Breaking News

ಬೆಂಗಳೂರು

ಮೊಬೈಲ್‍ನಿಂದ ವಿಟ್ಲ ಪೇದೆಗೆ ಕೊರೊನಾ ಸೋಂಕು………….

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಠಾಣೆಯ ಪೇದೆಗೆ ಕೊರೊನಾ ಸೋಂಕು ಬಂದಿದೆ. ಮೇ 14ರಂದು ಮಹಾರಾಷ್ಟ್ರದ ರಾಯಗಡದಿಂದ ಬಂದಿದ್ದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಕ್ವಾರಂಟೈನ್ ಬಗ್ಗೆ ಸರಿಯಾದ ಮಾಹಿತಿ ನೀಡದ ಕಾರಣ ಸೋಂಕಿತ ಠಾಣೆಗೆ ಹೋಗಿದ್ದ. ಆತನ ದ್ವಿತೀಯ ಸಂಪರ್ಕಕ್ಕೆ ಬಂದ ಹಿನ್ನೆಲೆಯಲ್ಲಿ ಇಂದು 42 ವರ್ಷದ ಹೆಡ್ ಕಾನ್‍ಸ್ಟೇಬಲ್ ಅವರಿಗೆ ಪಾಸಿಟಿವ್ ಬಂದಿದೆ. ಮಹಾರಾಷ್ಟ್ರದಿಂದ ಬಂದಿದ್ದ ವ್ಯಕ್ತಿ ಕ್ವಾರಂಟೈನ್ ನಲ್ಲಿದ್ದು ಮೇ 18 …

Read More »

ಹೊರಗಿನಿಂದ ರಾಜ್ಯಕ್ಕೆ ಬಂದವರಿಂದಲೇ ಗಂಡಾಂತರ ಎದುರಾಗಿದೆ : ಬೊಮ್ಮಾಯಿ

ಬೆಂಗಳೂರು, ಮೇ 24- ಹೊರಗಿನಿಂದ ರಾಜ್ಯಕ್ಕೆ ಬಂದವರಿಂದಲೇ ಗಂಡಾಂತರ ಎದುರಾಗಿದೆ. ಇದರಿಂದಾಗಿ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಇಂದಿಲ್ಲಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆಯ ಮಹಾರಾಷ್ಟ್ರ, ತಮಿಳುನಾಡು, ಆಂಧ್ರ, ಕೇರಳದಿಂದ ಹಲವರು ರಾಜ್ಯಕ್ಕೆ ಆಗಮಿಸಿದಾಗ ಅವರಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಇದು ನಮಗೂ ಕೂಡ ಆತಂಕ ತರಿಸಿದೆ. ಇದರ ಬಗ್ಗೆ ರಾಜ್ಯ ಸರ್ಕಾರ ಕಠಿಣ ನಿಲುವು ತಳೆಯುವುದು ಅನಿವಾರ್ಯವಾಗಿದ್ದು, ಅಕಾರಿಗಳಿಗೂ ಕೂಡ ಕೆಲವು …

Read More »

ಕರ್ನಾಟಕದಲ್ಲಿ ‘ಸಂಡೆ ಲಾಕ್‌ಡೌನ್‌’ ಹೇಗಿತ್ತು..? ಎಲ್ಲೆಲ್ಲಿ ಏನೇನಾಯ್ತು..? ಇಲ್ಲಿದೆ ಅಪ್ಡೇಟ್ಸ್

ಬೆಂಗಳೂರು : ದಿನದಿಂದ ದಿನಕ್ಕೆ ಮಹಾ ಮಾರಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವಿಧಿಸಿದ್ದ ಲಾಕ್ ಡೌನ್ ಗೆ ರಾಜ್ಯದೆಲ್ಲೆಡೆ ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ಯವಾಗಿದೆ. ಇಂದು ಬೆಳಗಿನಿಂದಲೇ ಸಾರ್ವಜನಿಕ ಸ್ಥಳಗಳಲ್ಲಿ ಜನಸಂಚಾರವಿಲ್ಲದಂತಾಗಿದ್ದು, ಎಲ್ಲೆಡೆ ಅಘೋಷಿತ ಬಂದ್ ವಾತವರಣ ನಿರ್ಮಾಣವಾಗಿದೆ. ಬೆಳಗ್ಗೆನಿಂದಲೇ ಜನರು ಸ್ಬಯಂಪ್ರೇರಿತರಾಗಿ ತಮಗೆ ತಾವೇ ನಿರ್ಬಂಧ ಹಾಕಿಕೊಂಡು ಯಾರೊಬ್ಬರೂ ಮನೆಯಿಂದ ಆಚೆ ಬಾರದೆ ಕೊರೋನಾ ಸೋಂಕು ತಡೆಗಟ್ಟಲು ಸರ್ಕಾರದ ಜೊತೆ ನಾವು ಇದ್ದೇವೆ …

Read More »

ಇಂದು ಪತ್ತೆಯಾದ 97 ಮಂದಿ ಸೋಂಕಿತರ ವಿವರ ಇಲ್ಲಿದೆ.

ಬೆಂಗಳೂರು: ಇಂದು ರಾಜ್ಯದಲ್ಲಿ 97 ಮಂದಿಗೆ ಕೊರೊನಾ ದೃಢವಾಗಿದ್ದು, ಸೋಂಕಿತರ ಸಂಖ್ಯೆ 2056ಕ್ಕೆ ಏರಿಕೆಯಾಗಿದೆ. ಹಾಸನ ಮತ್ತು ಚಿಕ್ಕಬಳ್ಳಾಪುರದಲ್ಲಿ ಅತಿ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ. ಇಂದು ಪತ್ತೆಯಾದ 97 ಮಂದಿ ಸೋಂಕಿತರ ವಿವರ ಇಲ್ಲಿದೆ. ಸೋಂಕಿತರ ವಿವರ: 1. ರೋಗಿ-1960: ಚಿಕ್ಕಬಳ್ಳಾಪುರದ 32 ವರ್ಷದ ಪುರುಷ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ 2. ರೋಗಿ-1961: ಉಡುಪಿಯ 35 ವರ್ಷದ ಮಹಿಳೆ. ಮಹಾರಾಷ್ಟ್ರದಿಂದ ವಾಪಸ್ಸಾಗಿರುವ ಹಿನ್ನೆಲೆ 3. ರೋಗಿ-1962: ದಾವಣಗೆರೆಯ 60 …

Read More »

ಟಿಕ್‍ಟಾಕ್ ಬ್ಯಾನ್ ಮಾಡಿದ್ರೆ ಜನರ ಮನಸ್ಥಿತಿ ಬದಲಾಗಲ್ಲ: ಸಂಯುಕ್ತಾ ಹೆಗ್ಡೆ

ಬೆಂಗಳೂರು: ಟಿಕ್‍ಟಾಕ್ ಬ್ಯಾನ್ ಮಾಡಿದರೆ ಜನರ ಮನಸ್ಥಿತಿ ಬದಲಾಗುವುದಿಲ್ಲ ಎಂದು ನಟಿ ಸಂಯುಕ್ತಾ ಹೆಗ್ಡೆ ಟ್ವೀಟ್ ಮಾಡಿದ್ದಾರೆ. ಸ್ವದೇಶಿ ವಸ್ತುಗಳನ್ನು ಬಳಸಿ ಚೀನಾದ ವಸ್ತುಗಳನ್ನು ಬಹಿಷ್ಕಾರ ಮಾಡಿ ಎಂಬ ಕೂಗು ಈಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಕೇಳಿಬರುತ್ತಿದೆ. ಹೀಗಾಗಿ ಟಿಕ್‍ಟಾಕ್ ಆ್ಯಪ್ ಚೀನಾದ ದೇಶದ್ದು ಎಂಬ ಕಾರಣಕ್ಕೆ ಅದನ್ನು ಭಾರತದಲ್ಲಿ ಬ್ಯಾನ್ ಮಾಡಿ ಎಂದು ಕೆಲವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ವಿಚಾರವಾಗಿ ಈಗ ಪರ-ವಿರೋಧ ಚರ್ಚೆಗಳು ಜೋರಾಗಿ …

Read More »

ನಟ ಧ್ರುವ ಸರ್ಜಾರ ಡೈಲಾಗ್ ಮೆಮೊರಿ ಪವರ್‌ಗೊಂದು ಸಲಾಂ: ಹರಿಪ್ರಿಯಾ

ಬೆಂಗಳೂರು: ನಟ ಧ್ರುವ ಸರ್ಜಾರ ಡೈಲಾಗ್ ಮೆಮೊರಿ ಪವರ್‌ಗೊಂದು ಸಲಾಂ ಎಂದು ನಟಿ ಹರಿಪ್ರಿಯಾ ಅವರು ಹೇಳಿದ್ದಾರೆ. ಲಾಕ್‍ಡೌನ್‍ನಿಂದ ಸಿನಿಮಾ ಶೂಟಿಂಗ್ ಇಲ್ಲದೇ ಮನೆಯಲ್ಲೇ ಕುಳಿತಿರುವ ಹರಿಪ್ರಿಯಾ ಅವರು, ತಮ್ಮ ಬ್ಲಾಗ್‍ನಲ್ಲಿ ಕಥೆಗಳನ್ನು ಅವರ ಅನುಭವಗಳನ್ನು ಬರೆಯುತ್ತಿರುತ್ತಾರೆ. ಹೀಗೆ ಹರಿಪ್ರಿಯಾ ತಮ್ಮ ಬ್ಲಾಗ್‍ನಲ್ಲಿ ನಟ ಧ್ರುವ ಸರ್ಜಾ ಅವರ ಬಗ್ಗೆ ಬರೆದಿದ್ದು, ಧ್ರುವ ಸಿಂಪಲ್ ಹುಡುಗ ಎಂದು ಹಾಡಿಹೊಗಳಿದ್ದಾರೆ. ಜೊತೆಗೆ ಲಾಕ್‍ಡೌನ್ ನಡುವೆ ಧ್ರುವ ಸರ್ಜಾಗೆ ಕರೆ ಮಾಡಿ ಮಾತನಾಡಿರುವ …

Read More »

ಐದನೇ ಮಹಡಿಯಿಂದ ಬಿದ್ದು ಮಹಿಳೆ ಸಾವು……

ಬೆಂಗಳೂರು: ಮಹಿಳೆಯೊಬ್ಬರು ಐದನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ ಘಟನೆ ಜಗಜೀವನ್‌ ರಾಮ್‌ ನಗರದಲ್ಲಿ ನಡೆದಿದೆ. ಆರ್.ಆರ್ ನಗರದ ನಿವಾಸಿ ಯಶೋಧಾ (45) ಮೃತ ಮಹಿಳೆ. ಜೆಜೆ ನಗರದ ಸಂಬಂಧಿಕರ ಮನೆಗೆ ಹೋಗಿದ್ದಾಗ ಘಟನೆ ನಡೆದಿದೆ.   ರಕ್ತದೊತ್ತಡ ಹಾಗೂ ಮಧುಮೇಹ ಕಾಯಿಲೆಗಳಿಂದ ಬಳಲುತ್ತಿದ್ದ ಯಶೋಧಾ ಅವರು ಸಂಬಂಧಿಕರ ಮನೆ ಹೋಗಿದ್ದರು. ಇಂದು ಊಟ ಮಾಡಿ ಮನೆಯ 5ನೇ ಮಹಡಿಗೆ ಹೋಗಿದ್ದರು. ಈ ವೇಳೆ ತಲೆ ತಿರುಗಿ ಕೆಳಗೆ ಬಿದ್ದಿದ್ದಾರೆ. ಪರಿಣಾಮ …

Read More »

ಸೀಲ್‍ಡೌನ್ ಪ್ರದೇಶದಲ್ಲಿ ವಾಕಿಂಗ್- ಪೊಲೀಸರ ಎಚ್ಚರಿಕೆಗೂ ಕ್ಯಾರೆ ಎನ್ನದ ಜನ…..

ಬೆಂಗಳೂರು: ನಗರದ ಮಹಾಲಕ್ಷ್ಮಿ ಲೇಔಟ್‍ನ ಮಾರಪ್ಪನ ಪಾಳ್ಯದಲ್ಲಿ ಶನಿವಾರ ಪೊಲೀಸ್ ಪೇದೆಗೆ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ಮಾರಪ್ಪನ ಪಾಳ್ಯದ ಶಂಕರ್ ನಗರದ 4ನೇ ಹಂತದ 1ನೇ ಕ್ರಾಸ್‍ನ್ನು ಸೀಲ್‍ಡೌನ್ ಮಾಡಿದ್ದಾರೆ. ಈ ಕುರಿತು ಪೊಲೀಸರು ಎಚ್ಚರಿಕೆ ನೀಡಿದರೂ ಜನ ವಾಕಿಂಗ್ ಮಾಡುತ್ತಿದ್ದಾರೆ. ಸೀಲ್‍ಡೌನ್ ಪ್ರದೇಶದ ರಸ್ತೆಯಲ್ಲಿ ವ್ಯಕ್ತಿಯೊಬ್ಬ ವಾಕ್ ಮಾಡುತ್ತಿದ್ದು, ಮನೆಯಿಂದ ಹೊರಗಡೆ ಬರಬೇಡಿ ಎಂದು ಪೊಲೀಸರು ಕೂಗಿ ಹೇಳಿದರೂ, ಕ್ಯಾರೇ ಅನ್ನದೆ ಓಡಾಟ ನಡೆಸಿದ್ದಾನೆ. ಸೀಲ್‍ಡೌನ್ ಆದ …

Read More »

ರಾಜ್ಯದಲ್ಲಿ ಇಂದು 196 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ

ಬೆಂಗಳೂರು – ರಾಜ್ಯದಲ್ಲಿ ಇಂದು 196 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಸ್ವಲ್ಪ ಹೊತ್ತಿನ ಮೊದಲು ಸಚಿವ ಸುರೇಶ ಕುಮಾರ 130 ಜನರಿಗೆ ಇಂದು ಸೋಂಕು ತಗುಲಿರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಆದರೆ ಅದು ತಪ್ಪು ಮಾಹಿತಿ ಎನ್ನುವುದು ದೃಢವಾಗಿದ್ದು, ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ 196 ಜನರಿಗೆ ಸೋಂಕು ಪತ್ತೆಯಾಗಿದೆ. ಇಂದು ಈವರೆಗಿನ ದಾಖಲೆಯಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಒಟ್ಟೂ ಸೋಂಕಿತರ ಸಂಖ್ಯೆ 1939 ಆಗಿದೆ. ಬೆಳಗಾವಿಯಲ್ಲಿ ಇಂದು …

Read More »

ರಸ್ತೆಯುದ್ದಕ್ಕೂ ಕೊರೊನಾ ವಾರಿಯರ್ಸ್‍ಗೆ ಪುಷ್ಪವೃಷ್ಟಿ……….

ನೆಲಮಂಗಲ: ಕೋವಿಡ್-19 ವಿರುದ್ಧ ಪ್ರತಿನಿತ್ಯ ಹೋರಾಟ ನಡೆಸುತ್ತಿರುವ, ಕೊರೊನಾ ವಾರಿಯರ್ಸ್ ಗೆ ಜನರಿಂದ ಪುಷ್ಪವೃಷ್ಟಿ ನಡೆಸಲಾಯಿತು. ಸಿಎಂ ರಾಜಕೀಯ ಕಾರ್ಯದರ್ಶಿ ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ನೇತೃತ್ವದಲ್ಲಿ ಪುಷ್ಪವೃಷ್ಟಿ ನಡೆದಿದೆ. ಈ ವೇಳೆ ಪೊಲೀಸ್ ಇಲಾಖೆ, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಹಾಗೂ ಪೌರ ಕಾರ್ಮಿಕರಿಗೆ ಸನ್ಮಾನ ಮಾಡಿದರು. ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಮಾದನಾಯಕನಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ರಸ್ತೆಯುದ್ದಕ್ಕೂ ಹೂವಿನ ಸುರಿಮಳೆಗೈದ ಸಾರ್ವಜನಿಕರು ಕರೋನ ವಾರಿಯರ್ಸ್ ಗೆ ಸಲಾಂ …

Read More »