Breaking News

ಬೆಂಗಳೂರು

ಅನಗತ್ಯವಾಗಿ ಹೊರಬಂದವರಿಗೆ ಬಿಗ್ ಶಾಕ್: ವಾಹನ ಬಿಡುಗಡೆ ಸದ್ಯಕ್ಕಿಲ್ಲ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ತಡೆಗೆ ಜನತಾ ಕರ್ಫ್ಯೂ ಜಾರಿಯಾಗಿದ್ದು, ನಿಯಮ ಉಲ್ಲಂಘಿಸಿ ಅನಗತ್ಯವಾಗಿ ತಿರುಗಾಡುತ್ತಿದ್ದವರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಬೆಂಗಳೂರಿನಲ್ಲಿ ಸುಮಾರು 7000 ವಾಹನಗಳನ್ನು ಜಪ್ತಿ ಮಾಡಲಾಗಿದೆ. ರಾಜ್ಯ ವಿವಿಧ ಕಡೆಗಳಲ್ಲೂ ನೂರಾರು ಸಂಖ್ಯೆಯ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ದಂಡ ಹಾಕಲಾಗಿದೆ. ಜಪ್ತಿ ಮಾಡಿರುವ ವಾಹನಗಳನ್ನು ಸದ್ಯಕ್ಕೆ ಬಿಡುಗಡೆ ಮಾಡುವುದಿಲ್ಲ ಎನ್ನಲಾಗಿದೆ. ಜಪ್ತಿ ಮಾಡಿದ ವಾಹನಗಳನ್ನು ಠಾಣೆಗೆ ಸಾಗಿಸಿದ್ದು, ಅವುಗಳ ರಕ್ಷಣೆ, ಸುರಕ್ಷತೆ ಪೊಲೀಸರಿಗೆ ಸವಾಲಾಗಿದೆ. ಬಹುತೇಕ …

Read More »

ಕೊರೊನಾ ಸ್ಫೋಟ, ಮುಂದಿನ 15 ದಿನ ಎಚ್ಚರ: ಕೊಡಗು ಜಿಲ್ಲಾ ವೈದ್ಯಾಧಿಕಾರಿ ಆತಂಕ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಹೆಚ್ಚಾಗಿದೆ. ಹಾಗಾಗಿ ಮುಂದಿನ 15 ದಿನ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಕೊಡಗು ಜಿಲ್ಲಾ ವೈದ್ಯಾಧಿಕಾರಿ ಮೋಹನ್ ಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ. ಕೊರೊನಾ ಸ್ಫೋಟ ಸಾಧ್ಯತೆ: ಮುಂದಿನ ಹದಿನೈದು ದಿನ ಕೊಡಗಿಗೆ ಕಂಟಕ ಎದುರು ಅಗುತ್ತದೆ. ಕೊಡಗು ಜಿಲ್ಲೆಯಲ್ಲಿರುವ ಜನಸಂಖ್ಯೆ ಸುಮಾರು ಆರೂವರೆ ಲಕ್ಷ. ಆದ್ರೆ ಬೆಂಗಳೂರಿನಿಂದ ಬಂದಿರುವ ಜನರು ಹಳ್ಳಿ ಸೇರಿಕೊಂಡಿದ್ದಾರೆ. ಆದ್ದರಿಂದ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ …

Read More »

ಉಮೇಶ್ ಜಾಧವ್ ಗೆ ಮೂಟೆಗಟ್ಟಲೇ ಲಸಿಕೆ; ಎಲ್ಲಿಂದ ಬಂತು :ಸಿದ್ದರಾಮಯ್ಯ

ಬೆಂಗಳೂರು: ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ ಸರ್ಕಾರ ಕೊರೊನಾ ಲಸಿಕೆ ನೀಡಿಕೆ ಅಭಿಯಾನ ಆರಂಭಿಸಿದೆ. ಆದರೆ ಲಸಿಕೆ ಲಭ್ಯತೆಯೇ ಇಲ್ಲದೇ ಅಭಿಯಾನ ಆರಂಭಿಸಿರುವುದಾದರೂ ಯಾಕೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಕೇರ್ಸ್ ಅಭಿಯಾನದಡಿ ಕೋವಿಡ್ ಸೋಂಕಿತರ ನೆರವಿಗೆ ಆಂಬುಲೆನ್ಸ್ ಗಳಿಗೆ ಚಾಲನೆ ನೀಡಿ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಯಾವುದೇ ಪೂರ್ವತಯಾರಿಯಿಲ್ಲದೇ ಲಸಿಕೆ ಅಭಿಯಾನ ಘೋಷಿಸಿದ್ದಾರೆ. ರಾಜ್ಯದಲ್ಲಿ ಪ್ರತಿಯೊಬ್ಬರಿಗೂ ವ್ಯಾಕ್ಸಿನ್ ಸಿಗಬೇಕೆಂದರೆ ಆರುವರೆ ಕೋಟಿ ವ್ಯಾಕ್ಸಿನ್ ಬೇಕು. ರಾಜ್ಯದಲ್ಲಿ …

Read More »

ಅಪ್ಪ ತೀರಿಕೊಂಡ 3 ದಿನಕ್ಕೆ ತಾಯಿ ಕೋವಿಡ್​​ಗೆ ಬಲಿ: ಶವ ಪಡೆಯಲು 30,000ಕ್ಕೆ ಆಸ್ಪತ್ರೆ ಡಿಮ್ಯಾಂಡ್

ಬೆಂಗಳೂರು: ಕೊರೊನಾ ಮಾಹಾಮಾರಿಯಿಂದ ಎಂಥ ಘನಘೋರ ಸ್ಥಿತಿ ಎದುರಾಗಿದೆ ಅನ್ನೋದಕ್ಕೆ ಈ ಪ್ರಕರಣ ಸಾಕ್ಷಿ. ಈ ಸ್ಟೋರಿ ನೋಡಿದ್ರೆ ಎಂಥವ್ರಿಗೂ ಕಣ್ಣೀರು ಬರುತ್ತೆ. ವ್ಯಕ್ತಿಯೊಬ್ಬರು ಒಂದೇ ವಾರದ ಅಂತರದಲ್ಲಿ ಕೋವಿಡ್​ನಿಂದ ತಾಯಿ ಹಾಗೂ ನಾನ್-ಕೋವಿಡ್ ನಿಂದ ತಂದೆಯನ್ನ ಕಳೆದುಕೊಂಡಿದ್ದಾರೆ.ಆಸ್ಪತ್ರೆಗಳ ಧನದಾಹಕ್ಕೆ ನನ್ನ ತಾಯಿಯನ್ನ ಕಳೆದುಕೊಂಡೆ ಅಂತ ಮೃತ ಸೋಂಕಿತ ಮಹಿಳೆಯ ಮಗ ಕಣ್ಣೀರು ಹಾಕಿದ್ದಾರೆ. ಅಂಬೇಡ್ಕರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ್ಯದಿಂದಲೇ ನನ್ನ ತಾಯಿ ಸಾವನ್ನಪ್ಪಿದ್ರು ಅಂತ ಅವರು …

Read More »

ವೆಂಟಿಲೇಟರ್‌ನಲ್ಲಿರುವ ಕೊರೊನಾ ಸೋಂಕಿತರೊಬ್ಬರಿಗೆ ಗೋಮೂತ್ರ ಕುಡಿಸಿದ ರಾಜಕಾರಣಿ

ನವದೆಹಲಿ, : ವೆಂಟಿಲೇಟರ್‌ನಲ್ಲಿರುವ ಮಹಿಳಾ ಕೊರೊನಾ ಸೋಂಕಿತರೊಬ್ಬರಿಗೆ ರಾಜಕಾರಣಿಯೊಬ್ಬರು ಒತ್ತಾಯಪೂರ್ವಕವಾಗಿ ಗೋಮೂತ್ರ ಕುಡಿಸಿದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಮಹಿಳೆಯನ್ನು ವೆಂಟಿಲೇಟರ್‌ನಲ್ಲಿಡಲಾಗಿತ್ತು, ಆವರಿಗೆ ರಾಜಕಾರಣಿಯೊಬ್ಬರು ಗೋಮೂತ್ರ ಕುಡಿಸಿದ್ದರು. ಈ ಶಾಕಿಂಗ್ ವಿಡಿಯೋವನ್ನು ಸೂರತ್ ಬಿಜೆಪಿಯ ಜನರಲ್ ಸೆಕ್ರೆಟರಿ ಕಿಶೋರ್ ಬಿಂದಾಲ್ ಅವರು ಪೋಸ್ಟ್‌ ಮಾಡಿದ್ದರು. 80 ಸಾವಿರ ಮಂದಿ ಈ ವಿಡಿಯೋ ವೀಕ್ಷಿಸಿದ್ದರು, ಬಳಿಕ ಈ ವಿಡಿಯೋವನ್ನು ಡಿಲೀಟ್ ಮಾಡಲಾಗಿತ್ತು. ಮಾರಕ ಕೊರೋನಾ ವೈರಸ್ ಗುಣಪಡಿಸಲು ಇಡೀ …

Read More »

ಮುಂದಿನ 3 ತಿಂಗಳ ಸಂಬಳವನ್ನು ಆಶಾ ಕಾರ್ಯಕರ್ತೆಯರಿಗೆ ನೀಡುತ್ತೇನೆ: ಶಾಸಕ ಗಣೇಶ್ ಹುಕ್ಕೇರಿ

ಬೆಂಗಳೂರು: ಕಾರ್ಮಿಕರ ದಿನಾಚರಣೆಯಂದು ಕೊವಿಡ್ ವಾರಿಯರ್​ಗಳಿಗೆ ನೆರವಾಗಲು ಮುಂದಾದ ಸದಲಗಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಗಣೇಶ್ ಹುಕ್ಕೇರಿ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ, ನನ್ನ 3 ತಿಂಗಳ ಸಂಬಳವನ್ನು ಆಶಾ ಕಾರ್ಯಕರ್ತೆಯರಿಗೆ ನೀಡುತ್ತೇನೆ ಎಂದು ಬರೆದುಕೊಂಡಿದ್ದಾರೆ. ಈಗಾಗಲೇ ತಮ್ಮ ಸ್ವಂತ ಹಣದಲ್ಲಿ 120 ಬೆಡ್‌ಗಳ ಆಸ್ಪತ್ರೆ ನಿರ್ಮಾಣ ಮಾಡಿರುವ ಶಾಸಕ ಗಣೇಶ್ ಹುಕ್ಕೇರಿ ಉಚಿತ ಆಯಂಬುಲೆನ್ಸ್ ವ್ಯವಸ್ಥೆ ಕೂಡ ಮಾಡಿದ್ದಾರೆ. ಮುಖ್ಯಮಂತ್ರಿಗಳ ಮನವಿಯಂತೆ ಒಂದು ತಿಂಗಳ ಸಂಬಳವನ್ನ ಕೊವಿಡ್ ನಿಧಿಗೆ ನೀಡಿದ್ದೇನೆ. …

Read More »

ಚಿನ್ನ ಹಾಗೂ ಬೆಳ್ಳಿಯ ದರದಲ್ಲಿ ಮತ್ತೆ ಏರಿಕೆ

ಬೆಂಗಳೂರು : ಕೊಂಚ ಇಳಿಮುಖ ದತ್ತ ಸಾಗುತ್ತಿದ್ದ ಚಿನ್ನ ಹಾಗೂ ಬೆಳ್ಳಿಯ ದರದಲ್ಲಿ ಮತ್ತೆ ಏರಿಕೆ ಕಂಡಿದ್ದು, ಲಾಕ್ ಡೌನ್ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಇನ್ನು ಇಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್ 10 ಗ್ರಾಂ ಗೆ 150 ರೂ . ಏರಿಕೆಯಾಗಿ 44,300 ರೂ.ಗೆ ತಲುಪಿದೆ . 24 ಕ್ಯಾರೆಟ್ ನ ಚಿನ್ನದ ಬೆಲೆ 10 ಗ್ರಾಂಗೆ 1,700 ರೂ . ಏರಿಕೆಯಾಗಿ 48,350 ರೂ …

Read More »

ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಜನಾಭಿಪ್ರಾಯ ಕಳೆದುಕೊಂಡಿದೆ.ಸರ್ಕಾರ ವಿಸರ್ಜನೆ ಮಾಡಿ ಚುನಾವಣೆಗೆ ಹೋಗುವುದು ಉತ್ತಮ :

ಬೆಂಗಳೂರು: ನಗರ ಸ್ಥಳಿಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಭರ್ಜರಿ ಗೆಲವಿಗೆ ಕಾರಣರಾದ ಮತದಾರರಿಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಜನಾಭಿಪ್ರಾಯ ಕಳೆದುಕೊಂಡಿರುವುದು ಈ ಚುನಾವಣೆ ಫಲಿತಾಂಶದಿಂದ ಸ್ಪಷ್ಟವಾಗಿದೆ. ಕೋವಿಡ್‍ನಂತಹ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ಹೀಗಾಗಿ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುವ ಮೂಲಕ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಜನತೆಯ …

Read More »

ಭದ್ರಾವತಿ ನಗರಸಭೆ ಕಾಂಗ್ರೆಸ್ ಜಯಭೇರಿ; ಬಿಜೆಪಿ, ಜೆಡಿಎಸ್ ಗೆ ತೀವ್ರ ಹಿನ್ನಡೆ

ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ನಗರಸಭೆ ಹಾಗೂ ತೀರ್ಥಹಳ್ಳಿ ಪಟ್ಟಣ ಪಂಚಾಯ್ತಿಗೆ ನಡೆದ ಚುನಾವಣೆಯ ಮತ ಎಣಿಕೆ ಎ. 30 ರಂದು ನಡೆಯಿತು. ಎರಡು ಕಡೆ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಸಂಪಾದಿಸಿದೆ. ಅಧಿಕಾರದ ಗದ್ದುಗೆಯೇರಿದೆ. ಬಿಜೆಪಿ ಹಾಗೂ ಜೆಡಿಎಸ್ ತೀವ್ರ ಹಿನ್ನಡೆ ಸಾಧಿಸಿವೆ. ಭದ್ರಾವತಿ: ನಗರಸಭೆಯ 35 ರಲ್ಲಿ, 34 ವಾರ್ಡ್ ಗಳಿಗೆ ಚುನಾವಣೆ ನಡೆದಿತ್ತು. ಇದರಲ್ಲಿ ಕಾಂಗ್ರೆಸ್ ಪಕ್ಷ 18 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಈ ಮೂಲಕ ಮತ್ತೆ …

Read More »

ಕೊರೋನಾ ಕರ್ತವ್ಯ ನಿರತರಿಗಾಗಿ ಸಾರಿಗೆ ಸೌಲಭ್ಯ – ಡಿಸಿಎಂ ಲಕ್ಷ್ಮಣ್ ಸವದಿ

ಬೆಂಗಳೂರು : ಕೋವಿಡ್ 2ನೇ ಅಲೆಯನ್ನು ನಿಯಂತ್ರಿಸಲು ಸರ್ಕಾರ ಲಾಕ್ ಡೌನ್ ವಿಧಿಸಿದ್ದರು ಸಹ ಕೋವಿಡ್ ಗೆ ಸಂಬಂಧಪಟ್ಟ ಸೇವಾ ಚಟುವಟಿಕೆಗಳಿಗೆ ಮತ್ತು ಕೋವಿಡ್ ವಾರಿಯರ್ಸ್ ಗಳ ಸೇವೆಗೆ ಅಗತ್ಯವಾದಲ್ಲಿ ಬಸ್ಸುಗಳನ್ನು ಒದಗಿಸಲು ನಾಲ್ಕೂ ನಿಗಮಗಳಲ್ಲಿ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಉಪ ಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರಾದ ಲಕ್ಷ್ಮಣ ಸವದಿಯವರು ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಪ್ರಸ್ತುತ ಇಡೀ ರಾಜ್ಯವೇ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ …

Read More »