ಬೆಂಗಳೂರು: ರಾತ್ರೋರಾತ್ರಿ ಎಡಿಜಿಪಿ ಶ್ರೇಣಿಯ IPS ಅಧಿಕಾರಿ ಡಾ.ಪಿ. ರವೀಂದ್ರನಾಥ್ ಕಂಟ್ರೋಲ್ ರೂಂಗೆ ತೆರಳಿ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ರಾತ್ರಿ 10.30ಕ್ಕೆ ಕಂಟ್ರೋಲ್ ರೂಂಗೆ ತೆರಳಿ ಅಲ್ಲಿದ್ದ ಸಿಬ್ಬಂದಿ ಕೈಗೆ ರವೀಂದ್ರನಾಥ್ ರಾಜಿನಾಮೆ ಪತ್ರ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅಸಮಾಧಾನ ಭುಗಿಲೆದ್ದಿರುವುದು ಗೋಚರವಾಗುತ್ತಿದೆ. ಸೀನಿಯಾರಿಟಿ ಇಲ್ಲದಿದ್ದರೂ ಸುನಿಲ್ ಕುಮಾರ್‌ಗೆ ಎಡಿಜಿಪಿ ಶ್ರೇಣಿಯಿಂದ ಡಿಜಿಪಿ ಶ್ರೇಣಿಗೆ ಬಡ್ತಿ ನೀಡಿರುವುದಕ್ಕೆ ರವೀಂದ್ರನಾಥ್ ಅಸಮಧಾನಗೊಂಡು ಈ ರೀತಿ ನಿರ್ಧಾರ …
Read More »ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಮೂವರು ರೌಡಿಶೀಟರ್ಗಳನ್ನು ಸೇರಿ 10 ಜನರನ್ನು ಬಂಧಿಸಿದ್ದಾರೆ.
ಬೆಂಗಳೂರು: ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಮೂವರು ರೌಡಿಶೀಟರ್ಗಳನ್ನು ಸೇರಿ 10 ಜನರನ್ನು ಬಂಧಿಸಿದ್ದಾರೆ. ರೌಡಿಶೀಟರ್ಗಳಾದ ಕಾರ್ತಿಕ್ ಅಲಿಯಾಸ್ ಚಪ್ಪರ್, ಹುಚ್ಚೆಗೌಡ ಅಲಿಯಾಸ್ ಹಂದಿ ಹುಚ್ಚ, ಹೇಮಂತ್ ಅಲಿಯಾಸ್ ಮಿಂಡ್ರಿ ಸೇರಿ 10 ಜನರು ಅರೆಸ್ಟ್ ಆಗಿದ್ದಾರೆ. ಅರೆಸ್ಟ್ ಆದ ಆರೋಪಿಗಳು ದರೋಡೆಗೆ ಸಂಚು ರೂಪಿಸಿದ್ದರು. ಮಾರಕಾಸ್ತ್ರಗಳೊಂದಿಗೆ ಅಟ್ಯಾಕ್ಗೆ ಸಜ್ಜಾಗಿದ್ರು. ಈ ಬಗ್ಗೆ ಖಚಿತ ಮಾಹಿತಿ ತಿಳಿಯುತ್ತಿದ್ದಂತೆ ಜ್ಞಾನ ಭಾರತಿ ಪೊಲೀಸ್ ಠಾಣೆ ಹಾಗೂ ವಿಜಯನಗರ ಠಾಣಾ ವ್ಯಾಪ್ತಿಯಲ್ಲಿ …
Read More »ನಟಿ ಮೇಘನಾ ರಾಜ್ ಸರ್ಜಾ ಆಸ್ಪತ್ರೆಯಿಂದ ಡಿಸ್ಚಾರ್ಜ್ಮೂರು ತಿಂಗಳ ನಂತರ ಅದ್ಧೂರಿಯಾಗಿ ನಾಮಕರಣ:ತಂದೆ ಸುಂದರ್ ರಾಜ್
ಬೆಂಗಳೂರು: ನಟಿ ಮೇಘನಾ ರಾಜ್ ಸರ್ಜಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮೂರು ತಿಂಗಳ ನಂತರ ಅದ್ಧೂರಿಯಾಗಿ ನಾಮಕರಣ ಮಾಡಲಾಗುವುದು ಎಂದು ಮೇಘನಾ ತಂದೆ ಸುಂದರ್ ರಾಜ್ ಹೇಳಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಸುಂದರ್ ರಾಜ್, ತಿರುಪತಿ ತಿಮ್ಮಪ್ಪನ ಹರಕೆಯಿಂದ ನನ್ನ ಮೊಮ್ಮಗ ಹುಟ್ಟಿದ್ದಾನೆ. ಕನ್ನಡದ ನೆಲದಲ್ಲಿ ದಸರಾ ಹಬ್ಬದ ವೇಳೆ ಮೊಮ್ಮಗು ಹುಟ್ಟಿರೋದು ಶುಭ ಸೂಚಕ. ನವೆಂಬರ್ 1 ರಂದು ಮೇಘನಾ ರಾಜ್ ಎಲ್ಲರ ಜೊತೆ ಮಾತನಾಡುತ್ತಾರೆ. ಕೊರೊನಾ ಕಾಲದಿಂದಾಗಿ …
Read More »ಭಾರೀ ಸಂಚಲನ ಸೃಷ್ಟಿಸಿದ್ದ ಐಎಂಎ ಬಹುಕೋಟಿ ವಂಚನೆ,ಮನ್ಸೂರ್ ಖಾನ್‍ಗೆ ಹೈಕೋರ್ಟ್ ಜಾಮೀನು ನೀಡಿದೆ.
ಬೆಂಗಳೂರು: ಭಾರೀ ಸಂಚಲನ ಸೃಷ್ಟಿಸಿದ್ದ ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಮನ್ಸೂರ್ ಖಾನ್‍ಗೆ ಹೈಕೋರ್ಟ್ ಏಕಸದಸ್ಯ ಪೀಠ ಜಾಮೀನು ನೀಡಿದೆ. ಮನ್ಸೂರ್ ಖಾನ್ ವಿರುದ್ಧ ಇಡಿ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ.ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ ಕೆಲ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದೆ. ಅಧೀನ ನ್ಯಾಯಾಲಯ ಸೂಚಿಸಿದಾಗ ವಿಚಾರಣೆಗೆ ಹಾಜರಾಗಬೇಕು, ಯಾವುದೇ ಕಾರಣಕ್ಕೂ ಸಾಕ್ಷ್ಯ ನಾಶ ಹಾಗೂ ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು. …
Read More »ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಿಜೆಪಿಗೆ ಧಮ್ ಇದೆಯಾ ಎಂಬ ಪ್ರಶ್ನೆ ಕಮಲ ನಾಯಕರನ್ನು ಕೆರಳಿಸಿದೆ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಿಜೆಪಿಗೆ ಧಮ್ ಇದೆಯಾ ಎಂಬ ಪ್ರಶ್ನೆ ಕಮಲ ನಾಯಕರನ್ನು ಕೆರಳಿಸಿದ್ದು, ಸಿದ್ದು ವಿರುದ್ಧ ವಾಗ್ದಾಳಿಗಳ ಸುರಿಮಳೆಗಳೇ ಬರುತ್ತಿದೆ. ನಗರದ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಂದಾಯ ಸಚಿವ ಆರ್ ಅಶೋಕ್, ಸಿದ್ದರಾಮಯ್ಯ ಬಿಜೆಪಿಗೆ ಧಮ್ ಇದೆಯಾ ಅಂತ ಕೇಳ್ತಾರೆ. ನಮಗೆ ಧೈರ್ಯ ಇರೋದಕ್ಕೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗ್ತಿದೆ. 370 ವಿಧಿ ರದ್ದು ಮಾಡಿದ್ದು ಬಿಜೆಪಿ, ಇದು ಬಿಜೆಪಿಯ ಧೈರ್ಯ. …
Read More »ಯಡಿಯೂರಪ್ಪ ಮತ್ತು ನರೇಂದ್ರ ಮೋದಿ ಅವರೇನು ಎಳೆ ಕಡಸುಗಳಾ ಎಂದು ಪ್ರಶ್ನೆ ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.ಸಿದ್ದರಾಮಯ್ಯ
ಬೆಂಗಳೂರು: ಶಿರಾ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಮುದಿ ಎತ್ತು ಎಂದು ಹೇಳಿದ್ದ ಬಿಜೆಪಿಯ ನಾಯಕರ ಹೇಳಿಕೆಗೆ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಟಿ.ಬಿ.ಜಯಚಂದ್ರ ಅವರಿಗೆ ವಯಸ್ಸಾಗಿದೆ ಅಂದ್ರೆ ಬಿ.ಎಸ್ ಯಡಿಯೂರಪ್ಪ ಮತ್ತು ನರೇಂದ್ರ ಮೋದಿ ಅವರೇನು ಎಳೆ ಕಡಸುಗಳಾ ಎಂದು ಪ್ರಶ್ನೆ ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ. ನಮ್ಮ ಪಕ್ಷದ ಅಭ್ಯರ್ಥಿ ಜಯಚಂದ್ರ ಅವರನ್ನು ಬಿಜೆಪಿ ನಾಯಕರು ಮುದಿ ಎತ್ತು ಎಂದು ಹೀಗಳೆದಿದ್ದಾರೆ. ಹಾಗಾದರೆ ಬಿ.ಎಸ್ ಯಡಿಯೂರಪ್ಪ …
Read More »ಉಪಚುನಾವಣೆ ರಂಗೇರುತ್ತಿದ್ದು, ಸ್ಟಾರ್ ಪ್ರಚಾರಕ್ಕಾಗಿ ಯಮಕನಮರಡಿ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತೆರಳಲಿದ್ದಾರೆ.
ಬೆಂಗಳೂರು : ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ರಂಗೇರುತ್ತಿದ್ದು, ಸ್ಟಾರ್ ಪ್ರಚಾರಕ್ಕಾಗಿ ಯಮಕನಮರಡಿ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತೆರಳಲಿದ್ದಾರೆ. ಈಗಾಗಲೇ ಮೂರು ದಿನಗಳ ಕಾಲ ಪ್ರಚಾರ ನಡೆಸಿದ ಶಾಸಕ ಸತೀಶ್ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷರ ಆದೇಶದ ಮೇರೆಗೆ ಮತ್ತೆ ಶಿರಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಪರ ಎರಡು ದಿನಗಳ ಕಾಲ ಪ್ರಚಾರ ನಡೆಸಲಿದ್ದಾರೆ. ನೂರಾರು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಇದೇ ದಿನಾಂಕ 30 ಹಾಗೂ 31 ರಂದು …
Read More »ಹನಿಟ್ರ್ಯಾಪ್ ಮಾಡಿ ಸುಲಿಗೆ ಮಾಡುತ್ತಿದ್ದ 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹನಿಟ್ರ್ಯಾಪ್ ಮಾಡಿ ಸುಲಿಗೆ ಮಾಡುತ್ತಿದ್ದ 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಹದೇವಪುರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ, ಅಂಜಲಿ, ದೀಪಕ್, ಪ್ರೇಮನಾಥ್, ಟೈಸನ್, ವಿನೋದ್, ಪ್ರಕಾಶ್, ಈಶ್ವರಿ ಎಂಬುವವರನ್ನು ಬಂಧಿಸಿದ್ದಾರೆ. ಪೈ ಲೇಔಟ್ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಬಂಧಿತರು ಶ್ರೀಮಂತರನ್ನು ಟಾರ್ಗೇಟ್ ಮಾಡಿ, ಪೈ ಲೇಔಟ್ ಗೆ ಕರೆತರುತ್ತಿದರು. ಅಲ್ಲಿಗೆ ಬಂದ ಬಳಿಕ ವ್ಯಕ್ತಿ ಯುವತಿ ಜೊತೆ ಇದ್ದಾಗ ಯುವತಿಯ ಪತಿ ಹಾಗೂ ಸ್ನೇಹಿತರೆಂದು ದಾಳಿ ಮಾಡಿ …
Read More »ಮಳೆ ಪರಿಹಾರ ವಿತರಣೆಯಲ್ಲಿ ಯಡವಟ್ಟು ಮಾಡಿದ ಬಿಬಿಎಂಪಿ ಅಧಿಕಾರಿಗಳು
ಬೆಂಗಳೂರು, ಅ.27- ಮಳೆ ಅನಾಹುತಕ್ಕೆ ಕಾರಣವಾಗುವ ಒತ್ತುವರಿಯನ್ನು ನಿರ್ದಾಕ್ಷಿಣ್ಯ ವಾಗಿ ತೆರವು ಮಾಡಲಾಗುವುದು ಎಂದು ಸಿಎಂ ಬೊಬ್ಬೆ ಹೊಡೆದಿದ್ದಾರೆ. ಆದರೆ ಬಿಬಿಎಂಪಿ ಅಧಿಕಾರಿಗಳು ಮಾತ್ರ ಒತ್ತುವರಿ ಮಾಡಿಕೊಂಡಿರುವ ಮನೆಗಳಿಗೆ ಪರಿಹಾರ ನೀಡಿ ಯಡವಟ್ಟು ಮಾಡಿದ್ದಾರೆ. ಇತ್ತೀಚೆಗೆ ಬಿದ್ದ ಭಾರೀ ಮಳೆಯಿಂದ ಹೊಸಕೆರೆ ಹಳ್ಳಿಯ ದತ್ತಾತ್ರೇಯ ಬಡಾವಣೆ ಮತ್ತಿತರ ಪ್ರದೇಶಗಳಲ್ಲಿ ಭಾರೀ ಅನಾಹುತ ಸಂಭವಿಸಿತ್ತು. ಮಳೆ ಸಂತ್ರಸ್ತರಿಗೆ ಎನ್‍ಡಿಆರ್‍ಎಫ್ ಮತ್ತು ಎಸ್‍ಡಿಆರ್‍ಎಫ್ ಯೋಜನೆಯಡಿ ಪರಿಹಾರ ಧನ ನೀಡುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದರು. ಇದೇ …
Read More »ಬೆಂಗಳೂರು ಉತ್ತರ ವಿಭಾಗಕ್ಕೆ ಕೇರಳದ ಪೊಲೀಸ್ ಪಡೆ
ಬೆಂಗಳೂರು,ಅ.27- ಚುನಾವಣಾ ಬಂದೋಬಸ್ತ್‍ಗಾಗಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉತ್ತರ ವಿಭಾಗಕ್ಕೆ ಕೇರಳದ ಪೊಲೀಸ್ ಪಡೆ ಆಗಮಿಸಿದೆ. ನಿನ್ನೆ ನಗರಕ್ಕೆ ಆಗಮಿಸಿರುವ ಕೇರಳ ರಾಜ್ಯದ ಸಶಸ್ತ್ರ ಮೀಸಲು ಪಡೆ(ಕೆಎಸ್‍ಎಪಿ) ಇಂದು ಉತ್ತರ ವಿಭಾಗದ ಜಾಲಹಳ್ಳಿ, ಆರ್‍ಎಂಸಿಯಾರ್ಡ್ ಮುಂತಾದ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಪಥಸಂಚಲನ ನಡೆಸಲಿದೆ. ಈಗಾಗಲೇ ಈ ವಿಭಾಗಕ್ಕೆ ಸಿಐಎಸ್‍ಎಫ್ ಒಂದು ಕಂಪನಿ ಬಂದಿದ್ದು, ಅದನ್ನು ಚುನಾವಣಾ ಬಂದೋಬಸ್ತ್‍ಗೆ ನಿಯೋಜಿಸಲಾಗಿದೆ. ಉತ್ತರ ವಿಭಾಗದ 8 ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಮತದಾನ …
Read More »