Breaking News

ಬೆಂಗಳೂರು

ಮಾಜಿ ಶಾಸಕ ಎನ್.ಎಸ್.ಖೇಡ ನಿಧನ

ವಿಜಯಪುರ: ಮಾಜಿ ಶಾಸಕ ಎನ್.ಎಸ್.ಖೇಡ ಅವರು ನಿಧನರಾದರು. ಇಂಡಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗಿದ್ದ ಅವರು ಸಮಾಜಮುಖಿ ಚಟುವಟಿಕೆಯಿಂದ ಹೆಸರುವಾಸಿಯಾಗಿದ್ದರು. ನೀರಿನ ಗಾಂಧಿ ರಾಜೇಂದ್ರಸಿಂಗ್ ತಂಡದೊಂದಿಗೆ ಖೇಡ ಅವರು ಜಲಬಿರಾದಾರ್ ಆಗಿದ್ದರು. ಜ್ಞಾನಯೋಗಾಶ್ರಮದ ಬುದ್ಧಿಜಿ ಸಾಮಿಪ್ಯದಲ್ಲಿ ಸದಾಕಾಲ ಜನಹಿತ ಚಿಂತನೆಯಲ್ಲಿ ತೊಡಗಿದ್ದರು. ಖೇಡರ ಅಗಲಿಕೆಯಿಂದ ಮೌಲ್ಯಾಧಾರಿತ ರಾಜಕಾರಣದ ಕೊಂಡಿಯೊಂದು ಕಳಚಿದಂತಾಗಿದೆ. ಎನ್.ಎಸ್. ಖೇಡ ನಿಧನಕ್ಕೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಸೇರಿದಂತೆ ಹಲವರು ಸಂತಾಪ …

Read More »

ತಂದೆಗೆ ಮಗುವನ್ನು ನೋಡಲು ಬಿಡದ IPS ಅಧಿಕಾರಿ..? ಪತಿಯಿಂದ ಆರೋಪ.. ಡಿಜಿಪಿಗೆ ದೂರು

ಬೆಂಗಳೂರು: ಐಪಿಎಸ್​ ಅಧಿಕಾರಿ ವರ್ತಿಕಾ ಕಟಿಯಾರ್ ವಿರುದ್ಧ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗದಿಂದ ಡಿಜಿ&ಐಜಿಪಿ ಪ್ರವೀಣ್ ಸೂದ್​​ಗೆ ದೂರು ನೀಡಲಾಗಿದೆ. ವರ್ತಿಕಾ ಅವರು ತನ್ನ ಪತಿಗೆ ಮಗುವನ್ನ ನೋಡಲು ಬಿಡ್ತಿಲ್ಲ ಎಂದು ಆರೋಪಿಸಲಾಗಿದೆ. ತನ್ನ ಅಧಿಕಾರ ಬಳಸಿಕೊಂಡು ವರ್ತಿಕಾ ಕಟಿಯಾರ್ ತಮ್ಮ ಪತಿಗೆ ಮಗು ನೋಡದಂತೆ ತಡೆದಿದ್ದಾರೆ.. ಹೀಗಾಗಿ ಅವರ ವಿರುದ್ಧ ಕ್ರಮ ಜರುಗಿಸುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಐಎಫ್​ಎಸ್​ ಅಧಿಕಾರಿಯಾಗಿರುವ ವರ್ತಿಕಾ ಅವರ ಪತಿ ನಿತಿನ್ ಶುಭಾಶ್, ತನಗೆ …

Read More »

ಆರೋಪಿಗಳಿಗೆ ಜಾಮೀನು ನೀಡಬೇಡಿ ಎಂದು ಎಸ್‍ಐಟಿ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬ್ಲ್ಯಾಕ್‍ಮೇಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳಿಗೆ ಜಾಮೀನು ನೀಡಬೇಡಿ ಎಂದು ಎಸ್‍ಐಟಿ ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಸಿದೆ.. ಆರೋಪಿಗಳು ಇದೂವರೆಗೂ ತನಿಖೆಗೆ ಸಹಕಾರ ನೀಡಿಲ್ಲ. ಸಿಡಿ ರಿಲೀಸ್ ಆದ ದಿನವೇ ತಲೆ ಮರೆಸಿಕೊಂಡಿದ್ದಾರೆ. ಎಷ್ಟು ಬಾರಿ ನೋಟಿಸ್ ಕೊಟ್ಟರೂ ವಿಚಾರಣೆಗೆ ಹಾಜರಾಗಿಲ್ಲ. ದೂರುದಾರರಿಗೆ ಬೆದರಿಕೆ ಹಾಕಿದ್ದಕ್ಕೆ ಸಾಕ್ಷ್ಯಗಳಿದ್ದು, ಹೊರರಾಜ್ಯದಲ್ಲಿ ಯುವತಿಯ ಜೊತೆಯಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳಿವೆ. ಸಾಕ್ಷ್ಯಗಳ ಪ್ರಕಾರ ಕೆಲವೊಂದು ವೀಡಿಯೋ ತುಣುಕುಗಳನ್ನು ದೂರುದಾರರಿಗೆ ನೀಡಿದ್ದಾರೆ . …

Read More »

ತಮಿಳು ಖ್ಯಾತ ನಟ ವಿಶಾಲ್ ವಿರುದ್ಧ ಕಿಡಿಕಾರಿದ ನಟಿ ಗಾಯಿತ್ರಿ ರಘುರಾಮ್

ಬೆಂಗಳೂರು : 5 ದಿನಗಳ ಹಿಂದೆ ತಮಿಳು ಖ್ಯಾತ ನಟ ವಿಶಾಲ್ ತಮಿಳುನಾಡಿನ ಶಾಲೆಯೊಂದರಲ್ಲಿ ವಿದ್ಯಾರ್ಥಿನಿ ಮೇಲೆ ಶಿಕ್ಷಕನೋರ್ವ ಅತ್ಯಾಚಾರ ಎಸಗಿದ್ದನ್ನು ಕುರಿತು ಆಕ್ಷೇಪ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸ್ಯಾಂಡಲ್ ವುಡ್ ನ ಮನಸೆಲ್ಲ ನೀನೇ ‘ ಚಿತ್ರದ ನಟಿ , ಕೊರಿಯೋಗ್ರಾಫರ್ , ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಗಾಯಿತ್ರಿ ರಘುರಾಮ್ ವಿಶಾಲ್ ಅವರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಬರುವಂತೆ ಟ್ವೀಟ್ ಮಾಡಿದ್ದಾರೆ. ವಿಶಾಲ್ ಅವರು …

Read More »

ದರೋಡೆಗೆ ಸಂಚು: ಐದು ಮಂದಿ ಬಂಧನ

ಬೆಂಗಳೂರು: ಸಾರ್ವಜನಿಕರನ್ನು ಬೆದರಿಸಿ, ದರೋಡೆಗೆ ಸಂಚು ರೂಪಿಸಿದ್ದ ಆರೋಪದಡಿ ಕುಖ್ಯಾತ ರೌಡಿಗಳ ಸಹಚರರಾದ ಐದು ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ತಸ್ಲೀಂ ಪಾಷಾ (38), ಶೇಖ್ ತನ್ವರ್‌ (21), ಮಹಮದ್ ಸುಲ್ತಾನ್ (23), ಸೈಯದ್‌ ಫೈರೋಜ್‌ (32) ಹಾಗೂ ಇಮ್ರಾನ್ ಪಾಷಾ (34) ಬಂಧಿತರು. ‘ಇವರು ವಿವೇಕನಗರ ಠಾಣಾ ವ್ಯಾಪ್ತಿಯ ಇನ್ಫೆಂಟ್ ಜೀಸಸ್ ಚರ್ಚ್‌ ಸಮೀಪದ ದಾರಿಯಲ್ಲಿ ಒಂಟಿಯಾಗಿ ಬರುವವರ ಮೇಲೆ ಹಲ್ಲೆ ನಡೆಸಿ, ನಗದು-ಚಿನ್ನಾಭರಣ ದೋಚಲು ಆರೋಪಿಗಳು …

Read More »

ಮೆಗಾಸಿಟಿ ವಂಚನೆ ; ಸಚಿವ ಯೋಗೇಶ್ವರ್‌ ವಿರುದ್ದ ಸಿಐಡಿಗೆ ದೂರು

ಬೆಂಗಳೂರು: ಮೆಗಾಸಿಟಿ ಡೆವಲಪರ್ಸ್‌ ಕಂಪನಿಯ ಗ್ರಾಹಕರಿಗೆ ವಂಚಿಸಿರುವ ಪ್ರಕರಣದಲ್ಲಿ ಸಚಿವ ಸಿ.ಪಿ. ಯೋಗೇಶ್ವರ್‌ ವಿರುದ್ಧ ಕ್ರಮ ಜರುಗಿಸಿ, ಗ್ರಾಹಕರಿಗೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿ ಮೆಗಾಸಿಟಿ ನಿವೇಶನ ಸದಸ್ಯರ ಹಿತರಕ್ಷಣಾ ಸಂಘದ ಅಧ್ಯಕ್ಷ ರವೀಂದ್ರ ಬೆಲೆಯೂರು ಸಿಐಡಿ ಪೊಲೀಸ್‌ ಮಹಾನಿರ್ದೇಶಕರಿಗೆ ದೂರು ಸಲ್ಲಿಸಿದ್ದಾರೆ. ‘1995-2000ದ ಅವಧಿಯಲ್ಲಿ 9,000 ಜನರಿಂದ ₹ 70 ಕೋಟಿ ಸಂಗ್ರಹಿಸಿ ವಂಚಿಸಿರುವ ಆರೋಪ ಮೆಗಾಸಿಟಿ ಡೆವಲಪರ್ಸ್‌ ಮೇಲಿದೆ. 25 ವರ್ಷಗಳಾದರೂ ವಂಚನೆಗೊಳಗಾದ ಗ್ರಾಹಕರಿಗೆ ನ್ಯಾಯ ದೊರಕಿಲ್ಲ. ಕೇಂದ್ರ …

Read More »

ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ವಿಸ್ತರಣೆ ಮಾಡುತ್ತೇವೆ ಎಂದ ಸಿಎಂ B.S.Y.

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ವಿಸ್ತರಣೆ ಮಾಡುತ್ತೇವೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಡಾಲರ್ಸ್ ಕಾಲೋನಿಯ ಧವಳಗಿರಿಯ ಮನೆ ನವೀಕರಣ ಹಿನ್ನೆಲೆ ಇಂದು ಮನೆ ನೋಡಲು ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳು ಲಾಕ್‍ಡೌನ್ ಬಗ್ಗೆ ಕೇಳಿದ ಪ್ರಶ್ನೆಗೆ, ಕೊರೊನಾ ನಿಯಂತ್ರಣವಾಗದ ಹಿನ್ನೆಲೆಯಲ್ಲಿ ಲಾಕ್‍ಡೌನ್ ವಿಸ್ತರಣೆ ಮಾಡುತ್ತೇವೆ ಎಂದು ಉತ್ತರಿಸಿದರು. ಹಳ್ಳಿಗಳಲ್ಲಿ ಇನ್ನೂ ಕೊರೊನಾ ಕಡಿಮೆ ಆಗಿಲ್ಲ. ಲಾಕ್‍ಡೌನ್‍ನಲ್ಲಿ ಏನು ಮಾಡಬೇಕು ಎನ್ನುವುದರ ಬಗ್ಗೆ ಇಂದು ಸಂಜೆ ತೀರ್ಮಾನ ಮಾಡುತ್ತೇವೆ. ಕೈಗಾರಿಕೆಗಳ …

Read More »

ಅಕ್ಷಯ ಪಾತ್ರೆ ಪ್ರತಿಷ್ಠಾನದಿಂದ ಪ್ರತಿನಿತ್ಯ 95 ಸಾವಿರ ಜನಕ್ಕೆ ಉಚಿತ ಊಟ

ಬೆಂಗಳೂರು: ಕೊರೊನಾ ಲಾಕ್‍ಡೌನ್ ಹಿನ್ನೆಲೆ ದೇಶಾದ್ಯಂತ ಅನೇಕ ಜನ ಆಹಾರದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಬೆಂಗಳೂರಿನ ಅಕ್ಷಯ ಪಾತ್ರೆ ಪ್ರತಿಷ್ಠಾನವು ಅನೇಕ ಜನರ ಹಸಿದ ಹೊಟ್ಟೆಗಳನ್ನು ತುಂಬಿಸುತ್ತಿದೆ. ಅದರಲ್ಲೂ ನಗರದ ಕೂಲಿ ಕಾರ್ಮಿಕರು, ಸ್ಮಶಾನದ ಸಿಬ್ಬಂದಿ, ಪೋಲಿಸರು, ಆರೋಗ್ಯ ಸಿಬ್ಬಂದಿಗಳಿಗೆ ಫುಡ್ ಪ್ಯಾಕೆಟ್ ಗಳ ವಿತರಣೆ ಮಾಡುತ್ತಿದೆ. ಬೆಂಗಳೂರಿನ ವಿವಿಧ ಭಾಗಗಳಲ್ಲಿ ಪ್ರತಿನಿತ್ಯ 95,000 ಜನರಿಗೆ ಫುಡ್ ಪ್ಯಾಕೆಟ್ ಗಳನ್ನು ವಿತರಣೆ ಮಾಡುತ್ತಿದೆ. ಅದರಲ್ಲಿ 1,450 ಸ್ಮಶಾನ ಸಿಬ್ಬಂದಿಗಳಿಗೆ ನಿತ್ಯ …

Read More »

ರಾಜ್ಯದಲ್ಲೂ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ರದ್ದು ಮಾಡಿ: ಡಿಕೆಶಿ

ಬೆಂಗಳೂರು: ‘ಕೇಂದ್ರ ಸರ್ಕಾರ ನಿರ್ಧರಿಸಿದಂತೆಯೇ ರಾಜ್ಯ ಸರ್ಕಾರ ಕೂಡಾ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಾರ್ಷಿಷಕ ಪರೀಕ್ಷೆಗಳನ್ನು ರದ್ದು ಮಾಡಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್ ಕುಮಾರ್​​ ಅವರಿಗೆ ಟ್ವೀಟ್‌ ಮಾಡಿರುವ ಅವರು, ‘ಕೆಲವೊಮ್ಮೆ ಅನಿವಾರ್ಯ ಸಂದರ್ಭಗಳಲ್ಲಿ‌ ವಿನಾಯಿತಿ ನೀಡಲೇಬೇಕಾಗುತ್ತದೆ’ ಎಂದಿದ್ದಾರೆ. ’12ನೇ ತರಗತಿಯ ಪರೀಕ್ಷೆಗಳನ್ನು ರದ್ದುಗೊಳಿಸಿರುವ‌ ಕೇಂದ್ರ ಸರ್ಕಾರದ‌ ನಿರ್ಧಾರವನ್ನು ನಾನು‌ ಸ್ವಾಗತಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.

Read More »

ಬಿಗಿ ಕ್ರಮದೊಂದಿಗೆ ಲಾಕ್​ಡೌನ್​ ವಿಸ್ತರಣೆ: ಸಿಎಂ ಬಿಎಸ್​ವೈ

ಬೆಂಗಳೂರು: ರಾಜ್ಯದಲ್ಲಿ ಜೂನ್​ 7ರ ನಂತರ ಬಿಗಿ ಕ್ರಮದೊಂದಿಗೆ ಲಾಕ್​ಡೌನ್ ಮುಂದುವರಿಕೆ ಖಚಿತವಾಗಿದ್ದು, ಎಷ್ಟು ದಿನ ವಿಸ್ತರಣೆ ಎಂಬುದು ಇಂದು ಸಂಜೆ ನಿರ್ಧಾರ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆಯಿಂದ ರಫ್ತು ಆಧಾರಿತ ಕೈಗಾರಿಕೆಗಳಿಗೆ ಅವಕಾಶ ನೀಡಲಾಗಿದೆ. ಉಳಿದಂತೆ ಸಂಜೆ ಸಚಿವರ ಜೊತೆಗಿನ ಸಭೆ ಬಳಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಅಲ್ಲದೇ ಇನ್ನೆರಡು ದಿನಗಳಲ್ಲಿ ಎರಡನೇ ಪ್ಯಾಕೇಜ್ ಘೋಷಣೆ ಎಂದು ತಿಳಿಸಿದ್ದಾರೆ.

Read More »