Breaking News

ಬೆಂಗಳೂರು

ಡೇಟಿಂಗ್‌ ಆ್ಯಪ್ ಸುಂದರಿ ಬೀಸಿದ ಮೋಹಕ ಬಲೆಗೆ ಬಿದ್ದ ಚಾಲಕ- ಹಣ ಕಳೆದುಕೊಂಡು ಕಕ್ಕಾಬಿಕ್ಕಿ!

ಬೆಂಗಳೂರು: ಡೇಟಿಂಗ್  ವೆಬ್ ಸೈಟ್ ನಲ್ಲಿ ಪರಿಯಚಯವಾದ ಯುವತಿಯೊಬ್ಬಳನ್ನು ನಂಬಿ ಚಾಲಕನೊಬ್ಬ ಹಣ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಸುಂದರಿ ಬೀಸಿದ ಮೋಹದ ಬಲೆಗೆ ಬಿದ್ದ ಚಾಲಕ ಆಕೆ ಹೇಳಿದ ಬಣ್ಣದ ಮಾತುಗಳನ್ನು ನಂಬಿದ್ದಾನೆ. ಅಷ್ಟೇ ಅಲ್ಲದೆ ಆಕೆಯ ಸನಿಹ ಸೇರಲು ಹರಸಾಹಸಪಟ್ಟು ಆಕೆ ಹೇಳಿದಂತೆ ಹಣ ನೀಡಿ ಕಳೆದುಕೊಂಡು ಇದೀಗ ಆಕೆ ಹೇಳಿದ ಜೀವ ಬೆದರಿಕೆ ಕೇಳಿ ಕಕ್ಕಾಬಿಕ್ಕಿಯಾಗಿದ್ದಾನೆ. ಯಲಹಂಕ ಉಪನಗರದ ನಿವಾಸಿ ಮನೋಹರ್‌  (ಹೆಸರು ಬದಲಿಸಲಾಗಿದೆ) ವೃತ್ತಿಯಲ್ಲಿ …

Read More »

ಹಿರಿಯ ಐಪಿಎಸ್ ಅಧಿಕಾರಿ, ಪ್ರಸ್ತುತ ರೈಲ್ವೆ ಇಲಾಖೆ ಎಡಿಜಿಪಿಯಾಗಿರುವ ಭಾಸ್ಕರ್ ರಾವ್ ಸ್ವಯಂ ನಿವೃತ್ತಿಗೆ ಅವಕಾಶ ಕೋರಿದ್ದಾರೆ.

ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ, ಪ್ರಸ್ತುತ ರೈಲ್ವೆ ಇಲಾಖೆ ಎಡಿಜಿಪಿಯಾಗಿರುವ ಭಾಸ್ಕರ್ ರಾವ್ ಸ್ವಯಂ ನಿವೃತ್ತಿಗೆ ಅವಕಾಶ ಕೋರಿದ್ದಾರೆ. ಈ ಮೂಲಕ ಪೊಲೀಸ್ ಅಧಿಕಾರಿ ಹುದ್ದೆಯಿಂದ ನಿವೃತ್ತಿ ಪಡೆದು ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರಾ ಎಂಬ ಚರ್ಚೆ ಆರಂಭವಾಗಿದೆ. ಭಾಸ್ಕರ್ ರಾವ್ ಅವರ ನಿವೃತ್ತಿಗೆ ಇನ್ನೂ ಮೂರು ವರ್ಷ ಬಾಕಿ ಇದೆ. ಆದರೆ ಈಗಲೇ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದಾರೆ. ವೈಯಕ್ತಿಕ ಕಾರಣಗಳನ್ನು ನೀಡಿ ಸ್ವಯಂ ನಿವೃತ್ತಿಗಾಗಿ ಸರ್ಕಾರದ ಮುಖ್ಯಕಾರ್ಯದರ್ಶಿ ಮತ್ತು …

Read More »

ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಹೊಸ ಸಿನಿಮಾ ಪೋಸ್ಟರ್ ಆನ್ ಲೈನಲ್ಲಿ ಲೀಕ್

ಬೆಂಗಳೂರು: ಈ ಹಿಂದೆ ಸಂದರ್ಶನದಲ್ಲಿ ನಟ, ನಿರ್ದೇಶಕ ಉಪೇಂದ್ರ ಅವರು ಶೀಘ್ರದಲ್ಲಿ ತಮ್ಮ ನಿರ್ದೇಶನದ ಸಿನಿಮಾ ಬಗ್ಗೆ ಘೋಷಿಸುವುದಾಗಿ ಹೇಳಿದ್ದರು. ಉಪೇಂದ್ರ ಅವರು ತಮ್ಮ ಜನ್ಮದಿನವಾದ ಸೆ.18ರಂದು ತಮ್ಮ ನಿರ್ದೇಶನದಲ್ಲಿ ಮೂಡಿಬರಲಿರುವ ಚಿತ್ರವನ್ನು ಘೋಷಣೆ ಮಾಡಲಿದ್ದಾರೆ ಎಂದೇ ಹೇಳಲಾಗಿತ್ತು.   ಅಷ್ಟರೊಳಗೆ ಉಪೇಂದ್ರ ನಿರ್ದೇಶನದ ಹೊಸ ಸಿನಿಮಾ ಪೋಸ್ಟರ್ ಆನ್ ಲೈನಿನಲ್ಲಿ ಲೀಕ್ ಆಗಿರುವ ಸುದ್ದಿ ಹೊರಬಿದ್ದಿದೆ. ಇದೀಗ ಈ ಪೋಸ್ಟರ್ ವೈರಲ್ ಆಗಿದ್ದು ಅಭಿಮಾನಿಗಳ ಕುತೂಹಲವನ್ನು ಕೆರಳಿಸಿದೆ.   …

Read More »

ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ; ಬೆಂಗಳೂರಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆ

ಬೆಂಗಳೂರು: ಕರ್ನಾಟಕ ಪೊಲೀಸ್ ಇತಿಹಾಸದಲ್ಲಿ ಸಿಸಿಬಿ ಅಧಿಕಾರಿಗಳು ಡ್ರಗ್ಸ್​​ ಕೇಸ್​ನಲ್ಲಿ ಅತೀದೊಡ್ಡ ಕಾರ್ಯಾಚರಣೆ ನಡೆಸಿದ್ದಾರೆ. ಇದುವರೆಗೆ ಡ್ರಗ್ಸ್ ಪೆಡ್ಲರ್​ಗಳನ್ನ ಮತ್ತು ಡೀಲರ್​ಗಳನ್ನ ಮಾತ್ರ ಬಂಧಿಸುತ್ತಿದ್ದ ಪೊಲೀಸ್ ಅಧಿಕಾರಿಗಳು, ಇದೀಗ ಇದೇ ಮೊದಲ ಬಾರಿಗೆ ಸಿಂಥೆಟಿಕ್ ಡ್ರಗ್ಸ್ ಫ್ಯಾಕ್ಟರಿಯನ್ನ ಪತ್ತೆ ಮಾಡಿದ್ದಾರೆ.     ವಿದೇಶಗಳಿಗೂ ಮಾರಾಟ..! ನಂಬಲು ಸಾಧ್ಯವಾಗದಿದ್ದರೂ ಇದು ಸತ್ಯವಾಗಿದೆ. ಇದುವರೆಗೆ ವಿದೇಶದಲ್ಲಿ ತಯಾರಾಗ್ತಿದ್ದ ಡ್ರಗ್ಸ್ ಬೆಂಗಳೂರಿನಲ್ಲೇ ತಯಾರಾಗುತ್ತಿದೆ ಅನ್ನೋದು ಬಯಲಾಗಿದೆ. ನಗರದ ಮನೆಯೊಂದರಲ್ಲಿ ಸಿಂಥೆಟಿಕ್ ಡ್ರಗ್ಸ್ ತಯಾರು …

Read More »

ನಮ್ಮಲ್ಲಿ‌ ಚಿರತೆಯನ್ನೇ ಕೊಂದು ಒಬ್ಬರು ಹೀರೋ ಆಗಿದ್ದಾರೆ -ಸರ್ಕಾರದ ವಿರುದ್ಧ ಶಿವಲಿಂಗೇಗೌಡ ಲೇವಡಿ

ಬೆಂಗಳೂರು: ಹಳ್ಳಿಗಳಲ್ಲಿ ಕಾಡು ಪ್ರಾಣಿಗಳ‌ ಹಾವಳಿ ವಿಚಾರಕ್ಕೆ ಸಂಬಂಧಿಸಿ ವಿಧಾನಸಭೆ ಕಲಾಪದಲ್ಲಿ ಜೆಡಿಎಸ್​ ಸದಸ್ಯ ಶಿವಲಿಂಗೇಗೌಡ, ರಾಜ್ಯ ಸರ್ಕಾರವನ್ನ ಲೇವಡಿ ಮಾಡಿದರು. ನಮ್ಮಲ್ಲಿ‌ ಚಿರತೆಯನ್ನೇ ಕೊಂದು ಒಬ್ಬ ಹೀರೋ ಆಗಿದ್ದಾರೆ. ಕಾಡು ಪ್ರಾಣಿಗಳನ್ನ ನೀವು‌ ಸರಿಯಾಗಿ ಸಾಕ್ತಿಲ್ಲ. ಅದಕ್ಕೆ ಅವುಗಳು ಊರಿಗೆ ಬರ್ತಿವೆ. ಇದರಿಂದ ಸಾಕು ಪ್ರಾಣಿಗಳು ಉಳಿಯಲ್ಲ. ಕಾಡು ಪ್ರಾಣಿಗಳಿಗೆ, ಆಹಾರ, ನೀರು ಒದಗಿಸಿ ಎಂದು ಆಗ್ರಹಿಸಿದರು. ಶಿವಲಿಂಗೇಗೌಡರ ಪ್ರಶ್ನೆಗೆ ಅರಣ್ಯ ಸಚಿವ ಉಮೇಶ್ ಕತ್ತಿ ಉತ್ತರಿಸಿ, ಹಾಸನ …

Read More »

ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ: ಜೊಲ್ಲೆ

ಬೆಂಗಳೂರು: ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ಖಾಲಿ ಇರುವ ಅರ್ಚಕ, ಸಹಾಯಕ ಅರ್ಚಕ, ಸ್ಥಾನಿಕ, ಪಾಚಕ, ಪರಿಚಾರಕ, ವೇದ ಪಾರಾಯಣ, ಪ್ರಬಂಧ ಪಾರಾಯಣ ಮಾಡುವವರ ಮುತಾಂದ ಹುದ್ದೆಗಳನ್ನು ಆದಷ್ಟು ಶೀಘ್ರದಲ್ಲಿ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆಯವರು ಹೇಳಿದ್ದಾರೆ. ಬುಧವಾರ ಚಾಮರಾಜಪೇಟೆಯ ಹಿಂದೂ ದೇವಾಲಯಗಳ ಅಖಿಲ ಕರ್ನಾಟಕ ಅರ್ಚಕ, ಆಗಮಿಕ, ಉಪಾದೀವಂತರ ಒಕ್ಕೂಟದ ಸದಸ್ಯರು ವಿಕಾಸಸೌಧದಲ್ಲಿ ಸಚಿವ ಡಾ. ಅಶ್ವತ್ಥ್ ನಾರಾಯಣ ನೇತೃತ್ವದಲ್ಲಿ, ಅವರ ಕಚೇರಿಯಲ್ಲಿ …

Read More »

ಶೇ.15 ರಷ್ಟು ಶಾಲಾ ಶುಲ್ಕ ರಿಯಾಯಿತಿಗೆ ಹೈಕೋರ್ಟ್ ಆದೇಶ: ಸರ್ಕಾರದ ಆದೇಶ ರದ್ದು

ಬೆಂಗಳೂರು: 2020-21ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಶೇ.15 ರಷ್ಟು ಶಾಲಾ ಶುಲ್ಕ ರಿಯಾಯಿತಿಗೆ ಹೈಕೋರ್ಟ್ ಆದೇಶಿಸಿದೆ. ಅಲ್ಲದೆ, ಖಾಸಗಿ ಮತ್ತು ಅನುದಾನಿತ ಶಾಲೆಗಳು ಶೇ.70ರಷ್ಟು ಮಾತ್ರ ಶುಲ್ಕ ಸ್ವೀಕರಿಸಬೇಕು, ಶೇ.30ರಷ್ಟು ರಿಯಾಯಿತಿ ನೀಡಬೇಕೆಂದು ಸರ್ಕಾರ ಹೊರಡಿಸಿದ್ದ ಆದೇಶವನ್ನು ನ್ಯಾಯಾಲಯ ರದ್ದುಗೊಳಿಸಿದೆ. ಕರ್ನಾಟಕದಲ್ಲಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್ ) ಸೇರಿ ಹಲವು ಸಂಘಟನೆಗಳು ಸಲ್ಲಿಸಿದ್ದ ಅರ್ಜಿಗಳನ್ನು ಆಲಿಸಿ ತೀರ್ಪು ಕಾಯ್ದಿರಿಸಿದ್ದ ನ್ಯಾ.ಆರ್.ದೇವದಾಸ್ ಅವರಿದ್ದ ಏಕಸದಸ್ಯ …

Read More »

ನಂಬರ್ ಪ್ಲೇಟ್ ಕೆಳಗಡೆ ಕನ್ನಡ ಧ್ವಜದ ಬಣ್ಣದ ಗೆರೆ ಎಳೆದಿದ್ದಕ್ಕಾಗಿ ಬೈಕ್ ಸವಾರನಿಗೆ ಪೊಲೀಸರು 500 ರೂ. ದಂಡ ವಿಧಿಸಿದ್ದಾರೆ.

ಬೆಂಗಳೂರು –  ನಂಬರ್ ಪ್ಲೇಟ್ ಕೆಳಗಡೆ ಕನ್ನಡ ಧ್ವಜದ ಬಣ್ಣದ ಗೆರೆ ಎಳೆದಿದ್ದಕ್ಕಾಗಿ ಬೈಕ್ ಸವಾರನಿಗೆ ಪೊಲೀಸರು 500 ರೂ. ದಂಡ ವಿಧಿಸಿದ್ದಾರೆ. ಬೆಂಗಳೂರಿನ ಬ್ಯಾಟರಾಯನಪುರ ಠಾಣೆ ಪೊಲೀಸರು ಈ ಸಾಧನೆ ಮಾಡಿದ್ದಾರೆ. ಈ ಸ್ಕೂಟರ್ ನ ನಂಬರ್ ಪ್ಲೇಟ್ ನಲ್ಲಿ ಕನ್ನಡದ ಅಭಿಮಾನಿ ಎಳೆದ ಕನ್ನಡದ ಬಾವುಟದ ಗೆರೆ  ಪೋಲಿಸರ ಕಣ್ಣಿಗೆ ಬಿದ್ದಿದೆ. ಬಾಪೂಜಿ ನಗರದಲ್ಲಿ ಆತನನ್ನು ನಿಲ್ಲಿಸಿದ ಪೊಲೀಸರು 500 ರೂಪಾಯಿ   ದಂಡ ಕಟ್ಟಿಸಿಕೊಂಡರು. ದಂಡದ ಪಾವತಿಯಲ್ಲಿ …

Read More »

ಅವಸರದಿಂದ ದೇವಸ್ಥಾನ ಒಡೆಯಬೇಡಿ :ಬೊಮ್ಮಾಯಿ

ಬೆಂಗಳೂರು: ದೇವಸ್ಥಾನ ತೆರವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಮುಂದಿಟ್ಟುಕೊಂಡು ಅವಸರದಿಂದ ತುರ್ತು ಕ್ರಮ‌ ಜರುಗಿಸಿ ದೇವಸ್ಥಾನಗಳನ್ನು ಒಡೆಯಬೇಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ. ವಿಧಾನಸೌಧ ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು. ಮೈಸೂರಿನ ದೇವಾಲಯಗಳ ತೆರವಿನ ಕುರಿತಂತೆ ಎಲ್ಲ ವಿವರಗಳನ್ನು ಸದನದಲ್ಲಿ ನೀಡುತ್ತೇನೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಯಾಕೆ ಕ್ರಮ ಕೈಗೊಂಡಿದ್ದೀರಿ ಎಂದು ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರರಿಗೆ ನೋಟಿಸ್ ನೀಡಲಾಗಿದೆ ಎಂದು ಅವರು ಹೇಳಿದರು. …

Read More »

ರೀತಿಯ ಸೋಗಲ್ಲಿ ಮೋಸ: ಈತನಿಂದ ಮೋಸ ಹೋದವರೆಷ್ಟೋ?; ಮೊಬೈಲ್​ಫೋನಲ್ಲಿತ್ತು 6 ಯುವತಿಯರ ವಿಡಿಯೋ..

ಬೆಂಗಳೂರು: ಈತ ವೃತ್ತಿಯಿಂದ ಆಟೋ ಚಾಲಕ, ಆದರೆ ಚಾಳಿಯಿಂದ ಪ್ರೀತಿಸುವ ಸೋಗಲ್ಲಿ ಯುವತಿಯರನ್ನು ಮೋಸ ಮಾಡಿ ಬ್ಲ್ಯಾಕ್​ಮೇಲ್​ ಮಾಡುವ ಕಿರಾತಕ. ಮೊದಲಿಗೆ ಪ್ರೀತಿಯ ನೆಪದಲ್ಲಿ ಯುವತಿಯರನ್ನು ಬಲೆಗೆ ಬೀಸಿಕೊಂಡು, ನಂತರ ಮಾಡಬಾರದ್ದನ್ನೆಲ್ಲ ಮಾಡಿ, ವಿಡಿಯೋ ಕೂಡ ಮಾಡಿಟ್ಟುಕೊಂಡು ಬ್ಲ್ಯಾಕ್​ಮೇಲ್ ಮಾಡಿ ಹಣವನ್ನೂ ಕಿತ್ತುಕೊಳ್ಳುತ್ತಿದ್ದ. ಹೀಗೆ ಹುಡುಗಿಯರನ್ನು ವಂಚಿಸುತ್ತಿದ್ದ ರಾಕೇಶದ ಎಂಬಾತನನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. 26 ವರ್ಷದ ಈತ ಪ್ರೀತಿ ಮಾಡುವುದಾಗಿ ಹೇಳಿ ಹುಡುಗಿಯರನ್ನು ಒಲಿಸಿಕೊಂಡು ಬಳಿಕ ಅವರನ್ನು ನಿರ್ಜನ …

Read More »