Breaking News

ಬೆಂಗಳೂರು

ನರ್ಸಿಂಗ್‌: ಸಿಗದ ಆನ್‌ಲೈನ್‌ ಅರ್ಜಿ, ‘ಸರ್ಕಾರಿ ಕೋಟ’ ವಿದ್ಯಾರ್ಥಿಗಳಿಗೆ ಅನ್ಯಾಯ!

ಬೆಂಗಳೂರು: ವೈದ್ಯಕೀಯ ಶಿಕ್ಷಣ ಇಲಾಖೆಯು ನರ್ಸಿಂಗ್‌ ಕೋರ್ಸ್‌ಗ ಳಿಗಾಗಿ ‘ಸರ್ಕಾರಿ ಕೋಟಾ’ದಡಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆದರೆ, ಅರ್ಜಿ ಸಲ್ಲಿಕೆಗೆ ಎರಡೇ ದಿನಗಳು ಬಾಕಿ ಉಳಿದಿದ್ದರೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ (kea.kar.nic.in) ಆನ್‌ಲೈನ್‌ ಅರ್ಜಿ ನಮೂನೆ, ಮಾಹಿತಿ ಪತ್ರ ಸೇರಿ ಯಾವುದೂ ಲಭ್ಯವಿಲ್ಲ! ಇದರಿಂದ ನರ್ಸಿಂಗ್‌ ಕೋರ್ಸ್‌ಗಳಿಗೆ ದಾಖಲಾಗಬೇಕು ಎಂದು ಬಯಸಿರುವ ರಾಜ್ಯದ ಗ್ರಾಮಾಂತರ ಪ್ರದೇಶದ ಸಾವಿರಾರು ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ. ಪರೀಕ್ಷಾ ಪ್ರಾಧಿಕಾರದ ಸಿಬ್ಬಂದಿ ತಮ್ಮ ಅಳಲಿಗೆ ಕಿವಿಗೊಡುತ್ತಿಲ್ಲ …

Read More »

ಮತ್ತೆ 10 ದಿನ ಪ್ರಕೃತಿ ಚಿಕಿತ್ಸೆ ಕೇಂದ್ರ ಸೇರಲಿದ್ದಾರೆ ಸಿದ್ದರಾಮಯ್ಯ..!

ಬೆಂಗಳೂರು, ಫೆ.10- ವಿಧಾನ ಮಂಡಲ ಅವೇಶನದ ಬಳಿಕ ಪಕ್ಷ ಸಂಘಟನೆಗಾಗಿ ರಾಜ್ಯ ಪ್ರವಾಸ ಕೈಗೊಳ್ಳಲಿರುವ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅದಕ್ಕೂ ಮೊದಲು ಸದೃಢ ಆರೋಗ್ಯಕ್ಕಾಗಿ 10 ದಿನಗಳ ಕಾಲ ಧರ್ಮಸ್ಥಳದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯಲು ಮುಂದಾಗಿದ್ದಾರೆ. ಇಂದು ಸಂಜೆಯಿಂದ ಎರಡು ದಿನಗಳ ಕಾಲ ಸ್ವಕ್ಷೇತ್ರ ಬಾದಾಮಿಯಲ್ಲಿ ಪ್ರವಾಸ ನಡೆಸಲಿರುವ ಸಿದ್ದರಾಮಯ್ಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಅನಂತರ ಫೆ.25ರಿಂದ 10 ದಿನಗಳ ಕಾಲ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾ …

Read More »

ಸಿಐಡಿ ಡಿಐಜಿ ದಿಲೀಪ್ ವಿರುದ್ಧಲೈಂಗಿಕ ಕಿರುಕುಳ ಆರೋಪ

ಬೆಂಗಳೂರು: ಸಿಐಡಿ ಡಿಐಜಿ ದಿಲೀಪ್ ವಿರುದ್ಧ ಪ್ರತಿಷ್ಠಿತ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಕಂಪನಿಯ ಮಹಿಳಾ ಉದ್ಯೋಗಿ ಲೈಂಗಿಕ ಕಿರುಕುಳ ಆರೋಪ ಮಾಡಿದ್ದು, ಈ ಸಂಬಂಧ ಮಹಿಳಾ ಉದ್ಯೋಗಿ ಗೃಹ ಇಲಾಖೆಗೆ ದೂರು ನೀಡಿದ್ದಾರೆ. ಸಿಐಡಿ ಡಿಐಜಿ ದಿಲೀಪ್, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾಗಿದ್ದ ಸಂದರ್ಭದಲ್ಲಿ ಮಹಿಳೆ ಪ್ರತಿಷ್ಠಿತ ಸಾರಿಗೆ ಮತ್ತು ಲಾಜೆಸ್ಟಿಕ್ ಸಮೂಹ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ಕಳೆದ ನವೆಂಬರ್ ಹಾಗೂ ಡಿಸೆಂಬರ್ ನಲ್ಲಿ ಐಟಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇನ್ನೋರ್ವ …

Read More »

ಚಂದ್ರಶೇಖರ್ ಕಂಬಾರ ಅವರಿಗೆ ಸಿಎಂ ಬಿಎಸ್‍ವೈ ಸನ್ಮಾನ

ಬೆಂಗಳೂರು: ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆಯಾಗಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಚಂದ್ರಶೇಖರ್ ಕಂಬಾರ ಅವರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಅಭಿನಂದಿಸಿ ಸನ್ಮಾನಿಸಿದರು. ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ರಾಜ್ಯದ 5 ಮಂದಿ ಸೇರಿದಂತೆ ಒಟ್ಟು 119 ಮಂದಿಗೆ ಪದ್ಮ ಪ್ರಶಸ್ತಿ ಸಿಗಲಿದೆ. ಖ್ಯಾತ ಗಾಯಕ ಎಸ್‍ಪಿ ಬಾಲಸುಬ್ರಹ್ಮಣ್ಯಂ ಅವರು ಮರಣೋತ್ತರ ಪದ್ಮ ವಿಭೂಷಣ ಗೌರವಕ್ಕೆ ಪಾತ್ರವಾಗಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಬಿಎಂ ಹೆಗ್ಡೆ …

Read More »

ನಮ್ಮ ಸರ್ಕಾರದ ಕಾಲದಲ್ಲಿ ಸಾಲ ಹೆಚ್ಚಾಗಿತ್ತು ಎಂಬ ಹಳೆ ಸುಳ್ಳನ್ನು ಬಿಜೆಪಿ ಹೊಸರಾಗದಲ್ಲಿ ಹೇಳುತ್ತಿದೆ.

ನಮ್ಮ ಸರ್ಕಾರದ ಕಾಲದಲ್ಲಿ ಸಾಲ ಹೆಚ್ಚಾಗಿತ್ತು ಎಂಬ ಹಳೆ ಸುಳ್ಳನ್ನು ಬಿಜೆಪಿ ಹೊಸರಾಗದಲ್ಲಿ ಹೇಳುತ್ತಿದೆ. ಈ ರೀತಿ ಸುಳ್ಳು ಹೇಳಿ ಜನರೆದುರು ಬೆತ್ತಲೆ ಆಗೋದನ್ನು ತಪ್ಪಿಸಲು ಬಿಜೆಪಿ ತನ್ನ ಸೋಷಿಯಲ್ ಮೀಡಿಯಾ ಉಸ್ತುವಾರಿಗಳಿಗೆ ಸಾರ್ವಜನಿಕ ಹಣಕಾಸು ನಿರ್ವಹಣೆಯ ಬಗ್ಗೆ ತರಬೇತಿ ಕೊಡುವುದು ಒಳ್ಳೆಯದು. ನಮ್ಮ ಸರ್ಕಾರದ ಕೊನೆ ವರ್ಷ(2017-18) ಪಡೆದಿದ್ದ ಸಾಲ ಕೇವಲ ರೂ.35,000 ಕೋಟಿ. 2020-21ರ ಪ್ರಸಕ್ತ ಹಣಕಾಸು ವರ್ಷದಲ್ಲಿ ಬಿಜೆಪಿ ಸರ್ಕಾರ ಮಾಡಿರುವ ಸಾಲ ರೂ.90,000 ಕೋಟಿ, …

Read More »

ಭಗವಾನ್ ಮುಖಕ್ಕೆ ಮಸಿ ಬಳಿದ ವಕೀಲೆ ಮೀರಾ ರಾಘವೇಂದ್ರ ಗಡಿಪಾರಿಗೆ ಆಗ್ರಹ

  ರಾಮನಗರ : ಹಿರಿಯ ಸಾಹಿತಿ, ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ಮುಖಕ್ಕೆ ಮಸಿ ಬಳಿದ ಘಟನೆ ಖಂಡಿಸಿ ಪ್ರಗತಿಪರ ಹಾಗೂ ದಲಿತ ಸಮಾನ ಮನಸ್ಕರ ಒಕ್ಕೂಟದಿಂದ ಸೋಮವಾರ ಪ್ರತಿಭಟನೆ ನಡೆಸಿದರು. ವಕೀಲೆ ಮೀರಾ ರಾಘವೇಂದ್ರ ಅವರ ಗಡಿಪಾರಿಗೆ ಆಗ್ರಹಿಸಿದರು. ಇಲ್ಲಿನ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪ್ರತಿಭಟನೆ ಪ್ರಾರಂಭಿಸಿದರು.ಪ್ರೊ. ಕೆ. ಎಸ್. ಭಗವಾನ್ ಮುಖಕ್ಕೆ ಮಸಿ‌ ಬಳಿದ ವಕೀಲೆ ವೀರಾ ರಾಘುವೇಂದ್ರ‌ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶವನ್ನು ವ್ಯಕ್ತಪಡಿಸಿದರು. ದೇಶದ ಸಂವಿಧಾನದ …

Read More »

ತಮಿಳು, ತೆಲುಗಿನಿಂದಾಗಿ ಕನ್ನಡ ಚಿತ್ರರಂಗ ಉದ್ದಾರ ಆಗಿಲ್ಲ: ಸುದೀಪ್ ಖಡಕ್ ಮಾತು

ಬೆಂಗಳೂರು: ಬೇರೆ ಭಾಷೆಯಿಂದಾಗಿ ನಮ್ಮ ಚಿತ್ರರಂಗ ಇತ್ತೀಚೆಗಿನ ದಿನಗಳಲ್ಲಿ ಬೇರೆ ಲೆವೆಲ್ ಗೆ ಹೋಗಿಲ್ಲ. ಕನ್ನಡಕ್ಕೆ ಕನ್ನಡದ್ದೇ ಆದ ನೆಲೆ, ಸ್ಥಾನ-ಮಾನವಿದೆ ಎಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೇಳಿದ್ದಾರೆ. ತಮ್ಮ ಚಿತ್ರಜೀವನಕ್ಕೆ 25 ವರ್ಷ ತುಂಬಿದ ಹಿನ್ನಲೆಯಲ್ಲಿ ಮಾಧ‍್ಯಮಗಳೊಂದಿಗೆ ಮಾತನಾಡಿದ ಸುದೀಪ್, ಕನ್ನಡ ಸಿನಿಮಾ ಈಗ ಬೇರೆ ಭಾಷೆಗಳಲ್ಲೂ ಮಿಂಚುತ್ತಿದೆ. ಇದರಿಂದಾಗಿ ನಮ್ಮ ಸಿನಿಮಾದ ಲೆವೆಲ್ ಬೇರೆಯಾಗಿದೆ ಎಂದು ನಿಮಗನಿಸುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು ‘ತಮಿಳು, ತೆಲುಗು, …

Read More »

ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದ ನಟಿ ಅಮೂಲ್ಯ ದಂಪತಿ

ಸ್ಯಾಂಡಲ್ ವುಡ್ ನ ಗೋಲ್ಡನ್ ಕ್ವೀನ್ ನಟಿ ಅಮೂಲ್ಯ ಸದ್ಯ ಸಿನಿಮಾರಂಗದಿಂದ ದೂರ ಉಳಿದ್ದರೂ ಸಹ ಆಗಾಗ ಸುದ್ದಿಯಲ್ಲಿರುತ್ತಾರೆ. ತನ್ನ ಮಾವನ ಜೊತೆ ರಾಜಕೀಯ ಕೆಲಸಗಳಲ್ಲಿ ಗುರುತಿಸಿಕೊಳ್ಳುವ ಅಮೂಲ್ಯ ಆಗಾಗ ರಾಜಕೀಯ ವಿಚಾರಕ್ಕೆ ಸದ್ದು ಮಾಡುತ್ತಿರುತ್ತಾರೆ. ಮದುವೆ ಬಳಿಕ ಅಮೂಲ್ಯ ಮತ್ತೆ ಬಣ್ಣ ಹಚ್ಚಿಲ್ಲ. ಅಮೂಲ್ಯ ಮತ್ತೆ ಸಿನಿಮಾ ಮಾಡುತ್ತಾರೆ ಎನ್ನುವ ಮಾತುಗಳು ಆಗಾಗ ಕೇಳಿಬಂದರೂ ಸಹ ಇದುವರೆಗೂ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿಲ್ಲ. ಪತಿ, ಸಂಸಾರ ಅಂತ ಸಂತೋಷದ ಜೀವನ …

Read More »

ಗೋಹತ್ಯೆ ನಿಷೇಧ ಪ್ರಶ್ನಿಸಿ ಹೈಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿ ಫೆ.26ಕ್ಕೆ ವಿಚಾರಣೆಗೆ: ಖಾಸಿಮ್ ಇಜಾಝ್ ಖುರೇಶಿ

ಬೆಂಗಳೂರು, ಫೆ.7: ರಾಜ್ಯ ಸರಕಾರ ಜಾರಿಗೆ ತಂದಿರುವ ವಿವಾದಿತ ಗೋಹತ್ಯೆ ನಿಷೇಧ ಕಾನೂನು ಪ್ರಶ್ನಿಸಿ ಜಮೀಯ್ಯತುಲ್ ಖುರೇಶ್ ಬೀಫ್ ಮರ್ಚೆಂಟ್ ಅಸೋಸಿಯೇಶನ್ ವತಿಯಿಂದ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಮುಖ್ಯ ನ್ಯಾಯಮೂರ್ತಿ ನೇತೃತ್ವದ ದ್ವಿಸದಸ್ಯ ಪೀಠ ನಮ್ಮ ಅರ್ಜಿಯನ್ನು ಫೆ.26ರಂದು ವಿಚಾರಣೆ ನಡೆಸಲಿದೆ ಎಂದು ಅಸೋಸಿಯೇಶನ್ ಅಧ್ಯಕ್ಷ ಖಾಸಿಮ್ ಇಜಾಝ್ ಖುರೇಶಿ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮಕುಮಾರ್ ನಮ್ಮ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡನೆ …

Read More »

ಸರಕಾರಿ ಉದ್ಯೋಗಕ್ಕೆ ಕಾದವರಿಗೆ ಗುಡ್ ನ್ಯೂಸ್

ಬೆಂಗಳೂರು : ರಾಜ್ಯ ಸರ್ಕಾರವು ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ವಿವಿಧ ಇಲಾಖೆಗಳ ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ಗ್ರೀನ್ ಸಿಗ್ನಲ್ ನೀಡಿದೆ. ಪ್ರಸ್ತಾವಿತ ನೇಮಕ ಪ್ರಕ್ರಿಯೆ ಪುನರಾರಂಭಕ್ಕೆ ಆರ್ಥಿಕ ಇಲಾಖೆ ಒಪ್ಪಿಗೆ ಸೂಚಿಸಿದೆ. ಕರೊನಾ ಕಾರಣಕ್ಕೆ ತಲೆದೂರಿದ ಆರ್ಥಿಕ ಸಂಕಷ್ಟ ಸರಿದೂಗಿಸಿ ಸುಸ್ಥಿತಿಗೆ ತರಲೆಂದು 2020-21 ನೇ ಸಾಲಿನ ಎಲ್ಲ ನೇರ ನೇಮಕ ಹುದ್ದೆಗಳ ಭರ್ತಿ ತಡೆಹಿಡಿಯಲಾಗಿತ್ತು. ಅನುಕಂಪದ ಆಧಾರದ ಮೇಲೆ ನೇಮಕವಾದ ಅಭ್ಯರ್ಥಿಗಳಿಗೆ ಷರತ್ತುಬದ್ಧ ನೇಮಕ ನೀಡಲು ಅಸ್ತು …

Read More »