Breaking News

ಚಿಕ್ಕೋಡಿ

 ಬೈಕ್ ಮತ್ತು ಟೆಂಪೋ ನಡುವೆ ಭೀಕರ ಅಪಘಾತ ಮೂವರ ಸಾವು

ಚಿಕ್ಕೋಡಿ: ಬೈಕ್ ಮತ್ತು ಟೆಂಪೋ ನಡುವೆ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲೇ ಮೂವರು ಯುವಕರು ಮೃತಪಟ್ಟಿರುವ ಘಟನೆ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬಸವನಾಳಗಡ್ಡೆ ಬಳಿ ಮಂಗಳವಾರ ರಾತ್ರಿ ಈ ಅಪಘಾತ ಸಂಭವಿಸಿದ್ದು, ಇದಲ್ಲಿ ಕೇರೂರು ಗ್ರಾಮದ ಪ್ರಶಾಂತ ಬೈರು ಖೋತ(22), ಸತೀಶ ಕಲ್ಲಪ್ಪ ಹಿರೇಕೊಡಿ(23), ಯಲಗೌಡ ಚಂದ್ರಕಾಂತ ಪಾಟೀಲ (22) ಮೃತ ದುರ್ದೈವಿಗಳು. ಯುವಕರು ಬೈಕ್​​ ಮೇಲೆ ಚಿಕ್ಕೋಡಿ ಕಡೆಯಿಂದ ಕೇರೂರು ಗ್ರಾಮಕ್ಕೆ ತೆರಳುವ ಸಮಯದಲ್ಲಿ ಚಿಕ್ಕೋಡಿ ಅಂಕಲಿ …

Read More »

ಮಳೆಗಾಲ ಆರಂಭವಾದರೂ ಉತ್ತರ ಕರ್ನಾಟದಲ್ಲಿ ಮಾತ್ರ ಬರಗಾಲ

ಚಿಕ್ಕೋಡಿ: ಮಳೆಗಾಲ ಆರಂಭವಾದರೂ ಉತ್ತರ ಕರ್ನಾಟದಲ್ಲಿ ಮಾತ್ರ ಬರಗಾಲದ ಛಾಯೆ ಕಾಣ್ತಿದೆ. ಜೀವಜಲಕ್ಕಾಗಿ ಜನರು ಸೇರಿದಂತೆ ಜಾನವಾರುಗಳಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳೆಗಳಂತೂ ಸಂಪೂರ್ಣವಾಗಿ ಒಣಗಿ ಹೋಗಿ ಮಳೆರಾಯನ ಆಗಮನಕ್ಕಾಗಿ ರೈತಾಪಿ ವರ್ಗ ಎದುರು ನೋಡುತ್ತಿದೆ. ಚಿಕ್ಕೋಡಿ ಉಪವಿಭಾಗದ ಬಹುತೇಕ ಹಳ್ಳಿಗಳಿಗೆ ಬರದ ಛಾಯೆ ಎದ್ದು ಕಾಣ್ತಿದೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಬೆಳೆಗಳು ನಾಶವಾದರೂ ಪರವಾಗಿಲ್ಲ ಆದರೆ, ಊರ ಜನ ಜಾನುವಾರುಗಳಿಗೆ ಯಾವುದೇ ಅನಾನುಕೂಲವಾಗದು ಎಂದು ತಮ್ಮ ಬಾವಿಯ ನೀರನ್ನು …

Read More »

ಲೋಕಸಭೆ ಚುನಾವಣೆಯವರೆಗೆ ಮಾತ್ರ ಕಾಂಗ್ರೆಸ್ ಗ್ಯಾರಂಟಿ, ಆಮೇಲೆ ಕೈ ಕೊಡ್ತಾರೆ : ರಮೇಶ್ ಜಾರಕಿಹೊಳಿ

ಚಿಕ್ಕೋಡಿ (ಬೆಳಗಾವಿ): ಅಥಣಿ ಶಾಸಕ ಲಕ್ಷ್ಮಣ್ ಸವದಿ ಅಭಿವೃದ್ಧಿಗೋಸ್ಕರ ಕಾಂಗ್ರೆಸ್ ಪಕ್ಷ ಸೇರಿದ್ದು, ಕ್ಷೇತ್ರದ ಅಭಿವೃದ್ಧಿ ಮಾಡಲಿ. ನಾವು ಅವರಿಗೆ ಸಹಕಾರ ಕೊಡುತ್ತೇವೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು. ಅಥಣಿ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ಸೋಲಿನ ಬಗ್ಗೆ ಕಾರ್ಯಕರ್ತರೊಂದಿಗೆ ಪರಾಮರ್ಶೆಯ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಅಥಣಿ ಕಾಗವಾಡ ವಿಧಾನಸಭೆ ಸೋಲು ಜನರ ಕೊಟ್ಟ ತೀರ್ಪನ್ನು ನಾವು ಸ್ವಾಗತ ಮಾಡುತ್ತೇವೆ. ಬರುವ …

Read More »

ಶಿರಹಟ್ಟಿ ಗ್ರಾಮದಲ್ಲಿ ಸಂಭ್ರಮದ ಹನುಮಾನ್​ ಓಕುಳಿ: ಕಂಬ ಹತ್ತುವುದೇ ಹಬ್ಬಕ್ಕೆ ಮೆರುಗು

ಚಿಕ್ಕೋಡಿ (ಬೆಳಗಾವಿ): ಆಧುನಿಕತೆ ಎಷ್ಟೇ ಬೆಳೆದರೂ ಇನ್ನೂ ಕೂಡ ಗ್ರಾಮೀಣ ಭಾಗದಲ್ಲಿ ಜಾತ್ರೆ ಹಬ್ಬ ಹರಿದಿನಗಳನ್ನು ಗ್ರಾಮಸ್ಥರು ಒಟ್ಟಾಗಿ ಸೇರಿ ಆಚರಿಸಿ ಸಂಭ್ರಮಿಸುವ ಪದ್ಧತಿ ಇದೆ. ಇಂದು ಶಿರಹಟ್ಟಿ ಗ್ರಾಮದಲ್ಲಿ ಕಣ್ಮನ ಸೆಳೆಯುವ ಹನುಮಾನ್ ಓಕುಳಿ ನಡೆಯಿತು. ಗ್ರಾಮಸ್ಥರೆಲ್ಲ ಸೇರಿ ಆಚರಿಸಿ ಖುಷಿಪಟ್ಟರು. ಒಂದೆಡೆ ಡಿಜೆ ಶಬ್ದಕ್ಕೆ ಹೆಜ್ಜೆ ಹಾಕುತ್ತಿರುವ ಯುವಕರಾದರೆ, ಮತ್ತೊಂದೆಡೆ ಗ್ರಾಮದ ಹಿರಿಯರು ಓಕುಳಿ ಕಂಬಕ್ಕೆ ಪೂಜೆ ಸಲ್ಲಿಸುತ್ತಿರುವ ದೃಶ್ಯ ಕಂಡುಬಂತು. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿರಹಟ್ಟಿ …

Read More »

ಭಾರಿ ಮಳೆಗೆ ಅಥಣಿಯಲ್ಲಿ ಸಿಡಿಲು ಬಡಿದು ಇಬ್ಬರ ಸಾವು

ಚಿಕ್ಕೋಡಿ (ಬೆಳಗಾವಿ): ರಾಜ್ಯದಲ್ಲಿ ಮುಂಗಾರು ಮಳೆ ಆಗಮನದ ಮೊದಲೇ ಗುಡಗು, ಸಿಡಿಲಿನ ಅಬ್ಬರ ಹೆಚ್ಚಾಗಿದ್ದು, ಸಂಜೆ ಸುರಿದ ಭಾರಿ ಮಳೆಗೆ ಅಥಣಿಯಲ್ಲಿ ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯಲ್ಲಿ ಅಥಣಿ ತಾಲೂಕಿನಲ್ಲಿ ಪ್ರತ್ಯೇಕ ಗ್ರಾಮದಲ್ಲಿ ಸಿಡಿಲು ಬಡೆದು ಒಬ್ಬ ಯುವಕ, ಒರ್ವ ಮಹಿಳೆ ಮೃತ ಪಟ್ಟಿದ್ದಾರೆ. ತಾಲೂಕಿನ ಕೋಹಳ್ಳಿ ಗ್ರಾಮದ ಕೆಸ್ಕರಿ ದಡ್ಡಿ ನಿವಾಸಿಯಾದ ಅಮೂಲ್ ಜಯಸಿಂಗ ಕಾನಡೆ (24) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ತೋಟದಲ್ಲಿ …

Read More »

ಕಾಳಮ್ಮವಾಡಿ ಜಲಾಶಯದಿಂದ ದೂಧಗಂಗೆಗೆ ನೀರು

ಚಿಕ್ಕೋಡಿ: ಮಹಾರಾಷ್ಟ್ರದ ಕಾಳಮ್ಮವಾಡಿ ಜಲಾಶಯದಿಂದ ಎರಡನೇ ಬಾರಿಗೆ ತಾಲ್ಲೂಕಿನ ದೂಧಗಂಗಾ ನದಿಗೆ ನೀರು ಬಿಡುಗಡೆ ಮಾಡಲಾಗಿದ್ದು, ರೈತರು ಹಾಗೂ ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಹೇಳಿದರು.   ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 18ರಂದು ಮಹಾರಾಷ್ಟ್ರದ ಕೊಲ್ಹಾಪುರದ ನೀರಾವರಿ ಇಲಾಖೆಯ ಸೂಪರಿಟೆಂಡೆಂಟ್ ಎಂಜಿನಿಯರ್ ಸುರವೆ ಹಾಗೂ ಎಇ ಎಬಾಂದಿವಾಡೇಕರ ಅವರನ್ನು ಭೇಟಿ ಮಾಡಿ ನೀರಿನ ಸಮಸ್ಯೆ ಕುರಿತು ಮನವರಿಕೆ ಮಾಡಿ ದೂಧಗಂಗಾ ನದಿಗೆ …

Read More »

ಸರ್ವೆ ಮಾಡಲು ಲಂಚ ಪಡೆಯುತ್ತಿದ್ದ ಚಿಕ್ಕೋಡಿಯ ಭೂ ಮಾಪನ ಇಲಾಖೆಯ ಅಧಿಕಾರಿ ಲೋಕಾಯುಕ್ತ ಬಲೆಗೆ

ಚಿಕ್ಕೋಡಿ: ಸರ್ವೆ ಮಾಡಲು ಲಂಚ ಪಡೆಯುತ್ತಿದ್ದ ಚಿಕ್ಕೋಡಿಯ ಭೂ ಮಾಪನ ಇಲಾಖೆಯ ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಭೂಮಾಪನ ಇಲಾಖೆಯ ಸೂಪರ್ ವೈಸರ್ ಎಸ್.ಎಂ.ಕಲ್ಯಾಣ ಶೆಟ್ಟಿ ಲೋಕಾಯುಕ್ತ ಬಲೆಗೆ ಬಿದ್ದವರು. 6 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲಾಗಿದೆ. ಸಿದ್ದಪ್ಪ ಪೂಜಾರಿ ಎನ್ನುವವರಿಂದ ಸರ್ವೆ ಕಾರ್ಯಕ್ಕಾಗಿ ಲಂಚ ಪಡೆಯುತ್ತಿದ್ದರು. ವಿವರ: ಜಮೀನುಗಳ 11ಇ ನಕ್ಷೆ ಅವಧಿ ವಿಸ್ತರಿಸಿ ಕೊಡಲು ಲಂಚ ಸ್ವೀಕರಿಸುವ ವೇಳೆ ಚಿಕ್ಕೋಡಿಯ …

Read More »

ಗಂಡು ಮಗು ಜನಿಸಲಿಲ್ಲವೆಂದು ನೆರೆಮನೆಯ ಗಂಡು ಮಗುವನ್ನು ಕೊಲೆಗೈದ ಮಹಿಳೆಗೆ ಜೀವಾವಧಿ ಶಿಕ್ಷೆ

ಚಿಕ್ಕೋಡಿ: ಗಂಡು ಮಗು ಜನಿಸಲಿಲ್ಲವೆಂದು ಹತಾಶೆಗೊಂಡು ಸಂಬಂಧಿಕರ ಗಂಡು ಮಗುವನ್ನು ನೀರಿನ ಬ್ಯಾರಲ್ ನಲ್ಲಿ ಮುಳುಗಿಸಿ ಕೊಲೆ ಮಾಡಿದ ಆರೋಪಿ ಮಹಿಳೆಗೆ ಚಿಕ್ಕೋಡಿ ಏಳನೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ತೀರ್ಪು ನೀಡಿದೆ.   ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದ ಜಯಶ್ರೀ ಬಾಹುಬಲಿ ಅಲಾಸೆ ಎಂಬ ಮಹಿಳೆಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿದೆ. ಕಳೆದ ದಿ.24-8-2018 ರಂದು ಶೇಡಬಾಳ ಗ್ರಾಮದ ಕುರುಬರ ಗಲ್ಲಿಯ ರಾಜು ತಾತ್ಯಾಸಾಬ ಅಲಾಸೆ ಎಂಬುವವರ …

Read More »

ಚಿಕ್ಕೋಡಿ: ಆಲಿಸಿದ ಪಾಠ ಅರಿತು ಬಾಳಿರಿ

ಚಿಕ್ಕೋಡಿ: ‘ಸುಮಂಗಲಮ್ ಪಂಚಮಹಾಭೂತ ಲೋಕೋತ್ಸವ ಕೇವಲ ಉತ್ಸವವಾಗದೇ, ಇಲ್ಲಿ ಆಲಿಸಿದ, ವೀಕ್ಷಿಸಿದ ಎಲ್ಲ ಪಾಠವನ್ನು ಜೀವನದಲ್ಲಿ ಅಳವಡಿಸಿಕೊಂಡು ಪರಿಸರ ಸಮತೋಲನ ಕಾಪಾಡುವ ಮೂಲಕ ಮುಂದಿನ ಪೀಳಿಗೆಗೆ ಸ್ವಚ್ಛ ಪರಿಸರ ಉಳಿಸಬೇಕು’ ಎಂದು ಕೊಲ್ಹಾಪುರದ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಹೇಳಿದರು.   ಮಠದಲ್ಲಿ ಭಾನುವಾರ ಉತ್ಸವದ ಸಮಾರೋಪದ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ‘ಮನುಷ್ಯನಿಗಿಂತ ಮರೆಗುಳಿತನ ಹೊಂದಿರುವ ಜೀವಿ ಇನ್ನೊಂದಿಲ್ಲ. ವಿನಾಶ ಕಾಲ ಸಮೀಪಿಸುತ್ತಿದೆ ಎಂಬುದು ಮನುಕುಲ …

Read More »

ಪಂಚಮಹಾಭೂತ ಲೋಕೋತ್ಸವದಲ್ಲಿ ಮಹಿಳೆಯರ ದಂಡು

ಚಿಕ್ಕೋಡಿ: ಕಣ್ಣು ಹಾಯಿಸಿದಷ್ಟು ಜನ ಜಂಗುಳಿ, ಎಲ್ಲಿ ನೋಡಿದರಲ್ಲಿ ವಾಹನಗಳ ಸಾಲು, ಕರ್ನಾಟಕ-ಮಹಾರಾಷ್ಟ್ರ ಬಾಂಧವ್ಯದ ಜೊತೆಗೆಯೇ ಇಡೀ ಭಾರತದ ಸಂತರು, ತಜ್ಞರು ಸಮಾಗಮದಲ್ಲಿ ಮಹಿಳೆಯರದ್ದೇ ಸಿಂಹಪಾಲು. ಕರ್ನಾಟಕ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಕೊಲ್ಲಾಪೂರ ಜಿಲ್ಲೆಯ ಕನೇರಿ ಅದೃಶ್ಯ ಕಾಡಸಿದ್ದೇಶ್ವರ ಮಠದಲ್ಲಿ ಹಮ್ಮಿಕೊಂಡಿರುವ ಬೃಹತ್‌ ಪಂಚಮಹಾಭೂತ ಲೋಕೋತ್ಸವದಲ್ಲಿ ಶುಕ್ರವಾರ ನಡೆದ ಮಹಿಳಾ ಲೋಕೋತ್ಸವದಲ್ಲಿ ಕಂಡು ಬಂದ ಚಿತ್ರಣವಿದು. ಉತ್ತರ ಕರ್ನಾಟಕ ಮತ್ತು ದಕ್ಷಿಣ ಮಹಾರಾಷ್ಟ್ರದ ಲಕ್ಷಾಂತರ ಮಹಿಳೆಯರು ಕನೇರಿ ಮಠದತ್ತ …

Read More »