕಟ್ಟಡ ಕಾರ್ಮಿಕರ ಮಕ್ಕಳ ವಿವಾಹದ ಅನುದಾನಕ್ಕೆ ಸಲ್ಲಿಸಿದ ಅರ್ಜಿ ರದ್ಧಾಗುತ್ತಿರುವುದೇಕೆ; ಶಾಸಕ ಮಹೇಶ್ ಟೆಂಗಿನಕಾಯಿ ಕಟ್ಟಡ ಕಾರ್ಮಿಕರ ಮಕ್ಕಳ ವಿವಾಹಕ್ಕೆ ಅನುದಾನವನ್ನು ಪಡೆಯಲು ಸಲ್ಲಿಸುವ ಹಲವಾರು ಅರ್ಜಿಗಳು ವಿಳಂಬವಾಗುತ್ತಿರುವುದೇಕೆ? ಸರ್ಕಾರದ ಬಳಿ ಅನುದಾನದ ಕೊರತೆಯಿದೆಯೇ ಎಂದು ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಹೇಶ್ ಟೆಂಗಿನಕಾಯಿ ಅವರು ಸದನದಲ್ಲಿ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಮಿಕ ಸಚಿವರಾದ ಸಂತೋಷ ಲಾಡ್ ಅವರು ನಿಜವಾದ ಕಟ್ಟಡ ಕಾರ್ಮಿಕರನ್ನು ಪರಿಶೀಲಿಸಿ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದರು. …

Read More »

ಸಣ್ಣ ಮಾತು ಬೆಳೆದು ಜಗಳವಾಯ್ತು ಕೊನೆಗೆ ಬಡಪಾಯಿ ಜೀವ ಬಲಿಯಾತ್ತು

ಸಣ್ಣ ಮಾತು ಬೆಳೆದು ಜಗಳವಾಯ್ತು ಕೊನೆಗೆ ಬಡಪಾಯಿ ಜೀವ ಬಲಿಯಾತ್ತು ಇದು ಮಾನ್ವಿ ತಾಲೂಕಿನ ಮಲ್ಲಿನಮಡುಗು ಗ್ರಾಮದಲ್ಲಿ ನಡೆದ ಘಟನೆ ಇದು ಗ್ರಾಮದ ಒಂದೇ ಸಮುದಾಯ ಜನರ ನಡುವೇ ಈ ಘಟನೆ ನಡೆದಿದೆ ದಾರಿಯ ವಿಚಾರವಾಗಿ ಜಗಳ ಇಡೀ ಊರೇ ಆಯ್ತು ರಣರಂಗ 15 ಕ್ಕು ಹೆಚ್ಚು ಜನರಿಗೆ ಗಾಯ, ಮಾನ್ವಿ ಆಸ್ಪತ್ರೆಯಲ್ಲಿ ದಾಖಲು ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಊರಿನ ಹಿರಿಯರ ಸಮ್ಮುಖದಲ್ಲಿ ಬಗೆಹರಿಯ ಬೇಕಾದ ಸಣ್ಣ …

Read More »

ಬಳ್ಳಾರಿಯಲ್ಲಿ ಹಕ್ಕಿಜ್ವರ ಭೀತಿ

ಬಳ್ಳಾರಿ : ಜಿಲ್ಲೆಯಲ್ಲಿ ಹಕ್ಕಿಜ್ವರ ಪತ್ತೆ ಹಿನ್ನೆಲೆ ಜಿಲ್ಲಾಡಳಿತವು ಆಂಧ್ರ ಪ್ರದೇಶದಿಂದ ಬರುವ ಕೋಳಿ ಸಾಗಾಟ ವಾಹನಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಅಲರ್ಟ್ ಆಗಿರುವ ಜಿಲ್ಲಾಡಳಿತ, ಜಿಲ್ಲೆಯಾದ್ಯಂತ 5 ಚೆಕ್‌ಪೋಸ್ಟ್‌ಗಳನ್ನು ನಿರ್ಮಾಣ ಮಾಡಿದೆ. ಪ್ರಮುಖವಾಗಿ ಆಂಧ್ರಪ್ರದೇಶದ ಅನಂತಪುರ ಹಾಗೂ ಗುಂತಕಲ್ ಭಾಗದಿಂದ ಬರುವ ಕೋಳಿ ಸಾಗಾಟ ವಾಹನಗಳ ಮೇಲೆ ಜಿಲ್ಲಾಡಳಿತ ಕಣ್ಣಿಟ್ಟಿದೆ. ಆಂಧ್ರ ಗಡಿಗೆ ಹೊಂದಿಕೊಂಡಿರುವ ಪಿಡಿಹಳ್ಳಿ ಗ್ರಾಮದಲ್ಲೂ ಚೆಕ್​ಪೋಸ್ಟ್ ನಿರ್ಮಾಣ ಮಾಡಲಾಗಿದೆ. ಪಿಡಿಹಳ್ಳಿ ಚೆಕ್‌ಪೋಸ್ಟ್‌ನಲ್ಲಿ ಸಿಬ್ಬಂದಿ, ಕೋಳಿಗಳ ಆರೋಗ್ಯ ಪರಿಶೀಲನೆ …

Read More »

ಮೂವರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

ಚಿಕ್ಕೋಡಿ : ತಾಯಿಯೊಬ್ಬಳು ತನ್ನ ಮೂವರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಂಚಲಿ ಪಟ್ಟಣದಲ್ಲಿನ ಕೃಷ್ಣಾ ನದಿ ಬಳಿ ಇಂದು ಮುಂಜಾನೆ ನಡೆದಿದೆ. ಮೃತರನ್ನು ಶಾರದಾ ಢಾಲೆ (38) ಹಾಗೂ 8, 10 ಮತ್ತು, 14 ವರ್ಷ ವಯಸ್ಸಿನ ಮಕ್ಕಳು ಎಂದು ಗುರುತಿಸಲಾಗಿದೆ. ದಿನನಿತ್ಯ ಗಂಡ ಗಲಾಟೆ ಮಾಡುತ್ತಿದ್ದ ಕಾರಣಕ್ಕೆ ಮಹಿಳೆ ತನ್ನ ಮೂವರು ಮಕ್ಕಳ ಜೊತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ತಿಳಿದು ಬಂದಿದೆ. ಗಂಡ ಅಶೋಕ್ ಢಾಲೆಯನ್ನು ಪೊಲೀಸರು ವಶಕ್ಕೆ ಪಡೆದು …

Read More »

ಸ್ನೇಹಮಯಿ ಕೃಷ್ಣ ಮತ್ತೆ ಕೋರ್ಟ್​ ಮೊರೆ

ಮೈಸೂರು/ಬೆಂಗಳೂರು, : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ನಿವೇಶನ ಹಂಚಿಕೆ ಹಗರಣ ಪ್ರಕರಣವನ್ನು ದೂರುದಾರ ಸ್ನೇಹಮಯಿಕೃಷ್ಣ ಸುಮ್ಮನೇ ಬಿಡುವಂತೆ ಕಾಣುತ್ತಿಲ್ಲ. ಪ್ರಕರಣವನ್ನು ಕೊನೆವರೆಗೂ ತೆಗೆದುಕೊಂಡು ಹೋಗುವ ತೀರ್ಮಾನ ಮಾಡಿದ್ದು, ಇದೀಗ ಮುಡಾ ನಿವೇಶನ ಹಂಚಿಕೆ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ. ಸಿಬಿಐ ತನಿಖೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್​ ವಜಾಗೊಳಿಸಿದ ಬಳಿಕ ಕೊಂಚ ರಿಲ್ಯಾಕ್ಸ್​ನಲ್ಲಿದ್ದ ಸಿಎಂ ಸಿದ್ದರಾಮಯ್ಯಗೆ ಮತ್ತೆ ಟೆನ್ಷನ್ ಶುರುವಾದಂತಾಗಿದೆ. ಮುಡಾ ಹಗರಣ …

Read More »

ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತ ಮೂವರು ಮೃತಪಟ್ಟಿದ್ದಾರೆ.

ಚಿತ್ರದುರ್ಗ, ಮಾರ್ಚ್​ 5: ಚಿತ್ರದುರ್ಗ ತಾಲೂಕಿನ ಸಿಬಾರ ಗ್ರಾಮದ ಬಳಿ ಬುಧವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಹೆದ್ದಾರಿ ಬದಿ ನಿಂತಿದ್ದ ಲಾರಿಗೆ ಮತ್ತೊಂದು ಲಾರಿ, ಟ್ರಕ್​ ಡಿಕ್ಕಿಯಾಗಿ ಅವಘಡ ಸಂಭವಿಸಿದೆ. ಲಾರಿ ಚಾಲಕ ಹಾಗೂ ಕಲ್ಲಂಗಡಿ ಸಾಗಿಸುತ್ತಿದ್ದ ಟ್ರಕ್‌ನಲ್ಲಿದ್ದ ಇಬ್ಬರು ಸಾವಿಗೀಡಾಗಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದ್ದು, ಸ್ಥಳಕ್ಕೆ ಚಿತ್ರದುರ್ಗ ಡಿವೈಎಸ್​​ಪಿ ದಿನಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿತ್ರದುರ್ಗ ಗ್ರಾಮಾಂತರ …

Read More »