Breaking News

ಬೆಂಗಳೂರು

ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಧಾರ್ಮಿಕ ಕಟ್ಟಡ ಕಟ್ಟಲು ಯಾವ ಧರ್ಮ ಹೇಳುತ್ತದೆ? : ಹೈಕೋರ್ಟ್‌

ಬೆಂಗಳೂರು: ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಧಾರ್ಮಿಕ ಕಟ್ಟಡ ನಿರ್ಮಿಸಿ ಎಂದು ಯಾವ ಧರ್ಮ ಹೇಳುತ್ತದೆ ಎಂದು ಪ್ರಶ್ನಿಸಿರುವ ಹೈಕೋರ್ಟ್‌, ದೇವರು-ಧರ್ಮದ ಹೆಸರಲ್ಲಿ ಸಾರ್ವಜನಿಕ ಆಸ್ತಿ ದುರ್ಬಳಕೆ ಮಾಡಿಕೊಳ್ಳುವುದನ್ನು ನ್ಯಾಯಾಲಯ ಸಹಿಸುವುದಿಲ್ಲ ಎಂದು ಹೈಕೋರ್ಟ್‌ ಹೇಳಿದೆ. ಕೋಲಾರದ ಚನ್ನಸಂದ್ರ ಹಾಗೂ ಮಂಗಸಂದ್ರ ಗ್ರಾಮಗಳಲ್ಲಿನ ಸರ್ಕಾರಿ ಗೋಮಾಳಗಳ ಜಮೀನಿನಲ್ಲಿ ಅನಧಿಕೃತವಾಗಿ ದೇವಸ್ಥಾನ, ಚರ್ಚ್‌ ಹಾಗೂ ಮಿನಾರ್‌ ನಿರ್ಮಾಣ ಮಾಡಿದ್ದು, ಅವುಗಳನ್ನು ತೆರವುಗೊಳಿಸಬೇಕು ಎಂದು ಕೋರಿ ಸ್ಥಳೀಯ ನಿವಾಸಿ ಸಿದ್ದನಹಳ್ಳಿಯ ಕಿಶೋರ್‌ ರಾಮಮೂರ್ತಿ ಸಲ್ಲಿಸಿರುವ …

Read More »

ಈ ಸಾಲಿನ ಬಜೆಟ್ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಲಿದೆ: ಸಿದ್ದರಾಮಯ್ಯ

ಬೆಂಗಳೂರು: ಪ್ರಸಕ್ತ ಸಾಲಿನ ಬಜೆಟ್ ರಾಜ್ಯದ ಅಭಿವೃದ್ಧಿಗೆ ಸಂಪೂರ್ಣ ಮಾರಕವಾಗಿದೆ. ಕಾರಣ ಈ ಸಾಲಿನಲ್ಲಿ ರಾಜಸ್ವ ಆದಾಯಕ್ಕಿಂತ ರಾಜಸ್ವ ಖರ್ಚು ಹೆಚ್ಚಾಗುವ ಮೂಲಕ ಮೊದಲನೇ ಬಾರಿಗೆ ರಾಜಸ್ವ ಖೋತಾ‌ ಅಥವಾ ರಾಜಸ್ವ ಕೊರತೆ ಉಂಟಾಗಿದೆ. 2004 ರ ನಂತರ ವಿತ್ತೀಯ ಹೊಣೆಗಾರಿಕೆ ನೀತಿಯನ್ನು ಕರ್ನಾಟಕ ಅಳವಡಿಸಿಕೊಂಡ ನಂತರದಲ್ಲಿ ಇಂಥದ್ದೊಂದು ರಾಜಸ್ವ ಕೊರತೆಯ ಬಜೆಟ್‌ ಈ ವರೆಗೆ ಮಂಡನೆಯಾಗಿರಲಿಲ್ಲ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. ವಿಧಾನಸಭೆಯಲ್ಲಿ ಬಜೆಟ್ …

Read More »

ಯುವತಿಯ ಪ್ರಿಯತಮ ಎಸ್‌ಐಟಿ ಮುಂದೆ ಹಾಜರಾಗಿ ಸತ್ಯ ಬಾಯಿ ಬಿಟ್ಟಿದ್ದಾನೆ…

ಬೆಂಗಳೂರು: ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ರಾಸಲೀಲೆಯ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿಯಲ್ಲಿರುವ ಯುವತಿಯ ಪ್ರಿಯತಮನನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಎಸ್‌ಐಟಿ ತನಿಖೆ ವೇಳೆ ಯುವತಿಯ ಪ್ರಿಯತಮ ಎಸ್‌ಐಟಿ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದಾನೆ. ಯುವತಿ ತನ್ನ ಪ್ರಿಯಕರನಿಗೆ ಸಿಡಿಯ ಕಥೆ ಹೇಳದೆಯೇ ಮಾಹಾಮೊಸ ಮಾಡಿದ್ದಾಳೆ ಎಂದು ಎಸ್‌ಐಟಿ ತನಿಖಾಧಿಕಾರಿಗಳ ಮುಂದೆ ಯುವತಿ ಪ್ರಿಯತಮ ಸತ್ಯ ಬಾಯಿ ಬಿಟ್ಟಿದ್ದಾನೆ. ಸಚಿವರೊಬ್ಬರಿಗೆ ವಂಚನೆ ಮಾಡುತ್ತಿರೋ ವಿಚಾರ ಪ್ರಿಯತಮನಿಗೆ ಗೊತ್ತಿತ್ತಂತೆ. ಆದರೆ ರಾಸಲೀಲೆ ಸಿಡಿ …

Read More »

CD ಪ್ರಕರಣ; ನೆರೆಯ 3 ರಾಜ್ಯಗಳಲ್ಲಿ ಆರೋಪಿಗಳ ಓಡಾಟ ಪತ್ತೆ ಹಚ್ಚಿದ SIT

ಬೆಂಗಳೂರು: ಮಾಜಿ ಸಚಿವರ CD ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್​​ಪಿನ್​​ಗಳಿಗಾಗಿ ಎಸ್​​ಐಟಿ ಅಧಿಕಾರಿಗಳು ಶೋಧಕಾರ್ಯ ಆರಂಭಿಸಿದ್ದಾರೆ. ಸದ್ಯ ಆರೋಪಿಗಳು ಮೊಬೈಲ್ ಸ್ವಿಚ್​ಆಫ್ ಮಾಡಿಕೊಂಡು ತಲೆ ಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಇಬ್ಬರು ಕಿಂಗ್​ಪಿನ್​ಗಳು ಒಟ್ಟಿಗೆ ಇರುವ ಬಗ್ಗೆ ಅಧಿಕಾರಿಗಳ ತನಿಖೆ ವೇಳೆ ಗೊತ್ತಾಗಿದೆ. ಸಿಡಿ ಲೀಕ್ ಮಾಡಿದ ಪ್ರಮುಖ ಕಿಂಗ್​ಪಿನ್ ಹಾಗೂ ರಷ್ಯಾ ವೆಬ್ ಸೈಟ್ ಮೂಲಕ ವಿಡಿಯೋ ಅಪ್​​ಲೋಡ್ ಮಾಡಿದ್ದ ಹ್ಯಾಕರ್ ಇಬ್ಬರು, ಸಿಡಿ ರಿಲೀಸ್ ಆದ ಬೆನ್ನಲ್ಲೇ ಮೊಬೈಲ್ ಸ್ವಿಚ್​ಆಫ್ …

Read More »

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾದ ಶಿವರಾಜ್ ಕುಮಾರ್

ಬೆಂಗಳೂರು: ಸ್ಯಾಂಡಲ್ ವುಡ್ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಸೋಮವಾರ ಭೇಟಿಯಾಗಿ ಮಾತುಕತೆ ನಡೆಸಿದರು. ಡಿ ಕೆ ಶಿವಕುಮಾರ್ ಅವರ ಸದಾಶಿವನಗರದ ನಿವಾಸದಲ್ಲಿ ಇಂದು ಬೆಳಗ್ಗೆ ಶಿವರಾಜ್ ಕುಮಾರ್ ಭೇಟಿಯಾದರು. ಜೆಡಿಎಸ್ ನಲ್ಲಿದ್ದ ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಯಾದ ಬೆನ್ನಲ್ಲೇ ಅವರ ಸಹೋದರಿ, ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಕೂಡಾ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎನ್ನುವ ಸುದ್ದಿಗಳ ನಡುವೆ …

Read More »

ಪಂಚಮಸಾಲಿ ಮೀಸಲಾತಿ ಹೋರಾಟ ತಾತ್ಕಾಲಿಕ ಮೊಟಕುಗೊಳಿಸಿ; ಸ್ವಾಮೀಜಿಗೆ ಶಾಸಕ ಯತ್ನಾಳ್ ಮನವಿ

ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟ ಮುಂದುವರೆದಿದೆ. ಈ ನಡುವೆ ಹೋರಾಟ ಕೈಬಿಡುವಂತೆ ಸ್ವತಃ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮನವಿ ಮಾಡಿದ್ದಾರೆ. ವಿಧಾನಸಭೆ ಕಲಾಪದಲ್ಲಿ ಶಾಸಕ ಯತ್ನಾಳ್, ಪಂಚಮಸಾಲಿ ಮೀಸಲಾತಿ ವಿಚಾರ ಪ್ರಸ್ತಾಪಿಸುತ್ತಿದ್ದಂತೆಯೇ ಎದ್ದು ನಿಂತ ಸಿಎಂ ಬಿ.ಎಸ್. ಯಡಿಯೂರಪ್ಪ ಮೀಸಲಾತಿಗೆ ಸಂಬಂಧಿಸಿದಂತೆ ಇನ್ನು 6 ತಿಂಗಳಲ್ಲಿ ಹಿಂದುಳಿದ ವರ್ಗದ ಆಯೋಗದ ವರದಿ, ಸಮಿತಿ ವರದಿ ತರಿಸಿಕೊಳ್ಳುತ್ತೇನೆ. ನಂತರ …

Read More »

ಸಿಡಿ ಡೀಲ್‌ ದುಡ್ಡಲ್ಲಿ ಐಶಾರಾಮಿ ಕಾರು, ಕಾಫಿ ತೋಟ ಖರೀದಿಸಲು ಹೊರಟಿದ್ದ ಪತ್ರಕರ್ತ!!

ಬೆಂಗಳೂರು: ರಮೇಶ್‌ ಜಾರಕಿಹೊಳಿ ಅಶ್ಲೀಲ ಸಿಡಿ ಹಗರಣ ಸಂಬಂಧ ಬಂಧಿತರಾಗಿರುವ ಪತ್ರಕರ್ತರಲ್ಲಿ ಒಬ್ಬನಾದ ತುಮಕೂರಿನ ಶಿರಾ ಮೂಲದ ಕಿಂಗ್​ಪಿನ್ ಸಿಡಿ ಡೀಲ್‌ ದುಡ್ಡಲ್ಲಿ ಎರಡು ಐಶಾರಾಮಿ ಕಾರು ಖರೀದಿಸಲು ಮುಂದಾಗಿದ್ದ ಎಂದು ತಿಳಿದುಬಂದಿದೆ. ಮಹೀಂದ್ರಾ ಎಕ್ಸ್‌ಯುವಿ-500 ಹಾಗೂ ಥಾರ್‌ ಜೀಪ್‌ ಖರೀದಸಲು ಆತ ಮುಂದಾಗಿದ್ದ ಎಂದು ಎಸ್‌ಐಟಿ ತನಿಖೆಗಳಿಂದ ತಿಳಿದುಬಂದಿದೆ. ಮಹೀಂದ್ರಾ ಕಾರು ಖರೀದಿಗೆ ಒಂದೂವರೆ ಲಕ್ಷ ಹಾಗೂ ಥಾರ್‌ ಜೀಪ್‌ಗಾಗಿ 25 ಸಾವಿರ ರೂ. ಅಡ್ವಾನ್ಸ್‌ ನೀಡಿದ್ದ ಎಂದು …

Read More »

ರಮೇಶ್ ಜಾರಕಿಹೊಳಿ ಎಫ್‌ಐಆರ್ ಎಸ್‌ಐಟಿಗೆ ವರ್ಗಾವಣೆ!

ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆ ಚುರುಕು ಪಡೆದುಕೊಂಡಿದೆ. ಎಸ್‌ಐಟಿ ತಂಡ ಸದಾಶಿವನಗರ ಠಾಣೆಯಲ್ಲಿ ದಾಖಲಾದ ಎಫ್‌ಐಆರ್ ತಮ್ಮ ಸುಪರ್ದಿಗೆ ಪಡೆದಿದ್ದು ಕಾನೂನಾತ್ಮಕವಾಗಿ ತನಿಖೆ ಕೈಗೆತ್ತಿಕೊಂಡಿದೆ‌. ಇದೇ ವೇಳೆ ಸಂತ್ರಸ್ತೆ ಸೇರಿ ಮೂವರಿಗೆ ಎಸ್‌ಐಟಿ ನೋಟಿಸ್ ನೀಡಿ ವಿಚಾರಣೆಗೆ ಬುಲಾವ್ ನೀಡಿದ್ದಾರೆ. ಸಿಡಿ ಪ್ರಕರಣದ ಸಂಬಂಧ ನಿನ್ನೆ ರಮೇಶ್ ಜಾರಕಿಹೊಳಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಿದ್ದರು. ಇಂದು ರಮೇಶ್ ಜಾರಕಿಹೊಳಿ ಎಫ್‌ಐಆರ್ ಎಸ್‌ಐಟಿ ತನಿಖೆಗೆ ವರ್ಗಾವಣೆ …

Read More »

ಮನೆ, ಕಟ್ಟಡ ನಿರ್ಮಿಸುವವರಿಗೆ ಸರ್ಕಾರದಿಂದ ಸಿಹಿ ಸುದ್ದಿ

ಬೆಂಗಳೂರು: ರಾಜ್ಯದ ನಗರ ಪ್ರದೇಶದಲ್ಲಿ ಕಟ್ಟಡ ನಕ್ಷೆ ಮಂಜೂರಾತಿ ಶುಲ್ಕವನ್ನು ನಗರಾಭಿವೃದ್ಧಿ ಇಲಾಖೆ ಇಳಿಕೆ ಮಾಡಲು ನಿರ್ಧರಿಸಿದ್ದು ಈ ಸಂಬಂಧ ಮಾರ್ಚ್ 10 ರಂದು ಕರಡು ಅಧಿಸೂಚನೆ ಪ್ರಕಟಿಸಲಾಗಿದೆ. ದರ ನಿಗದಿಗೆ ಈ ಹಿಂದಿನ ಪದ್ಧತಿಯನ್ನು ಕೈಬಿಡಲು ನಗರಾಭಿವೃದ್ಧಿ ಇಲಾಖೆ ನಿರ್ಧರಿಸಿದೆ. ಆಯಾ ಯೋಜನಾ ಪ್ರದೇಶಗಳಲ್ಲಿನ ಜನಸಂಖ್ಯೆ ಆಧರಿಸಿ ಪರಿಷ್ಕೃತ ದರ ನಿಗದಿ ಮಾಡಲಾಗಿದೆ. ಕಟ್ಟಡದ ಮಾರ್ಗಸೂಚಿ ದರದ ಒಟ್ಟು ಮೌಲ್ಯದ ಶೇಕಡಾ 0.1 ರಿಂದ ಶೇಕಡ 0.5 ರವರೆಗೆ …

Read More »

ಸಿ.ಡಿ.ಪ್ರಕರಣ: ಫೇಸ್‌ಬುಕ್ ಖಾತೆ ಅಳಿಸಿ ನಾಪತ್ತೆ; ಲಕ್ಷಗಟ್ಟಲೆ ಹಣ ವರ್ಗಾವಣೆ

ಬೆಂಗಳೂರು: ಸಿ.ಡಿ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎನ್ನಲಾದ ಯುವಕ, ತನ್ನ ಫೇಸ್‌ಬುಕ್‌ ಖಾತೆಯನ್ನು ಅಳಿಸಿ ನಾಪತ್ತೆಯಾಗಿದ್ದಾನೆ. ಆತ ಹಾಗೂ ಆತನ ಪರಿಚಯಸ್ಥರ ಖಾತೆಗೆ ಲಕ್ಷಗಟ್ಟಲೆ ಹಣ ವರ್ಗಾವಣೆ ಆಗಿದೆ. ಆತನ ಪತ್ನಿ ಹೆಸರಿನಲ್ಲಿ ಫಾರ್ಚ್ಯೂನರ್‌ ಕಾರು ಸಹ ಬುಕ್ ಆಗಿರುವುದು ಎಸ್‌ಐಟಿ ವಿಚಾರಣೆಯಿಂದ ಗೊತ್ತಾಗಿದೆ. ಸುದ್ದಿವಾಹಿನಿಗಳಲ್ಲಿ ವರದಿಗಾರನಾಗಿ ಕೆಲಸ ಮಾಡಿದ್ದ ಆತ, ಕಳೆದ ವರ್ಷ ಕೆಲಸ ಬಿಟ್ಟಿದ್ದ. ಪ್ರಭಾವಿ ರಾಜಕಾರಣಿಯೊಬ್ಬರ ಆಪ್ತನಾಗಿ ಗುರುತಿಸಿಕೊಂಡಿದ್ದ. ಇದೀಗ ಆತನಿಗಾಗಿ ಎಸ್‌ಐಟಿ ಅಧಿಕಾರಿಗಳು …

Read More »