ಬೆಂಗಳೂರು,ನ.21- ಮೀನುಗಾರಿಕೆ ಕ್ಷೇತ್ರದಲ್ಲಿ ವ್ಯಾವಹಾರಿಕ ಶಿಸ್ತು ಹಾಗೂ ರಫ್ತು ವಹಿವಾಟು ಉತ್ತೇಜಿಸುವ ಉದ್ದೇಶದಿಂದ ಶೀಘ್ರದಲ್ಲಿಯೇ ಬೆಂಗಳೂರು ಸಮೀಪದ ಹೆಸರುಘಟ್ಟ ಮೀನುಮರಿ ಉತ್ಪಾದನಾ ಕೇಂದ್ರದಲ್ಲಿ ಒಂದು ಮಾದರಿ, ಸುಸಜ್ಜಿತ ಕ್ವಾರಂಟೇನ್ ಘಟಕವನ್ನು ಶೀಘ್ರದಲ್ಲಿಯೇ ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಉದ್ಘಾಟಿಸಿಮಾತನಾಡಿದ ಅವರು, ರಾಜ್ಯದಲ್ಲಿ ಅಲಂಕಾರಿಕ ಮೀನು ಉತ್ಪಾದನೆ ಹಾಗೂ ಮಾರಾಟ ಚಟುವಟಿಕೆಯು ಇತ್ತೀಚೆಗೆ ಪ್ರವರ್ಧಮಾನಕ್ಕೆ ಬರುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. …
Read More »ಮಹಿಳಾ ಕಂಡಕ್ಟರ್‍ಗಳಿಗೆ ಸ್ವರಕ್ಷಣಾ ತರಬೇತಿ ನೀಡಲು ಬಿಎಂಟಿಸಿ ಮುಂದಾಗಿದೆ.
ಬೆಂಗಳೂರು: ಮಹಿಳಾ ಕಂಡಕ್ಟರ್‍ಗಳಿಗೆ ಸ್ವರಕ್ಷಣಾ ತರಬೇತಿ ನೀಡಲು ಬಿಎಂಟಿಸಿ ಮುಂದಾಗಿದೆ. ಇನ್ನು ಮುಂದೆ ಮಾರ್ಷಲ್ ಆಟ್ರ್ಸ್, ಕರಾಟೆಯನ್ನು ಲೇಡಿ ಕಂಡಕ್ಟರ್‍ಗಳು ಕಲಿಯಲಿದ್ದಾರೆ. ಬಿಎಂಟಿಸಿ ಲೇಡಿ ಕಂಡಕ್ಟರ್ ತಂಟೆಗೆ ಬರೋ ಮುನ್ನ ಹುಷಾರ್ ಆಗಿರಬೇಕು. ಬಸ್‍ಗಳಲ್ಲಿ ಬೇಕಾ ಬಿಟ್ಟಿಯಾಗಿ ವರ್ತಿಸುವ ಮುನ್ನ ಎಚ್ಚರಿಕೆ ವಹಿಸುವುದು ಒಳ್ಳೆಯದು. ಯಾಕೆಂದರೆ ಮಾರ್ಷಲ್ ಆಟ್ರ್ಸ್, ಕರಾಟೆ, ಸಮರ ಕಲೆಗಳಲ್ಲಿ ಬಿಎಂಟಿಸಿಯ ಲೇಡಿ ಕಂಡಕ್ಟರ್ ಎಕ್ಸ್ ಪರ್ಟ್ಸ್ ಆಗಲಿದ್ದಾರೆ. ಮಹಿಳಾ ಕಂಡಕ್ಟರ್ ಗಳಿಗೆ ಸ್ವರಕ್ಷಣೆ ತರಬೇತಿ ನೀಡಲು …
Read More »ಈ ಬಾರಿ ಆನ್‍ಲೈನ್‍ನಲ್ಲಿ ಚಿತ್ರಸಂತೆ
ಬೆಂಗಳೂರು, ನ.21- ಕೋವಿಡ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಅನೇಕ ನಿರ್ಬಂಧ ಗಳಿರುವುದರಿಂದ 18ನೇ ಚಿತ್ರಸಂತೆಯನ್ನು ಆನ್‍ಲೈನ್ ಮೂಲಕ ನಡೆಸಲಾಗುವುದು ಎಂದು ಕರ್ನಾಟಕ ಚಿತ್ರಕಲಾ ಪರಿಷತ್‍ನ ಅಧ್ಯಕ್ಷ ಬಿ.ಎಲ್.ಶಂಕರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿ 3ರಂದು ಆನ್‍ಲೈನ್ ಮೂಲಕ ಚಿತ್ರಸಂತೆ ಉದ್ಘಾಟಿಸಲಾಗುವುದು. ಚಿತ್ರಕಲಾ ಪರಿಷತ್ ಸ್ಥಾಪನೆಯಾಗಿ 60 ವರ್ಷವಾಗಿರುವ ಹಿನ್ನೆಲೆಯಲ್ಲಿ ವಜ್ರಮಹೋತ್ಸವದ ವರ್ಷಾಚರಣೆಯ ಅಂಗವಾಗಿ ಕಲೆಗೆ ಸಂಬಂಸಿದಂತೆ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗುವುದು ಎಂದರು. 18ನೇ ಚಿತ್ರಸಂತೆಯನ್ನು ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್, …
Read More »ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಸಂಪತ್ ರಾಜ್ ಸೇರಿದ್ದು, ಜೈಲಿನಲ್ಲಿ ಆರೋಪಿಗೆ ರಾಜಾತಿಥ್ಯ
ಬೆಂಗಳೂರು: ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಮತ್ತು ಬೆಂಗಳೂರು ಗಲಭೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ಮಾಜಿ ಬಿಬಿಎಂಪಿ ಮೇಯರ್ ಸಂಪತ್ ರಾಜ್ ಸೇರಿದ್ದು, ಜೈಲಿನಲ್ಲಿ ಆರೋಪಿಗೆ ರಾಜಾತಿಥ್ಯ ನೀಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕೊರೊನಾ ಹಿನ್ನೆಲೆ ಜೈಲು ಸೇರುವ ಹೊಸ ಆರೋಪಿ 14 ದಿನ ಕ್ವಾರಂಟೈನ್ ನಲ್ಲಿರಬೇಕು. ಆದ್ರೆ ಸಂಪತ್ ರಾಜ್ ಗಾಗಿ ನಿಯಮ ಸಡಿಲಿಕೆ ಮಾಡಿ ನೇರವಾಗಿ ಕೊಠಡಿಗೆ ಶಿಫ್ಟ್ ಮಾಡಲಾಗಿದೆ. ಪೊಲೀಸ್ ಠಾಣೆಯೊಂದರ …
Read More »ಹ್ಯಾಕ್ ಮಾಡಲು ಏಕಾಗ್ರತೆ ಮುಖ್ಏಕಾಗ್ರತೆಗಾಗಿ ನಾನು ಭಗವದ್ಗೀತೆ ಓದುತ್ತೇನೆ.:ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್
ಬೆಂಗಳೂರು: ವೆಬ್ ಸೈಟ್, ಗೇಮ್ ಹ್ಯಾಕ್ ಮಾಡಲು ಏಕಾಗ್ರತೆ ಮುಖ್ಯ. ಹಾಗಾಗಿ ಏಕಾಗ್ರತೆಗಾಗಿ ನಾನು ಭಗವದ್ಗೀತೆ ಓದುತ್ತೇನೆ. ಬಳಿಕ ಕೆಲ ಸಮಯ ಧ್ಯಾನ ಮಾಡುತ್ತೇನೆ ಎಂದು ಬಂಧಿತ ಅಂತರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ವಿಚಾರಣೆ ವೇಳೆ ಹೇಳಿದ್ದಾನೆ. ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಅಂತರಾಷ್ಟ್ರೀಯ ಹ್ಯಾಕರ್ ಶ್ರೀಕಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವ ಸಿಸಿಬಿ ಅಧಿಕಾರಿಗಳು ಹ್ಯಾಕರ್ ನ ಏಕಾಗ್ರತೆ ರಹಸ್ಯ ಕೇಳಿ ಶಾಕ್ ಆಗಿದ್ದಾರೆ. ಬಂಧನದ ವೇಳೆಯೂ ಭಗವದ್ಗೀತೆ ಕೈಲಿ …
Read More »ಸಮಾಜ ಕಲ್ಯಾಣಇಲಾಖೆ ವತಿಯಿಂದತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಕ್ಷೌರಿಕ ಅಂಗಡಿಗಳನ್ನು ತೆರೆಯಲು ಮುಂದಾಗಿದೆ.ಸರ್ಕಾರ
ಬೆಂಗಳೂರು : ರಾಜ್ಯದಲ್ಲಿ ಹೆಚ್ಚುತ್ತಿರುವ ಜಾತಿ ತಾರತಮ್ಯ ಹೊಗಲಾಡಿಸಲು ಸರ್ಕಾರ ಹೊಸ ಹೆಜ್ಜೆ ಇಡುತ್ತಿದೆ. ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಕ್ಷೌರಿಕ ಅಂಗಡಿಗಳನ್ನು ತೆರೆಯಲು ಮುಂದಾಗಿದೆ. ಇತ್ತೀಚೆಗೆ ದಲಿತರು ಹಾಗೂ ಕೆಲವು ನಿರ್ದಿಷ್ಟ ಸಮುದಾಯಕ್ಕೆ ಗ್ರಾಮೀಣ ಭಾಗಗಳಲ್ಲಿ ಕ್ಷೌರ ಮಾಡಲು ಹಿಂದೇಟು ಹಾಕಿರುವ ಘಟನೆಗಳು ಮರುಕಳಿಸುತ್ತಿವೆ. ಈ ತಾರತಮ್ಯ ಹೋಗಲಾಡಿಸಲು ಸರ್ಕಾರ ಈ ನಿರ್ಣಯ ತೆಗೆದುಕೊಂಡಿದೆ. ಸಮಾಜ ಕಲ್ಯಾಣ ಇಲಾಖೆ ಹಿರಿಯ ಅಕಾರಿಗಳ ಜತೆ ಈಚಗೆ ಸಭೆ ನಡೆಸಿದ ಮುಖ್ಯಮಂತ್ರಿ …
Read More »ಹೊಸ ಟ್ವಿಸ್ಟ್ ಪಡೆದುಕೊಂಡಿದೆ ಸಂತೋಷ್ – ಜಾರಕಿಹೊಳಿ ಭೇಟಿ. ಕೊಟ್ಟ ಮಾತಿನಂತೆ ಹಲವರಿಗೆ ಸಚಿವ ಸ್ಥಾನ ನೀಡಿ.!
ಬೆಂಗಳೂರು,ನ.21- ಸಚಿವ ಸಂಪುಟ ವಿಸ್ತರಣೆ ಆಗಲಿದೆಯೋ ಎಂಬ ಇಲ್ಲವೋ ಎಂಬ ವದಂತಿ ಹಬ್ಬಿರುವ ಬೆನ್ನಲ್ಲೇ ಸಚಿವ ರಮೇಶ್ ಜಾರಕಿಹೊಳಿ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಭೇಟಿಯಾಗಿರುವುದು ಭಾರೀ ಮಹತ್ವ ಪಡೆದುಕೊಂಡಿದೆ. ಕೋಲ್ಕತ್ತಾ ಪ್ರವಾಸದಲ್ಲಿದ್ದ ಸಂತೋಷ್ ಅವರು ಇಂದು ನವದೆಹಲಿಗೆ ಬರುತ್ತಿದ್ದಂತೆ ಅವರನ್ನು ಭೇಟಿ ಮಾಡಿದ ರಮೇಶ್ ಜಾರಕಿಹೊಳಿ, ಸುಮಾರು 20 ನಿಮಿಷಕ್ಕೂ ಹೆಚ್ಚುಕಾಲ ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತಂತೆ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ. ಕಳೆದ ನಾಲ್ಕು ದಿನಗಳಿಂದ …
Read More »ಆಸ್ಪತ್ರೆ ಸಿಬ್ಬಂದಿ ಎಡವಟ್ಟಿನಿಂದಾಗಿ ಮಗು ಅಪಹರಣ,ನವಜಾತ ಶಿಶು ಅಪಹರಿಸಿದವರು ಅರೆಸ್ಟ್
ಬೆಂಗಳೂರು, ನ.20-ವಾಣಿ ವಿಲಾಸ ಆಸ್ಪತ್ರೆಯಿಂದ ಎರಡು ದಿನದ ನವಜಾತ ಶಿಶು ಅಪಹರಿಸಿದ್ದ ಮಹಿಳೆ ಸೇರಿದಂತೆ ನಾಲ್ವರನ್ನು ವಿವಿ ಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಗು ಅಪಹರಿಸಿದ್ದ ಮಹಿಳೆ, ಇದಕ್ಕೆ ಸಹಕರಿಸಿದ ವ್ಯಕ್ತಿ ಮತ್ತು ಮಗುವನ್ನು ಪಡೆದಿದ್ದ ದಂಪತಿಯನ್ನು ಬಂಧಿಸಲಾಗಿದೆ. ಅಬ್ದುಲ್ ರಶೀದ್ ಮತ್ತು ಆರ್ಷಿಯಾ ದಂಪತಿ ಮಗುವಿಗೆ ಅನಾರೋಗ್ಯವಾದ್ದರಿಂದ ನ.9ರಂದು ವಾಣಿ ವಿಲಾಸ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.ನ.11ರಂದು ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದರಿಂದ ಮಗುವನ್ನು ಕರೆದೊಯ್ಯುವಂತೆ ಅನೌನ್ಸ್ ಮಾಡಿದ್ದಾರೆ. …
Read More »ರಾಜ್ಯದಲ್ಲಿ 1,781 ಮಂದಿಗೆ ಸೋಂಕು 17 ಮಂದಿ ಮೃತ
ಬೆಂಗಳೂರು: ರಾಜ್ಯದಲ್ಲಿ 1,781 ಮಂದಿಗೆ ಸೋಂಕು ತಗುಲಿದ್ದು, 2,181 ಜನ ಆಸ್ಪ್ರತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದು ಒಟ್ಟು 17 ಮಂದಿ ಮೃತಪಟ್ಟಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 8,69,561ಕ್ಕೆ ಏರಿಕೆಯಾಗಿದೆ. ಈ ಪೈಕಿ 8,33,169 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಪ್ರಸ್ತುತ 24,752 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ ಒಟ್ಟು 11,621 ಮಂದಿ ಸೋಂಕಿಗೆ ಮೃತಪಟ್ಟಿದ್ದು, 539 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Read More »ರಾಜ್ಯದಲ್ಲಿ ಫ್ಲ್ಯಾಟ್ ಕೊಳ್ಳುವವರಿಗೆ ರಾಜ್ಯ ಸರಕಾರ ಶುಭ ಸುದ್ದಿ ನೀಡಿದೆ.
ಬೆಂಗಳೂರು – ರಾಜ್ಯದಲ್ಲಿ ಫ್ಲ್ಯಾಟ್ ಕೊಳ್ಳುವವರಿಗೆ ರಾಜ್ಯ ಸರಕಾರ ಶುಭ ಸುದ್ದಿ ನೀಡಿದೆ. ಕರ್ನಾಟಕ ಸ್ಟ್ಯಾಂಪ್ ಆ್ಯಕ್ಟ್ ಗೆ ತಿದ್ದುಪಡಿ ತರುವ ಮೂಲಕ ಸಣ್ಣ ಮತ್ತು ಮಧ್ಯಮ ವರ್ಗದವರಿಗೆ ಫ್ಲ್ಯಾಟ್ ಕೊಳ್ಳುವುದಕ್ಕೆ ಇರುವ ಸ್ಟ್ಯಾಂಪ್ ಡ್ಯೂಟಿಯನ್ನು ಗಣನೀಯವಾಗಿ ಇಳಿಸಿದೆ. ಈ ಕುರಿತು ಗುರುವಾರ ರಾಜ್ಯಪತ್ರ ಪ್ರಕಟವಾಗಿದೆ. 5 ಲಕ್ಷ ರೂ.ವರೆಗಿನ ಫ್ಲ್ಯಾಟ್ ಖರೀದಿಸುವವರಿಗೆ ಈವರೆಗೆ ಇದ್ದ ಶೇ.6ರ ಸ್ಟ್ಯಾಂಪ್ ಡ್ಯೂಟಿಯನ್ನು ಶೇ.2ಕ್ಕೆ ಇಳಿಸಲಾಗಿದೆ. 25 ಲಕ್ಷ ರೂ.ಗಳಿಂದ 35 ಲಕ್ಷ ರೂ.ಗಳವರೆಗಿನ …
Read More »