ಬೆಳಗಾವಿ: ‘ಹಿಂದೂ ಎಂಬುದು ಧರ್ಮವಲ್ಲ, ಅದು ಜೀವನಕ್ರಮವೆಂದು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರೇ ಹೇಳಿದ್ದಾರೆ. ಆದರೆ, ಇಂದು ವೈದಿಕ ಧರ್ಮಕ್ಕೆ ಹಿಂದೂ ಧರ್ಮ ಎನ್ನಲಾಗುತ್ತಿದೆ. ಹೀಗೆ ಉಚ್ಚರಿಸಿದರೆ ಲಿಂಗಾಯತರೇನು ಹಿಂದೂಗಳಾಗು ವುದಿಲ್ಲ’ ಎಂದು ಗದುಗಿನ ತೋಂಟದಾರ್ಯ ಮಠದ ಪೀಠಾಧಿಪತಿ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವೇದ, ಆಗಮ, ಪುರಾಣವನ್ನು ವಿರೋಧಿಸಿದ ಲಿಂಗಾಯತ ಅವೈದಿಕ ಧರ್ಮವಾಗಿದೆ. ಲಿಂಗಾಯತರು ಮತ್ತು ಹಿಂದೂಗಳ ಆಚರಣೆಯಲ್ಲಿ ಸಾಕಷ್ಟು ಭಿನ್ನಾಭಿಪ್ರಾಯ ಇವೆ’ ಎಂದರು. ‘ಹಿಂದೂಗಳು …
Read More »ರೈತನಿಗೆ ಪರಿಹಾರ ವಿಳಂಬ: ಅಧಿಕಾರಿಗಳ ವಾಹನ ಜಪ್ತಿ
ಚಿಕ್ಕೋಡಿ : ರಸ್ತೆ ನಿರ್ಮಿಸಲು ಸ್ವಾದೀನ ಪಡೆದಿದ್ದ ಭೂಮಿಗೆ ರೈತನಿಗೆ ₹11 ಲಕ್ಷ ಪರಿಹಾರಧನ ನೀಡಲು ವಿಳಂಬ ಹಿನ್ನೆಲೆಯಲ್ಲಿ ಕೋರ್ಟ್ ಆದೇಶದಂತೆ ಉಪವಿಭಾಗಾಧಿಕಾರಿ ಮತ್ತು ಲೋಕೋಪಯೋಗಿ ಇಲಾಖೆ ಎಇಇ ಅವರ ವಾಹನಗಳನ್ನು ಗುರುವಾರ ಜಪ್ತಿ ಮಾಡಲಾಗಿದೆ. 15 ವರ್ಷದ ಹಿಂದೆ ಚಿಕ್ಕೋಡಿ ತಾಲ್ಲೂಕಿನ ಮಾಂಗೂರ (ಈಗಿನ ನಿಪ್ಪಾಣಿ ತಾಲ್ಲೂಕು) ಗ್ರಾಮದ ರೈತ ಬುದ್ದಿರಾಜ ಶಾಂತಿನಾಥ ಪಾಟೀಲ ಅವರ 31 ಗುಂಟೆ ಭೂಮಿಯನ್ನು ಇಲಾಖೆ ಪಡೆದುಕೊಂಡಿತ್ತು. ಈವರೆಗೂ ರೈತನಿಗೆ ಪರಿಹಾರ ಧನ …
Read More »ಮಕ್ಕಳ ಅಭಿವೃದ್ಧಿ ಮೇಲಿದೆ ದೇಶದ ಭವಿಷ್ಯ; ಮಲಿಕಜಾನ
ಬೆಳಗಾವಿ: ಪ್ರತಿಯೊಂದು ದೇಶದ ಭವಿಷ್ಯ ಅಲ್ಲಿಯ ಮಕ್ಕಳ ಸಮಗ್ರ ಅಭಿವೃದ್ಧಿಯ ಮೇಲೆ ನಿಂತಿದೆ. ಮಕ್ಕಳ ಅಭಿವೃದ್ಧಿಯು ಅವರ ಶಿಕ್ಷಣದ ಮೇಲಿದೆ. ಹೀಗಾಗಿ ಎಲ್ಲ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವತ್ತ ಹೆಚ್ಚಿನ ಗಮನ ಕೊಡಬೇಕಿದೆ ಎಂದು ಶಿಕ್ಷಕ ಮಲಿಕಜಾನ ಗದಗಿನ ಹೇಳಿದರು. ಕಣಬರಗಿಯ ಶ್ರೀ ರವಿಶಂಕರ ವಿದ್ಯಾವರ್ಧಕ ಸಂಸ್ಥೆಯ ಸಮತಾ ಶಾಲೆಯಲ್ಲಿ ಜರುಗಿದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಪಂಚ ವಾರ್ಷಿಕ ಯೋಜನೆಗಳ ಮೂಲಕ ಕೃಷಿ, ಕೈಗಾರಿಕೆ …
Read More »ಮಕ್ಕಳ ದಿನಾಚರಣೆ ವಿಶೇಷ: 12 ಶಸ್ತ್ರಚಿಕಿತ್ಸೆಯಾದರೂ ‘ಛಲ’ ಬಿಡದ 13ರ ಬಾಲಕ
ಬೆಳಗಾವಿ: ಈ ಬಾಲಕನ ವಯಸ್ಸು ಹದಿಮೂರು. ಈಗಾಗಲೇ ಆತನಿಗೆ ಹನ್ನೆರಡು ಶಸ್ತ್ರಚಿಕಿತ್ಸೆಗಳಾಗಿವೆ. ಆದರೆ, ಈ ಬಾಲಕನ ಸಾಧನೆಗೆ ಯಾವುದೂ ಅಡ್ಡಿಬಂದಿಲ್ಲ. ಅಂಗ ವೈಕಲ್ಯದ ಮಧ್ಯೆಯೂ ರಾಷ್ಟ್ರಮಟ್ಟದ ಈಜು ಟೂರ್ನಿಗಳಲ್ಲಿ ಮಿಂಚುತ್ತಿದ್ದಾರೆ. ನಗರದ ಅನಗೋಳ ಬಡಾವಣೆಯ ಈಜುಪಟು ಅನಿಕೇತ್ ಚಿದಂಬರ ಪಿಲನಕರ್ ಯಶೋಗಾಥೆ ಇದು. ಹುಟ್ಟಿನಿಂದಲೂ ಆರೋಗ್ಯ ಸಮಸ್ಯೆ ಎದುರಿಸುತ್ತಲೇ ಬೆಳೆದ ಬಾಲಕ, ಇದೀಗ ಈಜಿನಲ್ಲಿ ಸಾಧನೆ ಮೆರೆಯುತ್ತಿದ್ದಾರೆ. ರಾಷ್ಟ್ರೀಯ ಟೂರ್ನಿಗಳಲ್ಲಿ 6, ರಾಜ್ಯಮಟ್ಟದ ಟೂರ್ನಿ ಗಳಲ್ಲಿ 3 ಚಿನ್ನದ …
Read More »ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಹತ್ಯೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಹುಕ್ಕೇರಿ ಪೊಲೀಸರು ಯಶಸ್ವಿ
ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ಓರ್ವ ಅಜ್ಜಿಯನ್ನು ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಹುಕ್ಕೇರಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹೌದು ಅಕ್ಟೋಬರ್ 7ರಂದು ಬೆಲ್ಲದಬಾಗೇವಾಡಿಯ ಮನೆಯೊಂದರಲ್ಲಿ 75 ವರ್ಷದ ಮಲ್ಲವ್ವ ಜೀವಪ್ಪ ಕಮತೆ ಎಂಬ ವೃದ್ಧ ಮಹಿಳೆ ಸಾವನ್ನಪ್ಪಿದ್ದರು. ಈ ವೇಳೆ ಸ್ಥಳಕ್ಕೆ ಭೇಟಿ ಕೊಟ್ಟಿದ್ದ ಹುಕ್ಕೇರಿ ಪೊಲೀಸರು ಆರಂಭದಲ್ಲಿ ಅನೈಸರ್ಗಿಕ ಸಾವು ಎಂದು ಕೇಸ್ ದಾಖಲಿಸಿಕೊಂಡಿದ್ದರು. ಆದರೆ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಈ ಅಜ್ಜಿಯನ್ನು ಕತ್ತು …
Read More »ಸತೀಶ್ ಜಾರಕಿಹೊಳಿ ಬಗ್ಗೆ ಮಾತನಾಡಿದ್ರೆ ವೇದಿಕೆಗೆ ನುಗ್ಗಿ ಹೊಡೆಯುತ್ತೇವೆ :ಯತ್ನಾಳ್‍ಗೆ ಸತೀಶ್ ಜಾರಕಿಹೊಳಿ ಬೆಂಬಲಿಗರ ಖಡಕ್ ಎಚ್ಚರಿಕೆ
ಗೋಕಾಕ್‍ನಲ್ಲಿ ನಡೆಯುವ ಬೃಹತ್ ಪಂಚಮಸಾಲಿ ಸಮಾವೇಶದಲ್ಲಿ ಸತೀಶ್ ಜಾರಕಿಹೊಳಿ ಬಗ್ಗೆ ಮಾತನಾಡಿದ್ರೆ ವೇದಿಕೆಗೆ ನುಗ್ಗಿ ಹೊಡೆಯುತ್ತೇವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‍ಗೆ ಸತೀಶ್ ಜಾರಕಿಹೊಳಿ ಬೆಂಬಲಿಗರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಹೌದು 2ಎ ಮೀಸಲಾತಿಗೆ ಆಗ್ರಹಿಸಿ ಗೋಕಾಕ್ ನಗರದ ನ್ಯೂ ಇಂಗ್ಲಿμï ಶಾಲಾ ಆವರಣದಲ್ಲಿ ಇಂದು ಮಧ್ಯಾಹ್ನ 1ಕ್ಕೆ ಬೃಹತ್ ಪಂಚಮಸಾಲಿ ಸಮಾವೇಶ ಆಯೋಜಿಸಲಾಗಿದೆ. ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಈ ಸಮಾವೇಶ ನಡೆಯಲಿದ್ದು ರಾಜ್ಯಸಭಾ ಸದಸ್ಯ …
Read More »ಅಕ್ರಮ ಗಾಂಜಾ ಗಿಡ ಬೆಳೆಸಿದ ಆರೋಪಿ ಅಂದರ್
ಕಿತ್ತೂರು ಪೊಲೀಸ್ ಸಬ್‌ಇನ್ಸಪೇಕ್ಟರ್ ಎಚ್‌ಎಲ್ ಧರ್ಮಟ್ಟಿ, ಬೈಲಹೊಂಗಲ ಡಿಎಸ್‌ಪಿ ಶಿವಾನಂದ ಕಟಗಿ ಮಾರ್ಗದರ್ಶನದಲ್ಲಿ ಖಾನಾಪೂರ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ, ಶಿವಾನಂದ ಶಿವನೆಪ್ಪ ಕಾದ್ರೋಳ್ಳಿಯನ್ನು ಬಂಧಿಸಿ ಸುಮಾರು ೬೦ ಸಾವಿರ ರೂಪಾಯಿ ಮೌಲ್ಯದ ೬ ಕಿಲೋ ಗಾಂಜಾ ಗಿಡಗಳನ್ನು ಮತ್ತು ಗಾಂಜಾ ಮಾರಾಟದಿಂದ ಬಂದ ೧ ಸಾವಿರ ರೂಪಾಯಿ ನಗದನ್ನು ಜಪ್ತಿ ಮಾಡಲಾಗಿದೆ. ಆರೋಪಿಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ. ಕಿತ್ತೂರು ಮತ್ತು ಖಾನಾಪೂರ ಪೊಲೀಸರ ಕಾರ್ಯವನ್ನು ಬೆಳಗಾವಿ ಎಸ್ಪಿ ಸಂಜೀವ್ ಪಾಟೀಲ ಪ್ರಶಂಸಿಸಿದ್ದಾರೆ.
Read More »ಬಿಜೆಪಿ ವಿರುದ್ಧ ಖಾನಾಪುರದಲ್ಲಿ ದಲಿತರ ಪ್ರತಿಭಟನೆ
ಖಾನಾಪೂರದಲ್ಲಿ ವಿವಿಧ ದಲಿತ ಸಂಘಟನೆಗಳ ಒಕ್ಕೂಟದಿಂದ ಸತೀಶ ಜಾರಕಿಹೊಳಿ ಅವರ ವಿರುದ್ಧ ಮಾಡಿದ ಪ್ರತಿಭಟನೆ ಖಂಡಿಸಿ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಲಾಯಿತು. ದಿನಾಂಕ ೧೧ ರಂದು ಖಾನಾಪೂರ ತಾಲೂಕಿನ ಬಿಜೆಪಿ ಸಂಘ ಪರಿವಾರದವರು ಎಲ್ಲ ಹಿಂದೂ ಪರ ಸಂಘಟನೆಗಳು ಒಂದಾಗಿ ಖಾನಾಪೂರ ಪಟ್ಟಣದ ಶಿವಸ್ಮಾರಕದ ಎದುರು ಸತೀಶ್ ಅಣ್ಣಾ ಜಾರಕಿಹೊಳಿಯವರ ವಿರುದ್ಧ ಅವರ ಪ್ರತಿಕೃತಿಯನ್ನು ದಹಿಸಿ ಅವರ ಭಾವಚಿತ್ರಕ್ಕೆ ಅವಮಾನ ಮಾಡೋವ ಮೂಲಕ ಇಡೀ ದಲಿತ ಸಮಾಜಕ್ಕೆ ಧಕ್ಕೆ …
Read More »ಶಾಲಾ ವಾಹನ ಪಲ್ಟಿ-12 ವಿದ್ಯಾರ್ಥಿಗಳಿಗೆ ಗಾಯ
ನಿಯಂತ್ರಣ ತಪ್ಪಿ ಶಾಲಾ ವಾಹನ ಪಲ್ಟಿಯಾದ ಪರಿಣಾಮ ೧೨ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಕರಿಕಟ್ಟಿ ರಸ್ತೆಯಲ್ಲಿ ನಡೆದಿದೆ. ಸವದತ್ತಿಯ ಕುಮಾರೇಶ್ವರ ಶಾಲೆಗೆ ಬರುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ವಾಹನ ರಸ್ತೆ ಬದಿಗೆ ಪಲ್ಟಿಯಾಗಿದೆ. ಕರಿಕಟ್ಟಿ-ಅಸುಂಡಿ ಗ್ರಾಮದಿಂದ ಸವದತ್ತಿ ಕುಮಾರೇಶ್ವರ ಶಾಲೆಗೆ ಬರುತ್ತಿದ್ದ ವಾಹನದಲ್ಲಿ ೩೮ ಮಕ್ಕಳು ಪ್ರಯಾಣಿಸುತ್ತಿದ್ದರು. ಇದರಲ್ಲಿ ೧೨ ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟಗಾಯಗಳಾಗಿವೆ. ಸವದತ್ತಿ ಸರ್ಕಾರಿ ಆಸ್ಪತ್ರೆಯಲ್ಲಿ ವಿದ್ಯಾರ್ಥಿಗಳಿಗೆ ಚಿಕಿತ್ಸೆ …
Read More »ಶ್ರೀ ಸಂತೋಷ್ ಜಾರಕಿಹೊಳಿ ಅವರ ಶ್ರೇಷ್ಠ ಫೌಂಡೇಶನ್ ವತಿಯಿಂದ ಈ ವಾರದ ಅನ್ನ ಸಂತರ್ಪಣೆ ಕಾರ್ಯಕ್ರಮ ರಮದುರ್ಗದಲ್ಲಿ
ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯ ರಾಮದುರ್ಗ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ರಾಮದುರ್ಗ ತಾಲೂಕಿನ ಕೆ ಚಂದರಗಿ ಗ್ರಾಮದಲ್ಲಿ ಹುನುಮಂತ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಸೌಭಾಗ್ಯ ಲಕ್ಷ್ಮಿ …
Read More »