Breaking News

ಬೆಳಗಾವಿ

ನಿಪ್ಪಾಣಿಯಲ್ಲಿ‌ ಜರುಗಿದ ಮನೆ ಮನೆಗೆ ಬುದ್ಧ ಬಸವ ಅಂಬೇಡ್ಕರ್ ಕಾರ್ಯಕ್ರಮ

ಮಾನವ ಬಂಧುತ್ವ ವೇದಿಕೆ-ಕರ್ನಾಟಕ ನೇತೃತ್ವದಲ್ಲಿ ಇಂದು ನಿಪ್ಪಾಣಿಯಲ್ಲಿ‌ ಜರುಗಿದ ಮನೆ ಮನೆಗೆ ಬುದ್ಧ ಬಸವ ಅಂಬೇಡ್ಕರ್ ಕಾರ್ಯಕ್ರಮದಲ್ಲಿ ಶ್ರೀ ರಾಹುಲ್ ಅಣ್ಣ ಜಾರಕಿಹೊಳಿ ಅವರು ಭಾಗವಹಿಸಿದರು. ತಂದೆಯವರಾದ ಹಾಗೂ ಮಾನವ ಬಂಧುತ್ವ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಸತೀಶ ಜಾರಕಿಹೊಳಿ, ಮೈಸೂರಿನ ಉರಿಲಿಂಗಿ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿಯವರು, ಹೆಬ್ಬಾಳ ಗ್ರಾಮದ ಬಸವ ಭವನದ ಬಸವ ಚೇತನ ದೇವರು ಇದ್ದರು. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗುವುದರ ಮೂಲಕ ಕಾರ್ಯಕ್ರಮವನ್ನು …

Read More »

ಯುವಾ ಬಿಜೆಪಿ ವತಿಯಿಂದ ಬಸ್ ತಂಗುದಾಣಗಳಲ್ಲಿ ಸ್ವಚ್ಛತಾ ಅಭಿಯಾನ…

ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದಲ್ಲಿ ಬಿಜೆಪಿ ಯುವಾ ಮೊರ್ಚಾದ ವತಿಯಿಂದ ಬಸ ತಂಗುದಾಣಗಳ ಸ್ವಚ್ಛತಾ ಅಭಿಯಾನವನ್ನು ನಡೆಸಲಾಯಿತು. ಭಾನುವಾರದಂದು ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತ ಮತ್ತು ಸರದಾರ ಕಾಲೇಜು ಮೈದಾನದ ಹತ್ತಿರದ ಬಸ್ ತಂಗುದಾಣಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಯಿತು. ಕೈಯಲ್ಲಿ ಪೊರಕೆ ಮತ್ತು ನೀರಿನ ಪೈಪ್ ಹಿಡಿದ ಕಾರ್ಯಕರ್ತರು ಕಸವನ್ನು ಗುಡಿಸಿ ನೀರು ಹಾಕಿ ತಂಗುದಾಣಗಳನ್ನು ಶುಚಿಗೊಳಿಸಿದರು. ಈ ಸಂದರ್ಭದಲ್ಲಿ ಉತ್ತರ ಶಾಸಕರು ಮತ್ತು ಮಹಾನಗರ ಅಧ್ಯಕ್ಷರು,ಯುವ ಮೊರ್ಚಾ ಅಧ್ಯಕ್ಷರು,ಪ್ರಧಾನ …

Read More »

ಸಿಎಂ ಬೊಮ್ಮಾಯಿ ಜನರ ಸಮಾಧಿಯ ಮೇಲೆ ರಾಜಕಾರಣ ಮಾಡುತ್ತಿದ್ದಾರೆಂದ ಚೂನಪ್ಪ ಪೂಜಾರಿ

ಕಬ್ಬು ಬೆಳೆಗಾರರಿಗೆ ಸಿಹಿ ಸುದ್ಧಿ ಕೊಡದ ಸಿಎಂ ಬೊಮ್ಮಾಯಿ ಜನಸಂಕಲ್ಪ ಯಾತ್ರೆಯಲ್ಲ, ಜನರ ಸಮಾಧಿಯ ಮೇಲೆ ರಾಜಕಾರಣ ಮಾಡುತ್ತಿದ್ದಾರೆಂದು ರೈತ ಮುಖಂಡ ಚೂನಪ್ಪ ಪೂಜಾರಿ ವಾಗ್ದಾಳಿ ನಡೆಸಿದರು. ಬೆಳಗಾವಿಯಲ್ಲಿ ಕರೆಯಲಾಗಿದ್ದು ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಅವರು ಮಾತನಾಡಿದರು. ರಾಜ್ಯದ ಮುಖ್ಯಮಂತ್ರಿ ಕಬ್ಬಿನ ಬೆಲೆ ನಿಗದಿ ಮಾಡಿಲ್ಲ ಸಿಹಿ ಸುದ್ದಿ ಕೊಡ್ತೇವಿ ಅಂತಾ ಹೇಳಿದ್ರು. ಶುಗರ್ ಲಾಭಿಗೆ ಮಣಿದಿದ್ದಾರೆ ೮ ವರ್ಷದಿಂದ ೨೫೦೦ ತೆಗೆದುಕೊಳ್ಳುತ್ತಿದ್ದೇವೆ. ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದಾರೆ. …

Read More »

ರಮೇಶ ಜಾರಕಿಹೋಳಿ ಜೆಡಿಎಸ್‌ಗೆ ಬಂದ್ರೇ ಸ್ವಾಗತ

ಮಾಜಿ ಸಚಿವ ರಮೇಶ ಜಾರಕಿಹೋಳಿ ಅವರು ಜೆಡಿಎಸ್‌ಗೆ ಬಂದ್ರೇ ನಾವು ಅವರನ್ನು ಸ್ವಾಗತಿಸುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದರು. ಇಂದು ಭಾನುವಾರ ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಅವರು ಮಾತನಾಡಿದರು. ಜೆಡಿಎಸ್ ಪಕ್ಷ ಜನರಿಗಾಗಿ ಇರುವ ಪಕ್ಷ. ನಮ್ಮ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ರಮೇಶ ಜಾರಕಿಹೊಳಿ ಅಥವಾ ಯಾರು ಬರುತ್ತಾರೆಯೋ ಅಂಥವರಿಗೆ ಜಿಲ್ಲಾ ಮಟ್ಟದಲ್ಲಿನ ನಾಯಕರೊಂದಿಗೆ ರ‍್ಚೆ ಮಾಡಿ ತರ‍್ಮಾನ ಮಾಡಲಾಗುವುದು ಎಂದರು. …

Read More »

ಮನುಷ್ಯನ ಏಳ್ಗೆಗೆ ಧರ್ಮ ಅವಶ್ಯ: ಶ್ರೀಶೈಲ ಶ್ರೀ

ಅಥಣಿ: ಧರ್ಮ ರಕ್ಷಣೆ ಮಾಡುವವರನ್ನು ಧರ್ಮ ರಕ್ಷಿಸುತ್ತದೆ. ಧರ್ಮದೊಂದಿಗೆ ಎಲ್ಲರೂ ಕೈ ಜೋಡಿಸುವಂತೆ ಶ್ರೀಶೈಲ ಪೀಠದ ಜಗದ್ಗುರು ಡಾ| ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಕರೆ ನೀಡಿದರು. ಶ್ರೀಗಳು ಶ್ರೀಶೈಲವರೆಗಿನ ಜನಜಾಗೃತಿ ಪಾದಯಾತ್ರೆ ಮಾರ್ಗ ಮಧ್ಯೆ ಸತ್ತಿ ಗ್ರಾಮದಲ್ಲಿ ಜರುಗಿದ ಧರ್ಮಸಭೆಯ ಸಾನ್ನಿಧ್ಯವಹಿಸಿ ಮಾತನಾಡಿ, ಮನುಷ್ಯನ ಏಳ್ಗೆಗೆ ಧರ್ಮವು ಅತ್ಯವಶ್ಯವಾಗಿದೆ.   ಇತ್ತೀಚಿಗೆ ರಸಾಯನಿಕ ಗೊಬ್ಬರ ಅತಿಯಾಗಿ ಬಳಕೆಯಾಗುತ್ತಿದ್ದು, ಫಲವತ್ತಾದ ಭೂಮಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಕೃಷಿಕರು ಸಾವಯವ ಕೃಷಿ ಮಾಡುವ …

Read More »

ಕರ್ನಾಟಕ – ಮಹಾರಾಷ್ಟ್ರ ನಡುವೆ ಸಮನ್ವಯತೆ ವೃದ್ಧಿಸಿ

ಬೆಳಗಾವಿ: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಭಾಗದಲ್ಲಿಯ ಸಮಸ್ಯೆಗಳು ಮತ್ತು ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಉಭಯ ರಾಜ್ಯಗಳ ಗಡಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸುತ್ತಿದ್ದು, ಇದನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬೇಕು ಎಂದು ಉಭಯ ರಾಜ್ಯಗಳ ರಾಜ್ಯಪಾಲರು ಸಲಹೆ ನೀಡಿದರು.   ಕೊಲ್ಲಾಪುರದ ರೆಸಿಡೆನ್ಸಿ ಕ್ಲಬ್‌ನಲ್ಲಿ ಶುಕ್ರವಾರ ಜರಗಿದ ಅಂತಾರಾಜ್ಯ ಗಡಿ ಜಿಲ್ಲೆಯ ಅಧಿ ಕಾರಿಗಳ ಸಮನ್ವಯ ಸಭೆಯಲ್ಲಿ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್ ಹಾಗೂ ಮಹಾರಾಷ್ಟ್ರ ರಾಜ್ಯಪಾಲ ಭಗತ್‌ ಸಿಂಗ್‌ ಕೋಶ್ಯಾರಿ …

Read More »

ಸರ್ಕಾರಿ ನೌಕರರಿಗೆ ಸಮಾನ ವೇತನ ನೀಡಿ

ಬೆಳಗಾವಿ: ಸರ್ಕಾರಿ ನೌಕರರಿಗೆ ಸಮಾನ ವೇತನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಪದಾಧಿಕಾರಿಗಳು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ಇಲ್ಲಿನ ಕೇಂದ್ರೀಯ ಬಸ್‌ ನಿಲ್ದಾಣದಿಂದ ಜಿಲ್ಲಾಧಿಕಾರಿ ಕಚೇರಿಯ ವರೆಗೆ ಸೈಕಲ್‌ ರ್‍ಯಾಲಿ ನಡೆಸಿದ ಸಾರಿಗೆ ನೌಕರರು, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.   ಕೂಟದ ಅಧ್ಯಕ್ಷ ಆರ್‌. …

Read More »

ಬೆಳಗಾವಿ: ಜಿಲ್ಲೆಯಲ್ಲಿ ತುಳಸಿ ಲಗ್ನದ ಸಂಭ್ರಮ

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಶನಿವಾರ ತುಳಸಿ ಲಗ್ನದ ಸಂಭ್ರಮ ಮನೆ ಮಾಡಿತು. ತುಳಸಿ ಕಟ್ಟೆಗಳನ್ನು ತೊಳೆದು ಸುಣ್ಣ- ಬಣ್ಣ ಬಳಿದ ಕುಟುಂಬದ ಸದಸ್ಯರು, ತುಳಸಿ ಸಸಿಗೆ ಶಾಸ್ತ್ರೋಕ್ತವಾಗಿ ಮದುವೆ ಮಾಡಿದರು. ವಾರದಿಂದಲೂ ಮಾರುಕಟ್ಟೆಯಲ್ಲಿ ತುಳಸಿಕಟ್ಟೆಗಳ ಮಾರಾಟ ಜೋರಾಗಿತ್ತು. ಸಿಮೆಂಟ್‌ನಿಂದ ಮಾಡಿದ ಆಕರ್ಷಕ ಬಣ್ಣಗಳ ಕಟ್ಟೆಗಳನ್ನು ಮನೆ ಮುಂದೆ ಪ್ರತಿಷ್ಠಾಪಿಸಿದರು. ಶನಿವಾರ ಬೆಳಿಗ್ಗೆಯಂತೂ ಮಾರುಕಟ್ಟೆಗಳು ಜನಜಂಗುಳಿಯಿಂದ ತುಂಬಿದವು. ತುಳಸಿ ಸಸಿಗಳು, ಕಬ್ಬಿನ ಜಲ್ಲೆ, ಬಾಳೆದಿಂಡು, ಜೋಳದ ದಂಟು, ಹೂ- ಹಣ್ಣು …

Read More »

ಹುಣಶಿಕಟ್ಟಿ-ಉಳವಿ ಪಾದಯಾತ್ರೆಗೆ ಚಾಲನೆ

ಬೆಳಗಾವಿ: ಜಿಲ್ಲೆಯ ಹುಣಶಿಕಟ್ಟಿಯಿಂದ ಯಳವಿವರೆಗೆ ಕೈಗೊಂಡ ಪಾದಯಾತ್ರೆಗೆ ಗ್ರಾಮದಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು. ಗ್ರಾಮದ ಕಲ್ಮೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಗ್ರಾಮಸ್ಥರು ಹಾಗೂ ಭಜನಾ ಮಂಡಳಿಯವರು ಪಾದಯಾತ್ರೆಗೆ ಮುಂದಾದರು.   ಮುಖಂಡರಾದ ಬಸವರಾಜ ಹೊಳಿ, ಕಲ್ಮೇಶ ಮರಡಿ, ಗಂಗಪ್ಪ ನಾಡಗೌಡ್ರ, ಮಹಾಂತೇಶ ಉಪ್ಪಿನ, ವಿರೂಪಾಕ್ಷಿ ಹಿರೇಮಠ, ಉಮೇಶ ಹೊಸಮನಿ, ಬಸವರಾಜ ತುರುಮರಿ, ಸಂಗಯ್ಯ ಹಿರೇಮಠ, ಉಮೇಶ ಹೊಸಮನಿ, ಅಶೋಕ ಯರಗೊಪ್ಪ, ಕಲ್ಮೇಶ ತುರಮರಿ, ಕಲ್ಲಯ್ಯ ಪತ್ರಿ, ಬಸವಂತಪ್ಪ ಹುಬ್ಬಳ್ಳಿ ನೇತೃತ್ವ …

Read More »

ಹುಕ್ಕೇರಿ, ಸವದತ್ತಿ ವಿಧಾನಸಭೆ ಕ್ಷೇತ್ರಗಳಿಗೆ ಬೈ ಎಲೆಕ್ಷನ್ ಇಲ್ಲ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಮತ್ತು ಸವದತ್ತಿ ವಿಧಾನಸಭಾ ಕ್ಷೇತ್ರಗಳಿಗೆ ಕೇಂದ್ರ ಚುನಾವಣಾ ಆಯೋಗವು ಉಪಚುನಾವಣೆ ಘೋಷಣೆ ಮಾಡಿಲ್ಲ. ವಿಧಾನಸಭಾ ಚುನಾವಣೆಗೆ ಏಳು ತಿಂಗಳುಗಳು ಬಾಕಿ ಇರುವುದರಿಂದ ಉಪಚುನಾವಣೆ ಘೋಷಣೆ ಮಾಡಿಲ್ಲ ಎಂದು ಹೇಳಲಾಗಿದೆ.   ಬೆಂಗಳೂರು : ಬೆಳಗಾವಿ ಜಿಲ್ಲೆಯ ಹುಕ್ಕೇರಿ ಮತ್ತು ಸವದತ್ತಿ ಯಲ್ಲಮ್ಮ ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಸದಿರಲು ಕೇಂದ್ರ ಚುನಾವಣೆ ಆಯೋಗ ನಿರ್ಧರಿಸಿದಂತಿದೆ. ಬರುವ ವರ್ಷದ ಮೇ ತಿಂಗಳಲ್ಲಿ ರಾಜ್ಯ ವಿಧಾನಸಭೆಗೆ ” ಸಾರ್ವತ್ರಿಕ …

Read More »