ಆಟೋ ಮೇಲೆ ಪ್ರೆಸ್, ಶರ್ಟ್ ಮೇಲೆ ಕೆಎಸ್ಆರ್ ಟಿಸಿ ಲೋಗೋ! ವಿಜಯಪುರದಲ್ಲೊಬ್ಬ ‘ಬಹುಕಂಪನಿ ನೌಕರ’ ವಿಜಯಪುರ: ಮಾಧ್ಯಮ ಕ್ಷೇತ್ರದಲ್ಲಿ ದುಡಿಯುವ ಜನರು ತಮ್ಮ ಕಾರು, ಬೈಕ್ ಗಳ ಮೇಲೆ ಪ್ರೆಸ್ ಎಂದು ಬರೆಸುವುದು ಸಾಮಾನ್ಯ. ಆದರೆ ವಿಜಯಪುರ ಜಿಲ್ಲೆಯಲ್ಲಿ ಪತ್ರಿಕೋದ್ಯಮ ಕ್ಷೇತ್ರಕ್ಕೆ ಸಂಬಂಧ ಇಲ್ಲದವರೂ ಟಂಟಂ, ಆಟೋಗಳ ಮೇಲೂ ಪ್ರೆಸ್ ಸ್ಟಿಕ್ಕರ್ ಬಳಕೆ ಮಾಡುವುದು ಕಂಡುಬರುತ್ತಿದೆ. ವಿಜಯಪುರ ನಗರದಲ್ಲಿ ಆಟೋ ಮೇಲೆ ತ್ರಿಟಿವಿ ಬಂಜಾರಾ- ಪ್ರೆಸ್ (3 TV Banjara …
Read More »ವಿನಯ ಕುಲಕರ್ಣಿ ಬಂಧನ ರಾಜಕೀಯ ಪ್ರೇರಿತ:ಎಂ.ಬಿ. ಪಾಟೀಲ
ವಿಜಯಪುರ: ಮಾಜಿ ಸಚಿವ ವಿನಯ ಕುಲಕರ್ಣಿ ಬಂಧನ ರಾಜಕೀಯ ಪ್ರೇರಿತವಾಗಿದೆ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ವಿನಯ ಕುಲಕರ್ಣಿ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸತ್ಯ ಏನು ಎಂಬುವುದು ಜನರಿಗೆ ಗೊತ್ತಾಗಲಿದೆ. ವಿನಯ ಅವರು ಸಮಸ್ಯೆಯನ್ನು ಸಮರ್ಥವಾಗಿ ಎದುರಿಸುತ್ತಾರೆ. ನಿರಪರಾಧಿಯಾಗಿ ಹೊರ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸರು. ಕೇಂದ್ರ ಸರ್ಕಾರ ಸರ್ಕಾರ ಸಂಸ್ಥೆಗಳ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂತಲೂ ವಾಗ್ದಾಳಿ ನಡೆಸಿದ ಅವರಿ, …
Read More »ಭೀಮಾತೀರದ ಶೂಟೌಟ್ ಪ್ರಕರಣದಲ್ಲಿ ಭಾಗಿಯಾಗಿದ್ದ ಐವರು ಅರೆಸ್ಟ್ ; ಬಂಧಿತರಿಂದ ಎರಡು ಕಂಟ್ರಿ ಪಿಸ್ತೂಲ್ ವಶಕ್ಕೆ..!
ವಿಜಯಪುರ : ನವೆಂಬರ್ 2 ರಂದು ಭೀಮಾತೀರದ ಕುಖ್ಯಾತಿಯ ಮಹಾದೇವ ಭೈರಗೊಂಡ ಮೇಲೆ ನಡೆದಿದ್ದ ಶೂಟೌಟ್ ಪ್ರಕರಣಕ್ಕೆ ಸಂಭಂದಿಸಿದಂತೆ ವಿಜಯಪುರ. ಪೋಲೀಸರು ಮತ್ತೆ ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು ನವೆಂಬರ್ 2 ರಂದು ನಡೆದಿದ್ದ ಗುಂಡಿನ ದಾಳಿಯಲ್ಲಿ ಭಾಗಿಯಾಗಿದ್ದ ಯಾಶೀನ್ ರಮಜಾನಸಾಬ್ ದಂದರಗಿ, ಕರೆಪ್ಪ ಸೊನ್ನದ , ಸಿದ್ದರಾಯ ಬೊಮ್ಮನಜೋಗಿ , ಸಚೀನ ಮಾನವರ್ , ಚಡಚಣ. ಮೂಲದ ರವಿ ಬಂಡಿ ಬಂಧಿತ ಆರೋಪಿಗಳು, ಬಂಧಿತ ಆರೋಪಿಗಳಿಂದ ಐದು …
Read More »ಲೈಸನ್ಸ್ ಇಲ್ಲದೆ ನಾಡ ಪಿಸ್ತೂಲ್ ಇಟ್ಟುಕೊಂಡು ಬೈಕ್ ಮೇಲೆ ತೆರಳುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ವಿಜಯಪುರ: ಲೈಸನ್ಸ್ ಇಲ್ಲದೆ ನಾಡ ಪಿಸ್ತೂಲ್ ಇಟ್ಟುಕೊಂಡು ಬೈಕ್ ಮೇಲೆ ತೆರಳುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಯಾದಗಿರಿ ಜಿಲ್ಲೆಯ ಯಾಳಗಿ ಗ್ರಾಮದ ರಾಮರೆಡ್ಡಿ ಮಾಲಿಪಾಟೀಲ್, ಬೆಂಗಳೂರಿನ ಶ್ರೀರಾಮಪುರಂದ ಸುರೇಶ್ ತುಂಗರಾಜ, ವಿನೋದ ರಾಜಾ ಬಂಧಿತ ಆರೋಪಿಗಳು. ಇಲ್ಲಿನ ರಿಂಗ್ ರಸ್ತೆಯಲ್ಲಿನ ಜಮಖಂಡಿ ನಾಕಾ ಬಳಿ ಬೈಕ್ ಮೇಲೆ ತೆರಳುತ್ತಿದ್ದ ಮೂವರು ವಾಹನ ತಪಾಸಣೆ ವೇಳೆ ಸಿಕ್ಕಿ ಬಿದ್ದಿದ್ದು, ಎರಡು ಮಚ್ಚು, ಒಂದು ನಾಡ ಪಿಸ್ತೂಲ್, ಜೀವಂತ ಗುಂಡು ಪತ್ತೆಯಾಗಿವೆ. ಮೂವರನ್ನು …
Read More »ಹಣಕ್ಕಾಗಿ ಪೊಲೀಸರು ನಮ್ಮ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ನಮ್ಮ ತಂದೆಯನ್ನು ಕೊಲೆ ಮಾಡಿದ್ದಾರೆ
ವಿಜಯಪುರ : ಹಣಕ್ಕಾಗಿ ಪೊಲೀಸರು ನಮ್ಮ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ನಮ್ಮ ತಂದೆಯನ್ನು ಕೊಲೆ ಮಾಡಿದ್ದಾರೆ ನಾನು ಒಬ್ಬ ಪೊಲೀಸ್ ಆಗಿದ್ದು, ನನ್ನ ತಂದೆಯ ಜೀವ ಕಾಪಾಡಿಕೊಳ್ಳಲು ಸಾಧ್ಯವಾಗಿಲ್ಲ. ಇನ್ನು ಸಾರ್ವಜನಿಕರ ಪಾಡೇನು ಎಂದು ಜಿಲ್ಲೆಯ ಸಿಂದಗಿಇ ತಾಲೂಕಿನ ಬಂಟನೂರು ಗ್ರಾಮದ ನಿವಾಸಿ ಬಸವರಾಜ ಪಾಟೀಲ್ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಸವರಾಜ್ ಅವರು ಕಳೆದ 13 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ …
Read More »ಭೀಮಾತೀರದ ಮಹಾದೇವ ಸಾಹುಕಾರ್ ಪ್ರಕರಣ : ಒಂದೂವರೆ ಸಾವಿರ ಪೊಲೀಸರು ನಿಯೋಜನೆ
ಭೀಮಾತೀರದ ಮಹಾದೇವ ಸಾಹುಕಾರ್ ಪ್ರಕರಣ : ಒಂದೂವರೆ ಸಾವಿರ ಪೊಲೀಸರು ನಿಯೋಜನೆ ವಿಜಯಪುರ : ಭೀಮಾತೀರದ ಮಹಾದೇವ ಸಾಹುಕಾರ ಭೈರಗೊಂಡ ಮೇಲಿನ ಗುಂಡಿನ ದಾಳಿ ಪ್ರಕರಣ ತನಿಖೆಗಾಗಿ, ಒಂದೂವರೆ ಸಾವಿರ ಪೊಲೀಸರು ಒಳಗೊಂಡ ಹತ್ತು ತಂಡಗಳುನ್ನು ನಿಯೋಜನೆ ಮಾಡಲಾಗಿದೆ. ಅಚ್ಚರಿಯಾದರು ಸತ್ಯ. ಯಾವುದಾದರೂ ಒಂದು ಅಪರಾಧ ಪ್ರಕರಣವನ್ನು ಒಬ್ಬಿಬ್ಬರು ಪೊಲೀಸರು ಅಥವಾ ಹತ್ತಾರು ಪೊಲೀಸರ ಒಂದು ತಂಡ ಬೆನ್ನು ಹತ್ತುವುದು ಸಾಮಾನ್ಯ. ಆದರೆ ಈ ಪ್ರಕರಣದ ತನಿಖೆಗಾಗಿ …
Read More »24 ಗಂಟೆಗಳಲ್ಲಿಯೇ 195 ಕೋಟಿ ರೂ ಅನುದಾನ ಬಿಡುಗಡೆ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ವಿಜಯಪುರ: ‘ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಅನೇಕ ಬಾರಿ ಭೇಟಿಯಾಗಿದ್ದೆ. ವಿಜಯಪುರಕ್ಕೆ ಅನುದಾನ ಬಿಡುಗಡೆ ಮಾಡುವ ಸಂಬಂಧ ಮನವಿ ಮಾಡಿದ್ದಾಗ ಅನುದಾನದ ಭರವಸೆ ನೀಡಿದ್ದರು. ಆದರೆ ಬಿಡುಗಡೆ ಮಾಡಿರಲಿಲ್ಲ. ಆದರೆ ಮೊನ್ನೆ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡಿದ್ದರ ಫಲವಾಗಿ ಕೇವಲ 24 ಗಂಟೆಗಳಲ್ಲಿಯೇ 195 ಕೋಟಿ ರೂ ಅನುದಾನ ಬಿಡುಗಡೆ ಮಾಡಿದ್ದಾರೆ’ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲಿದ್ದಾರೆ, ಉತ್ತರ ಕರ್ನಾಟಕದವರೊಬ್ಬರು …
Read More »B.S.ಯಡಿಯೂರಪ್ಪ ಬದಲಾವಣೆ ವಿಚಾರವಾಗಿ ಮುಖ್ಯಮಂತ್ರಿಗಳಿಗೆ ಶಾಸಕ ಯತ್ನಾಳ್ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.ಶಾಸಕ ಬಸನಗೌಡಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿಜಯಪುರ: ಸಿಎಂ ಸ್ಥಾನದಿಂದ B.S.ಯಡಿಯೂರಪ್ಪ ಬದಲಾವಣೆ ವಿಚಾರವಾಗಿ ಮುಖ್ಯಮಂತ್ರಿಗಳಿಗೆ ಶಾಸಕ ಯತ್ನಾಳ್ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. BSY 3 ವರ್ಷವೂ ಸಿಎಂ ಆಗಿರ್ತಾರೆಂದು ನಾನೇನೂ ಹೇಳಲ್ಲ. ಸೂರ್ಯ, ಚಂದ್ರರಿರುವಷ್ಟು ದಿನ CM ಆಗಿರ್ತಾರೆಂದು ಕೆಲ ಸಚಿವರು ಹೀಗೆ ಹೇಳಿದ್ದಾರೆ. ಆದ್ರೆ ನಾನು ಈ ರೀತಿ ಹೇಳಲ್ಲ ಎಂದು ಶಾಸಕ ಬಸನಗೌಡಪಾಟೀಲ್ ಯತ್ನಾಳ್ ಹೇಳಿದ್ದಾರೆ. ಸಿಎಂ, ಸರ್ಕಾರದ ವಿರುದ್ಧ ಮಾತಾಡಿದ್ದಕ್ಕೆ ಪತ್ರ ಬರೆದ ವಿಚಾರವಾಗಿ ಕೆಲವು ಸಚಿವರು, ಪಕ್ಷದ ಹಿರಿಯ ಶಾಸಕರು ಪತ್ರ …
Read More »ಪುತ್ರನ ರಕ್ಷಣೆಗಾಗಿ ಧಾವಿಸಿದ ತಾಯಿಯೂ ಸಹ ನೀರಿನಲ್ಲಿ ಮುಳುಗಿ ಸಾವು
ವಿಜಯಪುರ: ಕಾಲುವೆಯಲ್ಲಿ ಮುಳುಗಿ ತಾಯಿ, ಮಗ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ನಿಡಗುಂದಿ ಹೊರವಲಯದ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಯಲ್ಲಿ ನಡೆದಿದೆ. ಅಂಜನಾ ಕೊಂಚಿಕೊರವರ(28) ಮತ್ತು ನಾಗೇಶ(8) ನೀರುಪಾಲಾದ ದುರ್ದೈವಿಗಳು. ಪುತ್ರನ ಜೊತೆ ಅಂಜನಾ ಬಟ್ಟೆ ತೊಳೆಯಲು ತೆರಳಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಕಾಲುವೆಯಲ್ಲಿ ಈಜಾಡುವ ವೇಳೆ ನಾಗೇಶ ಮುಳುಗಲು ಆರಂಭಿಸಿದ್ದನಂತೆ. ಈ ನಡುವೆ, ಪುತ್ರನ ರಕ್ಷಣೆಗಾಗಿ ಧಾವಿಸಿದ ತಾಯಿಯೂ ಸಹ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ.
Read More »ಮದ್ಯ ಸೇವಿಸಲು ಹಣ ನೀಡದ್ದಕ್ಕೆ ಪಾಪಿ ಪತಿಯೊಬ್ಬ ಪತ್ನಿಯನ್ನು ಕೊಲೆಗೈದಿರುವ ಘಟನೆ
ವಿಜಯಪುರ: ಮದ್ಯ ಸೇವಿಸಲು ಹಣ ನೀಡದ್ದಕ್ಕೆ ಪಾಪಿ ಪತಿಯೊಬ್ಬ ಪತ್ನಿಯನ್ನು ಕೊಲೆಗೈದಿರುವ ಘಟನೆ ಜಿಲ್ಲೆಯ ಆಲಮೇಲ ತಾಲೂಕಿನ ದೇವನಣಗಾಂವ್ ಗ್ರಾಮದಲ್ಲಿ ನಿನ್ನೆ ತಡರಾತ್ರಿ ನಡೆದಿದೆ. 45 ವರ್ಷದ ಮಲಕವ್ವ ಹರಗೋಲ ಕೊಲೆಯಾದ ದುರ್ದೈವಿ. ಮದ್ಯ ಸೇವಿಸಲು ಹಣ ನೀಡದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ಪತಿ ಶಿವಪ್ಪ ಹರಗೋಲ ಕೊಡಲಿಯಿಂದ ಕೊಚ್ಚಿ ಕೊಚ್ಚಿ ಪತ್ನಿಯನ್ನು ಹತ್ಯೆ ಮಾಡಿದ್ದಾನೆ. ಬಳಿಕ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಆಲಮೇಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.
Read More »