Breaking News

ಬೆಳಗಾವಿ: ಹೆಂಡತಿ ಚುಡಾಯಿಸುತ್ತಿರುವುದನ್ನು ಪ್ರಶ್ನೆ ಮಾಡಿದ ಗಂಡನ ಬರ್ಬರ ಹತ್ಯೆ

Spread the love

ಬೆಳಗಾವಿ: ಹೆಂಡತಿಯನ್ನ ಚುಡಾಯಿಸುತ್ತಿರುವುದನ್ನು ಪ್ರಶ್ನೆ ಮಾಡಿದ್ದಕ್ಕೆ ವ್ಯಕ್ತಿಯನ್ನು ಕಟ್ಟಿಗೆಯಿಂದ ಹೊಡೆದು, ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಖಾನಾಪೂರದಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆ ಖಾನಾಪುರ ಪಟ್ಟಣದ ಬಾಹೇರ್ ಗಲ್ಲಿಯ ನಿವಾಸಿ ಮಾರುತಿ ಜಾಧವ್ (40) ಕೊಲೆಯಾದ ವ್ಯಕ್ತಿ. ಪಕ್ಕದ ಮನೆಯ ಪ್ರಶಾಂತ್ ನಾರ್ವೇಕರ್ (35) ಹತ್ಯೆ ಮಾಡಿದ ಆರೋಪಿ. ಕಳೆದ ಕೆಲ ದಿನಗಳಿಂದ ಆರೋಪಿ ಪ್ರಶಾಂತ್, ಮಾರುತಿ ಪತ್ನಿಯನ್ನ ಚುಡಾಯಿಸುತ್ತಿದ್ದನಂತೆ.‌

ಈ ಬಗ್ಗೆ ನಿನ್ನೆ ರಾತ್ರಿ ಮಾರುತಿ ಪ್ರಶ್ನೆ ಮಾಡಿದ್ದಕ್ಕೆ ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದ್ದಾನೆ. ಈ ಕುರಿತು ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

 


Spread the love

About Laxminews 24x7

Check Also

ಬೆಳಗಾವಿ: ಸರ್ಕಾರಿ ಕಟ್ಟಡಗಳು ಹಾವು, ಚೇಳುಗಳಿಗೆ ಮೀಸಲು

Spread the love ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಲ್ಲಿ ಹಲವು ಸರ್ಕಾರಿ ಕಟ್ಟಡಗಳು ಖಾಲಿ ಬಿದ್ದಿವೆ. ಮಾತ್ರವಲ್ಲ; ಹಲವು ಕಟ್ಟಡಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ