Breaking News

ಬೆಂಗಳೂರು

ನಾಳೆ 4-6 ಗಂಟೆವರೆಗೆ ರಮೇಶ್ ಜಾರಕಿಹೊಳಿ ಸಿಡಿಸುವ ಮಹಾ ಬಾಂಬ್ ಮೇಲೆ ಎಲ್ಲರ ಚಿತ್ತ

ಬೆಂಗಳೂರು: ಸಿಡಿ ಲೇಡಿ ಎನ್ನಲಾದ ಯುವತಿ ಆಡಿಯೋದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೆಸರು ಪ್ರಸ್ತಾಪಿಸಿರುವ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಡಿ.ಕೆ.ಶಿವಕುಮಾರ್ ಗೆ ಒಳ್ಳೆಯದಾಗಲಿ, ಆಡಿಯೋದಲ್ಲಿ ಅವರ ಹೆಸರಿದ್ದ ಮಾತ್ರಕ್ಕೆ ಅವರು ಅಪರಾಧಿಯಲ್ಲ ಎಂದು ಹೇಳಿದ್ದಾರೆ. ಸಿಡಿಯಲ್ಲಿದ್ದ ಯುವತಿ ಆಡಿಯೋ ವೈರಲ್ ಹಿನ್ನೆಲೆಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ಡಿ.ಕೆ.ಶಿವಕುಮಾರ್ ನನ್ನ ಹಳೇ ಸ್ನೇಹಿತ. ಅವರಿಗೆ ಒಳ್ಳೆಯದಾಗಲಿ. ಆಡಿಯೋದಲ್ಲಿ ಹೆಸರಿದ್ದ ಮಾತ್ರಕ್ಕೆ ಅವರು ಆರೋಪಿಯಲ್ಲ. ಅವರು ಕೆಪಿಸಿಸಿ ಅಧ್ಯಕ್ಷ …

Read More »

ಹ್ಯಾಕರ್ ಕೈಯಲ್ಲಿ ಜಾರಕಿಹೊಳಿ : ಸಾಹುಕಾರನಿಗೆ ಖೆಡ್ಡಾ ತೊಡಿದ ಶ್ರವಣ್..!

ಬೆಂಗಳೂರು : ಯುವತಿಯನ್ನು ಬಳಸಿಕೊಂಡು ಜಾರಕಿಹೊಳಿಗೆ ಖೆಡ್ಡಾ ತೊಡಿದ ಶಂಕಿತ ಕಿಂಗ್ ಪಿನ್ ಗಳು ಮಾಡಿದ ಖತರ್ನಾಕ್ ಪ್ಲ್ಯಾನ್ ನಿಜಕ್ಕೂ ಅಚ್ಚರಿ ಮೂಡಿಸಿದೆ. ಸಮರ್ಪಕವಾಗಿ ತಂತ್ರಜ್ಞಾನ ಬಳಸಿಕೊಂಡ ಪ್ರಕರಣದ ಶಂಕಿತ ಕಿಂಗ್ ಪಿನ್ ಗಳಲ್ಲಿ ಒಬ್ಬನಾದ ಶ್ರವಣ್, ಯುವತಿಯ ಮೊಬೈಲ್ ಹ್ಯಾಕ್ ಮಾಡಿ ರಮೇಶ ಮತ್ತು ಸಿಡಿ ಲೇಡಿ ಮಾತನಾಡಿದ ವಾಟ್ಸ್ ಆಯಪ್ ಕಾಲ್ ರೆಕಾರ್ಡ್ ಮಾಡಿದ್ದಾರೆ. ಯುವತಿಯ ಮೊಬೈಲ್ ಗೆ ಸಾಫ್ಟ್ ವೇರ್ ಟೂಲ್ ಅಳವಡಿಸಿದ್ದ. ಫೋನ್ ಕಾಲ್ …

Read More »

ತಮ್ಮ ವಿರುದ್ದ ‘ಸಿಡಿ ಲೇಡಿ’ ಪೋಲಿಸ್ರಿಗೆ ದೂರು ನೀಡಿದ ಬಳಿಕ ರಮೇಶ್ ಜಾರಕಿ ಹೇಳಿದ್ದೇನು ಗೊತ್ತಾ?

ಬೆಂಗಳೂರು: ರಮೇಶ್​ ಜಾರಕಿಹೊಳಿ ಸಿಡಿ ಕೇಸ್​ನ ಯುವತಿ ಪರವಾಗಿ ವಕೀಲ ಜಗದೀಶ್​ ಎನ್ನುವವರು ಬೆಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದಾರೆ. ಈ ನಡುವೆ ಇಂದು ಬೆಳಗ್ಗೆ ಮೂರನೇ ವಿಡಿಯೋವನ್ನು ಯುವತಿ ಬಿಡುಗಡೆ ಮಾಡಿದ್ದಳು ಈ ವೇಳೆ ಆಕೆ ನಾನು 24 ದಿನದಿಂದ ನನಗೆ ಜೀವ ಬೆದರಿಕೆ ಇತ್ತು. ಈವಾಗ ನನಗೆ ಧೈರ್ಯ ಬಂದಿದೆ. ರಾಜ್ಯದ ಜನರು ನನಗೆ ಬೆಂಬಲ ನೀಡುತ್ತಿದ್ದಾರೆ. ಹೀಗಾಗಿ ಇಂದು ರಮೇಶ್ ಜಾರಕಿಹೊಳಿ ವಿರುದ್ಧ ದೂರು …

Read More »

CD ಪ್ರಕರಣ’ : ಯುವತಿ ಕಾನೂನಾತ್ಮಕವಾಗಿ ದೂರು ಕೊಡಲಿ : ಗೃಹ ಸಚಿವ ಬಸವರಾಜ ಬೊಮ್ಮಾಯಿ

ಬೆಂಗಳೂರು ; ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಸಿಡಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಸಿಡಿ ಲೇಡಿ ಇಂದು ಮೂರನೇ ವಿಡಿಯೋ ಬಿಡುಗಡೆ ಮಾಡಿದ್ದು, ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡುತ್ತೇನೆ ಎಂದು ಹೇಳಿದ್ದಾಳೆ.   ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಯುವತಿ ಕಾನೂನಾತ್ಮಕವಾಗಿ ದೂರು ಕೊಡಲಿ, ಯುವತಿಗೆ ಭದ್ರತೆ ಕೊಡಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದು ಹೇಳಿದ್ದಾರೆ. ಯುವತಿ ಕಾನೂನಾತ್ಮಕವಾಗಿ ದೂರು ಕೊಡಲಿ, ಯುವತಿಗೆ, …

Read More »

ಯುವತಿ, ಕೆಲಸ ಸಕ್ಸಸ್ ಆಗಿದೆ ಬಾ ಎಂದು ಶಂಕಿತ ಆರೋಪಿಯಾಗಿರುವ ಶ್ರವಣ್ ಗೆ ಹೇಳಿದ್ದಾರೆ. ಸದ್ಯ ಈ ವಿಡಿಯೋ ಎಸ್ ಐಟಿಗೆ ಲಭ್ಯವಾಗಿದೆ.

ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾಗಿರುವ ರಾಸಲೀಲೆ ಸಿಡಿ ವಿಷಯಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನು ಎಸ್ ಐಟಿ ತೀವ್ರಗೊಳಿಸಿದೆ. ಎಸ್ ಐಟಿಗೆ ಸಿಕ್ಕ ವಿಡಿಯೋ ತುಣುಕೊಂದರಲ್ಲಿ ಯುವತಿ, ಕೆಲಸ ಸಕ್ಸಸ್ ಆಗಿದೆ ಬಾ ಎಂದು ಶಂಕಿತ ಆರೋಪಿಯಾಗಿರುವ ಶ್ರವಣ್ ಗೆ ಹೇಳಿದ್ದಾರೆ. ಸದ್ಯ ಈ ವಿಡಿಯೋ ಎಸ್ ಐಟಿಗೆ ಲಭ್ಯವಾಗಿದೆ. ನಗರದ ಪ್ರಮುಖ ಪ್ರದೇಶದಲ್ಲಿರುವ ಅಪಾರ್ಟ್‌ ಮೆಂಟ್‌ ಕಟ್ಟಡದಲ್ಲಿ ಯುವತಿ ಇದ್ದಳು. ಅಲ್ಲಿಂದ ಸ್ವಲ್ಪ ದೂರದಲ್ಲಿ ಶ್ರವಣ್‌ …

Read More »

ಕರ್ನಾಟಕದ ದಶಕಗಳ ಬೇಡಿಕೆಗೆ ಒಪ್ಪಿದ ಕೇಂದ್ರ ಸರ್ಕಾರ

ಬೆಂಗಳೂರು, ಮಾರ್ಚ್ 26; ಕರ್ನಾಟಕ ರಾಜ್ಯದ ದಶಕಗಳ ಬೇಡಿಕೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಯೋಜನೆ ಸ್ಥಾನಮಾನವನ್ನು ನೀಡಲು ಅನುಮೋದನೆ ಸಿಕ್ಕಿದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಟ್ವೀಟ್ ಮೂಲಕ ಈ ಕುರಿತು ಮಾಹಿತಿ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದನೆ ಸಲ್ಲಿಸಿದ್ದಾರೆ. ರಾಷ್ಟ್ರೀಯ ಯೋಜನೆ ಸ್ಥಾನಮಾನ ಪಡೆದ ರಾಜ್ಯದ ಮೊದಲ ಯೋಜನೆ ಇದಾಗಿದೆ.   ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ತುಮಕೂರು ಜಿಲ್ಲೆಗಳ …

Read More »

ರೈತ ಪ್ರತಿಭಟನೆ : 4 ಶತಾಬ್ಧಿ ರೈಲು ಸಂಚಾರ ರದ್ದು

ನವದೆಹಲಿ,ಮಾ.26- ಪಂಜಾಬ್ ಮತ್ತು ಹರಿಯಾಣದಲ್ಲಿ ರೈತರು ರೈಲ್ವೇ ಹಳಿಗಳ ಮೇಲೆ ಕುಳಿತು ಪ್ರತಿಭಟನೆ ನಡೆಸುತ್ತಿರುವುದರಿಂದ ನಾಲ್ಕು ಶತಾಬ್ದಿ ಎಕ್ಸ್‍ಪ್ರೆಸ್ ರೈಲುಗಳ ಸಂಚಾರ ರದ್ದುಗೊಂಡಿದೆ. ಭಾರತ್ ಬಂದ್ ಹಿನ್ನೆಲೆಯಲ್ಲಿ 32 ರೈಲ್ವೆ ನಿಲ್ದಾಣಗಳಲ್ಲಿ ರೈಲು ಹಳಿ ಮೇಲೆ ಕುಳಿತು ಪ್ರತಿಭಟನೆ ನಡೆಸುತ್ತಿರುವುದರಿಂದ ಹಲವಾರು ರೈಲುಗಳ ಸಂಚಾರಕ್ಕೆ ಅಡಚಣೆಯಾಗಿದೆ. ದೆಹಲಿ, ಅಂಬಾಲಾ, ಫೀರೋಜ್‍ಪುರ್ ವಿಭಾಗಗಳ ರೈಲು ಸಂಚಾರ ರದ್ದುಗೊಂಡಿದೆ. ಇದುವರೆಗೂ 31 ರೈಲುಗಳ ಸಂಚಾರಕ್ಕೆ ಆಡಚಣೆಯಾಗಿದ್ದು ನಾಲ್ಕು ಶತಾಬ್ದಿ ರೈಲು ಸಂಚಾರ ರದ್ದುಗೊಳಿಸಲಾಗಿದೆ …

Read More »

ಇಂದು ಮಧ್ಯಾಹ್ನ 2 ಗಂಟೆಗೆ ವಕೀಲರ ಮೂಲಕ ದೂರು ದಾಖಲು: ಸಿಡಿ ಲೇಡಿ

ಬೆಂಗಳೂರು – ಕಳೆದ 24 ದಿನಗಳಿಂದ ತೀವ್ರ ಸಂಚಲನ ಮೂಡಿಸಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಇದೀಗ ಮತ್ತೊಂದು ಸ್ಪೋಟಕ ತಿರುವು ಸಿಕ್ಕಿದೆ. ರಮೇಶ ಜಾರಕಿಹೊಳಿ ವಿರುದ್ಧ ಇಂದೇ ಪ್ರಕರಣ ದಾಖಲಿಸಲು ಸಿಡಿಯಲ್ಲಿರುವ ಯುವತಿ ನಿರ್ಧರಿಸಿದ್ದು, ವಕೀಲ ಜಗದೀಶ್ ಎನ್ನುವವರ ಮೂಲಕ ಮಧ್ಯಾಹ್ನ 2 ಗಂಟೆಗೆ ದೂರು ದಾಖಲಾಗಲಿದೆ. ಯುವತಿಯ ಹಸ್ತಾಕ್ಷರದಲ್ಲೇ ದೂರು ದಾಖಲಿಸಲಾಗುವುದು ಎಂದು ಅವಳ ಪರ ವಕೀಲ ಜಗದೀಶ ಸುದ್ದಿಗಾರರಿಗೆ ತಿಳಿಸಿದ್ದಾರೆ. ಒಬ್ಬ ಪ್ರಭಾವಿ …

Read More »

ಶಾಕಿಂಗ್ ನ್ಯೂಸ್ : ಮೂರು ತಿಂಗಳ ಕಾಲ ಅಬ್ಬರಿಸಲಿದೆ ಕೊರೊನಾ!

ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮತ್ತೆ ಕೊರೊನಾ ವೈರಸ್ ಸೋಂಕು ಹೆಚ್ಚಳವಾಗುತ್ತಿದ್ದು, ಈ ನಡುವೆ ಜನತೆಗೆ ತಜ್ಞರು ಬಿಗ್ ಶಾಕಿಂಗ್ ಸುದ್ದಿಯೊಂದನ್ನು ನೀಡಿದ್ದು, ರಾಜ್ಯದಲ್ಲಿ ಕೊರೊನಾ ವೈರಸ್ ಜುಲೈ ವರೆಗೂ ಕಾಡುವ ಸಾಧ್ಯತೆ ಇದೆ ಎಂದು ರಾಜ್ಯ ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿ ಎಚ್ಚರಿಕೆ ನೀಡಿದೆ ಎನ್ನಲಾಗಿದೆ. ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಕೊರೊನಾ ಅತಂಕ ಮತ್ತಷ್ಟು ಹೆಚ್ಚಲಿದ್ದು, ಈ ಹಿನ್ನೆಲೆಯಲ್ಲಿ ಜನರು ಹೆಚ್ಚು ಜಾಗರೂಕರಾಗಿ ಇರಬೇಕು. ಹೊರಗಡೆ ಸುತ್ತಾಟ …

Read More »

BIG BREAKING: ರಾಜ್ಯದಲ್ಲಿಂದು 2500 ಕ್ಕೂ ಅಧಿಕ ಜನರಿಗೆ ಸೋಂಕು, 18 ಸಾವಿರಕ್ಕೂ ಅಧಿಕ ಮಂದಿಗೆ ಚಿಕಿತ್ಸೆ

ಬೆಂಗಳೂರು: ರಾಜ್ಯದಲ್ಲಿ ಇಂದು ಕೂಡ ಕೊರೊನಾ ಸೋಂಕಿತರ ಸಂಖ್ಯೆ 2000 ಗಡಿ ದಾಟಿದೆ. ಇವತ್ತು ಒಂದೇ ದಿನ ಬರೋಬ್ಬರಿ 2523 ಜನರಿಗೆ ಕೊರೋನಾ ಪಾಸಿಟಿವ್ ರಿಪೋರ್ಟ್ ಬಂದಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 9,78,478 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 1192 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 9,47,781 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಇವತ್ತು ಒಂದೇ ದಿನ 10 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ಇದುವರೆಗೆ ರಾಜ್ಯದಲ್ಲಿ 12,471 …

Read More »