Breaking News

ಬೆಳಗಾವಿ

ಕಿರಣ ಜಾಧವ ನೇತೃತ್ವದ ಫೌಂಡೇಶನ್ ಗೆ ಎಲ್ಲ ಸಹಕಾರ ನೀಡಿವ ಭರವಸೆ:ರಮೇಶ ಜಾರಕಿಹೊಳಿ

ಬೆಳಗಾವಿ – ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಬುಧವಾರ ನಗರದ ವಿಮಲ್ ಫೌಂಡೇಶನ್ ಕಚೇರಿಗೆ ಭೇಟಿ ನೀಡಿ ಫೌಂಡೇಶನ್ ಕಾರ್ಯವನ್ನು ಪ್ರಶಂಸಿಸಿದರು. ವಿಮಲ್ ಫೌಂಡೇಶನ್ ಚೇರಮನ್ ಕಿರಣ ಜಾಧವ ಮತ್ತು ತಂಡ ಕಳೆದ ಬಾರಿ ಪ್ರವಾದ ಸಂದರ್ಭದಲ್ಲಿ ಮತ್ತು ಈಚಿನ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಮಾಡಿದ ಜನಪರ ಕಾರ್ಯವನ್ನು ರಮೇಶ ಜಾರಕಿಹೊಳಿ ಶ್ಲಾಘಿಸಿದರು. ಸಂಸ್ಥೆಯ ಎಲ್ಲ ಒಳ್ಳೆಯ ಕೆಲಸದಲ್ಲಿ ಜೊತೆಗಿರುವುದಾಗಿ ಭರವಸೆ ನೀಡಿದ ರಮೇಶ ಜಾರಕಿಹೊಳಿ, ಮುಂಬರುವ ಮಳೆಗಾಲದಲ್ಲಿ …

Read More »

ಮಹಾರಾಷ್ಟ್ರದ ನಾಗಪೂರ,ಹಾಗು ವಿಧರ್ಭ ಭಾಗದಲ್ಲಿ ಮಿಡತೆ ದಾಳಿ,ಈ ದಾಳಿ ಕರ್ನಾಟಕದ ಗಡಿ ಜಿಲ್ಲೆಗೆ ನುಗ್ಗುವ ಆತಂಕ

ಬೆಳಗಾವಿ- ಮಹಾರಾಷ್ಟ್ರದ ನಾಗಪೂರ,ಹಾಗು ವಿಧರ್ಭ ಭಾಗದಲ್ಲಿ ಮಿಡತೆ ದಾಳಿ ವಿಪರೀತವಾಗಿದ್ದು,ಈ ದಾಳಿ ಕರ್ನಾಟಕದ ಗಡಿ ಜಿಲ್ಲೆಗೆ ನುಗ್ಗುವ ಆತಂಕ ಶುರುವಾಗಿದೆ. ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಮಿಡತೆ ದಾಳೆ ಎದುರಾಗುವ ಆತಂಕವಿದ್ದು ಗಡಿ ಜಿಲ್ಲೆಗಳಾದ,ಗುಲ್ಬರ್ಗ, ರಾಯಚೂರ,ವಿಜಯಪೂರ,ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ರಾಶಿ,ರಾಶಿ ಮಿಡತೆಗಳು ಹೊಲಗದ್ದೆಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿವೆ. ಮಹಾರಾಷ್ಟ್ರದ ವಿಧರ್ಭ ಭಾಗದಲ್ಲಿ ಮಿಡತೆ ದಾಳಿಯಿಂದ ರೈತರು ಕಂಗಾಲಾಗಿದ್ದು, ಕರ್ನಾಟಕದ ಗಡಿ ಜಿಲ್ಲೆ ಬೆಳಗಾವಿಯಲ್ಲೂ ಮಿಡತೆ …

Read More »

2 ವರ್ಷದ ಹೆಣ್ಣು ಮಗು ಸೇರಿ ಜಿಲ್ಲೆಯಲ್ಲಿ  ಇಂದು ನಾಲ್ವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢ

ಬೆಳಗಾವಿ: 2 ವರ್ಷದ ಹೆಣ್ಣು ಮಗು ಸೇರಿ ಜಿಲ್ಲೆಯಲ್ಲಿ  ಇಂದು ನಾಲ್ವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಆ ಮೂಲಕ ಸೋಂಕಿತರ ಸಂಖ್ಯೆ 145 ಕ್ಕೆ ಏರಿಕೆಯಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಧ್ಯಾಹ್ನದ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, 2 ವರ್ಷದ ಮಗು ಕೇರಳ ರಾಜ್ಯದಿಂದ ವಾಪಸ್ ಆಗಿರುವ ಟ್ರಾವೆಲ್ ಹಿಸ್ಟರಿ ಇದೆ. ಇನ್ನು ಉಳಿದ ಮೂವರು ಮಹಾರಾಷ್ಟ್ರ ರಾಜ್ಯದಲ್ಲಿ ಹಿಂದಿರುಗಿದ್ದಾರೆ. ಈವರೆಗೂ 88 ಜನ ಸೋಂಕಿತರು …

Read More »

ಮಹದಾಯಿ ನದಿ ನೀರು ವಿಚಾರವಾಗಿ ಡಿಪಿಆರ್ ಸಿದ್ದಪಡಿಸಲಾಗಿದೆ. 800 ಕೋಟಿ ರೂಪಾಯಿ ಯೋಜನೆ ರೂಪರೇಷ ಸಿದ್ದವಾಗಿದೆ.

ಬೆಳಗಾವಿ: ಕೊರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಕೃಷ್ಣಾ ನದಿ ನೀರು ಹಂಚಿಕೆ ವಿಚಾರವಾಗಿ ಮಹಾರಾಷ್ಟ್ರ ಸರ್ಕಾರದ ಜತೆ ಮಾತುಕತೆ ವಿಳಂಬವಾಗಿದೆ. ಶೀಘ್ರ ಈ ವಿಚಾರವಾಗಿ ಚರ್ಚಿಸಿ ನೀರು ಹಂಚಿಕೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ. ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೃಷ್ಣಾ ನದಿ ತೀರದಲ್ಲಿ ಸದ್ಯ ನೀರನ ಸಮಸ್ಯೆ ಇಲ್ಲ. ಮುಂದಿನ ಬೇಸಿಗೆ ಅವಧಿ ವೇಳೆಗೆ ಎಲ್ಲ ಸಮಸ್ಯೆಗಳಿಗೆ ಇತಿಶ್ರೀ ಹಾಡಲಾಗುವುದು ಎಂದರು. …

Read More »

ಒಂಟಿ ದಾರಿಹೋಕರ ಮೇಲೆ ಹಲ್ಲೆ ನಡೆಸಿ ದರೋಡೆಗೆ ಪ್ಲಾನ್ ಮಾಡಿದ್ದ ನಾಲ್ವರು ಅಂದರ್

ಬೆಂಗಳೂರು, ಮೇ 27- ಕತ್ತಲಲ್ಲಿ ಹೊಂಚು ಹಾಕಿ ಒಂಟಿ ದಾರಿಹೋಕರ ಮೇಲೆ ಹಲ್ಲೆ ನಡೆಸಿ ನಗ-ನಾಣ್ಯ ದೋಚಲು ಸಜ್ಜಾಗಿದ್ದ ನಾಲ್ವರು ದರೋಡೆಕೋರರು ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ರಾಜಗೋಪಾಲನಗರದ ಅಮರನಾಥ್ (31), ಶಿವರಾಜ್ (32), ಕೆಪಿ ಅಗ್ರಹಾರದ ಶಾಂತರಾಜು (27) ಹಾಗೂ ಶ್ರೀನಿವಾಸ ಬಂಧಿತ ಆರೋಪಿಗಳು. ನಿನ್ನೆ ರಾತ್ರಿ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬಿಇಎಲ್ 2ನೆ ಹಂತದ ಭರತ್‍ನಗರ ಪಾರ್ಕ್ ಸಮೀಪ ಕತ್ತಲಲ್ಲಿ ನಿಂತು ದಾರಿಯಲ್ಲಿ ಒಂಟಿಯಾಗಿ ಹೋಗುವ …

Read More »

ಇಂದು ಬುಧವಾರ ಬಿಡುಗಡೆಯಾದ ಮಿಡ್ ಡೇ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯ 4 ಪಾಸಿಟೀವ್ ಕೇಸ್

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ರುದ್ರ ನರ್ತನ ಮುಂದುವರೆದಿದೆ.ಇಂದು ಬುಧವಾರ ಬಿಡುಗಡೆಯಾದ ಮಿಡ್ ಡೇ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯ 4 ಪಾಸಿಟೀವ್ ಕೇಸ್ ಗಳು ಪತ್ತೆಯಾಗಿವೆ. ‌ ಬೆಳಗಾವಿ ಜಿಲ್ಲೆಯಲ್ಲಿ ಜಿಲ್ಲಾ ಹೆಲ್ತ್ ಬುಲಿಟೀನ್ ಪ್ರಕಾರ ಕೊರೋನಾ ಸೊಂಕಿತರ ಸಂಖ್ಯೆ 147 ಕ್ಕೇರಿದೆ. ಬೆಳಗಾವಿ ಜಿಲ್ಲೆಯಲ್ಲಿ ಮಹಾರಾಷ್ಟ್ರದ ನಂಜು ಏರುತ್ತಲೇ ಇದ್ದು ಇಂದು ಪತ್ತೆಯಾದ ನಾಲ್ವರೂ ಮಹಾರಾಷ್ಟ್ರ ರಿಟರ್ನ್ ,ಮಹಾರಾಷ್ಟ್ರದ ವಿವಿಧ ನಗರಗಳಿಂದ ಬೆಳಗಾವಿಗೆ ಆಗಮಿಸಿದ್ದ ಈ …

Read More »

ಜೂನ್ 25ರಿಂದ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಲು ಉದ್ದೇಶಿಸಿರುವ ಎಸ್ಎಸ್ಎಲ್ ಸಿ ಪರೀಕ್ಷೆಗೆ ಈಗ ಕಾರ್ಮೋಡ

ಬೆಳಗಾವಿ – ಜೂನ್ 25ರಿಂದ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಲು ಉದ್ದೇಶಿಸಿರುವ ಎಸ್ಎಸ್ಎಲ್ ಸಿ ಪರೀಕ್ಷೆಗೆ ಈಗ ಕಾರ್ಮೋಡ ಕವಿದಿದೆ. ಕೊರೆನಾ ಮತ್ತು ಈ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ಲಾಕ್ ಡೌನ್ ನಿಂದಾಗಿ ಎಸ್ಎಸ್ಎಲ್ ಸಿ ಪರೀಕ್ಷೆ ಸೇರಿದಂತೆ ಇಡೀ ಶೈಕ್ಷಣಿಕ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಬಹುತೇಕ ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ. ಇನ್ನು ಹಲವು ಪರೀಕ್ಷೆಗಳು ಸ್ಪಷ್ಟತೆ ಇಲ್ಲದೆ ಗೊಂದಲದಲ್ಲೇ ಮುಂದುವರಿದಿವೆ. ಹಲವು ದಿನಗಳ ನಂತರ ಅಂತೂ ರಾಜ್ಯ ಸರಕಾರ ಎಸ್ಎಸ್ಎಲ್ ಸಿ …

Read More »

ಬೆಳಗಾವಿ ಗಡಿ ಪ್ರವೇಶಿಸಿದ 19 ಮಂದಿ ವಿರುದ್ಧ ಪ್ರಕರಣ ದಾಖಲು

ಬೆಳಗಾವಿ: ಮಹಾರಾಷ್ಟ್ರದಿಂದ ಅಕ್ರಮವಾಗಿ ಬೆಳಗಾವಿ ಗಡಿ ಪ್ರವೇಶಿಸಿದ 19 ಮಂದಿ ಕಾರ್ಮಿಕರ ವಿರುದ್ಧ ಪ್ರಕರಣ ದಾಖಲಾಗಿದೆ. ಬೆಳಗಾವಿ ಜಿಲ್ಲೆ ಮೂಡಲಗಿ ಠಾಣೆಯಲ್ಲಿ ಈ 19 ಜನರ ವಿರುದ್ಧ ಕೇಸ್ ದಾಖಲಾಗಿದೆ. ಲಾಕ್‍ಡೌನ್ ಮುನ್ನ ಕಬ್ಬು ಕಟಾವು ಮಾಡಲು ಕೊಲ್ಲಾಪುರಕ್ಕೆ ತೆರಳಿದ್ದು, ಆ ಬಳಿಕ ಲಾಕ್ ಡೌನ್ ನಿಂದಾಗಿ ಕೆಲಸ ಇಲ್ಲದೇ ಕೂಲಿಕಾರ್ಮಿಕರು ಪರದಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಕಾಲ್ನಡಿಗೆಯಲ್ಲಿಯೇ ಮಹಾರಾಷ್ಟ್ರದ ಮೀರಜ್ ಗಡಿಯವರೆಗೆ ಆಗಮಿಸಿದ್ರು. ದಾಸಗಾಂವ – ಮಾಗಾಂವ – ಮೀರಜ್ …

Read More »

ಜಿಲ್ಲಾಡಳಿತ ಎಡವಟ್ಟು,ಅಥಣಿ ತಾಲೂಕಿನ 4 ಗ್ರಾಮಗಳು ಸಂಕಷ್ಟ ಎದುರಿಸುವಂತಾಗಿದೆ.

ಒಂದು ಸಮುದಾಯದ ನಂಟಿಂದ ಬರೋಬ್ಬರಿ 13 ಕೇಸ್ ಕೊರೊನಾ ಪಾಸಿಟಿವ್ ಕೊರೊನಾ ಪರೀಕ್ಷೆ ರಿಪೋರ್ಟ್ ಬರೋದಕ್ಕೂ ಮೊದಲೇ ಕ್ವಾರಂಟೈನ್‍ನಲ್ಲಿದ್ದವರನ್ನ ಬಿಡುಗಡೆ  ಪ್ರಭಾವ ಬಳಸಿ ತಮ್ಮ ಮನೆಗಳು ಸೇರಿದಂತೆ ಜೈನ ಸಮುದಾಯದವರು ಆಯೋಜಿಸದ್ದ ಪೂಜೆಯಲ್ಲೂ ಭಾಗಿ   ಚಿಕ್ಕೋಡಿ(ಬೆಳಗಾವಿ): ಕುಂದಾನಗರಿ ಬೆಳಗಾವಿಗೆ ತಬ್ಲಿಘಿ, ಅಜ್ಮೀರ್ ಬಳಿಕ ಹೊಸದಂದು ಕಂಟಕ ಶುರುವಾಗಿದೆ. ಒಂದು ಸಮುದಾಯದ ನಂಟಿಂದ ಬರೋಬ್ಬರಿ 13 ಕೇಸ್ ಕೊರೊನಾ ಪಾಸಿಟಿವ್ ಆಗಿದೆ. ಕುಂದಾನಗರಿ ಬೆಳಗಾವಿಗೆ ಈಗ ತಬ್ಲಿಘಿ, ಅಜ್ಮೀರ್ ಬಳಿಕ …

Read More »

ರಮೇಶ ಜಾರಕಿಹೊಳಿಯವರ ಪ್ರವಾಸದ ವಿವರ…….ಮೇ.27ರಿಂದ ಬೆಳಗಾವಿ, ಮೈಸೂರು, ಚಾಮರಾಜನಗರ ಜಿಲ್ಲೆಯಲ್ಲಿ ಪ್ರವಾಸ

ಬೆಳಗಾವಿ: ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಮೇ.27ರಿಂದ ಬೆಳಗಾವಿ, ಮೈಸೂರು, ಚಾಮರಾಜನಗರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಮೇ.27ರಂದು ಬೆಳಿಗ್ಗೆ9.30ಕ್ಕೆ ಗೋಕಾಕ್ ನಿರ್ಗಮನ, 10.30ಕ್ಕೆ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಆಹ್ವಾಲ ಸ್ವೀಕಾರ, ಮಧ್ಯಾಹ್ನ 2 ಗಂಟೆಗೆ ಬೆಳಗಾವಿಯಿಂದ ಮೈಸೂರಿಗೆ ತೆರಳಿ ವಾಸವ್ಯ. ಮೇ .28ರಂದು ಬೆಳಿಗ್ಗೆ 8ಗಂಟೆಗೆ ಸುತ್ತೂರು ಮಹಾಸಂಸ್ಥಾನದ ಸ್ವಾಮಿಜೀಯೊಂದಿಗೆ ಮಾತುಕತೆ, 9 ಗಂಟಗೆ ಗಣಪತಿ ಸಚ್ಛಿದಾನಂದ ಆಶ್ರಮಕ್ಕೆ ಭೇಟಿ, 11.30ಕ್ಕೆ ಮೈಸೂರಿಂದ …

Read More »