ದಾವಣಗೆರೆ: ತುಂಗಾಭದ್ರ ನದಿಗೆ ಹಾರಿ ಪ್ರೇಮಿಗಳು ಅತ್ಮಹತ್ಯೆಗೆ ಯತ್ನಿಸಿದ ಘಟನೆ ಹೊನ್ನಾಳಿ ಪಟ್ಟಣದಲ್ಲಿ ನಡೆದಿದೆ. ತುಂಗಾಭದ್ರ ಬ್ರಿಡ್ಜ್ ಮೇಲಿಂದ ದಾವಣಗೆರೆ ಮೂಲದ ಪ್ರೇಮಿಗಳು ನದಿಗೆ ಜಿಗಿದಿದ್ದಾರೆ. ಇದನ್ನು ಕಂಡ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನದಿಯಲ್ಲಿ ನೀರಿನ ಮಟ್ಟ ಕಡಿಮೆ ಇದ್ದಿದ್ದರಿಂದ ಜೀವಕ್ಕೆ ಹಾನಿಯಾಗಿಲ್ಲ. ಮನೆಯಲ್ಲಿ ಇಬ್ಬರ ಮದುವೆಗೆ ಒಪ್ಪಿಗೆ ನೀಡದ ಹಿನ್ನಲೆ ಅತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು …
Read More »ಜಮೀರ್ ಬಳಿ ಕ್ಷಮೆ ಕೇಳದೇ ಇದ್ರೆ ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಎಫೆಕ್ಟ್ ಆಗುತ್ತೆ: ಮಲ್ಲಿಕಾರ್ಜುನ್‌ಗೆ ಸಿರಾಜ್ ಅಹ್ಮದ್ ವಾರ್ನಿಂಗ್
ದಾವಣಗೆರೆ: ಜಮೀರ್ ಅಹ್ಮದ್ ಅವರ ಬಗ್ಗೆ ಏನಾದರೂ ಮಾತನಾಡಿದರೆ ಜನ ಸಹಿಸುವುದಿಲ್ಲ. ಕೂಡಲೇ ಜಮೀರ್ ಅವರ ಬಳಿ ಕ್ಷಮೆ ಕೋರುವಂತೆ ಕೆಪಿಸಿಸಿ ಅಲ್ಪಸಂಖ್ಯಾತ ರಾಜ್ಯ ಉಪಾಧ್ಯಕ್ಷ ಹಾಗೂ ಕೆಎಂಡಿಸಿ ನಿರ್ದೆಶಕ ಸಿರಾಜ್ ಅಹ್ಮದ್ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್ ಅವರಿಗೆ ಆಗ್ರಹಿಸಿದ್ದಾರೆ. ಜಮೀರ್ ವಿರುದ್ಧ ಏಕವಚನದಲ್ಲಿ ಮಲ್ಲಿಕಾರ್ಜುನ್ ಮಾತನಾಡಿದ್ದಕ್ಕೆ ಬೂದಿಹಾಳ ರಸ್ತೆಯಲ್ಲಿನ ಕಚೇರಿಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಕ್ಷಕ್ಕೆ ಮತದಾರರು ಮಾತ್ರ ದೊಡ್ಡವರು, ನೀವು ಅಲ್ಲ ಜಮೀರ್ ಅಲ್ಲ. …
Read More »ಬಾಂಗ್ಲಾದಲ್ಲಿ ಮಾತ್ರ ಅಲ್ಲ ನಮ್ಮ ದೇಶದಲ್ಲೂ ಹಿಂದೂಗಳ ಸ್ಥಿತಿ ಹೀನಾಯ: ವಿಶ್ವಪ್ರಸನ್ನ ತೀರ್ಥ ಶ್ರೀ
ದಾವಣಗೆರೆ: ಬಾಂಗ್ಲಾದಲ್ಲಿ ಅಷ್ಟೇ ಅಲ್ಲ ನಮ್ಮ ದೇಶದಲ್ಲೂ ಕೂಡ ಹಿಂದೂಗಳ ಪರಿಸ್ಥಿತಿ ಹೀನಾಯವಾಗಿದೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನಾ ತೀರ್ಥ ಶ್ರೀಗಳು ಹೇಳಿದ್ದಾರೆ. ದಾವಣಗೆರೆಯಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ ಬಾಂಗ್ಲಾದಲ್ಲಿ ನಡೆಯುತ್ತಿರುವ ಹಿಂದುಗಳ ಹತ್ಯೆ ಬಗ್ಗೆ ಪ್ರತಿಕ್ರಿಯಿಸಿದರು. ಇದರ ಬಗ್ಗೆ ಕೇಂದ್ರ ಸರ್ಕಾರ ಕ್ರಮವನ್ನು ಕೈಗೊಳ್ಳಬೇಕು. ಹಿಂದೂಗಳ ಹೀನಾಯ ಸ್ಥಿತಿಯಲ್ಲಿ ಇರೋದು ಕೇವಲ ಬಾಂಗ್ಲಾದಲ್ಲಿ ಅಷ್ಟೇ ಅಲ್ಲ. ನಮ್ಮ ಭಾರತದಲ್ಲಿ ಕೂಡ ಹೀನಾಯ ಸ್ಥಿತಿಯಲ್ಲಿದ್ದಾರೆ ಎಂದು …
Read More »ಅಗ್ನಿಅವಘಡಕ್ಕೆ 4 ಕಾರುಗಳು ಭಸ್ಮ
ದಾವಣಗೆರೆ: ಇಲ್ಲಿನ ಪಿ.ಬಿ. ರಸ್ತೆಯ ಎಲ್‌ಐಸಿ ಕಚೇರಿ ಸಮೀಪದ ಗ್ಯಾರೇಜ್‌ನಲ್ಲಿ ಸೋಮವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ನಾಲ್ಕು ಕಾರುಗಳು ಭಸ್ಮವಾಗಿವೆ. ಕಾರುಗಳಿಗೆ ಬೆಂಕಿ ಹೊತ್ತಿಕೊಂಡಿದ್ದು ಗಮನಿಸಿದ ಸಾರ್ವಜನಿಕರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಮತ್ತು ತುರ್ತುಸೇವಾ ಸಿಬ್ಬಂದಿ ಬೆಂಕಿ ಆರಿಸಿದ್ದಾರೆ. ರಿಪೇರಿಗಾಗಿ ಗ್ಯಾರೇಜ್‌ಗೆ ಬಂದಿದ್ದ ಕಾರುಗಳನ್ನು ಹೊರಗಡೆ ನಿಲ್ಲಿಸಲಾಗಿತ್ತು. ಬೆಂಕಿ ಹೊತ್ತಿಕೊಂಡು ಅ ನಾಲ್ಕು ಕಾರುಗಳು ಸುಟ್ಟು ಹೋಗಿವೆ.
Read More »ಕಾರ್ಮೋಡ ಕವಿದಿತು, ಅಂತರಂಗದ ಪಕ್ಷಿ ಹಾರಿತು, ಕೆರೆ ಕಟ್ಟೆ ತುಂಬಿ ಹರಿದಾವು ಪರಾಕ್ – ಮುಳ್ಳುಗದ್ದುಗೆ ಮೇಲೆ ಕುಣಿದು ಕಾರ್ಣಿಕ!
ದಾವಣಗೆರೆ: ಶಿವರಾತ್ರಿ ಪ್ರಯುಕ್ತ ಚನ್ನಗಿರಿ ತಾಲೂಕಿನ ಕೆಂಗಾಪುರ ಗ್ರಾಮದ ಉತ್ಸವದಲ್ಲಿ ರಾಮಲಿಂಗೇಶ್ವರ ಸ್ವಾಮೀಜಿ ಮುಳ್ಳುಗದ್ದುಗೆ ಏರಿ ಕಾರ್ಣಿಕ ನುಡಿದಿದ್ದಾರೆ. ಮುಳ್ಳುಗದ್ದುಗೆ ಏರಿ ಕುಣಿದ ನಂತರ, ಕಾರ್ಮೋಡ ಕವಿದಿತು, ಅಂತರಂಗದ ಪಕ್ಷಿ ಹಾರಿತು, ಕೆರೆ ಕಟ್ಟೆಗಳು ತುಂಬಿ ಹರಿದಾವು ಪರಾಕ್ ಎಂದು ಸ್ವಾಮೀಜಿ ಕಾರ್ಣಿಕ ನುಡಿದಿದ್ದಾರೆ. ಈ ಬಾರಿ ಉತ್ತಮ ಮಳೆಯಾಗಿ ಕೆರೆ ತೊರೆಗಳು ತುಂಬಿ ತುಳಕಲಿವೆ. ಉತ್ತಮ ಬೆಳೆ ಬರಲಿದೆ. ಜನರಿಗೆ ಪ್ರಯಾಣದಲ್ಲಿ ಸಾಕಷ್ಟು ದುರಂತ ನಡೆದು, ಸಾವು ನೋವು …
Read More »ʻಕೈʼ ಮುಖಂಡನ ಪುತ್ರರಿಂದ ಪೊಲೀಸರ ಮೇಲೆ ಹಲ್ಲೆ ಕೇಸ್ – ಕಾನೂನು ಎಲ್ಲರಿಗೂ ಒಂದೇ, ಶಿಕ್ಷೆ ಆಗುತ್ತೆ: ನಾಗಲಕ್ಷ್ಮೀ ಚೌಧರಿ
ದಾವಣಗೆರೆ: ಚಿಗಟೀರಿ ಜಿಲ್ಲಾಸ್ಪತ್ರೆ ಬಳಿ ನಡೆದಿದ್ದ ಪೊಲೀಸರ ಮೇಲಿನ ಹಲ್ಲೆ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ತನಿಖೆ ನಡೆಯುತ್ತಿದೆ. ಕಾನೂನಿನ ಮುಂದೆ ಯಾರು ದೊಡ್ಡವರಲ್ಲ, ಯಾವ ಪಕ್ಷದವರು ದೊಡ್ಡವರಲ್ಲ. ಶಿಕ್ಷೆ ಆಗುತ್ತದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೇಳಿದರು. ದಾವಣಗೆರೆಯಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಪೊಲೀಸರ ಮೇಲೆ ನಡೆದಿದ್ದ ಹಲ್ಲೆ ಪ್ರಕರಣದ ವಿಚಾರವಾಗಿ ಪ್ರತಿಕ್ರಿಯಿಸಿ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಾಯಕರು ಎಂಬ ಪ್ರಶ್ನೆ …
Read More »ದಾವಣಗೆರೆ | ಸನ್ಯಾಸತ್ವ ಸ್ವೀಕರಿಸಿದ ಇಂಜಿನಿಯರಿಂಗ್ ವಿದ್ಯಾರ್ಥಿನಿ
ದಾವಣಗೆರೆ: ನಗರದ ಚೌಕಿಪೇಟೆಯ 26 ವರ್ಷದ ಯುವತಿಯೊಬ್ಬರು ಸಂಸಾರ ತೊರೆದು ಸನ್ಯಾಸತ್ವ ಸ್ವೀಕರಿಸಿದ್ದಾರೆ. ಮುಖೇಶ್ ಕುಮಾರ್ ಹಾಗೂ ಸುನೀತಾ ಅವರ ಪುತ್ರಿ ಆಂಚಲ್ ಕುಮಾರಿ (26) ಜೈನ ಧೀಕ್ಷೆ ಪಡೆದಿದ್ದಾರೆ. ಅವರು ಖಾಸಗಿ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಓದುತ್ತಿದ್ದರು. ಅಲ್ಲದೇ ಕಾಲೇಜಿನಲ್ಲಿ ಟಾಪರ್ ಆಗಿದ್ದರು. ಇಂದು (ಫೆ.6) ಸೂರತ್‌ನಲ್ಲಿ ಅವರು ಸನ್ಯಾಸ ಧೀಕ್ಷೆ ಪಡೆದಿದ್ದಾರೆ. ಯುವತಿಯ ಆಯ್ಕೆಯನ್ನು ಕುಟುಂಬಸ್ಥರು ಸಹ ಖುಷಿಯಿಂದ ಒಪ್ಪಿಕೊಂಡಿದ್ದಾರೆ. ಇತ್ತೀಚಿಗೆ ಆಂಚಲ್ ಕುಮಾರಿಯವರು ಆಧ್ಯಾತ್ಮದ ಕಡೆ …
Read More »ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಮನೆಗೆ ಹೊತ್ತಿಕೊಂಡ ಬೆಂಕಿ
ದಾವಣಗೆರೆ: ಶಾರ್ಟ್ ಸರ್ಕ್ಯೂಟ್ನಿಂದ ಅಗ್ನಿ ಅವಘಡ ಸಂಭವಿಸಿ ತಾಯಿ – ಮಗ ಮೃತಪಟ್ಟಿರುವ ದಾರುಣ ಘಟನೆ ನಗರದ ಕಾಯಿಪೇಟೆಯಲ್ಲಿ ನಡೆದಿದೆ. ಬೆಂಕಿಯಿಂದ ಮನೆಯಲ್ಲಿದ್ದ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ವಿಮಲಾ (75) ಮತ್ತು ಅವರ ಪುತ್ರ ಕುಮಾರ್ (35) ಪ್ರಾಣ ಕಳೆದುಕೊಂಡ ದುರ್ದೈವಿಗಳು. ಮೃತರು ಬಿಜೆಪಿ ಮುಖಂಡ ರುದ್ರಮುನಿಸ್ವಾಮಿ ಅವರ ಸಂಬಂಧಿಗಳಾಗಿದ್ದಾರೆ. ತಡರಾತ್ರಿ ಮಲಗಿದ್ದ ಸಂದರ್ಭದಲ್ಲಿ ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿವೆ. ಇದರಿಂದ ದಟ್ಟ ಹೊಗೆ ಆವರಿಸಿದೆ. ಮನೆಯಲ್ಲಿದ್ದ 6 ಮಂದಿಯ …
Read More »ಸಿಸೇರಿಯನ್ ಹೆರಿಗೆಯಾದ ಎರಡೇ ದಿನಕ್ಕೆ ಬಾಣಂತಿ ಸಾವು
ದಾವಣಗೆರೆ: ಸಿಸೇರಿಯನ್ ಹೆರಿಗೆ ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಬಾಣಂತಿಯೊಬ್ಬರು ಎರಡೇ ದಿನದಲ್ಲಿ ಆರೋಗ್ಯದಲ್ಲಿ ಏರುಪೇರಾಗಿ ಮೃತಪಟ್ಟ ಘಟನೆ ಇಲ್ಲಿನ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣವೆಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ. ದುರ್ಗಮ್ಮ (21) ಎಂಬವರೇ ಮೃತ ಬಾಣಂತಿ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿರುವ ತನ್ನ ತಾಯಿ ಮನೆಗೆ ಹೆರಿಗೆ ಬಂದಿದ್ದ ಅವರಿಗೆ ಮೂರು ದಿನಗಳ ಹಿಂದೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಪೋಷಕರು ತಕ್ಷಣ ಹತ್ತಿರದ ಹರಪನಹಳ್ಳಿ …
Read More »ಪೂಜೆ ಮಾಡುವ ನೆಪದಲ್ಲಿ ಚಿನ್ನಾಭರಣ ಎಗರಿಸಿದ್ದ ಖದಿಮರು ಪೊಲೀಸರ ವಶಕ್ಕೆ.
ದಾವಣಗೆರೆ: ಆರೋಪಿಗಳು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದ ಶಶಿಕಲಾ ಎಂಬವರ ಹಣಕಾಸಿನ ಸಮಸ್ಯೆ ಅರಿತು ಪೂಜೆ ಮಾಡಿ ಸಮಸ್ಯೆ ಬಗೆಹರಿಸುವುದಾಗಿ ಹೋಗಿದ್ದರು. ಸಂಜೆ 4 ರಿಂದ 6 ಗಂಟೆ ವೇಳೆಗೆ ಪೂಜೆ ಮಾಡಿದರೆ ಸಮಸ್ಯೆ ಬಗೆಹರಿಯುತ್ತದೆ. ಪೂಜೆ ವೇಳೆ ಚಿನ್ನಾಭರಣ ಹಾಗೂ ನಗದು ಇಡುವಂತೆ ಹೇಳಿದ್ದರು. ಅವರು ಹೇಳಿದಂತೆ ಶಶಿಕಲಾ ಹಾಗೂ ಆಕೆಯ ಕುಟುಂಬಸ್ಥರು ಪೂಜೆ ವೇಳೆ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಇರಿಸಿದ್ದರು. ಈ ವೇಳೆ …
Read More »
Laxmi News 24×7