ವಾಷಿಂಗ್ಟನ್: ಇಂದು ಪ್ರಪಂಚದಾದ್ಯಂತ ಹೊಸದಾಗಿ 1.83 ಲಕ್ಷ ಜನರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, 4,235 ಜನರು ಮೃತಪಟ್ಟಿದ್ದಾರೆ ಎಂದು ವರ್ಡೋಮೀಟರ್ ವೆಬ್‌ಸೈಟ್ ವರದಿ ಮಾಡಿದೆ. ಇದರಿಂದಾಗಿ ಪ್ರಪಂಚದಾದ್ಯಂತ ಸೋಂಕು ಪ್ರಕರಣಗಳ ಸಂಖ್ಯೆ 6.37 ಕೋಟಿಗೂ ಹೆಚ್ಚಾಗಿದ್ದು, ಸಾವಿನ ಸಂಖ್ಯೆ 14.77 ಲಕ್ಷಕ್ಕೆ ತಲುಪಿದೆ. ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿರುವ ರಾಷ್ಟ್ರಗಳ ಸಾಲಿನಲ್ಲಿ ಮೊದಲನೇ ಸ್ಥಾನದಲ್ಲೇ ಮುಂದುವರಿದಿರುವ ಅಮೆರಿಕದಲ್ಲಿ ಈವರೆಗೆ 1.39 ಕೋಟಿಗೂ ಅಧಿಕ ಜನರಿಗೆ ಸೋಂಕು ತಗುಲಿದ್ದು, 2.74 ಲಕ್ಷಕ್ಕೂ …
Read More »ಕರ್ನಾಟಕದಲ್ಲಿ ಕೊರೊನಾ ಪರೀಕ್ಷೆಗಳ ಸಂಖ್ಯೆಯಲ್ಲಿ ಇಳಿಮುಖ
ಬೆಂಗಳೂರು, ಡಿ.02 : ಕರ್ನಾಟಕದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ರಾಜ್ಯದಲ್ಲಿ ಕೋವಿಡ್ ಪರೀಕ್ಷೆಗಳ ಸಂಖ್ಯೆಯೂ ಸಹ ಒಂದು ಲಕ್ಷದಿಂದ ಇಳಿಕೆಯಾಗಿದೆ. ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 8,86,227. ಡಿಸೆಂಬರ್ 1ರಂದು ರಾಜ್ಯದಲ್ಲಿ 1,330 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಮಂಗಳವಾರ 94 ಸಾವಿರ ಪರೀಕ್ಷೆಗಳನ್ನು ಮಾಡಲಾಗಿದೆ. ಇವುಗಳಲ್ಲಿ 20,629 ಆಂಟಿಜೆನ್ ಮತ್ತು 74,256 ಆರ್‌ಟಿಪಿಸಿಆರ್ ಪರೀಕ್ಷೆಗಳು ಸೇರಿವೆ. ಕಳೆದ ಕೆಲವು ದಿನಗಳಿಂದ 1 …
Read More »ರೈತರಿಂದ 1 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಗೆ ತೀರ್ಮಾನ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಬೆಂಗಳೂರು : ರೈತರಿಂದ ನೇರವಾಗಿ ಮೆಕ್ಕೆಜೋಳ ಖರೀದಿಗೆ ಮುಂದಾಗಿರುವ ಕೆಎಂಎಫ್, ಪ್ರತಿ ಟನ್‍ಗೆ 15 ಸಾವಿರ ರೂ.ಗಳನ್ನು ನಿಗದಿಪಡಿಸಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಮಂಗಳವಾರದಂದು ಇಲ್ಲಿನ ಕೆಎಂಎಫ್ ಪ್ರಧಾನ ಕಛೇರಿಯಲ್ಲಿ ಜರುಗಿದ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಆದೇಶದ ಮೇರೆಗೆ ರೈತರ ಅನುಕೂಲಕ್ಕಾಗಿ ಮೆಕ್ಕಜೋಳ ಖರೀದಿಗೆ ನಮ್ಮ ಸಂಸ್ಥೆ ಮುಂದಾಗಿದ್ದು, ಅಂದಾಜು …
Read More »ಯೋಗೇಶ್ವರ್ ಅವರನ್ನು ಮಂತ್ರಿ ಮಾಡೇ ಮಾಡ್ತೀವಿ : ಸಿಎಂ ಬಿಎಸ್‍ವೈ
ಬೆಂಗಳೂರು, ಡಿ.1- ಕೆಲವು ಶಾಸಕರ ವಿರೋಧದ ನಡುವೆಯೂ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರನ್ನು ನೂರಕ್ಕೆ ನೂರರಷ್ಟು ಮಂತ್ರಿ ಮಾಡುತ್ತೇವೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಡ್ಡಿ ಮುರಿದಂತೆ ಹೇಳಿದ್ದಾರೆ. ಯೋಗೇಶ್ವರ್ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಬಿಜೆಪಿಯೊಳಗೆ ಕೆಲವು ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಸ್ವತಃ ಸಿಎಂ ಅವರೇ ನೂರಕ್ಕೆ ನೂರರಷ್ಟು ಅವರನ್ನು ಮಂತ್ರಿ ಮಾಡುತ್ತೇವೆ ಎಂದು ಹೇಳಿರುವುದು ಮಹತ್ವ ಪಡೆದುಕೊಂಡಿದೆ. ವಿಧಾನಸೌಧ ನಿರ್ಮಾತೃ ದಿ.ಕೆಂಗಲ್ ಹನುಮಂತಯ್ಯ ಅವರ ಪುಣ್ಯತಿಥಿ ಅಂಗವಾಗಿ ವಿಧಾನಸೌಧದಲ್ಲಿರುವ …
Read More »ಕಾಂಗ್ರೆಸ್ ಪಕ್ಷ ರೈತರ ಪರವಾಗಿ ನಿಲ್ಲುತ್ತದೆ.: ಸತೀಶ್ ಜಾರಕಿಹೊಳಿ
ಬೆಂಗಳೂರು: ಕಾಂಗ್ರೆಸ್ ಪಕ್ಷ ರೈತರ ಪರವಾಗಿ ನಿಲ್ಲುತ್ತದೆ. ಅವರಿಗೆ ಎಲ್ಲ ಸಂದರ್ಭದಲ್ಲಿಯೂ ನಾನು ಸಂಪೂರ್ಣ ಬೆಂಬಲ ಸೂಚಿಸುತ್ತೇನೆ. ಕೇಂದ್ರ ಸರ್ಕಾರ ಕೂಡಲೇ ರೈತರ ಸಮಸ್ಯೆ ಆಲಿಸಿಬೇಕು ಎಂದುಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆಗ್ರಹಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ನಡೆಯುವಂತಹ ರೈತರ ಪ್ರತಿಭಟನೆ ಇಡೀ ದೇಶದ ಗಮನ ಸೆಳೆದಿದೆ. ನಿಜವಾಗಿಯೂ ಅವರ ಹೋರಾಟ ನ್ಯಾಯ ಸಮ್ಮತವಾಗಿದೆ. ಕೇಂದ್ರ ಸರ್ಕಾರ ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದರು. ಕಳೆದ 6 ದಿನಗಳಿಂದ ರೈತರು …
Read More »ಡಿಕೆಶಿ ವಿರುದ್ಧ ಕಿಡಿಕಾರಿದ ಯಡಿಯೂರಪ್ಪ ಆಪ್ತ ಸಂತೋಷ್
ಬೆಂಗಳೂರು: ತನ್ನ ವಿರುದ್ಧ ಆರೋಪ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಆಪ್ತ ಸಂತೋಷ್ ಟಾಂಗ್ ನೀಡಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದ ಸಂತೋಷ್ ಇಂದು ಡಿಸ್ಚಾರ್ಜ್ ಆಗಿದ್ದು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಇದೇ ವೇಳೆ ಸಂತೋಷ್ ಪರ್ಸನಲ್ ವೀಡಿಯೋ ದೆಹಲಿ ತಪುಪಿರೋ ಮಾಹಿತಿ ಇತ್ತು ಎಂದು ಹೇಳಿಕೆ ನೀಡಿದ್ದ ಡಿಕೆಶಿ ವಿರುದ್ಧ ಕಿಡಿಕಾರಿದರು. ಸುಖಾಸುಮ್ಮನೆ ಆರೋಪ ಮಾಡಿರುವ ಡಿಕೆಶಿ ಬಳಿ ಮನವಿ ಮಾಡಿಕೊಳ್ಳುತ್ತೇನೆ. …
Read More »ಆಸ್ಪತ್ರೆಗೆ ದಾಖಲಾಗಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ ಅವರು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್
ಬೆಂಗಳೂರು : ಆಸ್ಪತ್ರೆಗೆ ದಾಖಲಾಗಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ ಅವರು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆಸ್ಪತ್ರೆಯಿಂದ ಹೊರ ಬಂದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ನನ್ನ ಕಸಿನ್ ಬ್ರದರ್ ಮದುವೆ ಇತ್ತು. ಆ ಮದುವೆಯಲ್ಲಿ ಊಟದಲ್ಲಿ ವ್ಯತ್ಯಾಸವಾಗಿ ನನಗೆ ಅಜೀರ್ಣವಾಗಿತ್ತು. ಆ ಸಮಯದಲ್ಲಿ ಯಾವುದೋ ಮಾತ್ರೆ ಬದಲಿಯಾಗಿ, ಇನ್ಯಾವುದೋ ಮಾತ್ರೆ ತೆಗೆದುಕೊಂಡು ಡೋಸೇಜ್ ಹೆಚ್ಚಿಗೆ ಆಗಿತ್ತು. ಇದನ್ನ ನೋಡಿದ ನನ್ನ ಪತ್ನಿ ಗಾಬರಿಯಾಗಿ ಆಸ್ಪತ್ರೆಗೆ ಕರೆದುಕೊಂಡು …
Read More »ಗ್ರಾಮ ಪಂಚಾಯಿತಿ ಚುನಾವಣೆ ದಿನಾಂಕ ಘೋಷಣೆಗೆ ಕ್ಷಣಗಣನೆ
ಬೆಂಗಳೂರು: ರಾಜ್ಯ ಚುನಾವಣಾ ಆಯೋಗ ಮಧ್ಯಾಹ್ನ 11.30ಕ್ಕೆ ಗ್ರಾಮ ಪಂಚಾಯಿತಿ ಚುನಾವಣಾ ದಿನಾಂಕ ಪ್ರಕಟಿಸಲಿದೆ. ಬಿಜೆಪಿ , ಕಾಂಗ್ರೆಸ್ ಮತ್ತು ಜೆಡಿಎಸ್ ಗ್ರಾಮ ಪಂಚಾಯಿತಿ ಚುನಾವಣೆಗೆ ತಯಾರಿ ನಡೆಸಿವೆ. ಗ್ರಾಮ ಪಂಚಾಯಿತಿ ಗೆಲುವಿಗೆ ತಂತ್ರ ಪ್ರತಿತಂತ್ರಗಳನ್ನು ರೂಪಿಸುವ ಮೂಲಕ ಮತ್ತೊಂದು ಮತ ಸಮರಕ್ಕೆ ಇಳಿಯಲಿವೆ. ಬಿಜೆಪಿ ಈಗಾಗಲೇ ಗ್ರಾಮ ಸ್ವರಾಜ್ ಸಮಾವೇಶದ ಮೂಲಕ ಚುನಾವಣಾ ರಣಕಹಳೆ ಮೊಳಗಿಸಿದೆ. ಜೆಡಿಎಸ್ ಕೂಡ ಪ್ರಮುಖರ ಸಭೆ ನಡೆಸಿ ತೊಡೆ ತಟ್ಟಲು ರೆಡಿಯಾಗಿದೆ. …
Read More »ಕಾರ್ತಿಕ ಹುಣ್ಣಿಮೆಯ ದಿನವಾದ ಇಂದು ವರ್ಷದ ಕೊನೆಯ ಚಂದ್ರ ಗ್ರಹಣ
ಬೆಂಗಳೂರು: ಕಾರ್ತಿಕ ಹುಣ್ಣಿಮೆಯ ದಿನವಾದ ಇಂದು ವರ್ಷದ ಕೊನೆಯ ಚಂದ್ರ ಗ್ರಹಣ ನಡೆಯಲಿದೆ. ನಡು ಮಧ್ಯಾಹ್ನ ಗ್ರಹಣ ಸ್ಪರ್ಶ ಕಾಲ ಶುರುವಾಗಲಿದ್ದು, ಸೂರ್ಯ ಅಸ್ತಮಿಸುವ ಮುನ್ನವೇ ಗ್ರಹಣದ ಮೋಕ್ಷಕಾಲ ಸಂಭವಿಸುತ್ತದೆ. ಹೀಗಾಗಿ ಈ ಗ್ರಹಣದಲ್ಲಿ ಚಂದ್ರ ಎಲ್ಲಿಯೂ ಕಪ್ಪು ಆಗುವುದಿಲ್ಲ.ಭಾರತದ ನಿರ್ದಿಷ್ಟ ಭಾಗಗಳಲ್ಲಿ ಮಾತ್ರ ಚಂದ್ರ ಗ್ರಹಣ ಗೋಚರವಾಗಲಿದೆ. ಪಶ್ಚಿಮ ಬಂಗಾಳ, ಅಸ್ಸಾಂ, ಬಿಹಾರ, ಜಾರ್ಖಂಡ್, ಅರುಣಾಚಲ ಪ್ರದೇಶ, ತ್ರಿಪುರ ಮತ್ತು ಈಶಾನ್ಯ ರಾಜ್ಯಗಳ ಮಧ್ಯಭಾಗದಲ್ಲಿ ಗೋಚರವಗಲಿದೆ.
Read More »ಬಿಜೆಪಿ ಈಗ ಮನೆಯೊಂದು ಬಾಗಿಲು ಮೂರು
ಬೆಂಗಳೂರು: ಇಲ್ಲಿಯವರೆಗೆ ರಾಜ್ಯ ಬಿಜೆಪಿಯಲ್ಲಿ ಎರಡು ಬಣಗಳಿತ್ತು. ಆದರೆ ಈಗ ಮತ್ತೊಂದು ಬಣ ಸೇರಿ ಗುಂಪು ರಾಜಕೀಯ ಜೋರಾಗಿದೆ. ಯಡಿಯೂರಪ್ಪನವರ ಪರ ಒಂದು ಗುಂಪು, ಯಡಿಯೂರಪ್ಪನವರ ವಿರೋಧಿಗಳ ಗುಂಪು ರಾಜ್ಯ ಬಿಜೆಪಿಯಲ್ಲಿದ್ದು ಅವರ ಮಧ್ಯೆ ಕಚ್ಚಾಟ ನಡೆಯುತ್ತದೆ ಎಂದು ಆಗಾಗ ವಿರೋಧ ಪಕ್ಷಗಳು ನಾಯಕರು ಕಿಚಾಯಿಸುತ್ತಿರುತ್ತಾರೆ. ಈ ನಡುವೆ ದೋಸ್ತಿ ಸರ್ಕಾರದ ವಿರುದ್ಧ ಸಿಡಿದು ಕಾಂಗ್ರೆಸ್, ಜೆಡಿಎಸ್‍ನಿಂದ ವಲಸೆ ಬಂದ ಮಿತ್ರ ಮಂಡಳಿಯ ಶಾಸಕರ ಗುಂಪು ನಿರ್ಮಾಣವಾಗಿದೆ. ಈಗಾಗಲೇ ಇರುವ …
Read More »
Laxmi News 24×7