Breaking News

ಬೆಂಗಳೂರು

ನನಗೆ ಯುವತಿ ಪರಿಚಯವೇ ಇಲ್ಲ, ಯಾವುದೇ ಸಂಪರ್ಕವೂ ಇಲ್ಲ – ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಳ್ಳಿ

ಬೆಂಗಳೂರು : ನನಗೆ ಯುವತಿ ಪರಿಚಯವೇ ಇಲ್ಲ, ಯಾವುದೇ ಸಂಪರ್ಕವೂ ಇಲ್ಲ. ನನಗೆ ಸಂತ್ರಸ್ತ ಯುವತಿಯ ಕುಟುಂಬದ ಸದಸ್ಯರೊಬ್ಬರು ಪರಿಚಯ. ಅವರೇ ನನಗೆ ಸಿಡಿ ಕೊಟ್ಟಿದ್ದಾಗಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಳ್ಳಿ ತಿಳಿಸಿದ್ದಾರೆ.   ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಸಂಬಂಧ ಇಂದು ವಿಚಾರಣೆಗೆ ದೂರುದಾರ ದಿನೇಶ್ ಕಲ್ಲಳ್ಳಿ ಹಾಜರಾದರು. ಇಂತಹ ಅವರನ್ನು ಡಿಸಿಪಿ ಅನುಚೇತ್ ನೇತೃತ್ವದಲ್ಲಿ ವಿಚಾರಣೆ ನಡೆಸಲಾಯಿತು. ಸತತ 4 ಗಂಟೆಗಳ …

Read More »

ಸಾರಿಗೆ ಸಂಸ್ಥೆಗೆ 4 ಸಾವಿರ ಕೋಟಿ ರೂಪಾಯಿಗಿಂತ ಹೆಚ್ಚು ನಷ್ಟ: ಡಿಸಿಎಂ ಲಕ್ಷ್ಮಣ್ ಸವದಿ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದಾಗಿ ಸಾರಿಗೆ ಸಂಸ್ಥೆಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, 4 ಸಾವಿರ ಕೋಟಿ ರೂ ಗೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ವಿಧಾನಪರಿಷತ್ ನಲ್ಲಿಂದು ತಿಳಿಸಿದ್ದಾರೆ. ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ನ ಕೆ.ಟಿ ಶ್ರೀಕಂಠೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ 4 ಸಾರಿಗೆ ನಿಗಮಗಳಿಗೆ 4 ಸಾವಿರ ಕೋಟಿಗೂ ಅಧಿಕ ನಷ್ಟವಾಗಿದೆ. ಈ ಪೈಕಿ 2,980 ಕೋಟಿ ರೂ. ನಿವ್ವಳ ಆದಾಯವೇ …

Read More »

ಸ್ಯಾಟಲೈಟ್ ಬಸ್ ನಿಲ್ದಾಣಗಳ ನಿರ್ಮಾಣಕ್ಕೆ ಆದ್ಯತೆ :ಸಾರಿಗೆ ಸಚಿವ ಲಕ್ಷ್ಮಣ ಸವದಿ

ಬೆಂಗಳೂರು : ರಾಜ್ಯದ ಬಸ್ ನಿಲ್ದಾಣಗಳಲ್ಲಿ ಮಹಿಳಾ ವಿಶ್ರಾಂತಿ ಗೃಹ ನಿರ್ಮಾಣ ಮತ್ತು ಸ್ಯಾಟಲೈಟ್ ಬಸ್ ನಿಲ್ದಾಣ ಸ್ಥಾಪನೆಗೆ ರಾಜ್ಯ ಸರ್ಕಾರ ಆದ್ಯತೆ ನೀಡಲಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು. ವಿಧಾನಪರಿಷತ್​​ನ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಶ್ರೀಕಂಠೇಗೌಡ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ 165 ಬಸ್ ನಿಲ್ದಾಣಗಳ ಪೈಕಿ 66 ನಿಲ್ದಾಣಗಳಲ್ಲಿ ಮಹಿಳಾ ವಿಶ್ರಾಂತಿ ಕೊಠಡಿ ಇಲ್ಲ. ಅಲ್ಲಿ ಆದಷ್ಟು ಬೇಗ ವಿಶ್ರಾಂತಿ ಗೃಹ ನಿರ್ಮಿಸಲಾಗುತ್ತದೆ ಎಂದರು. …

Read More »

ಡ್ರಗ್ಸ್​ ಪ್ರಕರಣ: ಬಿಗ್​ಬಾಸ್​​ ಸ್ಪರ್ಧಿ ಮಸ್ತಾನ್​ ಮನೆ ಮೇಲೆ ದಾಳಿ, ವಶಕ್ಕೆ

ಬೆಂಗಳೂರು: ನಗರದ ಅಪಾರ್ಟ್‌ಮೆಂಟ್ ಸಮುಚ್ಚಯವೊಂದರಲ್ಲಿ ಡ್ರಗ್ಸ್ ಪಾರ್ಟಿ‌ ಆಯೋಜಿಸಿ‌ ಉದ್ಯಮಿಗಳಿಬ್ಬರು ಸಿಕ್ಕಿಬಿದ್ದ ಪ್ರಕರಣದಲ್ಲಿ ಭಾಗಿಯಾದ ಆರೋಪದಡಿ‌ ಬಿಗ್‌ಬಾಸ್ ರಿಯಾಲಿಟಿ ಶೋ ಸ್ಪರ್ಧಿ‌ ಮಸ್ತಾನ್ ಚಂದ್ರ ಮನೆ ಮೇಲೆ‌ ಪೊಲೀಸರು ಶುಕ್ರವಾರ ದಾಳಿ ಮಾಡಿದ್ದಾರೆ. ಬಾಣಸವಾಡಿ ಉಪವಿಭಾಗದ ಎಸಿಪಿ ನಿಂಗಪ್ಪ ಸಕ್ರಿ ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಸಂಜಯನಗರದಲ್ಲಿರುವ ಮನೆಯಲ್ಲಿ ಪರಿಶೀಲನೆ ನಡೆಸಿದ ಬಳಿಕ ಮಸ್ತಾನ್​ ಅವರನ್ನು ವಶಕ್ಕೆ ಪಡೆದ ಪೊಲೀಸರು, ಠಾಣೆಗೆ ಕರೆದೊಯ್ದಿದ್ದಾರೆ. ಇತ್ತೀಚೆಗಷ್ಟೇ ಪ್ರಕರಣದಲ್ಲಿ ನೈಜೀರಿಯಾ ಪ್ರಜೆಯೊಬ್ಬನನ್ನು …

Read More »

ರಮೇಶ್ ಜಾರಕಿಹೊಳಿಯವರಿಂದ ತೆರವಾದ ಸ್ಥಾನವನ್ನ ಅವರ ಕುಟುಂಬಸ್ಥರಿಗೆ ಕೊಡಬೇಕು,: ಮಹೇಶ್ ಕುಮಟಳ್ಳಿ

ಬೆಂಗಳೂರು : ರಮೇಶ್ ಜಾರಕಿಹೊಳಿ ದೈವ ಭಕ್ತರು, ಆದ್ರೆ ಯಾಕೆ ಹೀಗೆ ಆಗಿದೆ ಗೊತ್ತಾಗ್ತಿಲ್ಲ ಎಂದು ಶಾಸಕ ಮಹೇಶ್ ಕುಮಟಳ್ಳಿ ಹೇಳಿಕೆ ನೀಡಿದ್ದಾರೆ. ವಿಡಿಯೋದಲ್ಲಿನ ದೃಶ್ಯಾವಳಿಗಳನ್ನ ನೋಡಿದ್ರೆ ಎಲ್ಲೂ ಬಲತ್ಕಾರದ ರೀತಿ ಗೊತ್ತಾಗ್ತಿಲ್ಲ. ಇದು ಪ್ರೀ ಪ್ಲಾನ್ ಅನ್ನೋದು ಗೊತ್ತಾಗ್ತಿದೆ. ಸಿಡಿ ಫೇಕ್ ಆಗಿರಲಿ ಅಥವಾ ಅವರಿಬ್ಬರು ಪ್ರಬುದ್ಧರಿದ್ದು ನಡೆದಿದ್ದೇ ಇರಲಿ, ಅದು ಸ್ವಯಂ ಪ್ರೇರಣೆ ಅನ್ನೋದನ್ನ ನಾವೂ ಗಮನಿಸಿದ್ದೇವೆ. ಹೀಗಾಗಿ ಇದು ಹನಿಟ್ರ್ಯಾಪ್ ಎಂದು ಹೇಳಿದ್ದಾರೆ. ಇನ್ನು ರಮೇಶ್ …

Read More »

ಪೆಟ್ರೋಲ್-ಡೀಸೆಲ್‌ನಿಂದ ರಾಜ್ಯಕ್ಕೆ ₹12,342 ಕೋಟಿ ತೆರಿಗೆ

ಬೆಂಗಳೂರು: ‘ಡೀಸೆಲ್‌ ಮತ್ತು ಪೆಟ್ರೋಲ್‌ನಿಂದ ರಾಜ್ಯ ಸರ್ಕಾರಕ್ಕೆ 2020-21ನೇ ಸಾಲಿನಲ್ಲಿ ಜನವರಿ ಅಂತ್ಯಕ್ಕೆ ₹12,432 ಕೋಟಿ ತೆರಿಗೆ ಬಂದಿದೆ’ ಎಂದು ರಾಜ್ಯ ಸರ್ಕಾರ ಹೇಳಿದೆ. ವಿಧಾನಪರಿಷತ್ತಿನಲ್ಲಿ ಕಾಂಗ್ರೆಸ್‌ನ ಪ್ರಕಾಶ್‌ ರಾಠೋಡ್‌ ಪ್ರಶ್ನೆ ಕೇಳಿದ್ದರು. ‘ದಕ್ಷಿಣದ ರಾಜ್ಯಗಳಿಗೆ ಹೋಲಿಸಿದಾಗ ಕೇರಳ ಬಿಟ್ಟು ಪೆಟ್ರೋಲ್‌, ಡೀಸೆಲ್‌ ಬೆಲೆ ನಮ್ಮ ರಾಜ್ಯದಲ್ಲಿಯೇ ಕಡಿಮೆ ಇದೆ. ಆದರೆ, ಈ ಮೂಲದಿಂದ ಕೇಂದ್ರ ಸರ್ಕಾರಕ್ಕೆ ಎಷ್ಟು ತೆರಿಗೆ ಬಂದಿದೆ ಎಂಬ ಮಾಹಿತಿ ಇಲ್ಲ’ ಎಂದು ಸಭಾ ನಾಯಕ …

Read More »

ಪಂಚಮಸಾಲಿ ಮೀಸಲಾತಿ ಹೋರಾಟ : ಸಮಾಜದ ಶಾಸಕರು ಸದನದ ಬಾವಿಗಿಳಿದು ಹೋರಾಟ ಮಾಡುವಂತೆ ಸ್ವಾಮೀಜಿ ಕರೆ

ಬೆಂಗಳೂರು : ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿದಂತೆ ಸಮಾಜದ ಶಾಸಕರು ಸದನದ ಬಾವಿಗಿಳಿದು ಹೋರಾಟ ಮಾಡುವಂತೆ ಪಂಚಮಸಾಲಿ ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.   ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿಗಳು, ಪಂಚಮಸಾಲಿ ಸಮಾಜದ 2 ಎ ಮೀಸಲಾತಿ ಸಂಬಂಧಿಸಿದಂತೆ ಬಿಜೆಪಿ ಶಾಸಕ ಯತ್ನಾಳ್ ಗೆ ಸಮಾಜದ 22 ಶಾಸಕಕರು ಬೆಂಬಲ ನೀಡಬೇಕು. ಇಲ್ಲದಿದ್ದರೆ ನಾಳೆ ಸಮಾಜದ 22 ಶಾಸಕರನ್ನು ಜನರು ನಿರ್ಲಕ್ಷ್ಯ ಮಾಡುತ್ತಾರೆ.   …

Read More »

ಬಹಳ ದಿನಗಳ ನಂತರ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ ಸಿ.ಎಂ. ಇಬ್ರಾಹಿಂ!

ಬೆಂಗಳೂರು: ಬಹಳ ದಿನಗಳ ನಂತರ ಮಾಜಿ ಸಚಿವ ಸಿ.ಎಂ ಇಬ್ರಾಹಿಂ ಅವರು ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದರು. ಕಾಂಗ್ರೆಸ್ ನಲ್ಲಿರುವ ಸಿ ಎಂ ಇಬ್ರಾಹಿಂ ಅವರು ಜೆಡಿಎಸ್ ಸೇರಲಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ ಸಿದ್ದರಾಮಯ್ಯ ಭೇಟಿ ಕುತೂಹಲ ಮೂಡಿಸಿದೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಎಂ ಇಬ್ರಾಹಿಂ, ಇಂದು ಶುಭ ಶುಕ್ರವಾರ, ಎಲ್ಲವೂ ಒಳ್ಳೆಯದಾಗುತ್ತದೆ ಎಂದರು. ಜೆಡಿಎಸ್ ಗೆ ಸೇರುವ ವಿಚಾರವಾಗಿ ಮಾತನಾಡಿದ ಅವರು, ಅದು …

Read More »

ಸೆಲೆಬ್ರಿಟಿಗಳಿಗೆ ಡ್ರಗ್ ಪೂರೈಸುತ್ತಿದ್ದ ಆರೋಪ: ಮಸ್ತಾನ್ ಚಂದ್ರ ಸೇರಿದಂತೆ ನೈಜೀರಿಯಾ ಮೂಲದ ಪ್ರಜೆ ಬಂಧನ

ಬೆಂಗಳೂರು: ಸೆಲೆಬ್ರಿಟಿಗಳಿಗೆ ಮಾದಕ ವಸ್ತು ಪೂರೈಸುತ್ತಿದ್ದ ಆರೋಪದ ಮೇಲೆ ಮಸ್ತಾನ್ ಚಂದ್ರ ನೈಜೀರಿಯಾ ಮೂಲದ ವ್ಯಕ್ತಿಯನ್ನು ನಗರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಗೋವಿಂದಪುರ ಬಳಿಯ ಆತನ ನಿವಾಸದಿಂದ ಮಸ್ತಾನ್ ಚಂದ್ರನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈತ ಖಾಸಗಿ ವಾಹಿನಿಯ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದು, ಕೆಲ ಕನ್ನಡ ಸಿನೆಮಾಗಳಲ್ಲಿ ಕೂಡ ನಟಿಸಿದ್ದ ಎಂದು ತಿಳಿದುಬಂದಿದೆ. ಈ ಮೂಲಕ ಅಕ್ರಮವಾಗಿ ಮಾದಕ ವಸ್ತುಗಳ ಸಂಗ್ರಹ, ಮಾರಾಟ, ಕಳ್ಳಸಾಗಣೆ, ಸೇವನೆ …

Read More »

ಬಿಗ್ ಬಾಸ್ʼ ಖ್ಯಾತಿಯ ಮಸ್ತಾನ್ ಪೊಲೀಸ್ ವಶಕ್ಕೆ

ಬೆಂಗಳೂರು: ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳಿಗೆ ಡ್ರಗ್ ಪೂರೈಕೆ ಮಾಡುತ್ತಿದ್ದ ʼಬಿಗ್ ಬಾಸ್ʼ ಖ್ಯಾತಿಯ ಮಸ್ತಾನ್ ಚಂದ್ರ ನಿವಾಸದ ಮೇಲೆ ದಾಳಿ ನಡೆಸಿರುವ ಪೊಲೀಸರು ಮಸ್ತಾನ್ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಡ್ರಗ್ಸ್ ಪ್ರಕರಣ ಸಂಬಂಧ ಬಂಧನಕ್ಕೀಡಾಗಿದ್ದ ನೈಜಿರಿಯನ್ ಪ್ರಜೆ ವಿಚಾರಣೆ ವೇಳೆ ಮಸ್ತಾನ್ ಹೆಸರು ಬಾಯ್ಬಿಟ್ಟಿದ್ದ. ಈ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಬಾಣಸವಾಡಿ ಎಸಿಪಿ ಸಕ್ರಿ ನೇತೃತ್ವದಲ್ಲಿ ಮಸ್ತಾನ್ ನಿವಾಸದ ಮೇಲೆ ದಾಳಿ ನಡೆಸಲಾಗಿತ್ತು. ಪ್ರಮುಖ ಡ್ರಗ್ ಪೆಡ್ಲರ್ ಗಳ ಜೊತೆ …

Read More »