ಬೆಳಗಾವಿ: ವಿಧಾನ ಸಭೆ ಚುನಾವಣೆಯಲ್ಲಿ ಇವಿಎಂ ಮತಯಂತ್ರಗಳು ಯಾವ ರೀತಿ ಕಾರ್ಯನಿರ್ವಹಿಸುತ್ತವೆ ಮತ್ತು ಚುನಾವಣೆಯಲ್ಲಿ ಬಳಸಲಾಗುವ ಮತಯಂತ್ರಗಳ ಮೂಲಕ ಮತದಾನ ವಿಧಾನ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರ ನೇತೃತ್ವದಲ್ಲಿ ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು. ಜಿಲ್ಲೆಯಾದ್ಯಂತ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿದ್ದು, ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಶನಿವಾರ (ಮಾ.4) ಆಯೋಜಿಸಲಾಗಿದ್ದ ಪ್ರಾತ್ಯಕ್ಷಿಕೆಗೆ ಜಿಲ್ಲಾಧಿಕಾರಿಗಳು ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿದ ಅವರು, ವಿದ್ಯುನ್ಮಾನ ಮತ ಯಂತ್ರಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ …
Read More »ಉಮೇಶ ಕತ್ತಿ ಅನಂತರ ಹುಕ್ಕೇರಿ ಕ್ಷೇತ್ರದ ಉತ್ತರಾಧಿಕಾರಿ ಯಾರು?
ಬೆಳಗಾವಿ: ಮೂವತ್ತೇಳು ಸುದೀರ್ಘ ವರ್ಷಗಳ ಕಾಲ ಹುಕ್ಕೇರಿ ಕ್ಷೇತ್ರವನ್ನು “ಆಳಿದ್ದ’ ಉಮೇಶ ಕತ್ತಿ ಅವರ ಅನುಪಸ್ಥಿತಿ ಈ ವಿಧಾನಸಭೆ ಚುನಾವಣೆಯಲ್ಲಿ ಬಹುವಾಗಿ ಕಾಡಲಿದೆ. ಹಿರಿಯ ರಾಜಕಾರಣಿ ಉಮೇಶ ಕತ್ತಿ ಅನಿರೀಕ್ಷಿತ ಅಗಲಿಕೆಯನ್ನು ಜಿಲ್ಲೆಯ, ಅದರಲ್ಲೂ ಹುಕ್ಕೇರಿ ಕ್ಷೇತ್ರದ ಜನರಿಗೆ ಈಗಲೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅಂತಹ ಅಳಿಸಲಾರದ ಛಾಪನ್ನು ಉಮೇಶ ಕತ್ತಿ ಬಿಟ್ಟು ಹೋಗಿದ್ದಾರೆ. ತಮ್ಮ ತಂದೆ ವಿಶ್ವನಾಥ ಕತ್ತಿ ಅಗಲಿಕೆಯಿಂದ ಉಪಚುನಾವಣೆ ಎದುರಿಸುವ ಮೂಲಕ ರಾಜಕೀಯ ಕ್ಷೇತ್ರ ಪ್ರವೇಶ ಮಾಡಿದ ಉಮೇಶ …
Read More »ಛಲದಿಂದ ಎಲ್ಲವೂ ಸಾಧ್ಯ: ಡಾ.ಕಲ್ಪನಾ ಸರೋಜ್
ಗೋಕಾಕ: ‘ನನಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬ ಭಾವನೆಯೊಂದಿಗೆ ಮಹಿಳೆ ಬದುಕಿನಲ್ಲಿ ಸಂಘರ್ಷಕ್ಕೆ ಇಳಿದರೆ, ಅಸಾಧ್ಯವಾದುದನ್ನೂ ಸಾಧಿಸಲು ಸಾಧ್ಯ’ ಎಂದು ಪದ್ಮಶ್ರೀ ಪುರಸ್ಕೃತರಾದ ಡಾ.ಕಲ್ಪನಾ ಸರೋಜ್ ಹೇಳಿದರು. ನಗರದ ಶೂನ್ಯ ಸಂಪಾದನಾ ಮಠದಲ್ಲಿ ಶುಕ್ರವಾರ ರಾತ್ರಿ ಬಸವ ಸ್ವಾಮಿಜಿ ಅವರ 18ನೇ ಸ್ಮರಣೋತ್ಸವ ಅಂಗವಾಗಿ ನಡೆದ 18ನೇ ಶರಣ ಸಂಸ್ಕೃತಿ ಉತ್ಸವದ ಮಹಿಳಾ ಸಮಾವೇಶದಲ್ಲಿ ಮಠದಿಂದ ನೀಡಲಾದ ‘ಕಾಯಕಶ್ರೀ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ‘ಪುರುಷ ಪ್ರಧಾನ ದೇಶದಲ್ಲಿ ಸ್ತ್ರೀಯರು …
Read More »ಹಣಕಾಸಿನ ವ್ಯವಹಾರಕ್ಕಾಗಿ ಕೊಲೆ: 6 ಆರೋಪಿಗಳ ಬಂಧನ
ಹಾರೂಗೇರಿ (ಬೆಳಗಾವಿ ಜಿಲ್ಲೆ): ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ ಆರು ಆರೋಪಿಗಳನ್ನು ಹಾರೂಗೇರಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಕೊಲೆಯಾದ ವ್ಯಕ್ತಿಯ ಅಸ್ಥಿಪಂಜರಗಳನ್ನೂ ಪತ್ತೆ ಮಾಡಿದ್ದಾರೆ. ಖಣದಾಳ ಗ್ರಾಮದ ಬಾಳಪ್ಪ ಆಜೂರೆ ಕೊಲೆಯಾದವರು. ಇದೇ ಊರಿನ ವಾಸುದೇವ ನಾಯಕ ಹಾಗೂ ಬಾಳಪ್ಪ ಅವರ ಸಹೋದರ ಭೀಮಪ್ಪ ಆಜೂರೆ ಇದರಲ್ಲಿ ಪ್ರಮುಖ ಆರೋಪಿಗಳು. 2022ರ ಆಗಸ್ಟ್ 18ರಂದು ಬಾಳಪ್ಪ ಅವರನ್ನು ಅಪಹರಿಸಿದ ಆರೋಪಿಗಳು ಕೋಳಿ ಫಾರ್ಮ್‌ವೊಂದರಲ್ಲಿ ಕೊಲೆ ಮಾಡಿ, ಮಹಾರಾಷ್ಟ್ರದ …
Read More »ಶ್ರೇಷ್ಠ ಫೌಂಡೇಶನ್ ಅನ್ನಸಂತರ್ಪಣೆ ಕಾರ್ಯಕ್ಕೆ ಶತಕದ ಸಂಭ್ರಮ; ಸಂತೋಷ ಜಾರಕಿಹೊಳಿ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ
ಗೋಕಾಕ: ಗೋಕಾಕ ನಗರ ಅಂದ್ರೆ ಮೊದಲಿಗೆ ನೆನಪಾ ಗೋದೆ ಜಾರಕಿಹೊಳಿ ಸಹೋದರರು. ಜಾರಕಿಹೊಳಿ ಸಹೋದರರು ಬೇರೆ ಬೇರೆ ಪಕ್ಷ ಗಳಲ್ಲಿ ಇದ್ರು ಅವರ್ ಅವರ್ ಕಾರ್ಯ ವೈಖರಿ ಬೇರೆ ಬೇರೆ ಇದೆ . ಹಲವಾರು ಸಾಮಾಜಿಕ ಸಾಂಸ್ಕೃತಿಕ, ಕಾರ್ಯ ಕ್ರಮ ಗಳನ್ನ ಅವರು ಆವಾಗಾವಾಗ ಹಮ್ಮಿ ಕೊಳ್ಳುತ್ತಲೆ ಇರುತ್ತಾರೆ. ಇನ್ನು ಅವರ್ ಪುತ್ರರು ಕೂಡ ವಿವಿಧ ರೀತಿಯ ಸಾಮಾಜಿಕ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ಮಹತ್ವ ವನ್ನಾ ಕೊಡುತ್ತಾ ಬಂದಿದ್ದಾರೆ …
Read More »ಮುಂಬೈನಲ್ಲಿ ಎಂಇಎಸ್ ಕಿತಾಪತಿ; ಕರ್ನಾಟಕ ಸರ್ಕಾರದ ವಿರುದ್ಧ ಮಹಾರಾಷ್ಟ್ರದಲ್ಲಿ ಪ್ರತಿಭಟನೆ
ಬೆಳಗಾವಿ: ಈಗಾಗಲೇ ಎಲ್ಲ ಚುನಾವಣೆಯಲ್ಲಿಯೂ ಸೋತು ಸುಣ್ಣವಾಗಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮತ್ತೆ ಬಾಲ ಬಿಚ್ಚಿದ್ದು, ಕರ್ನಾಟಕದಲ್ಲಿ ಬೇಳೆ ಬೇಯುತ್ತಿಲ್ಲ ಎಂದು ಮುಂಬೈನಲ್ಲಿ ಮಹಾರಾಷ್ಟ್ರ ಸರ್ಕಾರದ ಬಾಗಿಲು ತಟ್ಟಿದೆ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಹೇಗಾದರೂ ಮಾಡಿ ಗೆಲ್ಲಬೇಕೆಂಬ ಹಠಕ್ಕೆ ಬಿದ್ದಿರುವ ಎಂಇಎಸ್ ಗಡಿ ವಿವಾದವನ್ನೇ ಅಸ್ತ್ರವಾಗಿ ಇಟ್ಟುಕೊಂಡು ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ಮಂಗಳವಾರ ಆಂದೋಲನ ನಡೆಸಿದೆ. ಬೆಳಗಾವಿಯಲ್ಲಿ ನಾಲ್ಕು ಸ್ಥಾನ ಗೆಲ್ಲಲು ಪ್ಲಾನ್ ಮಾಡಿಕೊಂಡು …
Read More »ಮೋದಿ ಸಾವು ಯಾರೂ ಬಯಸಿಲ್ಲ ಸಾವಿಗೆ ಕಾಂಗ್ರೆಸ್ ಜಪ ಮಾಡುತ್ತಿದೆ ಎಂಬುದು ದೊಡ್ಡ ಸುಳ್ಳು: ಸಿದ್ದರಾಮಯ್ಯ
ಬೆಳಗಾವಿ: ‘ಪ್ರಧಾನಿ ನರೇಂದ್ರ ಮೋದಿ ಅವರ ಸಾವಿಗೆ ಕಾಂಗ್ರೆಸ್ ಜಪ ಮಾಡುತ್ತಿದೆ ಎಂಬುದು ದೊಡ್ಡ ಸುಳ್ಳು. ಈ ರೀತಿ ಯಾರೂ ಎಲ್ಲಿಯೂ ಹೇಳಿಲ್ಲ. ತಮ್ಮಷ್ಟಕ್ಕೆ ತಾವೇ ಇಂಥ ಭಾವುಕ ಸನ್ನಿವೇಶ ಹುಟ್ಟುಹಾಕುವುದು ಅವರಿಗೆ ಕರಗತ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು. ‘ಸಿದ್ದರಾಮಯ್ಯನನ್ನು ಮುಗಿಸಿಬಿಡಿ ಎಂದು ಅಶ್ವತ್ಥನಾರಾಯಣ ಬಹಿರಂಗವಾಗಿ ಹೇಳಿದರು. ನಮ್ಮ ಭಾವನೆಗಳು ಅವರಷ್ಟು ಕೆಟ್ಟದಾಗಿಲ್ಲ. ಪ್ರಧಾನಿ ಆರೋಗ್ಯವಾಗಿರಲಿ, ಹೆಚ್ಚು ಕಾಲ ಬದುಕಲಿ’ ಎಂದು ಅವರು ನಗರದಲ್ಲಿ ಬುಧವಾರ ಮಾಧ್ಯಮದವರ …
Read More »ಮಲ್ಲಮ್ಮನ ಪ್ರತಿಮೆ ಲೋಕಾರ್ಪಣೆ ನಿರ್ಲಕ್ಷ್ಯ, ತೀವ್ರ ಪ್ರತಿಭಟನೆ
ಬೈಲಹೊಂಗಲ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದ ವೃತ್ತದಲ್ಲಿ ಪ್ರತಿಷ್ಠಾಪಿಸಿದ ಅಶ್ವಾರೂಢ ಕಂಚಿನ ಪ್ರತಿಮೆ ಅನಾವರಣ ಸಂಬಂಧವಾಗಿ ಮಂಗಳವಾರ ರಾತ್ರಿ ಗ್ರಾಮದಲ್ಲಿ ತೀವ್ರ ವಾಗ್ವಾದ ನಡೆಯಿತು. ಬೆಳವಡಿ ಮಲ್ಲಮ್ಮನ ಉತ್ಸವ ಮೆರವಣಿಗೆ ಬೆಳಿಗ್ಗೆಯೇ ನಡೆಯಿತು. ಇದಕ್ಕೂ ಮುನ್ನ ಪ್ರತಿಮೆ ಅನಾವರಣ ಕಾರ್ಯಕ್ರಮ ಇತ್ತು. ಆದರೆ, ಜಿಲ್ಲಾ ಉಸ್ತುವಾರಿ ಸಚಿವರೂ ಸೇರಿದಂತೆ ಯಾವೊಬ್ಬ ಜನಪ್ರತಿನಿಧಿ, ಅಧಿಕಾರಿಯೂ ಬರಲಿಲ್ಲ. ಇದರಿಂದ ಅನಾವರಣ ಕಾರ್ಯಕ್ರಮವನ್ನು ಮುಂದಕ್ಕೆ ಹಾಕುತ್ತ ಬರಲಾಯಿತು. ರಾತ್ರಿ 8ರ ನಂತರ ಸಂಸದೆ …
Read More »ಬೆಳಗಾವಿ: ಮಾರ್ಚ್ 1ರಂದು ಸಿದ್ದರಾಮಯ್ಯ ‘ಪ್ರಜಾಧ್ವನಿ’ ಯಾತ್ರೆ
ಬೆಳಗಾವಿ: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ‘ಪ್ರಜಾಧ್ವನಿ’ ಯಾತ್ರೆಯ ಅಂಗವಾಗಿ ಮಾರ್ಚ್ 1ರಂದು ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಪಂತಬಾಳೆಕುದ್ರಿಯಲ್ಲಿ ಸಮಾವೇಶ ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ಶಿಂಧೋಳಿಯಿಂದ ಮೆರವಣಿಗೆ ನಡೆಯಲಿದೆ. 5 ಸಾವಿರ ಬೈಕುಗಳ ಸಮೇತ ಯುವಜನರು ಮೆರವಣಿಗೆಯಲ್ಲಿ ಪಾಲ್ಗೊಳ್ಳುವರು. ಅಲ್ಲಿಂದ ಪಂತಬಾಳೆಕುಂದ್ರಿಯ ವೈರ್‌ಲೆಸ್ ಮೈದಾನಕ್ಕೆ ತೆರಳಿ ಅಲ್ಲಿ ಸಮಾವೇಶ ನಡೆಸಲಾಗುವುದು. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, …
Read More »ಚಿಕ್ಕೋಡಿ: ಆಲಿಸಿದ ಪಾಠ ಅರಿತು ಬಾಳಿರಿ
ಚಿಕ್ಕೋಡಿ: ‘ಸುಮಂಗಲಮ್ ಪಂಚಮಹಾಭೂತ ಲೋಕೋತ್ಸವ ಕೇವಲ ಉತ್ಸವವಾಗದೇ, ಇಲ್ಲಿ ಆಲಿಸಿದ, ವೀಕ್ಷಿಸಿದ ಎಲ್ಲ ಪಾಠವನ್ನು ಜೀವನದಲ್ಲಿ ಅಳವಡಿಸಿಕೊಂಡು ಪರಿಸರ ಸಮತೋಲನ ಕಾಪಾಡುವ ಮೂಲಕ ಮುಂದಿನ ಪೀಳಿಗೆಗೆ ಸ್ವಚ್ಛ ಪರಿಸರ ಉಳಿಸಬೇಕು’ ಎಂದು ಕೊಲ್ಹಾಪುರದ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಹೇಳಿದರು. ಮಠದಲ್ಲಿ ಭಾನುವಾರ ಉತ್ಸವದ ಸಮಾರೋಪದ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ‘ಮನುಷ್ಯನಿಗಿಂತ ಮರೆಗುಳಿತನ ಹೊಂದಿರುವ ಜೀವಿ ಇನ್ನೊಂದಿಲ್ಲ. ವಿನಾಶ ಕಾಲ ಸಮೀಪಿಸುತ್ತಿದೆ ಎಂಬುದು ಮನುಕುಲ …
Read More »