ಕೋಲಾರ: ಕೊರೊನಾ ಮಹಾಮಾರಿ ಆವರಿಸಿದ್ದರಿಂದ ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದ್ದು, ಕಳೆದ 21 ದಿನಗಳಿಂದ ನಮ್ಮನ್ನು ಕಾಯುತ್ತಿರುವ ಕೊರೊನಾ ವಾರಿಯರ್ಸ್ ಪೊಲೀಸ್ ಸಿಬ್ಬಂದಿಗೆ ಕೋಲಾರದಲ್ಲಿ ಬಿರಿಯಾನಿ ವಿತರಣೆ ಮಾಡಲಾಯಿತು. ಕೋಲಾರದ ರೇವತಿ ಭಾರತ್ ಗ್ಯಾಸ್ ಏಜೆನ್ಸಿ ಮಾಲೀಕರಿಂದ ವಾರಕ್ಕೊಮ್ಮೆ ಬಿರಿಯಾನಿ ವಿತರಣೆ ಮಾಡಲಾಗುತ್ತಿದೆ. ಕೋಲಾರ ನಗರ ಹಾಗೂ ಬಂಗಾರಪೇಟೆ ಪಟ್ಟಣದಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ನಗರಸಭೆ ಸಿಬ್ಬಂದಿಗೆ ಬಿರಿಯಾನಿ ವಿತರಣೆ ಮಾಡಲಾಯಿತು. ಕಳೆದ ಬುಧವಾರವೂ ಹೀಗೆ ಕರ್ತವ್ಯದಲ್ಲಿದ್ದ ನೂರಾರು ಪೊಲೀಸರಿಗೆ ಬಿರಿಯಾನಿ …
Read More »ಪ್ರಧಾನಿ ಮೋದಿ ಭಾಷಣದ ಬಳಿಕ ಮದ್ಯದಂಗಡಿ ತೆರೆಯುವ ಕುರಿತು ನಿರ್ಧಾರ: ಸಚಿವ ನಾಗೇಶ್
ಕೋಲಾರ: ರಾಜ್ಯದಲ್ಲಿ ಮದ್ಯದಂಗಡಿಗಳನ್ನು ತೆರೆಯುವ ವಿಚಾರವಾಗಿ ಚರ್ಚೆ ನಡೆಸಲಾಗಿದ್ದು, ನಾಳೆ ಪ್ರಧಾನಿ ಮೋದಿ ಅವರ ಸೂಚನೆ ಮೇರೆಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅಬಕಾರಿ ಸಚಿವ ನಾಗೇಶ್ ತಿಳಿಸಿದ್ದಾರೆ. ಕೋಲಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರದ ಮದ್ಯದಂಗಡಿ ತೆರೆಯಲು ಚಿಂತನೆ ಮಾಡಲಾಗಿದೆ. ಪ್ರಧಾನಿ ಮೋದಿ ಅವರ ಭಾಷಣದ ನಂತರ ರಾಜ್ಯದಲ್ಲಿ ಮದ್ಯದಂಗಡಿಗಳನ್ನು ತೆರೆಯಲು ತೀರ್ಮಾನ ಮಾಡಲಾಗುವುದು. ಕಳ್ಳಬಟ್ಟಿ ಸಾರಾಯಿ ತಡೆಗಟ್ಟಲು ನಮ್ಮ ಅಧಿಕಾರಿಗಳು ಹಗಲು ರಾತ್ರಿ ಕೆಲಸ …
Read More »ಕೋಲಾರ ಸೇಫ್: ಸೊಂಕಿತರ ಜೊತೆ ಸಂಪರ್ಕದಲ್ಲಿದ್ದ 18 ಜನರ ವರದಿ ನೆಗೆಟಿವ್
ಕೋಲಾರ: ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದ 18 ಜನರ ವರದಿ ನೆಗೆಟಿವ್ ಬಂದಿದ್ದು, ಕೋಲಾರ ಜನತೆ ಹಾಗೂ ಜಿಲ್ಲಾಡಳಿತ ಕೋವಿಡ್ ಆತಂಕದಿಂದ ಕೊಂಚ ನಿರಾಳವಾಗಿದೆ. ಜಿಲ್ಲೆಯ ಎರಡು ಕುಟುಂಬಗಳೊಂದಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಬೈಲ್ ನರಸಾಪುರದ ಸೋಂಕಿತ ವ್ಯಕ್ತಿ ಸಂಪರ್ಕ ಹೊಂದಿದ್ದ ಪರಿಣಾಮ ಜಿಲ್ಲೆಯ ಸುಮಾರು 21 ಜನರನ್ನು ಹೋಮ್ ಕ್ವಾರಂಟೇನ್ ಮಾಡಲಾಗಿತ್ತು. ಅಲ್ಲದೆ 21 ಜನರ ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಇದರಲ್ಲಿ 18 ಜನರ ವರದಿ …
Read More »ಟೊಮೆಟೊವನ್ನು ರಸ್ತೆಗೆ ಸುರಿದ ರೈತರು – ಮುಗಿಬಿದ್ದ ಮಹಿಳೆಯರು,ಉಚಿತವಾಗಿ ಬಾಳೆಹಣ್ಣು ಕೊಟ್ಟ ರೈತ
ಕೋಲಾರ: ಕೊರೊನಾ ವೈರಸ್ ಜಿಲ್ಲೆಯ ರೈತರ ಪಾಲಿಗೆ ಮಾರಕವಾಗಿ ಪರಿಣಮಿಸಿದೆ. ಟೊಮೆಟೊ ಹಾಗೂ ಹೂವಿನ ಬೆಲೆ ತೀವ್ರವಾಗಿ ಕುಸಿತವಾದ ಪರಿಣಾಮ ರೈತರು ರಸ್ತೆಗೆ ಸುರಿಯುತ್ತಿದ್ದಾರೆ. ಇನ್ನೂ ರಸ್ತೆಗೆ ಸುರಿದ ಟೊಮೆಟೊಗಾಗಿ ಮಹಿಳೆಯರು ಮುಗಿಬಿದ್ದ ಸನ್ನಿವೇಶ ನಡೆದಿದೆ. ಬೆಳೆದ ಟೊಮೆಟೊಗೆ ಬೆಲೆ ಇಲ್ಲದ ಕಾರಣ ಕೋಲಾರ ನಗರದ ಬಸ್ ನಿಲ್ದಾಣ ಸಮೀಪ ರಸ್ತೆ ಮಧ್ಯೆದಲ್ಲಿ ಟೊಮೆಟೊವನ್ನು ರೈತ ಸುರಿದಿದ್ದಾನೆ. ಇನ್ನೂ ರಸ್ತೆಯಲ್ಲಿದ್ದ ಟೊಮೆಟೊವನ್ನು ಅನೇಕ ಮಹಿಳೆಯರು ಎತ್ತಿಕೊಂಡಿದ್ದಾರೆ. ಕೊರೊನಾದಿಂದ ಒಂದು ಕಡೆ …
Read More »ಆಂಧ್ರ ಗಡಿಯಲ್ಲಿ ಪರದಾಡುತ್ತಿದ್ದಾರೆ ಸಾವಿರಕ್ಕೂ ಹೆಚ್ಚು ಮೀನುಗಾರರು
ಕೋಲಾರ: ಮಂಗಳೂರು ಬಂದರಿನಿಂದ ಆಂಧ್ರ ಪ್ರದೇಶಕ್ಕೆ ತೆರಳುತ್ತಿದ್ದ ಮೀನುಗಾರರನ್ನು ಕೋಲಾರದ ಗಡಿ ಭಾಗವಾದ ನಂಗಲಿ ಚೆಕ್ ಪೋಸ್ಟ್ ಬಳಿ ಆಂಧ್ರಪ್ರದೇಶ ಪೊಲೀಸರು ತಡೆ ಹಿಡಿದಿದ್ದಾರೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಗಡಿಯಲ್ಲಿ ಆಂಧ್ರ ಪೊಲೀಸರು ಮೀನುಗಾರರಿಗೆ ತಡೆ ಮಾಡಿದ್ದು, ಆಂಧ್ರ ಮೂಲದ ನೂರಾರು ಮಂದಿ ಮೀನುಗಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇತ್ತ ಮಂಗಳೂರಿನಲ್ಲಿ ಮೀನುಗಾರಿಕೆ ಮಾಡಿಕೊಂಡು ಇವರು ಜೀವನ ನಡೆಸುತ್ತಿದ್ದರು. ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲೆಡೆ ಲಾಕ್‍ಡೌನ್ …
Read More »ಜಿಂಕೆಗೆ ಡಿಕ್ಕಿ ಹೊಡೆದ ಬೈಕ್ ಸವಾರ ಆಸ್ಪತ್ರೆ ಸೇರಿದ್ದು ಹೇಗೆ..?
ಕೋಲಾರ : ಬೈಕ್ ನಲ್ಲಿ ಚಲಿಸುತ್ತಿದ್ದಾಗ ಅಡ್ಡಬಂದ ಜಿಂಕೆಗೆ ಡಿಕ್ಕಿ ಹೊಡೆದ ಪರಿಣಾಮ ಜಿಂಕೆ ಸ್ಥಳದಲ್ಲೆ ಸಾವನ್ನಪ್ಪಿ ಬೈಕ್ ಸವಾರನಿಗೆ ತೀವ್ರ ಗಾಯಗಳಾಗಿರುವ ಘಟನೆ ಕೋಲಾರ ಜಿಲ್ಲೆಯ ಹುಲ್ಲುಂಕಲ್ಲು ಗ್ರಾಮದಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಕಲ್ಕೆರೆ ಗ್ರಾಮದ ನಿವಾಸಿ ದೇವರಾಜ್ (50) ಹುಲ್ಲುಂಕಲ್ಲು ಗ್ರಾಮದ ಮೂಲಕವಾಗಿ ಬೈಕ್ ಚಾಲನೆ ಮಾಡುತ್ತಿರುವಾಗ ಏಕಾಏಕಿ ರಸ್ತೆ ಮಧ್ಯೆ ಜಿಂಕೆ ನುಗ್ಗಿ ಬಂದಿದ್ದು ಬೈಕನ್ನು ನಿಯಂತ್ರಣ ಮಾಡಲಾಗದೆ ನೇರವಾಗಿ ಜಿಂಕೆಗೆ ಡಿಕ್ಕಿ ಹೊಡೆದಿದ್ದಾರೆ. ಸ್ಥಳದಲ್ಲೆ …
Read More »ಕಾಂಗ್ರೆಸ್ ನಲ್ಲಿ ಮೂರು ಗುಂಪುಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ವಗ್ದಾಳಿ ನಡೆಸಿದ್ದಾರೆ.
ಕೋಲಾರ: ಕಾಂಗ್ರೆಸ್ ನಲ್ಲಿ ಮೂರು ಗುಂಪುಗಳಿದ್ದು, ಈ ಗುಂಪುಗಾರಿಕೆಯೇ ಕೆಪಿಸಿಸಿಗೆ ಈವರೆಗೆ ಅಧ್ಯಕ್ಷರನ್ನು ಆಯ್ಕೆ ಮಾಡಲಾಗದ ಸ್ಥಿತಿಗೆ ತಲುಪಲು ಕಾರಣ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ವಗ್ದಾಳಿ ನಡೆಸಿದ್ದಾರೆ. ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ ಇದೀಗ ಶಕ್ತಿ ಕಳೆದುಕೊಂಡು ಲೋ ಕಮಾಂಡ್ ಆಗಿದೆ. ರಾಜ್ಯ ಕಾಂಗ್ರೆಸ್ ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಹಾಗೂ ಡಿ.ಕೆ. ಶಿವಕುಮಾರ್ ಎಂಬ ಮೂರು ಗುಂಪುಗಳಿದ್ದು, ಅಕ್ಷರಶಃ ಮನೆಯೊಂದು …
Read More »
Laxmi News 24×7