Breaking News

ಕೋಲಾರ

ಆ ಪ್ರಧಾನ ಮಂತ್ರಿಯನ್ನು ಶ್ರೀರಾಮನೆ ಕಾಪಾಡಲಿ: ರಮೇಶ್ ಕುಮಾರ್

ಕೋಲಾರ: ದೇಶದಲ್ಲಿ ಕೊರೊನಾ ತಾಂಡವವಾಡುತ್ತಿದ್ದರೆ, ಪ್ರಧಾನ ಮಂತ್ರಿಗಳು ಅಯೋಧ್ಯೆಯಲ್ಲಿ ಪೂಜೆ ಮಾಡುತ್ತಿದ್ದಾರೆಂದು ಮಾಜಿ ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ಟೀಕಿಸಿದ್ದಾರೆ. ಕೋಲಾರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರೆಯಲಾಗಿದ್ದ ಕೋವಿಡ್ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನ ಮಂತ್ರಿಗಳು ಈ ದೇಶವನ್ನು ಲಾಕ್‍ಡೌನ್ ಮಾಡಿದಾಗ ನಮ್ಮಲ್ಲಿ ಪ್ರಕರಣ 524 ಇತ್ತು. 21 ದಿನದಲ್ಲಿ ಎಲ್ಲವೂ ನಿರ್ನಾಮ ಆಗುತ್ತೆ ಎಂದರು. ಆದರೆ ಈಗ ಕೊರೊನಾ ಸೋಂಕು 14 ಲಕ್ಷಕ್ಕೆ ಬಂದಿದೆ ಎಂದು ವ್ಯಂಗವಾಡಿದರು. …

Read More »

ಬಕ್ರೀದ್ ಹಬ್ಬಕ್ಕೆ ಬಲಿ ಕೊಡಲು ತರಲಾಗಿದ್ದ ಎರಡು ಒಂಟೆಗಳ ರಕ್ಷಣೆ

ಕೋಲಾರ: ಬಕ್ರೀದ್ ಹಬ್ಬಕ್ಕೆ ಬಲಿ ಕೊಡಲು ತರಲಾಗಿದ್ದ ಎರಡು ಒಂಟೆಗಳ ರಕ್ಷಣೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಬಾಲಕೃಷ್ಣ ಬಡಾವಣೆಯಲ್ಲಿ ನಡೆದಿದೆ. ಫಾಸಿಲ್ ಎಂಬಾತನಿಗೆ ಸೇರಿದ ಎರಡು ಒಂಟೆಗಳನ್ನು ಮದೀನ ಮಸೀದಿಯಲ್ಲಿ ಇರಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಒಂಟೆಗಳನ್ನು ರಕ್ಷಿಸಿ, ಮಾಲೂರಿನ ಗೋ ಶಾಲೆಗೆ ರವಾನೆ ಮಾಡಿದೆ. ಬಕ್ರೀದ್ ಹಬ್ಬದಲ್ಲಿ ಒಂಟೆ ಮಾಂಸ ದಾನ ಮಾಡುವುದು ಬಕ್ರೀದ್ ಹಬ್ಬದ ಪ್ರತೀತಿ. ಆದ್ರೆ ಈ …

Read More »

ಗುಣಮುಖರಾದವರಲ್ಲಿ ಮತ್ತೆ ಕಾಣಿಸಿಕೊಂಡ ಕೊರೊನಾ ಸೋಂಕು……….

ಕೋಲಾರ: ಕೊರೊನಾ ಸೋಂಕಿಗೆ ತುತ್ತಾಗಿ ಸದ್ಯ ಗುಣಮುಖವಾಗಿರುವ ಜನರು ದೇವರೇ ಬದುಕಿತು ಬಡಜೀವ ಎಂದು ಕೊಳ್ಳುತ್ತಿದ್ದಾರೆ. ಆದರೆ ಹೋದೆ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿ ಎಂಬಂತೆ ಮತ್ತೆ ಸೋಂಕು ವಕ್ಕರಿಸಲಾರಂಭಿಸಿದೆ. ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದುವರೆಗೂ ಸುಮಾರು 284 ಮಂದಿ ಜನರು ಕೊರೊನಾವನ್ನು ಗೆದ್ದು ಬಂದಿದ್ದಾರೆ. ಆದ್ರೆ ಈಗ ಕೊರೊನಾ ಗೆದ್ದು ಬಂದ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ 46 ವರ್ಷದ ಮಹಿಳೆಯಲ್ಲಿ ಮತ್ತೆ ಕೊರೊನಾ ಸೋಂಕು ಪತ್ತೆಯಾಗಿದೆ. …

Read More »

ಬೈಕ್ ಡಿಕ್ಕಿ – ಕರ್ತವ್ಯಕ್ಕೆ ತೆರಳುತ್ತಿದ್ದ ಎಎಸ್‍ಐ ಸಾವು

ಕೋಲಾರ: ಎರಡು ಬೈಕ್‍ಗಳ ನಡುವೆ ನಡೆದ ಅಪಘಾತದಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದ ಎಎಸ್‍ಐ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಶ್ರೀನಿವಾಸಪುರ ಪೊಲೀಸ್ ಠಾಣೆಯ ಎಎಸ್‍ಐ ಮಂಜುನಾಥ್ (52) ಮೃತಪಟ್ಟವರು. ಜಿಲ್ಲೆಯ ಶ್ರೀನಿವಾಸಪುರ ತಾಲೂಕು ಶಿವಪುರ ಗ್ರಾಮದ ಬಳಿ ಕಳೆದ ರಾತ್ರಿ ಈ ಘಟನೆ ನಡೆದಿದ್ದು, ಕರ್ತವ್ಯಕ್ಕೆ ತೆರಳುವ ವೇಳೆ ಎದುರಿಗೆ ಬಂದ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಎಎಸ್‍ಐ ಸಾವನ್ನಪ್ಪಿದ್ದಾರೆ.ಬುಧವಾರ ರಾತ್ರಿ ಕೋಲಾರದಿಂದ ಶ್ರೀನಿವಾಸಪುರಕ್ಕೆ ಕರ್ತವ್ಯಕ್ಕೆ ತೆರಳುವ ಮಾರ್ಗ ಮಧ್ಯೆ ಈ ಘಟನೆ …

Read More »

ತಮ್ಮನಿಗೆ ಕೊರೊನಾ ಸೋಂಕು, ಮಹಾಮಾರಿಗೆ ಹೆದರಿ ನೇಣಿಗೆ ಶರಣಾದ ಅಣ್ಣ!

ಕೋಲಾರ : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಭೀತಿ ಹೆಚ್ಚಳವಾಗುತ್ತಿದ್ದು, ಕೊರೊನಾ ವೈರಸ್ ಆತಂಕಕ್ಕೆ ಕೋಲಾರದಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕೋಲಾರದ ಗಾಂಧಿನಗರದಲ್ಲಿ ಈ ಘಟನೆ ನಡೆದಿದ್ದು, ನಾಗರಾಜ್ (37) ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾಗರಾಜ್ ಅವರ ತಮ್ಮನಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅಣ್ಣ ನಾಗರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ತಮ್ಮನಿಗೆ ಕೊರೊನಾ ವೈರಸ್ ದೃಢಪಟ್ಟಿದ್ದು, ಪ್ರಾಥಮಿಕ ಸಂಪರ್ಕದಲ್ಲಿದ್ದ ತನಗೂ ಹಾಗೂ …

Read More »

ಬಂಗಾರಪೇಟೆ ತಹಶೀಲ್ದಾರ್ ಚಂದ್ರಮೌಳೇಶ್ವರ ಹತ್ಯೆ ಪ್ರಕರಣ, ಆರ್.ಎಲ್ ಜಾಲಪ್ಪ ಆಸ್ಪತ್ರೆಗೆ ಕೇಂದ್ರ

ಕೋಲಾರ: ಬಂಗಾರಪೇಟೆ ತಹಶೀಲ್ದಾರ್ ಚಂದ್ರಮೌಳೇಶ್ವರ ಹತ್ಯೆ ಪ್ರಕರಣ, ಆರ್.ಎಲ್ ಜಾಲಪ್ಪ ಆಸ್ಪತ್ರೆಗೆ ಕೇಂದ್ರ ವಲಯ ಐಜಿಪಿ ಸೀಮಂತ್ ಕುಮಾರ್ ಸಿಂಗ್ ಭೇಟಿ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿ, ಇಂತಹ ಪ್ರಕರಣ ನಾನು ನನ್ನ ಸರ್ವಿಸ್ ನಲ್ಲಿ ನೋಡಿಲ್ಲ, ಕೆಜಿಎಫ್ ಹಾಗೂ ಕೋಲಾರ ಎಸ್ಪಿ ಸೇರಿ ಚಾರ್ಚ್ ಶೀಟ್ ರೆಡಿ ಮಾಡಿದ್ದಾರೆ, ಇವತ್ತು ಅಲ್ಲಿ ನಡೆದ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದೇನೆ, ಜಿಲ್ಲಾಧಿಕಾರಿ ಹಾಗೂ ಸರ್ವೇ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ, ಘಟನೆ …

Read More »

ತಹಶೀಲ್ದಾರಿಗೆ ನಿವೃತ್ತ ಶಾಲಾ ಶಿಕ್ಷಕರೊಬ್ಬರು ಚಾಕುನಿಂದ ಇರಿದಿರುವ ಘಟನೆ

ಕೋಲಾರ ಜಿಲ್ಲೆಯ ಬಂಗಾರಪೇಟೆ ತಹಶೀಲ್ದಾರಿಗೆ ನಿವೃತ್ತ ಶಾಲಾ ಶಿಕ್ಷಕರೊಬ್ಬರು ಚಾಕುನಿಂದ ಇರಿದಿರುವ ಘಟನೆ ನಡೆದಿದೆ. ಸರ್ವೇ ಮಾಡೋ ವಿಚಾರದಲ್ಲಿ ಗೊಂದಲ ಏರ್ಪಟ್ಟಿದ್ದು, ಆರೋಪಿ ಶಿಕ್ಷಕ ದೊಡ್ಡಕಳವಂಚಿಯ ವೆಂಕಟಪತಿ ಎಂಬುವವರು ತಹಶೀಲ್ದಾರ್ ಚಂದ್ರಮೌಳೇಶ್ವರ್​ ಅವರಿಗೆ ಚಾಕುವಿನಿಂದ ಇರಿದಿದ್ದಾರೆ. ತಹಶೀಲ್ದಾರ್ ಬಂಗಾರಪೇಟೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಬಂಗಾರಪೇಟೆ ಪೊಲೀಸರು ಭೇಟಿ ನೀಡಿದ್ದಾರೆ. ತಹಶೀಲ್ದಾರ್​ ಸಾವು ತಾಜಾ ವರದಿಗಳ ಪ್ರಕಾರ ಆರ್.ಎಲ್.ಜಾಲಪ್ಪಾ ಆಸ್ಪತ್ರೆಗೆ ಸಾಗಿಸುವ ವೇಳೆ ಚಂದ್ರಮೌಳೇಶ್ವರ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. …

Read More »

ಬಯಲು ಸೀಮೆ ಕೋಲಾರದಲ್ಲಿ ನೀರಿನ ಜೊತೆಗೆ ರಕ್ತಕ್ಕೂ ಬರ..

ಕೋಲಾರ: ಮಹಾಮಾರಿ ಕೊರೊನಾ ತಡೆಗಟ್ಟಲು ಸರ್ಕಾರ ಮುನ್ನಚ್ಚರಿಕೆ ಕ್ರಮವಾಗಿ ಮಾಡಿದ ಲಾಕ್‍ಡೌನ್ ಎಫೆಕ್ಟ್ ಸಾಕಷ್ಟು ಕ್ಷೇತಗಳಿಗೆ ಹೊಡೆತ ಬಿದ್ದಿದೆ. ಬರದನಾಡು ಕೋಲಾರ ಜಿಲ್ಲೆಯಲ್ಲಿ ಲಾಕ್‍ಡೌನ್ ಎಫೆಕ್ಟ್ ನಿಂದ ರಕ್ತಕ್ಕೂ ಬರ ಬಂದಿದೆ. ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಲಾಕ್‍ಡೌನ್ ಜಾರಿಗೊಳಿಸಿದ್ದ ಪರಿಣಾಮ ರಾಜ್ಯದ ಜನರು ಆರ್ಥಿಕತೆ, ನಿರುದ್ಯೋಗ, ಆಹಾರ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಕಾಣಬೇಕಾಯಿತು. ಇದರೊಂದಿಗೆ ರಕ್ತದ ಕೊರತೆಯೂ ಎದುರಾಗಿದೆ. ರಾಜ್ಯ ಸರ್ಕಾರ ಮಾ.23 ರಿಂದ ಲಾಕ್‍ಡೌನ್ …

Read More »

ಪ್ರತಿಭಟನೆಯಲ್ಲಿ ಸಮಾಜಿಕ ಅಂತರ ಪಾಲಿಸದೇ ನಿರ್ಲಕ್ಷತೆಯನ್ನ ವಹಿಸಿದ್ದಾರೆ.

ಕೋಲಾರ: ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ವರ್ತಕರಿಂದ ಪ್ರತಿಭಟನೆಯನ್ನು ಮಾಡುತ್ತಿದ್ದು, ಪ್ರತಿಭಟನೆಯಲ್ಲಿ ಕೋವಿಡ್ ನಿಯಮಗಳು ಉಲ್ಲುಂಘನೆ ಮಾಡಿದ್ದಾರೆ. ಪ್ರತಿಭಟನೆಯಲ್ಲಿ ಸಮಾಜಿಕ ಅಂತರ ಪಾಲಿಸದೇ ನಿರ್ಲಕ್ಷತೆಯನ್ನ ವಹಿಸಿದ್ದಾರೆ. ಮಾರುಕಟ್ಟೆಯ ಸೆಸ್ ಪಾವತಿಸುವುದಕ್ಕೆ ವಿರೋಧಿಸಿ ಪ್ರತಿಭಟನೆ ಮಾಡಿತ್ತಿದ್ದು, ಕೃಷಿ ಉತ್ಪನ್ನಗಳ ಖರೀದಿಗಾಗಿ ವರ್ತಕರು ಸಮಿತಿಗೆ ಪಾವತಿಸುವ ಸೆಸ್ ಶುಲ್ಕ ಮಾಡಿದ್ದಾರೆ. ಕೋವಿಡ್ ಸಮಸ್ಯೆ ಬಗೆಹರಿಯುವರೆಗು ಸೆಸ್ ಪಾವತಿ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಕಳೆದ ಎರಡು ತಿಂಗಳಿನಿಂದ ಸೆಸ್ ಸಂಗ್ರಹ ನಿಲ್ಲಿಸಿದ್ದ ಎಪಿಎಂಸಿ ಕೊರೋನಾ ಮುಂದುವರೆದಿದ್ದರೂ …

Read More »

ಕೋಲಾರ: ವೈದ್ಯೆ ಸೇರಿ 10 ಮಂದಿಗೆ ಸೋಂಕು

ಕೋಲಾರ: ಜಿಲ್ಲೆಯಲ್ಲಿ ಗುರುವಾರ ವೈದ್ಯೆ ಸೇರಿದಂತೆ 10 ಮಂದಿಗೆ ಕೊರೊನಾ ಸೋಂಕು ಹರಡಿದ್ದು, ಸೋಂಕಿತರ ಸಂಖ್ಯೆ 86ಕ್ಕೆ ಏರಿದೆ. ಕೋಲಾರ ತಾಲ್ಲೂಕು ಒಂದರಲ್ಲೇ 5 ಮಂದಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಜನ ಬೆಚ್ಚಿ ಬಿದ್ದಿದ್ದಾರೆ. ಜಿಲ್ಲಾ ಕೇಂದ್ರದ ಆರ್‌.ಎಲ್‌.ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಕೋವಿಡ್‌-19 ವಾರ್ಡ್‌ನ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಇಬ್ಬರು ಆರೋಗ್ಯ ಕಾರ್ಯಕರ್ತರಿಗೆ ಸೋಂಕು ತಗುಲಿದೆ. ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬಂದ ಕಾರಣಕ್ಕೆ ಈ ಇಬ್ಬರಿಗೆ ಸೋಂಕು ಹರಡಿರುವ …

Read More »