Breaking News

ಬೆಳಗಾವಿ

ಕರಡಿಗುದ್ದಿ, ಡಾ.ದೀಕ್ಷಿತ್‌ಗೆ ‘ಸಿರಿಗನ್ನಡ ಗೌರವ’

ಬೆಳಗಾವಿ: ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನವು 2022ನೇ ಸಾಲಿನ ‘ಸಿರಿಗನ್ನಡ ಗೌರವ’ ಮತ್ತು 2021ನೇ ಸಾಲಿನ ‘ಸಿರಿಗನ್ನಡ ಪುಸ್ತಕ ಪ್ರಶಸ್ತಿ’ ಪ್ರಕಟಿಸಿದೆ. ಸಿರಿಗನ್ನಡ ಗೌರವ ಪ್ರಶಸ್ತಿಗೆ ಪ್ರೊ.ರಾಜಶೇಖರ ಎಂ. ಕರಡಿಗುದ್ದಿ ಮತ್ತು ಡಾ.ಮಾಧವ ದೀಕ್ಷಿತ ಭಾಜನರಾಗಿದ್ದಾರೆ. ಸಿರಿಗನ್ನಡ ಪುಸ್ತಕ ಪ್ರಶಸ್ತಿಗೆ ಈರಯ್ಯ ಕಿಲ್ಲೇದಾರ ಅವರ ವೈಚಾರಿಕ ಲೇಖನ ಸಂಗ್ರಹ ‘ಉರಿಯ ಪೇಟೆಯಲ್ಲಿ’ ಕೃತಿ ಮತ್ತು ಚಂದ್ರಶೇಖರ ಪೂಜಾರ ಅವರ ಗಜಲ್ ಸಂಕಲನ ‘ಬೆಳಕ ನಿಚ್ಚಣಿಕೆ’ ಕೃತಿ ಆಯ್ಕೆಯಾಗಿವೆ. ಜೀವನಮಾನ ಸಾಧನೆ ಪ್ರಶಸ್ತಿಗಳು: …

Read More »

ಬೆಳಗಾವಿ ಜಿಲ್ಲೆಯ ವಿವಿಧೆಡೆ ತಪಾಸಣೆ ನಡೆಸಿ ಅಪಾರ ಪ್ರಮಾಣದಲ್ಲಿ ಹಣ ಹಾಗೂ ಮದ್ಯ ವಶ

ಬೆಳಗಾವಿ: ಚುನಾವಣೆ ಕರ್ತವ್ಯ ನಿರತ ಸಿಬ್ಬಂದಿ ಬೆಳಗಾವಿ ಜಿಲ್ಲೆಯ ವಿವಿಧೆಡೆ ತಪಾಸಣೆ ನಡೆಸಿ ಅಪಾರ ಪ್ರಮಾಣದಲ್ಲಿ ಹಣ ಹಾಗೂ ಮದ್ಯ ವಶಪಡಿಸಿಕೊಂಡಿದ್ದಾರೆ. ಘಟಪ್ರಭಾದ ಹುಣಶ್ಯಾಳ ಗ್ರಾಮದಲ್ಲಿ ಅಬಕಾರಿ ದಾಳಿ ಮಾಡಿ 34 ಬಾಕ್ಸ್, 3264 ಪೌಚ್ ಗಳನ್ನು ಜಪ್ತು ಮಾಡಲಾಗಿದೆ. ಒಟ್ಟು 301 ಲೀಟರ್ ಮಧ್ಯ (Original choice ), ಅಂದಾಜು 1,18,000 ರೂಪಾಯಿಗಳು. ಹಿಟ್ನಿ ಚೆಕ್ ಪೋಸ್ಟ್ ನಲ್ಲಿ 1 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಮಿರಜ್ ನ …

Read More »

ಥೈರಾಯ್ಡ್ ನಿಂದ ಬಳಲುತ್ತಿದ್ದ 49 ವರ್ಷದ ಮಹಿಳೆಗೆ ಯಶಸ್ವಿಯಾಗಿ ಚಿಕಿತ್ಸೆ

ಬೆಳಗಾವಿ: ಗಂಟಲು ನೋವು, ಊತ, ನುಂಗಲು ತೊಂದರೆಯ ಸಮಸ್ಯೆಯೊಂದಿಗೆ ಉಲ್ಬಣಗೊಂಡಿದ್ದ ಥೈರಾಯ್ಡ್ ನಿಂದ ಬಳಲುತ್ತಿದ್ದ 49 ವರ್ಷದ ಮಹಿಳೆಗೆ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ಹೆಮಿಥೈರೊಡಕ್ಟಮಿ (ಎಡಗಡೆಯ) ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ. ಮೂಲತಃ ಖಾನಾಪುರ ತಾಲೂಕಿನ ರಹವಾಸಿಯಾದ ಮಹಿಳೆಗೆ ಕಳೆದ 20 ವರ್ಷಗಳಿಂದ ಗಂಟಲಿನ ಸಮೀಪ ಒಂದು ಸಣ್ಣಗಂಟಿನಾಕಾರದಲ್ಲಿದ್ದ ಥೈರಾಯ್ಡ ಸಮಸ್ಯೆಯು ಕಳೆದ 2ರಿಂದ 3 ವರ್ಷಗಳಲ್ಲಿ ಉಲ್ಭಣಗೊಂಡು ರೋಗಿಯು ನುಂಗಲು, ಮಾತನಾಡಲು ಸಮಸ್ಯೆಯನ್ನು ಎದುರಿಸಬೇಕಾಯಿತು. …

Read More »

ಬಾಲಚಂದ್ರ ಜಾರಕಿಹೊಳಿ ಅವರನ್ನು ಲಕ್ಷ ಮತಗಳಿಂದ ಆಯ್ಕೆ ಮಾಡಿ.-ಸರ್ವೋತ್ತಮ ಜಾರಕಿಹೊಳಿ

ಗೋಕಾಕ: ಕಳೆದ ಎರಡು ದಶಕದಿಂದ ಅರಭಾವಿ ಕ್ಷೇತ್ರದ ಶಾಸಕರಾಗಿ, ಆ ಭಾಗದ ಜನರ ಆಶೋತ್ತರಗಳಿಗೆ ಸದಾ ಸ್ಪಂದಿಸುತ್ತಿರುವ ಬಾಲಚಂದ್ರ ಜಾರಕಿಹೊಳಿ ಅವರನ್ನು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಿಕೊಡುವ ಸಂಕಲ್ಪವನ್ನು ಕಾರ್ಯಕರ್ತರು ಮಾಡುವಂತೆ ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ ಹೇಳಿದರು. ಅವರು, ಅರಭಾವಿ ಕ್ಷೇತ್ರದ ಹಳ್ಳೂರ, ಮೆಳವಂಕಿ, ಕೌಜಲಗಿ ಮತ್ತು ವಡೇರಹಟ್ಟಿ ಜಿಲ್ಲಾ ಪಂಚಾಯತ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಜರುಗಿದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ ಬಾಲಚಂದ್ರ ಜಾರಕಿಹೊಳಿ ಅವರ ಜನಪರ …

Read More »

ಕಿತ್ತೂರಿನಲ್ಲಿ 30ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಗೆ

ಬೆಳಗಾವಿ; ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ 30ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ. ಕಿತ್ತೂರಿನ ನಾವಲಗಟ್ಟಿ ಗ್ರಾಮದ 30ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಗೆ ಸೇರ್ಪಡೆಯಾದರು. ಯಲ್ಲಪ್ಪ ಉಪ್ಪಾರಟ್ಟಿ, ಭೀಮಮೂಡಲಗಿ, ರಾಜು ಕಲ್ಲೂರ, ಸಂತೋಷ ಕಲ್ಲೂರ ಸೇರಿದಂತೆ ಎಲ್ಲರನ್ನೂ ಕಾಂಗ್ರೆಸ್ ಮುಖಂದ ನಾನಾಸಾಹೇಬ್ ಪಾಟೀಲ್ ಪಕ್ಷದ ಶಾಲು ಹೊದಿಸಿ ಬರಮಾಡಿಕೊಂಡರು.

Read More »

ಮಹೇಶ್ ಕುಮಟಳ್ಳಿಗೆ ಟಿಕೆಟ್ ಕೊಟ್ಟರೆ ಗೆಲುವು ಸ್ವಲ್ಪ ಕಷ್ಟಕರ ಲಕ್ಷ್ಮಣ ಸವದಿ ಹೇಳಿಕೆ

ಪಕ್ಷ ನನಗೆ ಮೋಸ ಮಾಡುವುದಿಲ್ಲ. ಶೇ 99ರಷ್ಟು ನನಗೆ ಟಿಕೆಟ್ ಕೊಡುತ್ತದೆ ಎಂದು ವಿಶ್ವಾಸವಿದೆ. ಮಹೇಶ್ ಕುಮಟಳ್ಳಿಗೆ ಟಿಕೆಟ್ ಕೊಟ್ಟರೆ ಗೆಲುವು ಸ್ವಲ್ಪ ಕಷ್ಟ ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ. ಪಂಚಮಸಾಲಿ ಸಮಾಜದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಲಕ್ಷ್ಮಣ ಸವದಿಚಿಕ್ಕೋಡಿ : ಅಥಣಿಯಲ್ಲಿ ರಾಜಕೀಯ ವಾತಾವರಣ ಬದಲಾಗಿದೆ. ಮಹೇಶ್ ಕುಮಟಳ್ಳಿಗೆ ಟಿಕೆಟ್ ಕೊಟ್ಟರೆ ಗೆಲುವು ಸ್ವಲ್ಪ ಕಷ್ಟಕರ ಎಂದು ಲಕ್ಷ್ಮಣ ಸವದಿ ಹೇಳಿದರು. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಶಿವಣಗಿ ಸಾಂಸ್ಕ್ರತಿಕ …

Read More »

ಬಿಜೆಪಿ ಟಿಕೆಟ್ ವಿಚಾರ ಕತ್ತಿ ಕುಟುಂಬದವರೇ ತೀರ್ಮಾನಿಸಲಿ

ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಈಗಾಗಲೇ ತನ್ನ ಅಭ್ಯರ್ಥಿಗಳ ಎರಡು ಪಟ್ಟಿಯನ್ನು ಬಿಡುಗಡೆ ಮಾಡಿದ್ದರೆ, ಮೊದಲ ಪಟ್ಟಿ ಪ್ರಕಟಿಸಿರುವ ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆಗೆ ತಯಾರಿ ನಡೆಸುತ್ತಿದೆ. ಆದರೆ ಬಿಜೆಪಿ ಮಾತ್ರ ಇನ್ನೂ ಕೂಡ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದೆ.   ಇದರ ಮಧ್ಯೆ ಸಚಿವರಾಗಿದ್ದ ಉಮೇಶ್ ಕತ್ತಿ ಪ್ರತಿನಿಧಿಸುತ್ತಿದ್ದ ಬೆಳಗಾವಿ ಜಿಲ್ಲೆ ಹುಕ್ಕೇರಿ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರವನ್ನು ಕತ್ತಿ ಕುಟುಂಬದವರೇ ತೀರ್ಮಾನಿಸಲಿ ಎಂಬ ಅಭಿಪ್ರಾಯವನ್ನು …

Read More »

ಬೊಮ್ಮಾಯಿ ಅಸಾಮರ್ಥ್ಯವೇ ಮಹಾರಾಷ್ಟ್ರದ ಗಡಿ ತಂಟೆಗೆ ಕಾರಣ – ಕಾಂಗ್ರೆಸ್ ವಾಗ್ಧಾಳಿ ನಡೆಸಿದೆ

ಬೆಂಗಳೂರು: ಬಿಜೆಪಿ ಸರ್ಕಾರದ ವೈಫಲ್ಯ, ಬಸವರಾಜ ಬೊಮ್ಮಾಯಿ ಅವರ ಅಸಾಮರ್ಥ್ಯವೇ ಮಹಾರಾಷ್ಟ್ರದ ಗಡಿ ತಂಟೆಗೆ ಕಾರಣ. ಚುನಾವಣೆಗಾಗಿ ಏಕಾಏಕಿ ಕರ್ನಾಟಕದ ಮೇಲೆ ವಿಶೇಷ ಪ್ರೀತಿ ಹುಟ್ಟಿ ವಾರಕ್ಕೊಮ್ಮೆ ಕರ್ನಾಟಕಕ್ಕೆ ಬರುವ ಮೊ-ಶಾ ಜೋಡಿ ಮಹಾರಾಷ್ಟ್ರದಲ್ಲಿನ ತಮ್ಮದೇ ಸರ್ಕಾರದ ಉದ್ಧಟತನಕ್ಕೆ ಕಡಿವಾಣ ಹಾಕುತ್ತಿಲ್ಲವೇಕೆ ಬಿಜೆಪಿ ಎಂದು ಕರ್ನಾಟಕ ಕಾಂಗ್ರೆಸ್ ವಾಗ್ಧಾಳಿ ನಡೆಸಿದೆ.ಈ ಕುರಿತಂತೆ ಟ್ವಿಟ್ ಮಾಡಿದ್ದು, ರಮೇಶ್ ಜಾರಕಿಹೊಳಿ ಬಿಜೆಪಿಗೆ ದುಬಾರಿ ಮನುಷ್ಯನಾಗಿದ್ದಾರೆ, ಒಂದೆಡೆ ಸವದಿ ಜೊತೆ ಕಿರಿಕ್, ಇನ್ನೊಂದೆಡೆ ಈರಣ್ಣ …

Read More »

ಮಹಾರಾಷ್ಟ್ರ ಸರ್ಕಾರದ ಆರೋಗ್ಯ ಯೋಜನೆ ವಿವಾದ

ಗಡಿ ವಿಷಯದಲ್ಲಿ ಕರ್ನಾಟಕದ ಜತೆ ಸದಾ ತಂಟೆ ತೆಗೆಯುವ ಮಹಾರಾಷ್ಟ್ರ ಸರ್ಕಾರ ಈ ಬಾರಿ ಸ್ವಲ್ಪ ಭಿನ್ನ ಹಾದಿ ಹಿಡಿದಿದೆ. ಕರ್ನಾಟಕ ವ್ಯಾಪ್ತಿಯ ಸುಮಾರು 865 ಹಳ್ಳಿಗಳಲ್ಲಿ ಆರೋಗ್ಯ ಯೋಜನೆ ಜಾರಿಗೊಳಿಸುವ ಮೂಲಕ ಜಾಣ ಕಾರ್ಯತಂತ್ರ ಬಳಸಲು ಮುಂದಾಗಿದೆ. ಆರೋಗ್ಯ ವಿಷಯವಾಗಿದ್ದರಿಂದ ಯಾರೂ ತಕರಾರು ತೆಗೆಯಲಾಗದು ಎಂಬುದು ಅವರ ಭಾವನೆಯಿರಬೇಕು. ಆದರೆ ಈ ತಂತ್ರದ ಹಿಂದೆ ಬೇರೆಯದೇ ಸಂಚನ್ನು ಗುರುತಿಸಿರುವ ರಾಜ್ಯದ ರಾಜಕೀಯ ಪಕ್ಷಗಳ ನಾಯಕರು ಒಗ್ಗಟ್ಟಾಗಿ ಏಕದನಿಯಲ್ಲಿ ವಿರೋಧ …

Read More »

ಅಂಕಲಗಿ ಶ್ರೀ ಗುರುಸಿದ್ಧ ಶ್ರೀಗಳಿಗೆ ಶೃದ್ಧಾಂಜಲಿ ಅರ್ಪಿಸಿದ ಹುಕ್ಕೇರಿ ಕಾರಂಜಿಮಠದ ಶ್ರೀಗಳು

ಬೆಳಗಾವಿ: ಅಂಕಲಗಿ ಅಡವಿಸಿದ್ದೇಶ್ವರ ಮಠದ ಶ್ರೀ ಗುರುಸಿದ್ಧ ಮಹಾಸ್ವಾಮೀಜಿ ಇತ್ತೀಚೆಗೆ ಲಿಂಗೈಕೆರಾಗಿದ್ದಾರೆ. ಇವರ ಗದ್ದುಗೆಗೆ ಬೆಳಗಾವಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ಬೆಳಗಾವಿ ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಪೂಜೆ ಸಲ್ಲಿಸಿ ಶೃದ್ಧಾಂಜಲಿ ಅರ್ಪಿಸಿದರು. ಈ ವೇಳೆ ಮಾತನಾಡಿದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಅಂಕಲಗಿ ಶ್ರೀಗಳು ಭಕ್ತರ ಶೃದ್ಧಾ ಕೇಂದ್ರವಾಗಿರುವ ಅಂಕಲಗಿ ಅಡವಿಸಿದ್ದೇಶ್ವರ ಮಠವನ್ನು ಪುನರೋತ್ಥಾನಗೊಳಿಸುವುದರ ಮೂಲಕ ಅನೇಕ ಜನಪರ ಕೆಲಸ ಮಾಡಿದ್ದಾರೆ. ಇವರ ಅಗಲಿಕೆಯಿಂದ ಇಡೀ ಸಮಾಜಕ್ಕೆ ತುಂಬಲಾರದಷ್ಟು …

Read More »