ಬೆಂಗಳೂರು, ಜ.21- ಸಚಿವ ಸಂಪುಟ ವಿಸ್ತರಣೆಯಾಗಿ ಒಂದು ವಾರ ಕಳೆದ ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. ನೂತನ ಸಚಿವರಿಗೆ ನೀಡಿರುವ ಖಾತೆಗಳಲ್ಲಿ ಕೆಲವರಿಗೆ ಬಂಪರ್ ಹೊಡೆದಿದ್ದರೆ, ಇನ್ನು ಕೆಲವರಿಗೆ ನಿರೀಕ್ಷೆಗೂ ಊಹೆ ಮಾಡದ ರೀತಿಯಲ್ಲಿ ಹಿನ್ನಡೆಯಾಗಿದೆ. ಕಳೆದವಾರ ಪ್ರಮಾಣವಚನ ಸ್ವೀಕರಿಸಿದ 7 ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದ್ದು, ಹಾಲಿ 10 ಸಚಿವರ ಖಾತೆಗಳೂ ಕೂಡ ಅದಲು-ಬದಲಾಗಿವೆ. ತೀವ್ರ ಪೈಪೋಟಿ ಕಂಡು …
Read More »ಸಿಎಂ ತೋರಿಕೆಗಷ್ಟೇ ಹಸಿರು ಶಾಲು ಹಾಕ್ತಾರೆ : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ
ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೋರಿಕೆಗಷ್ಟೇ ಹಸಿರು ಶಾಲು ಹಾಕ್ತಾರೆ. ಆದ್ರೆ ಯಾವುದೇ ರೀತಿ ರೈತರ ಬಗ್ಗೆ ಕಾಳಜಿ ಅವರಿಗಿಲ್ಲ. ಬಿಜೆಪಿ ಕಾರ್ಪೊರೇಟರ್ ಪರ ಇರುವುದರಿಂದ ಕಾಯ್ದೆ ಹಿಂಪಡೆಯಲು ಹಿಂದೆಟು ಹಾಕುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು. ಇಂದು ನಡೆದ ರಾಜಭವನ ಚಲೋ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳು ಕಾರ್ಪೊರೇಟರ್ ಪರ ಇವೆ. ಆದ ಕಾರಣ ಸರ್ಕಾರ …
Read More »ಕಾಂಗ್ರೆಸ್ ನ ಮತ್ತಿಬ್ಬರು ನಾಯಕರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಪಟ್ಟ !
ಬೆಂಗಳೂರು : ಮಾಜಿ ಸಂಸದ ಧ್ರುವ ನಾರಾಯಣ್ ಹಾಗೂ ಮಾಜಿ ಸಚಿವ, ಶಾಸಕ ರಾಮಲಿಂಗಾ ರೆಡ್ಡಿ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಹೊಸ ಜವಾಬ್ದಾರಿ ನೀಡಲಾಗಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ)ಗೆ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ ಆದೇಶ ನೀಡಿದ್ದಾರೆ. ಮೂವರು ನಾಯಕರಾದ ಸತೀಶ್ ಜಾರಕಿಹೊಳಿ, ಈಶ್ವರ ಖಂಡ್ರೆ, ಸಲೀಂ ಅಹಮ್ಮದ್ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ಈಗಾಗಲೇ ನೇಮಕ ಮಾಡಲಾಗಿದೆ. ನಾಯಕರು ಸಹ ರಾಜ್ಯಾದ್ಯಂತ …
Read More »ಜಯನಗರದ ಕಾಂಗ್ರೆಸ್ ಶಾಸಕಿ ಶಾಸಕಿ ಸೌಮ್ಯಾ ರೆಡ್ಡಿ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ.
ಬೆಂಗಳೂರು: ಜಯನಗರದ ಕಾಂಗ್ರೆಸ್ ಶಾಸಕಿ ಶಾಸಕಿ ಸೌಮ್ಯಾ ರೆಡ್ಡಿ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ರೈತ ಕಾಯ್ದೆ ರದ್ಧತಿ ಆಗ್ರಹಿಸಿ ಇಂದು ಕಾಂಗ್ರೆಸ್ ರಾಜಭವನ ಚಲೋವನ್ನು ಆಯೋಜಿಸಿತ್ತು. ಫ್ರೀಡಂ ಪಾರ್ಕ್‌ನಲ್ಲಿ ಸಮಾವೇಶದ ಬಳಿಕ ರಾಜಭನವನಕ್ಕೆ ತೆರಳಲು ಹೋಗುತ್ತಿದ್ದಾಗ ಪೊಲೀಸರು ಕಾಂಗ್ರೆಸ್ ನಾಯಕರನ್ನು ತಡೆದಿದ್ದಾರೆ. ಈ ವೇಳೆ ಸೌಮ್ಯಾ ರೆಡ್ಡಿ ಅವರನ್ನು ಮಹಿಳಾ ಪೊಲೀಸರು ತಡೆದಿದ್ದಾರೆ. ಈ ವೇಳೆ ಸೌಮ್ಯಾ ರೆಡ್ಡಿ “ಹೂ ದಿ ಹೆಲ್” ಎಂದು ಹೇಳಿ ಮಹಿಳಾ ಸಿಬ್ಬಂದಿಯ ಮೇಲೆ …
Read More »ಅಂಜಲಿ ನಿಂಬಾಳ್ಕರ್ ಪ್ರತಿಭಟನೆ ವೇಳೆ ಅಸ್ವಸ್ಥ
; ಬೆಂಗಳೂರು; ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ಕಾಂಗ್ರೆಸ್ ನಾಯಕರ ನೇತೃತ್ವದಲ್ಲಿ ನಡೆಯುತ್ತಿದ್ದ ರಾಜಭವನ ಚಲೋ ರೈತರ ಪ್ರತಿಭಟನೆ ವೇಳೆ ಶಾಸಕಿ ಅಂಜಲಿ ನಿಂಬಾಳ್ಕರ್ ಅಸ್ವಸ್ಥಗೊಂಡಿದ್ದಾರೆ. ರಾಜಭವನದತ್ತ ತೆರಳುತ್ತಿದ್ದ ಕಾಂಗ್ರೆಸ್ ನಾಯಕರನ್ನು ಪೊಲೀಸರು ಮಾರ್ಗ ಮಧ್ಯೆಯೇ ವಶಕ್ಕೆ ಪಡೆದಿದ್ದಾರೆ. ಈ ವೇಳೆ ಶಾಸಕಿ ಅಂಜಲಿ ನಿಂಬಾಳ್ಕರ್ ಅಸ್ವಸ್ಥಗೊಂಡಿದ್ದಾರೆ. ನಂತರ ಅಲ್ಲೇ ಕುಳಿತು ವಿಶ್ರಾಂತಿ ಪಡೆದುಕೊಂಡರು. ಕಾಂಗ್ರೆಸ್ ರಾಜಭವನ ಚಲೋ ಪ್ರತಿಭಟನಾ ರ್ಯಾಲಿ ತಡೆದು ನಾಯಕರನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಂತೆಯೇ ಪ್ರತಿಭಟನೆಗಳು ಭುಗಿಲೆದ್ದಿವೆ.
Read More »ನೂತನ ಸಚಿವರಿಗೆ ಖಾತೆ ಹಂಚಿಕೆ
ಬೆಂಗಳೂರು – ರಾಜ್ಯ ಸಚಿವ ಸಂಪುಟ ವಿಸ್ತರಣೆ ಪ್ರಹಸನದ ನಂತರ ನೂತನ ಸಚಿವರಿಗೆ ಖಾತೆ ಹಂಚಿಕೆ ಕಸರತ್ತು ಶುರುವಾಗಿದೆ. ಪ್ರಮುಖ ಖಾತೆಗಳಿಗೆ ಪ್ರಭಾವಿ ಸಚಿವರಿಂದ ಲಾಬಿ ನಡೆಯುತ್ತಿದ್ದು, ಕೆಲವರ ಖಾತೆಯೂ ಅದಲು ಬದಲಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.ನಾಳೆ ನೂತನ ಸಚಿವರುಗಳಿಗೆ ಖಾತೆ ಹಂಚಿಕೆ ಮಾಡುವುದಾಗಿ ಸಿಎಂ ಯಡಿಯೂರಪ್ಪ ಪ್ರಕಟಿಸಿದ್ದಾರೆ. ಖಾತೆ ಹಂಚಿಕೆ ಜೊತೆಗೆ ಸಣ್ಣ ಪ್ರಮಾಣದಲ್ಲಿ ಸಂಪುಟ ಪುನಾರಚನೆಯು ನಡೆಯಲಿದೆ ಎಂದು ಹೇಳಲಾಗುತ್ತಿದೆ. ಕೆಲ ಸಚಿವರು ಪ್ರಮುಖ ಖಾತೆಗೆ ಪಟ್ಟು …
Read More »ಬೆಂಗಳೂರಿನ ರಸ್ತೆಗುಂಡಿಗಳ ಚಿತ್ರವನ್ನು ವಾಟ್ಯಾಪ್ಪ್ ಮೂಲಕ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನೀಡಿದರೆ ಚಿತ್ರಗಳು ಹೈಕೋರ್ಟ್ ತಲುಪಲಿವೆ.
ಬೆಂಗಳೂರು: ಬೆಂಗಳೂರಿನ ರಸ್ತೆಗುಂಡಿಗಳ ಚಿತ್ರವನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನೀಡಿದರೆ ಚಿತ್ರಗಳು ಹೈಕೋರ್ಟ್ ತಲುಪಲಿವೆ. ಸಾರ್ವಜನಿಕರಿಂದಲೇ ನಗರದ ರಸ್ತೆಗುಂಡಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಪ್ರಾಧಿಕಾರ ಮುಂದಾಗಿದೆ. ಬಿಬಿಎಂಪಿ ನಡೆಸಿರುವ ರಸ್ತೆಗುಂಡಿ ಮುಚ್ಚುವ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸುವಂತೆ ಪ್ರಾಧಿಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಸಾಲ್ವ್ ನಿಂಜಾ ಎಂಬ ಸ್ವಯಂ ಸೇವಕ ಸಂಸ್ಥೆಯ ಸಹಕಾರದೊಂದಿಗೆ ರಸ್ತೆಗುಂಡಿಗಳ ಬಗ್ಗೆ ಸಾರ್ವಜನಿಕರಿಂದಲೇ ಮಾಹಿತಿ ಪಡೆದು ನ್ಯಾಯಾಲಯಕ್ಕೆ ಒದಗಿಸಲಾಗುತ್ತದೆ. ಅದಕ್ಕಾಗಿ ವಾಟ್ಸಾಪ್ ಸಂಖ್ಯೆಯನ್ನು …
Read More »ಪೊಲೀಸರು ತಡೆದರೆ ರಸ್ತೆ ಬಂದ್ ಮಾಡಿ: ಕಾಂಗ್ರೆಸ್ ಕಾರ್ಯಕರ್ತರು, ರೈತರಿಗೆ ಡಿಕೆಶಿ ಕರೆ
ಬೆಂಗಳೂರು: ‘ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ಜನರ ಪ್ರತಿಭಟನೆ ಹಕ್ಕನ್ನು ಕಸಿಯುವ ಪ್ರಯತ್ನ ಮಾಡುತ್ತಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ಮತ್ತು ಜನ ವಿರೋಧಿ ಕಾಯ್ದೆಗಳ ವಿರುದ್ಧದ ‘ರಾಜಭವನ ಚಲೋ’ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸುತ್ತಿರುವ ರೈತರು ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನು ನಿನ್ನೆ ರಾತ್ರಿಯಿಂದಲೇ ಪೊಲೀಸರು ಮಾರ್ಗ ಮಧ್ಯದಲ್ಲೇ ತಡೆಯುತ್ತಿದ್ದಾರೆ. ಆ ಮೂಲಕ ರಾಜ್ಯ …
Read More »ಸಚಿವರಾಗಿ 20 ತಿಂಗಳು ಪೂರೈಸಿದವರನ್ನು ಕೈ ಬಿಡಿ. 32 ಹೊಸಬರಿಗೆ ಸಂಪುಟದಲ್ಲಿ ಅವಕಾಶ ಕೊಡಿ
ಬೆಂಗಳೂರು: ಹೊಸ ಸಚಿವರಿಗೆ ಖಾತೆ ಹಂಚಿಕೆ ಕಸರತ್ತಿನ ಹೊತ್ತಲ್ಲೇ ಇಡೀ ಸಂಪುಟವನ್ನೇ ವಿಸರ್ಜಿಸಿ, ಹೊಸದಾಗಿ ಸಂಪುಟ ರಚಿಸಿ ಅನ್ನೋ ಕೂಗು ಎದ್ದಿದೆ. ಸಂಪುಟ ಪುನಾರಚನೆ ಮಾಡುವುದು ಒಳ್ಳೆಯದು. ಹಳಬರನ್ನ ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಬೇಕು. ಆಗ ಮುಂದೆ 150 ಸೀಟು ಬರೋಕೆ ಸಾಧ್ಯ. ಉತ್ತಮ ಆಡಳಿತ ಕೊಡೋಕೆ ಸಾಧ್ಯ ಅಂತ ಶಾಸಕ ತಿಪ್ಪಾರೆಡ್ಡಿ ಆಗ್ರಹಿಸಿದ್ದಾರೆ.ಸಚಿವರಾಗಿ 20 ತಿಂಗಳು ಪೂರೈಸಿದವರನ್ನು ಕೈ ಬಿಡಿ. 32 ಹೊಸಬರಿಗೆ ಸಂಪುಟದಲ್ಲಿ ಅವಕಾಶ ಕೊಡಿ ಅಂತ …
Read More »ಪ್ರಾಣ ಉಳಿಸೋ ಸಂಜೀವಿನಿ, ಜೀವಾಮೃತ ಅಂತೆಲ್ಲಾ ಕರೆಸಿಕೊಳ್ತಿದ್ದ ವ್ಯಾಕ್ಸಿನ್‍ಗೆ ಡಿಮ್ಯಾಂಡೇ ಇಲ್ಲ.
ಬೆಂಗಳೂರು: ಆಬಾಲ ವೃದ್ಧರಾದಿಯಾಗಿ ಎಲ್ಲರನ್ನೂ ಹಿಂಡಿ ಹಿಪ್ಪೆ ಮಾಡಿರೋ ‘ಚೀನಿ ವೈರಸ್’ ಕೊರೊನಾಗೆ ಇಷ್ಟು ದಿನ ವ್ಯಾಕ್ಸಿನ್ ಬಂದ್ರೆ ಸಾಕಪ್ಪಾ ಅಂತ ಜನ ಕಾಯುತ್ತಿದ್ದರು. ಆದ್ರೆ ಕೊವಿಶೀಲ್ಡ್ ವ್ಯಾಕ್ಸಿನ್ ವಿತರಣೆಯ ಮಹಾಯಜ್ಞಕ್ಕೆ ಚಾಲನೆ ಸಿಕ್ಕು ನಾಲ್ಕನೇ ದಿನ ಆದರೂ ಟಾರ್ಗೆಟ್ ರೀಚ್ ಆಗೋಕೆ ಒದ್ದಾಡುವಂತಾಗಿದೆ. ಪ್ರಾಣ ಉಳಿಸೋ ಸಂಜೀವಿನಿ, ಜೀವಾಮೃತ ಅಂತೆಲ್ಲಾ ಕರೆಸಿಕೊಳ್ತಿದ್ದ ವ್ಯಾಕ್ಸಿನ್‍ಗೆ ಡಿಮ್ಯಾಂಡೇ ಇಲ್ಲ. ರಾಜ್ಯವೂ ಸೇರಿದಂತೆ ದೇಶಾದ್ಯಂತ ಮೊದಲ ಹಂತದ ಕೊರೋನಾ ವಾರಿಯರ್ಸ್ ವ್ಯಾಕ್ಸಿನೇಷನ್‍ಗೆ ನಿರೀಕ್ಷಿತ …
Read More »