Breaking News

ಬಾಗಲಕೋಟೆ

ಮಸೀದಿಯಿಂದ ಕಲ್ಲು ಎಸೆಯಲಾಗಿದೆ, ನನ್ನ ಮೇಲೂ ಕಲ್ಲು ಬಿದ್ದಿತ್ತು: ಬಾಗಲಕೋಟೆ ಎಸ್‌ಪಿ

ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಪೊಲೀಸರು  8 ಮಂದಿಯನ್ನು ಬಂಧಿಸಿದ್ದಾರೆ. ತನ್ವೀರ್ (28) , ಮುಜ್ಜು (23), ಸದ್ದಾಂ(22), ಫಯಾಜ್(24), ಸರ್ಫರಾಜ್(33), ರಿಯಾನ್(21), ಅಯಾನ್(19), ವಸೀಮ್(22) ಬಂಧನಕ್ಕೆ ಒಳಗಾದ ಆರೋಪಿಗಳು. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಾಗಲಕೋಟೆ ಎಸ್‌ಪಿ ಸಿದ್ದಾರ್ಥ ಗೋಯಲ್, ವಿಡಿಯೋ ದೃಶ್ಯಗಳನ್ನು ಆಧಾರಿಸಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ನಾವು ಆರೋಪಿಗಳನ್ನು ಬಂಧಿಸಿದ್ದೇವೆ. ರಾತ್ರಿ 10:06ಕ್ಕೆ ಕಲ್ಲು ಎಸೆಯಲಾಗಿದೆ. ನಮ್ಮ ಕರ್ತವ್ಯಕ್ಕೆ …

Read More »

ಜಿಲ್ಲಾಮಟ್ಟದ ಗ್ಯಾರಂಟಿ ಕಾರ್ಯಾಗಾರ ಹಾಗೂ ಉತ್ಸವ ಸಿದ್ಧತೆ ಪರಿಶೀಲನೆ

ಬಾಗಲಕೋಟೆ: ನವನಗರದ ಜಿಲ್ಲಾ ಕಲಾ ಭವನದಲ್ಲಿ ಫೆ. 20ರಂದು ಜಿಲ್ಲಾಮಟ್ಟದ ಗ್ಯಾರಂಟಿ ಕಾರ್ಯಾಗಾರ ಹಾಗೂ ಉತ್ಸವ ಜರುಗಲಿದ್ದು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಬುಧವಾರ ಸಿದ್ಧತಾ ಕಾರ್ಯ ಪರಿಶೀಲಿಸಿದರು. ಕಾರ್ಯಕ್ರಮದ ಮುಖ್ಯ ವೇದಿಕೆ, ಊಟದ ವ್ಯವಸ್ಥೆಯ ಸ್ಥಳ ಪರಿಶೀಲನೆ ಹಾಗೂ ಕಲಾ ಭವನದ ಮುಖ್ಯದ್ವಾರದ ಪಕ್ಕದಲ್ಲಿ ಹೆಚ್ಚುವರಿಯಾಗಿ ಬಂದ ಜನರಿಗೆ ಕಾರ್ಯಕ್ರಮ ವೀಕ್ಷಣೆಗೆ ಎಲ್‌ಇಡಿ ವ್ಯವಸ್ಥೆ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಇಲಾಖೆಗಳ …

Read More »

ಬಿವಿವಿ ಸಂಘದ ಮೂರು ಮಹಾವಿದ್ಯಾಲಯಗಳಲ್ಲಿ ಐಟಿಇಪಿ ಕೋರ್ಸ್

ಬಾಗಲಕೋಟೆ:  ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಬಿವಿವಿ ಸಂಘದ ಮೂರು ಮಹಾವಿದ್ಯಾಲಯಗಳಲ್ಲಿ ನಾಲ್ಕು ವರ್ಷಗಳ ಸಂಯುಕ್ತ ಶಿಕ್ಷಕರ ಶಿಕ್ಷಣ ಪದವಿ(ಐಟಿಇಪಿ) ಕೋರ್ಸ್ ಆರಂಭಿಸಲಾಗುತ್ತದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಹೇಳಿದರು. ಸಂಘದ ಮಿನಿ ಸಭಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನಾಲ್ಕು ವರ್ಷದ ಬಿಎ ಬಿಎಡ್, ಬಿಎಸ್ಸಿ ಬಿಎಡ್ ಪದವಿ ಪ್ರಾರಂಭಿಸಲು ಕೇಂದ್ರ ಸರ್ಕಾರದ ಎನ್‌ಸಿಟಿಇ ಅನುಮತಿ ನೀಡಿದೆ ಎಂದರು. ಬಾಗಲಕೋಟೆಯ ಬಸವೇಶ್ವರ ಕಲಾ …

Read More »

ಶಿವಾಜಿ ಜಯಂತಿ ಮೆರವಣಿಗೆ ವೇಳೆ ಮಸೀದಿಯಿಂದ ಕಲ್ಲು ತೂರಾಟ

ಬಾಗಲಕೋಟೆ: ಶಿವಾಜಿ ಜಯಂತಿ  ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದ ಘಟನೆ ಬಾಗಲಕೋಟೆಯ ಕಿಲ್ಲಾ ಓಣಿಯಲ್ಲಿ ನಡೆದಿದೆ. ಶಾಂತವಾಗಿ ನಡೆಯುತ್ತಿದ್ದ ಮೆರವಣಿಗೆ ವೇಳೆ ಕಲ್ಲು ತೂರಿದ್ದಾರೆ ಎಂದು ಹಿಂದೂ ಸಂಘಟನೆಗಳ ನಾಯಕರು ದೂರಿದ್ದಾರೆ. ಮಸೀದಿ‌ ಕಡೆಯಿಂದ ಕಲ್ಲು ಬಂದಿದೆ.ನಮ್ಮ ಕಾರ್ಯಕರ್ತರ ಜೊತೆಗೆ ಬೆಳಗಾವಿ ಎಸ್‌ಪಿ, ಪೊಲೀಸರ ಮೇಲೂ ಕಲ್ಲು ಬಿದ್ದಿದೆ ಎಂದು ಹಿಂದೂ ಮುಖಂಡರು ಪಬ್ಲಿಕ್‌ ಟಿವಿಗೆ ತಿಳಿಸಿದ್ದಾರೆ. ಕಲ್ಲು ತೂರಿದ ಬೆನ್ನಲ್ಲೇ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. …

Read More »

ಕಾಂಗ್ರೆಸ್ ಮುಖಂಡನ ಕೊಲೆ

ಬಾಗಲಕೋಟೆ:ಕೆರೂರ ಸಮೀಪದ ಸಾಗನೂರು ಗ್ರಾಮದ ಸಹಕಾರಿ ಧುರೀಣ, ಕಾಂಗ್ರೆಸ್ ಮುಖಂಡ ಶಿವಪ್ಪ ಬಸಪ್ಪ ಮೇಟಿ (54) ಕೊಲೆಯಾಗಿದ್ದು, ಕೆರೂರ ಪೊಲೀಸ್ ಠಾಣೆಯಲ್ಲಿ ಮೃತರ ಮಗ ಯಮನಪ್ಪ ಮೇಟಿ ಪ್ರಕರಣ ದಾಖಸಿದ್ದಾನೆ. ಫೆಬ್ರುವರಿ 12 ಗುರುವಾರ 8.30 9.30ರ ಅವಧಿಯಲ್ಲಿ ಕೊಲೆಯಾದ ಶಿವಪ್ಪ ಮೇಟಿ ಸಾಗನೂರ ಗ್ರಾಮದ ಹೊರ ವಲಯದ ಬಟಕುರ್ಕಿ ರಸ್ತೆ ಕಡೆಗೆ ಬಯಲು ಬಹಿರ್ದಸೆಗೆಂದು ಹೋಗಿದ್ದಾಗ ಯಾರೋ ದುಷ್ಕರ್ಮಿಗಳು ಯಾವುದೋ ವಸ್ತುವಿನಿಂದ ಹೊಡೆದು ಕೊಲೆ ಮಾಡಿ, ಸಾಕ್ಷಿ ನಾಶ …

Read More »

ಜಮಖಂಡಿ ಆಸ್ಪತ್ರೆಗೆ ಡಿಸಿ ಸಂಗಪ್ಪ ದಿಢೀರ್ ಭೇಟಿ: ದೂರು ನೀಡಿದ್ದ ಸಾರ್ವಜನಿಕರ ಸಮ್ಮುಖದಲ್ಲೇ ಅಧಿಕಾರಿಗಳಿಗೆ ತರಾಟೆ!

ಬಾಗಲಕೋಟೆ ಜಿಲ್ಲಾಧಿಕಾರಿ ಸಂಗಪ್ಪ ಅವರು ಇಂದು ಜಮಖಂಡಿ ಮತ್ತು ಮುಧೋಳ ತಾಲ್ಲೂಕಿನ ವಿವಿಧ ಸರ್ಕಾರಿ ಕಚೇರಿ ಹಾಗೂ ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಈ ಆಪರೇಷನ್ ನಡೆಸಿದ ಡಿಸಿ, ಕರ್ತವ್ಯ ಲೋಪ ಎಸಗುವ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಜಮಖಂಡಿ ತಾಲ್ಲೂಕು ಆಸ್ಪತ್ರೆಯಲ್ಲಿ ರೋಗಿಗಳನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಶಿಫಾರಸು ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಜಮಖಂಡಿ ಎಸಿ …

Read More »

ಬಾಗಲಕೋಟೆ ಮೋಟಗಿಯಲ್ಲಿ ಶುರುವಾಗಿದೆ ಜಾನುವಾರು ಜಾತ್ರೆ

ಬಾಗಲಕೋಟೆ: ಸಾಲು ಸಾಲಾಗಿ ಮಾರಾಟಕ್ಕೆ ಸಿದ್ದವಾಗಿ ನಿಂತಿರುವ ಎತ್ತು, ಹೋರಿಗಳು. ತಮ್ಮ ತಮ್ಮ ಎತ್ತುಗಳನ್ನು ಹಿಡಿದು ನಿಂತಿರುವ ರೈತರು. ಮಾರಾಟವಾದ ಎತ್ತುಗಳ ಮೈಮೇಲೆ ಬಣ್ಣದೋಕುಳಿ. ಇನ್ನೊಂದೆಡೆ ಕಿಲಾರಿ ಹೋರಿ, ಎತ್ತುಗಳ ಪ್ರದರ್ಶನ ಸ್ಪರ್ಧೆ. ಪಶು ಇಲಾಖೆ ಹಾಗೂ ಎಪಿಎಂಸಿ ಅಧಿಕಾರಿಗಳಿಂದ ಜಾನುವಾರುಗಳ ಆಯ್ಕೆ. ಬಾಗಲಕೋಟೆ  ಮೋಟಗಿ ಬಸವೇಶ್ವರ ಜಾತ್ರೆ ಪ್ರಯುಕ್ತ ಜಾನುವಾರು ಜಾತ್ರೆ ನಡೆಯುತ್ತಿದೆ. ಕೇಸನೂರು ಗ್ರಾಮದ ವ್ಯಾಪ್ತಿಯಲ್ಲಿ ಜಾನುವಾರು ಜಾತ್ರೆ  ಆಯೋಜಿಸಿದ್ದು, ಬಾಗಲಕೋಟೆ, ವಿಜಯಪುರ, ಬೆಳಗಾವಿ, ರಾಯಚೂರು, ಕೊಪ್ಪಳ, …

Read More »

Bagalkote: ಅಂಜುಮನ್ ಕಮಿಟಿಗೆ ರಾಜ್ಯ ಸರ್ಕಾರದಿಂದ ₹1 ಕೋಟಿ ಅನುದಾನ ಮಂಜೂರು

ಬಾಗಲಕೋಟೆ: ಅಂಜುಮನ್ ಇಸ್ಲಾಂ ಕಮಿಟಿಯ ಅಭಿವೃದ್ಧಿಗಾಗಿ ಹಾಗೂ ಸಂಸ್ಥೆಯ ಬಹುಪಯೋಗಿ ಭವನ ನಿರ್ಮಿಸಲು ಸರಕಾರ ಒಂದು ಕೋಟಿ ರೂಪಾಯಿಗಳ ಅನುದಾನ ಮಂಜೂರು ಮಾಡಿದೆ ಎಂದು ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರಜಾಕ್ ಕುದುರೆ ತಿಳಿಸಿದರು. ಪಟ್ಟಣದ ಅಂಜುಮನ್ ಇಸ್ಲಾಂ ಕಮಿಟಿ ಕಾರ್ಯಾಲಯದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗುಳೇದಗುಡ್ಡದಲ್ಲಿ ಅಂಜುಮನ್ ಎ ಇಸ್ಲಾಂ ಕಮಿಟಿ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆ ಮಾಡಿಸಲು ಕಮಿಟಿಯ ಹಿಂದಿನ ಆಡಳಿತ ಮಂಡಳಿ ಸದಸ್ಯರು ಹಾಗೂ ಸಮಾಜದ …

Read More »

ಸಮಜಾವೇ ನನ್ನ ಕುಟುಂಬ : ಮಠಕ್ಕೆ ಭಕ್ತರಾಗಿ ಬನ್ನಿ

ಬಾಗಲಕೋಟೆ: ಸಮಾಜವನ್ನೇ ಕುಟುಂಬ ಮಾಡಿಕೊಂಡು ಶ್ರಮಿಸುವ ಕೆಲಸ ಮಠಾಧಿಪತಿಯದಾಗಿದ್ದು ಮಠಕ್ಕೆ ಬರುವಾಗ ರಾಜಕೀಯ ವ್ಯಕ್ತಿಗಳಾಗದೇ ಭಕ್ತರಾಗಿ ಬನ್ನಿ ಎಂದು ನೂತನ ಚರಪಟ್ಟಾಧಿಕಾರಿಯಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಗುರು ಶ್ರೀ ರೇವಣಸಿದ್ದ ಸ್ವಾಮಿಗಳು ಹೇಳಿದರು. ನಗರದ ಟೀಕಿನಮಠದ ಮಲ್ಲಿಕಾರ್ಜುನ ದೇಶಿಕರ ನಿರಂಜನ ಚರಪಟ್ಟಾಧಿಕಾರ ಮಹೋತ್ಸವ ನಿಮಿತ್ಯ ಚರಂತಿಮಠದ ಆವರಣದಲ್ಲಿ ರವಿವಾರ ಹಮ್ಮಿಕೊಂಡಿದ್ದ ಶೂನ್ಯಪೀಠಾರೋಹಣ ಕಾರ್ಯಕ್ರಮದಲ್ಲಿ ವಿರಕ್ತಮಠದ ಶ್ರೀ ಜಡೆಯ ಶಾಂತಲಿಂಗೇಶ್ವರ ಲಿಂಗಹಸ್ತದಿಂದ ಚಿರಪಟ್ಟಾಧಿಕಾರ ಪಡೆದು ಶೂನ್ಯಪೀಠಾರೋಹಣ ಮಾಡಿ ಅವರು ಮಾತನಾಡಿದರು. ಗುರುವಿಗಾಗಿ …

Read More »

ಭವ್ಯ ಭಾರತ ನಿರ್ಮಾಣಕ್ಕೆ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ ನೀಡಿ: ರೈತ ಮುಖಂಡ ಶಶಿಕಾಂತ್ ಗುರೂಜಿ

ಕಾಗವಾಡ:”ಗುರ್ಲಾಪುರ ಕ್ರಾಸ್‌ನಲ್ಲಿ ಕಬ್ಬಿನ ದರಕ್ಕಾಗಿ ಹಮ್ಮಿಕೊಂಡಿದ್ದ ಹೋರಾಟಕ್ಕೆ ಹಳಿಂಗಳಿಯ ಜೈನಮಠದ ಪರಮಪೂಜ್ಯ ಕುಲಭೂಷಣ ಮುನಿ ಮಹಾರಾಜರ ಆಶೀರ್ವಾದವೇ ಶ್ರೀರಕ್ಷೆಯಾಯಿತು. ನಾನು ಅವರ ಆಶೀರ್ವಾದ ಪಡೆಯಲು ಹೋದಾಗ, ‘ನಿನ್ನಿಂದ ನಾಡಿನ ಸೇವೆಯಾಗಲಿದೆ’ ಎಂದು ಅವರು ಹರಸಿದ್ದರು. ಅದರ ಫಲಶೃತಿಯಾಗಿಯೇ ಇಂದು ರೈತರ ಹೋರಾಟ ಯಶಸ್ವಿಯಾಗಿದೆ,” ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಶಶಿಕಾಂತ್ ಗುರೂಜಿ ಹೇಳಿದರು. ಶೇಡಬಾಳದ ಆಚಾರ್ಯ ಶಾಂತಿಸಾಗರ ಜೈನ ಆಶ್ರಮದಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಶಾಂತಿಸಾಗರ ಪ್ರಾಥಮಿಕ, …

Read More »