Breaking News

ರಾಯಚೂರು

ಮಂಗಳವಾರದಿಂದ ಲಾಠಿ ಏಟಿನ ಬದಲಾಗಿ, ಅನಗತ್ಯ ಸಂಚಾರಿಗಳಿಗೆ ದಂಡ ವಿಧಿಸುವುದು ಮತ್ತು ವಾಹನಗಳನ್ನು ವಶಕ್ಕೆ ಪಡೆಯುವುದನ್ನು ವ್ಯಾಪಕ

ರಾಯಚೂರು: ಲಾಕ್‌ಡೌನ್‌ ಜಾರಿ ಬಿಗಿಗೊಳಿಸಿರುವ ಪೊಲೀಸರು ಮಂಗಳವಾರದಿಂದ ಲಾಠಿ ಏಟಿನ ಬದಲಾಗಿ, ಅನಗತ್ಯ ಸಂಚಾರಿಗಳಿಗೆ ದಂಡ ವಿಧಿಸುವುದು ಮತ್ತು ವಾಹನಗಳನ್ನು ವಶಕ್ಕೆ ಪಡೆಯುವುದನ್ನು ವ್ಯಾಪಕಗೊಳಿಸಿದ್ದಾರೆ. ಕೋವಿಡ್‌-19 ಎರಡನೇ ಅಲೆ ನಿಯಂತ್ರಣ ಕ್ರಮಗಳ ಜಾರಿಯು ಜನವರಿ 1 ರಿಂದ ಆರಂಭವಾಗಿದ್ದು, ಮೇ 10 ರವರೆಗೂ ಒಟ್ಟು 4,322 ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಮೇ 10 ರಂದು ಒಂದೇ ದಿನ ಮಾಸ್ಕ್ ಧರಿಸದೇ ಇರುವ ಸಾರ್ವಜನಿಕರ ವಿರುದ್ಧ 699 ಪ್ರಕರಣಗಳು , ಸಾಮಾಜಿಕ …

Read More »

ರಾಯಚೂರು: ಪೊಲೀಸರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಕಿಡಿ

ರಾಯಚೂರು: ಮಸ್ಕಿ ಕ್ಷೇತ್ರದ ಕುರುಕುಂದಾ ಗ್ರಾಮದಲ್ಲಿ ಪೊಲೀಸರು ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದ ಪ್ರಸಂಗ ನಡೆಯಿತು. ಮತಗಟ್ಟೆಯ ನೂರು ಮೀಟರ್ ಒಳಗೆ ಇರಬಾರದು ಎಂಬ ನೀತಿ ಕೇವಲ ಕಾಂಗ್ರೆಸ್ ಕಾರ್ಯಕರ್ತರಿಗೆ ಮಾತ್ರ ಅನುಸರಿಲಾಗುತ್ತಿದೆ. ಬಿಜೆಪಿಯವರು ನಿಂತಿದ್ದರು ಕ್ಯಾರೆ ಎನ್ನದ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರ ಕಾಲರ್ ಹಿಡಿದು ಆಚೆ ಕಳುಹಿಸುತ್ತಿದ್ದಾರೆ. ಪೊಲೀಸರ ಬಿಜೆಪಿಯವರ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಪಕ್ಷದ ಕಾರ್ಯಕರ್ತೆ ಪದ್ಮಾವತಿ ದೂರಿದರು. ಪೊಲೀಸರು ಹಾಗೂ …

Read More »

ಮಸ್ಕಿಯಲ್ಲಿ ಮಾಜಿ ಶಾಸಕ ಎನ್.ಎಸ್.ನಂದೀಶ್ ಹಣ ಹಂಚಿಕೆ

ರಾಯಚೂರು: ಮಸ್ಕಿ ಉಪ ಚುನಾವಣಾ ಸಮರ ದಿನೇ ದಿನೇ ರಂಗೇರುತ್ತಿದೆ. ಇದರ ಮಧ್ಯೆ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡಗೆ ಮತ ನೀಡುವಂತೆ ಬಿಜೆಪಿ ಮಾಜಿ ಶಾಸಕ ಎನ್.ಎಸ್. ನಂದೀಶ್ ಹಣ ಹಂಚಿಕೆ ಮಾಡಿದ್ದಾರೆ. ಹಣ ಹಂಚಿಕೆ ಮಾಡಿದವರ ಹಾಗೂ ಹಣ ಪಡೆದವರ ವಿರುದ್ಧ ಮಸ್ಕಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಬಿಜೆಪಿ ಕಾರ್ಯಕರ್ತ ಅಮಿತ್, ಚಿಟ್ಟಿಬಾಬು, ಹಣ ಪಡೆದ ವೃದ್ದೆ ತಾಯಮ್ಮ ಮೂವರನ್ನು ವಶಕ್ಕೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. …

Read More »

ಮಸ್ಕಿ ಬಿಜೆಪಿ ಅಭ್ಯರ್ಥಿಗೆ ಅಂಟಿಕೊಂಡ ಸೋಂಕು!

ರಾಯಚೂರು : ರಾಜ್ಯದ ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಸದ್ಯ ಉಪ ಚುನಾವಣೆ ನಡೆಯುತ್ತಿದ್ದು, ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಅವರಿಗೆ ಸೋಂಕು ಇರುವುದು ಖಚಿತವಾಗಿದೆ. ಈ ಕುರಿತು ಸ್ವತಃ ಅವರೇ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಅವರು ಕೆಲವು ದಿನಗಳ ಹಿಂದೆಯಷ್ಟೇ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದರು. ಆದರೂ ಅವರಿಗೆ ಸೋಂಕು ಮೆತ್ತಿಕೊಂಡಿದೆ. ನನಗೆ ಕೋವಿಡ್ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ಪ್ರತ್ಯೇಕವಾಗಿ …

Read More »

ಯಾರಿಗೆ ಯೋಗ್ಯತೆ ಇದೆ ಅವರಿಗೆ ಚುನಾವಣಾ ಉಸ್ತುವಾರಿ ಕೊಡುತ್ತಾರೆ: ಬಿ.ವೈ ವಿಜಯೇಂದ್ರ ಟಾಂಗ್

ರಾಯಚೂರು: ಏಪ್ರಿಲ್​ 17ರಂದು ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಯಾರಿಗೆ ಯೋಗ್ಯತೆ ಇದೆ ಅವರಿಗೆ ಚುನಾವಣಾ ಉಸ್ತುವಾರಿ ಕೊಡುತ್ತಾರೆ. ಉಸ್ತುವಾರಿ ಕೊಡುವ ಜವಾಬ್ದಾರಿ ರಾಜ್ಯಧ್ಯಕ್ಷರದ್ದು ಎಂದು ಪರೋಕ್ಷವಾಗಿ ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್​ಗೆ ಮಸ್ಕಿ ಚುನಾವಣಾ ಉಸ್ತುವಾರಿ ವಹಿಸಿರುವ ಬಿ.ವೈ ವಿಜಯೇಂದ್ರ ಟಾಂಗ್​ ಕೊಟ್ಟಿದ್ದಾರೆ. ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್ ಹಿರಿಯರಿದ್ದಾರೆ. ಶಾಸಕ ಯತ್ನಾಳ್​ ಸಹ ಎಲ್ಲಿಗೆ ಬೇಕಾದರೂ ಹೋಗಬಹುದು. ಎಲ್ಲ ಕಡೆಯೂ ಕಾರ್ಯಕರ್ತರು ಯತ್ನಾಳ್​ರನ್ನ ಸ್ವಾಗತಿಸುತ್ತಾರೆ. ಕೆ.ಆರ್ …

Read More »

ಸಿಡಿ ಯುವತಿ ಪೋಷಕರ ಆರೋಪಕ್ಕೆ ಡಿಕೆಶಿ ಹೇಳಿದ್ದೇನು?

ರಾಯಚೂರು : ಸಾಕ್ಷ್ಯಗಳಿದ್ರೆ ಪೊಲೀಸರಿಗೆ ನೀಡಲಿ ಯುವತಿ ಪೋಷಕರ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಇಂದು ದಿಢೀರ್ ಮಾಧ್ಯಮಗಳ ಮುಂದೆ ಬಂದ ಯುವತಿ ಪೋಷಕರು, ಡಿಕೆ ಶಿವಕುಮಾರ್ ವಿರುದ್ಧ ಗಂಭೀರ ಆರೋಪಗಳನ್ನ ಮಾಡಿದರು. ರಾಯಚೂರಿನ ಮುದಗಲ್ ನಲ್ಲಿ ಪೋಷಕರ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ನನಗೂ ಸಿಡಿ ಲೇಡಿಗೂ ಸಂಬಂಧವಿಲ್ಲ. ಯಾರಬೇಕಾದರೂ ಏನು ಮಾಡಲಿ. ಒತ್ತಡದಲ್ಲಿರೋರು ಹೇಳಿಕೆಗೆ ಮತ್ತು ನನಗೂ ಸಂಬಂಧವಿಲ್ಲ. ಅವರ ಬಳಿ ದಾಖಲೆಗಳಿದ್ರೆ ಪೊಲೀಸರಿಗೆ …

Read More »

ಗರಿಗೆದರಿದ ಉಪಚುನಾವಣೆ ಕಣ : ಕಾಂಗ್ರೆಸ್-ಬಿಜೆಪಿ ಭರ್ಜರಿ ಪ್ರಚಾರ

ರಾಯಚೂರು : ಮಸ್ಕಿ ಉಪಚುನಾವಣೆಗೆ ದಿನಾಂಕ ಘೋಷಣೆಯಾದ ಹಿನ್ನೆಲೆ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಕ್ಷೇತ್ರದಲ್ಲಿ ಭರ್ಜರಿ ಪ್ರಚಾ ಆರಂಭಿಸಿದ್ದಾರೆ. ಕಾಂಗ್ರಸ್ ದ್ವಿಚಕ್ರ ವಾಹನ ಹಾಗೂ ಮನೆ ಮನೆ ಪ್ರಚಾರಕ್ಕಿಳಿದಿದೆ. ಕಾಂಗ್ರೆಸ್ ನಾಯಕ ಬಸನಗೌಡ ತುರುವಿಹಾಳ ಬೂತ್ ಮಟ್ಟದಿಂದ ಮತಬೇಟೆ ಆರಂಭಿಸಿದ್ದಾರೆ. ಇತ್ತ ಬಿಜೆಪಿ ಪಕ್ಷದಿಂದಲೂ ಭರ್ಜರಿ ತಯಾರಿ ನಡೆಯುತ್ತಿದ್ದು, ಸಿಎಂ ಯಡಿಯೂರಪ್ಪ ನೇತೃತ್ವದ ಸಮಾವೇಶಕ್ಕೆ ಭರದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮಸ್ಕಿಯಲ್ಲಿ ಮಾರ್ಚ್​ 20ರಂದು ಸಂಜೆ …

Read More »

ಮರಕ್ಕೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಕಾರು: ಚಾಲಕ ಸಜೀವ ದಹನ

ರಾಯಚೂರು: ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು ಚಾಲಕ ಸಜೀವ ದಹನವಾದ ಘಟನೆ ತಾಲೂಕಿನ ಕಲ್ಮಲ ಸಮೀಪ ಸಂಭವಿಸಿದೆ. ಮೃತ ಕಾರು ಚಾಲಕನನ್ನು ಮಲ್ಲಟ ಗ್ರಾಮದ ಸದಾನಂದಗೌಡ ಮಾಲೀಪಾಟೀಲ (60) ಎಂದು ಗುರುತಿಸಲಾಗಿದೆ. ಮಲ್ಲಟದಿಂದ ರಾಯಚೂರು ಕಡೆ ಹೊರಟಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡದಿದೆ. ಇದರಿಂದ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡು ಕ್ಷಣದಲ್ಲೇ ಹೊತ್ತಿ ಉರಿದಿದೆ. ಕಾರು ಲಾಕ್ ಆಗಿರುವ ಕಾರಣ ಚಾಲಕ …

Read More »

ಪೊಲೀಸರ ಎದುರೇ ವಿದ್ಯಾರ್ಥಿ ತಾಯಿಗೆ ಕಪಾಳಮೋಕ್ಷ

ರಾಯಚೂರು: ವಿದ್ಯಾರ್ಥಿಗೆ 80,000 ರೂ ಪೀಸ್ ಡಿಮ್ಯಾಂಡ್ ಮಾಡಿ ಕಿರುಕುಳ ನೀಡುತ್ತಿದ್ದುದನ್ನು ಪ್ರಶ್ನಿಸಿದ್ದಕ್ಕೆ ವಿದ್ಯಾರ್ಥಿ ತಾಯಿಗೆ ಪೊಲೀಸರ ಎದುರೇ ಕಪಾಳಮೋಕ್ಷ ಮಾಡಿದ ಮೊಂಟೆಸರಿ ಶಾಲೆ ಮುಖ್ಯಸ್ಥ ಸತೀಶ್ ಕುಮಾರ್ ಹಾಗೂ ಆತನ ಪತ್ನಿ ಇಬ್ಬರನ್ನು ಬಂಧಿಸಲಾಗಿದೆ. 10ನೇ ತರಗತಿ ವಿದ್ಯಾರ್ಥಿ ಸಂಪತ್ ಗೆ ತಾವು ಹೇಳಿದಷ್ಟು ಹಣವನ್ನು ಕಟ್ಟಬೇಕು ಎಂದು ಶಾಲೆಯ ಮುಖ್ಯಸ್ಥರು ಪ್ರತಿದಿನ ಕಿರುಕುಳ ನೀಡಿತ್ತಿದ್ದರು. ಇದರಿಂದ ಬೇಸತ್ತ ಸಂಪತ್ ಪೋಷಕರು ಟಿಸಿ ಕೊಡುವಂತೆ ಕೇಳಿಕೊಂಡಿದ್ದರು. ಟಿಸಿ ಕೊಡಲು …

Read More »

ರಾಯಚೂರು: ನಗರದ ಆಟೋನಗರದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಲಾರಿಯನ್ನ ಕದ್ದು ಮಾರಾಟಕ್ಕೆ

ರಾಯಚೂರು: ನಗರದ ಆಟೋನಗರದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಲಾರಿಯನ್ನ ಕದ್ದು ಮಾರಾಟಕ್ಕೆ ಮುಂದಾಗಿದ್ದ ಕಳ್ಳನನ್ನ ಸದರ್ ಬಜಾರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಆಶ್ರಯ ಕಾಲೋನಿಯ ನಿವಾಸಿ ಗೋವಿಂದ ಬಂಧಿತ ಆರೋಪಿ. ಹಣದ ಅವಶ್ಯಕತೆ ಕಾರಣಕ್ಕೆ ತನ್ನ ಮಾಲೀಕನ ಲಾರಿಯನ್ನೇ ಕದ್ದು ಸಿಕ್ಕಿಬಿದ್ದಿದ್ದಾನೆ.   ಆಟೋ ನಗರದ ಸೈಯದ್ ಹುಸೇನ್ ಎಂಬವರಿಗೆ ಸೇರಿದ ಲಾರಿಯನ್ನ ಗೋವಿಂದ ಕದ್ದು ಮಾರಾಟಕ್ಕೆ ಮುಂದಾಗಿದ್ದ. ರಾಯಚೂರು ತಾಲೂಕಿನ ಗಂಜಳ್ಳಿ ಬಳಿ ಲಾರಿಯೊಂದಿಗೆ ಆರೋಪಿ ಸೆರೆಸಿಕ್ಕಿದ್ದಾನೆ. …

Read More »